'ಬಂಧನ' ಸಿನಿಮಾ ನೋಡಲು ಬಂದವರಿಗೆ ಖಾರದ ಪುಡಿ ಎರಚಲಾಗಿತ್ತೇ? ಏನಿದು ಘಟನೆ?
ಕನ್ನಡದಲ್ಲಿ ದುರಂತ ಅಂತ್ಯಗಳನ್ನು ಕಾಣುವ ಸಿನಿಮಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿಯೇ ಸದ್ದು ಮಾಡಿವೆ. ವಿಷ್ಣುದಾದ ನಟಿಸಿದ 'ಬಂಧನ' ಸಿನಿಮಾ ಕೂಡ ಇಂತಹದ್ದೇ ಕ್ಯಾಟಗರಿಗೆ ಸೇರಿವ ಸಿನಿಮಾ. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ 'ಬಂಧನ' ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಸಿನಿಮಾಗಳ ಪಟ್ಟಿಯಲ್ಲಿ ನಿಲ್ಲುತ್ತೆ. ಇಂದಿಗೂ 'ಬಂಧನ' ಸಿನಿಮಾದ ಒಂದೊಂದು ಸೀನ್ ಕೂಡ ಸಿನಿಪ್ರಿಯರ ಅಚ್ಚುಮೆಚ್ಚು.
'ಬಂಧನ' ಸಿನಿಮಾ ಮೂಲತ: ಉಷಾ ನವರತ್ನರಾಮ್ ಅವರ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲಾಗಿತ್ತು. ವಿಷ್ಣುವರ್ಧನ್‌ಗೆ ಒಂದು ಕ್ಲಾಸ್ ಸಿನಿಮಾ ಮಾಡಬೇಕು ಅನ್ನೋದು ರಾಜೇಂದ್ರ ಸಿಂಗ್ ಬಾಬು ಅವರ ಆಸೆಯಾಗಿತ್ತು. 'ಬಂಧನ' ಕಾದಂಬರಿ ಸಿಕ್ಕಿದಾಗ, ವಿಷ್ಣುದಾದಾಗೆ ರಾಜೇಂದ್ರ ಸಿಂಗ್ ಬಾಬು ಕಥೆ ಹೇಳಿದ್ದರು. ಅದು ಸಾಹಸ ಸಿಂಹನಿಗೂ ಇಷ್ಟ ಆಗಿತ್ತು. ಹೀಗೆ ಶುರುವಾಗಿದ್ದ ಸಿನಿಮಾವೇ 'ಬಂಧನ'.

ವಿಷ್ಣುವರ್ಧನ್ ಸಿನಿಮಾ 'ಬಂಧನ' ಬಿಡುಗಡೆಗೂ ಮುನ್ನವೇ ಕ್ರೇಜ್ ಹುಟ್ಟಾಕಿತ್ತು. ಡಾಕ್ಟರ್ ಪಾತ್ರದಲ್ಲಿ ವಿಷ್ಣುವರ್ಧನ್ ಅವರನ್ನು ನೋಡುವುದಕ್ಕೆ ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಈ ಸಿನಿಮಾಗಿದ್ದ ಕ್ರೇಜ್ ನೋಡಿ, ಬಿಡುಗಡೆಗೂ ಮುನ್ನವೇ ಬ್ಲಾಕ್ ಬಸ್ಟರ್ ಹಿಟ್ ಆಗುತ್ತೆ ಎಂದು ಲೆಕ್ಕಚಾರ ಹಾಕಲಾಗಿತ್ತು. ಹೀಗಾಗಿ ಚಿತ್ರಮಂದಿರಗಳು ಕೂಡ ವಿಷ್ಣುವರ್ಧನ್ ಕಟೌಟ್ ಮೂಲಕ ಅಬ್ಬರಿಸುವುದಕ್ಕೆ ಶುರುವಾಗಿತ್ತು. ಸಿನಿಮಾ ಬಿಡುಗಡೆಯಾದ ಬಳಿಕ ಯಾರೋ ಒಂದಿಷ್ಟು ಕಿಡಿಗೇಡಿಗಳು ಪ್ರೇಕ್ಷಕರ ಮೇಲೆ ಖಾರದ ಪುಡಿ ಎರಚಿದ್ದರು ಅನ್ನೋ ಸುದ್ದಿ ಕೂಡ ಹರಿದಾಡಿತ್ತು.
ವಿಷ್ಣುದಾದಾ ಬ್ಯಾಕ್ ಟು ಬ್ಯಾಕ್ ಮಾಸ್, ಆಕ್ಷನ್ ಇಮೇಜ್ ಸಿನಿಮಾಗಳನ್ನೇ ಮಾಡಿದ್ದರು. ಹೀಗಾಗಿ ಅಂತಹ ಕಥೆಗಳಿಗೆ ಕೊಂಚ ಬ್ರೇಕ್ ಕೊಟ್ಟು ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಬೇಕು ಅಂತ ತೀರ್ಮಾನಿಸಿದ್ದರು. ಈ ಭಾವನಾತ್ಮಕ ಕಥೆ ವಿಷ್ಣುವರ್ಧನ್ ಅವರಿಗೆ ಇಷ್ಟ ಆಗಿತ್ತು. ಆದರೆ, ಉಷಾ ನವರತ್ನರಾಮ್ ಅವರ ಕಾದಂಬರಿಯ ಹಕ್ಕು ಕೇಳಲು ಹೋದಾಗ, ಅದಾಗಲೇ ಕಲ್ಪನಾ ಅವರು ಖರೀದಿ ಮಾಡಿದ್ದರು. ರಾಜೇಂದ್ರ ಸಿಂಗ್ ಬಾಬು ಕೇಳಿದಾಗ 'ಬಂಧನ'ದ ಹಕ್ಕುಗಳನ್ನು ಹಸ್ತಾಂತರ ಮಾಡಿದ್ದರು.
ಕಾದಂಬರಿ ಹಕ್ಕು ಪಡೆದು ಸಿನಿಮಾ ಆರಂಭ ಮಾಡುವ ಸಮಯದಲ್ಲಿ ವಿಷ್ಣುದಾದ ಮಾಸ್ ಹೀರೋ ಆಗಿ ಮಿಂಚುತ್ತಿದ್ದರು. ಇಂತಹ ಸಂದರ್ಭದಲ್ಲಿ ರಾಜೇಂದ್ರ ಸಿಂಗ್ ಬಾಬು ರೊಮ್ಯಾಂಟಿಕ್ ಸಿನಿಮಾ ಮಾಡುವುದಕ್ಕೆ ಹೊರಟಿದ್ದು, ಸಿನಿಮಾ ಮಂದಿಗೆ ಸರಿ ಕಂಡಿರಲಿಲ್ಲ. ಇದ್ಯಾಕೋ ಪ್ಲಾಪ್ ಶೋ ಆಗುತ್ತೆ ಅಂತ ಕೆಲವರು ಕಾಮೆಂಟ್ ಮಾಡಿದ್ದರು. ಅದ್ಯಾವಾಗ ಸಿನಿಮಾ ಬಿಡುಗಡೆ ಸಜ್ಜಾಯಿತೋ ಆಗಲೇ 'ಬಂಧನ'ದ ಕ್ರೇಜ್ ಏನು ಅನ್ನೋದು ಗೊತ್ತಾಗಿತ್ತು.

