'ಅಪ್ಪು'ಗೆ 'ನಾಯಕಿ'ಯಾಗಿದ್ದ ಈ 'ಮೊನಾಲಿಸಾ' ಏನಾದರು, ಎಲ್ಲಿ ಹೋದರು..?

'ಕಲೆ' ಎಷ್ಟೇ ಇದ್ದರೂ ಒಮ್ಮೆ ನಾಯಕಿಯರು 'ಮದುವೆ'ಯಾದರೆ ಇಲ್ಲಿ 'ಬೆಲೆ' ಇಲ್ಲ ಅನ್ನುವ ಮಾತು ಇದೆ. ಎಲ್ಲೋ ಅಲ್ಲೊಬ್ಬರು.. ಇಲ್ಲೊಬ್ಬರು.. ಈ ಮಾತನ್ನ ಸುಳ್ಳಾಗಿಸುತ್ತಾರೆ. ಮಿಕ್ಕಂತೆ ಬಹುತೇಕರ 'ಕಥೆ-ವ್ಯಥೆ' ಸೇಮ್ ಟು ಸೇಮ್. ಇದಕ್ಕೆ ಮತ್ತೊಂದು ಉದಾಹರಣೆ ಅನಿತಾ ಹಸ್ಸಂದಾನಿ.

ಹೌದು, ಅನಿತಾ ಹಸ್ಸಂದಾನಿ. ಒಂದ್ಕಾಲದ ಅಪ್ರತಿಮ ಸುಂದರಿ. ಐಶ್ವರ್ಯ ರೈ ಅಭಿನಯದ 'ತಾಲ್' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಬಂದ ಅನಿತಾ ಅವರ ಜೀವನದ ಶ್ರೇಷ್ಠ ಸಾಧನೆ 'ನುವ್ವು ನೇನು'.

Where is Veera Kannadiga heroine Anita now

ತೇಜಾ ನಿರ್ದೇಶನದಲ್ಲಿ ಬಂದಿದ್ದ 'ನುವ್ವು ನೇನು' ಮೂಲಕ 'ನೇಮು'..'ಫೇಮು'..ಸಂಪಾದಿಸಿದ ಅನಿತಾ ಕೇವಲ 'ಎರಡೇ ವರ್ಷ'ದಲ್ಲಿ 'ಹನ್ನೊಂದು' ಚಿತ್ರಗಳಿಗೆ ಬಣ್ಣ ಹಚ್ಚಿದ್ದರು. ತೆಲುಗು, ತಮಿಳು, ಹಿಂದಿ ಹೀಗೆ ಮೂರು ಭಾಷೆಯಲ್ಲಿಯೂ ಮಿಂಚಿದರು.

ಇನ್ನೂ.. ಅಪ್ಪು ಅಭಿನಯದ 'ವೀರ ಕನ್ನಡಿಗ' ಚಿತ್ರದ ಮೂಲಕ, ಅನಿತಾ ಕನ್ನಡ ಚಿತ್ರರಂಗಕ್ಕೂ ಪರಿಚಯವಾದರು. ಕನ್ನಡಿಗರ ಹೃದಯವನ್ನೂ ಗೆದ್ದರು. 'ಮಸ್ತು ಹುಡುಗಿಯೇ ಯಾಕೆ ಸುಸ್ತು ಮಾಡ್ತಿಯೇ' ಹಾಡು ನಿಮಗೆ ನೆನಪಿರಬೇಕು.

Where is Veera Kannadiga heroine Anita now

ವೀರ ಕನ್ನಡಿಗ ಚಿತ್ರದ ನಂತರ ಮತ್ತೆರಡು ಕನ್ನಡ ಸಿನಿಮಾಗಳನ್ನ ಮಾಡಿದರು ಅನಿತಾ. ಆ ಪೈಕಿ ಒಂದು 'ಗಂಡುಗಲಿ ಕುಮಾರ ರಾಮ' ಆದರೆ, ಮತ್ತೊಂದು 'ಹುಡುಗ ಹುಡುಗಿ'. ಆದರೆ ಆ ನಂತರ ಏನಾಯಿತೋ ಗೊತ್ತಿಲ್ಲ. ನಾಯಕಿಯಾಗಿ ಮಿಂಚ್ತಿದ್ದ ಅನಿತಾ ಏಕಾಏಕಿ 'ಸೈಡ್ ರೋಲ್' ಗಳಿಗೆ ಸೀಮಿತರಾದರು.

2010 ರ ನಂತರ ಅಲ್ಲೊಂದು.. ಇಲ್ಲೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇನ್ನೂ ಅಷ್ಟೊತ್ತಿಗಾಗಲೇ ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ, ಲಾರಾ ದತ್ತಾ ಹೀಗೆ ಅನೇಕರು ಚಿತ್ರರಂಗಕ್ಕೆ ಬಂದಿದ್ದರು. ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿದ್ದರು.

