For Quick Alerts
  ALLOW NOTIFICATIONS  
  For Daily Alerts

  ಕಂಗನಾ ರಣಾವತ್‌ಗೂ ಮುಂಚೆ ಅತಿ ಹೆಚ್ಚು ರಾಷ್ಟ್ರ ಪ್ರಶಸ್ತಿ ಪಡೆದ ನಟಿ ಯಾರು?

  |

  1967ರಲ್ಲಿ ಮೊಟ್ಟ ಮೊದಲ ಸಲ ಅತ್ಯುತ್ತಮ ನಟಿ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪ್ರಕಟಿಸಲಾಯಿತು. 'ರಾತ್ ಔರ್ ದಿನ್' ಚಿತ್ರದ ನಟನೆಗಾಗಿ ನರ್ಗಿಸ್ ದತ್ ಚೊಚ್ಚಲ ಬಾರಿಗೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು.

  2019ನೇ ಸಾಲಿನಲ್ಲಿ ಇತ್ತೀಚಿಗಷ್ಟೆ ನಟಿ ಕಂಗನಾ ರಣಾವತ್‌ಗೆ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಧಕ್ಕಿಸಿಕೊಂಡರು. ಮಣಿಕರ್ಣಿಕಾ ಹಾಗೂ ಪಂಗಾ ಚಿತ್ರದ ನಟನೆಗಾಗಿ ಕಂಗನಾ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ನಾಲ್ಕನೇ ಬಾರಿ ಕಂಗನಾ ದೇಶದ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ.

  ರಾಷ್ಟ್ರ ಪ್ರಶಸ್ತಿಗೂ ಕಂಗನಾ 'ಕ್ವೀನ್': ನಾಲ್ಕನೇ ಬಾರಿಗೆ ಅತ್ಯುನ್ನತ ಗೌರವ ಪಡೆದ ನಟಿರಾಷ್ಟ್ರ ಪ್ರಶಸ್ತಿಗೂ ಕಂಗನಾ 'ಕ್ವೀನ್': ನಾಲ್ಕನೇ ಬಾರಿಗೆ ಅತ್ಯುನ್ನತ ಗೌರವ ಪಡೆದ ನಟಿ

  ಇದುವರೆಗೂ ಒಟ್ಟು 55 ಬಾರಿ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ವೈಯಕ್ತಿಕವಾಗಿ ಅತಿ ಹೆಚ್ಚು ರಾಷ್ಟ್ರ ಪ್ರಶಸ್ತಿ ಪಡೆದಿರುವ ನಟಿ ಯಾರು? ಮುಂದೆ ಓದಿ...

  ಐದು ಬಾರಿ ಪ್ರಶಸ್ತಿ ಪಡೆದಿರುವ ಶಬಾನಾ ಅಜ್ಮಿ

  ಐದು ಬಾರಿ ಪ್ರಶಸ್ತಿ ಪಡೆದಿರುವ ಶಬಾನಾ ಅಜ್ಮಿ

  ಬಾಲಿವುಡ್‌ ನಟಿ ಶಬಾನಾ ಅಜ್ಮಿ ಒಟ್ಟು ಐದು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ವೈಯಕ್ತಿಕವಾಗಿ ಅತಿ ಹೆಚ್ಚು ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿರುವ ನಟಿ ಎಂಬ ಹೆಗ್ಗಳಿಕೆಗೂ ಶಬಾನಾ ಅಜ್ಮಿ ಪಾತ್ರರಾಗಿದ್ದಾರೆ. 1975ರಲ್ಲಿ 'ಅಂಕುರ್' ಚಿತ್ರದ ನಟನೆಗಾಗಿ ಮೊದಲ ಸಲ ಪ್ರಶಸ್ತಿ ಪಡೆದರು. 1983ರಲ್ಲಿ 'ಅರ್ಥ್', 1984ರಲ್ಲಿ 'ಖಾಂದರ್', 1985ರಲ್ಲಿ 'ಪಾರ್' ಹಾಗೂ 1999ರಲ್ಲಿ 'ಗಾಡ್ ಮದರ್' ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ತೆಗೆದುಕೊಂಡಿದ್ದರು.

  ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಶಾರದ

  ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಶಾರದ

  ದಕ್ಷಿಣ ಭಾರತದ ಖ್ಯಾತ ನಟಿ ಶಾರದ ಅವರು ಒಟ್ಟು ಮೂರು ಸಲ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. 1968ರಲ್ಲಿ 'ತುಲಬಾರಮ್' ಚಿತ್ರದ ನಟನೆಗಾಗಿ ಮೊದಲ ಸಲ ರಾಷ್ಟ್ರ ಪ್ರಶಸ್ತಿ ಗೆದ್ದರು. 1972ರಲ್ಲಿ 'ಸ್ವಯಂವರಂ' ಚಿತ್ರ ಹಾಗೂ 1977ರಲ್ಲಿ 'ನಿಮಜನಮ್' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.

  ನಾಲ್ಕು ಬಾರಿ ಪ್ರಶಸ್ತಿ ಗೆದ್ದ ಕಂಗನಾ ರಣಾವತ್

  ನಾಲ್ಕು ಬಾರಿ ಪ್ರಶಸ್ತಿ ಗೆದ್ದ ಕಂಗನಾ ರಣಾವತ್

  2008ರಲ್ಲಿ ತೆರೆಕಂಡ 'ಫ್ಯಾಶನ್' ಚಿತ್ರಕ್ಕಾಗಿ ಮೊದಲ ಬಾರಿಗೆ ಕಂಗನಾ ರಾಷ್ಟ್ರ ಪ್ರಶಸ್ತಿ ಪಡೆದರು. 2014ರಲ್ಲಿ ಬಂದ 'ಕ್ವೀನ್' ಚಿತ್ರದ ನಟನೆಯಗಾಗಿ ಎರಡನೇ ಬಾರಿ ಕಂಗನಾಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು. 2015ರಲ್ಲಿ ಮೂಡಿಬಂದಿದ್ದ 'ತನು ವೆಡ್ಸ್ ಮನು ರಿಟರ್ನ್ಸ್' ಚಿತ್ರದ ನಟನೆಗಾಗಿ ಮೂರನೇ ಬಾರಿಗೆ ರಾಷ್ಟ್ರ ಪ್ರಶಸ್ತಿ ಒಲಿಸಿಕೊಂಡಿದ್ದರು. ಈಗ 'ಮಣಿಕರ್ಣಿಕಾ' ಹಾಗೂ 'ಪಂಗಾ' ಚಿತ್ರಕ್ಕಾಗಿ ನಾಲ್ಕನೇ ಬಾರಿ ನ್ಯಾಷನಲ್ ಅವಾರ್ಡ್ ಪಡೆದುಕೊಂಡಿದ್ದಾರೆ.

  ಎರಡು ಬಾರಿ ಪ್ರಶಸ್ತಿ ಪಡೆದವರು

  ಎರಡು ಬಾರಿ ಪ್ರಶಸ್ತಿ ಪಡೆದವರು

  ಇನ್ನುಳಿದಂತೆ ಸ್ಮಿತಾ ಪಾಟೀಲ್ (1977 ಮತ್ತು 1980), ಅರ್ಚನಾ (1988 ಮತ್ತು 1987), ಶೋಬಾನಾ (1993 ಮತ್ತು 2001) ಮತ್ತು ಟಬು (1986 ಮತ್ತು 2001) ತಲಾ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದಾರೆ.

  English summary
  From Shabana Azmi to Kangana Ranaut: Which Actress won maximum number of National Film Awards?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X