'ಬಂಧನ' ರಿಲೀಸ್ ಆದ್ಮೇಲೆ ಪ್ರೇಕ್ಷಕರು ಹಾಡಿ ಹೊಗಳುವುದಕ್ಕೇ ಶುರು ಮಾಡಿದ್ದರು. ಚಿತ್ರಮಂದಿರ ತುಂಬಿ ತುಳುಕುತ್ತಿತ್ತು. ಸಿನಿಮಾದ ಕೊನೆಯಲ್ಲಿ ವಿಷ್ಣುದಾದ ನಟಿಸಿದ ಡಾ.ಹರೀಶ್ ಪಾತ್ರ ದುರಂತ ಅಂತ್ಯ ಕಂಡರೂ ಪ್ರೇಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟರು. ವಿಷ್ಣುದಾದ ಹಾಗೂ ಸುಹಾಸಿನಿ ಕಾಂಬಿನೇಷನ್ ಇಷ್ಟ ಆಗಿತ್ತು. ರಾಜೇಂದ್ರ ಸಿಂಗ್ ಬಾಬು ಮತ್ತೆ ಗೆದ್ದಿದ್ದರು. ಈ ವೇಳೆ ಥಿಯೇಟರ್‌ಗೆ ತುಂಬಿ ಬಂದಿದ್ದ ಪ್ರೇಕ್ಷಕರ ಮೇಲೆ ಕಿಡಿಗೇಡಿಗಳು ಖಾರದಪುಡಿ ಎರಚಿದಿದ್ದರು ಎಂದು ವರದಿಗಳಾಗಿದ್ದವು.
ಮೊದಲೇ ಎರಡು ಅಭಿಮಾನಿಗಳ ವರ್ಗಗಳ ಮಧ್ಯೆ ಶೀತಲ ಸಮರ ನಡೆಯುತ್ತಿತ್ತು. ಇಬ್ಬರು ಸೂಪರ್‌ಸ್ಟಾರ್‌ಗಳು ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರೂ, ಅಭಿಮಾನಿಗಳು ಮಾತ್ರ ಕಿತ್ತಾಡುತ್ತಿದ್ದರು. ಹೀಗಾಗಿ ಖಾರದ ಪುಡಿ ಎರಚಿರುವ ಸಂಗತಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಆರೋಪ ಪ್ರತ್ಯಾರೋಪಗಳು ಬಂದಿದ್ದವು. ಏನೇ ಮಾಡಿದರೂ, 'ಬಂಧನ'ದ ಯಶಸ್ಸನ್ನು ತಡೆಯುವುದಕ್ಕೂ ಯಾರಿಂದಲೂ ಸಾಧ್ಯ ಆಗಲಿಲ್ಲ.


Click it and Unblock the Notifications