Where is Veera Kannadiga heroine Anita now

ಹೀಗಾಗಿಯೇ ಏನೋ ಇನ್ನೂ ನೆಲೆಯೂರಿ ನಿಲ್ಲುವುದು ಅಸಾಧ್ಯವೆಂಬ ತೀರ್ಮಾನಕ್ಕೆ ಬಂದ ಅನಿತಾ 2013ರಲ್ಲಿ 'ರೊಹೀತ್ ರೆಡ್ಡಿ' ಜೊತೆ ಸಪ್ತಪದಿಯನ್ನ ತುಳಿದರು. 2016ರ ನಂತರ ಬೆಳ್ಳಿ ಪರದೆಯಿಂದ ಸಂಪೂರ್ಣ ಅಂತರವನ್ನ ಕಾಪಾಡಿಕೊಂಡರು.

ಸದ್ಯಕ್ಕೆ ಅನಿತಾಗೆ ಈಗ 42ರ ಹರೆಯ. ಗಂಡನ ಜೊತೆ ನೆಮ್ಮದಿಯಾಗಿ ಸಂಸಾರ ನೌಕೆಯಲ್ಲಿ ವಿಹರಿಸುತ್ತಿರುವ ಅನಿತಾಗೆ 'ಆರವ್ ರೆಡ್ಡಿ' ಎಂಬ ಮುದ್ದಾದ ಮುಗ ಕೂಡ ಇದ್ದಾನೆ. ಇನ್ನೂ 2022ರಲ್ಲಿ ಅನಿತಾ 'ಮಾರೀಚ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಮರಳಿ ಬರುವ ಪ್ರಯತ್ನ ಪಟ್ಟರಾದರೂ, ಮೊದಲು ಸಿಕ್ಕಂತ ಪ್ರೀತಿ ಹಾಗೂ ಸ್ವಾಗತ ಎರಡು ಅನಿತಾಗೆ ಸಿಗಲಿಲ್ಲ. ಈ ಕಾರಣಕ್ಕೆ ಕಿರುತೆರೆಯತ್ತ ಸದ್ಯಕ್ಕೆ ಅನಿತಾ ಮುಖ ಮಾಡಿದ್ದಾರೆ.

2018ರಿಂದ ಕಿರುತೆರೆಯಲ್ಲಿಯೇ ಬಿಡಾರವನ್ನ ಹೂಡಿರುವ ಅನಿತಾ, 'ನಾಗಿನ್ 3', 'ನಾಗಿನ್ 4', 'ನಾಗಿನ್ 5', 'ನಾಗಿನ್ 6' ನಲ್ಲಿ ಅಭಿನಯಿಸಿದ್ದಾರೆ. ಇನ್ನೂ 'ಬಿಗ್ ಬಾಸ್ ಸೀಸನ್ 12' ಹಾಗೂ 'ಬಿಗ್ ಬಾಸ್ ಸೀಸನ್ 15'ರಲ್ಲಿಯೂ ಭಾಗವಹಿಸಿದ ಹೆಗ್ಗಳಿಕೆ ಇವರದ್ದು. 'ಹಮ್ ರಹೇ ನಾ ರಹೇ ಹಮ್' ಇವರು ಅಭಿನಯಿಸಿರುವ ಕೊನೆಯ ಧಾರಾವಾಹಿ. ಈ ಧಾರಾವಾಹಿ ಮುಕ್ತಾಯವಾಗಿ ಒಂದು ವರ್ಷವಾದರೂ, ಅನಿತಾ ಮತ್ಯಾವ ಪಾತ್ರವನ್ನೂ ಒಪ್ಪಿಕೊಂಡಿಲ್ಲ

ಮಿಕ್ಕಂತೆ ಇನ್ಸ್ಟಾಗ್ರಾಂನಲ್ಲಿ ಅನಿತಾ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಹೆಚ್ಚು ಕಡಿಮೆ 74 ಲಕ್ಷ ಅಭಿಮಾನಿಗಳನ್ನ ಇವರು ಇಲ್ಲಿ ಹೊಂದಿದ್ದಾರೆ. ಒಟ್ಟಿನಲ್ಲಿ ಬಣ್ಣದ ಬದುಕಿನ ಈ ಹಾವು ಏಣಿಯಾಟದಲ್ಲಿ ಯಾರ ನಸೀಬು ಯಾವತ್ತು ಬದಲಾಗುತ್ತೆ, ಅದೃಷ್ಟ ಕೈ ಕೊಟ್ಟು ಯಾರು ಯಾವಾಗ ಚಿತ್ರರಂಗದಿಂದ ದೂರವಾಗ್ತಾರೆ ಎಂದು ಹೇಳುವುದು ಕಷ್ಟ. ಅನಿತಾ ಇದಕ್ಕೆ ಜ್ವಲಂತ ಸಾಕ್ಷಿ

More from Filmibeat

English summary
Anita Hassanandani, Who Made her dream debut with Nuvvu Nenu And The Actress Who Also Shared Screen With Puneeth Rajkumar Is Now Fade Out From Film Industry
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X