twitter
    For Quick Alerts
    ALLOW NOTIFICATIONS  
    For Daily Alerts

    ಭಾರತದ ಯಾವ ನಗರದಲ್ಲಿ ಚಿತ್ರಮಂದಿರ ಟಿಕೆಟ್ ದರ ಎಷ್ಟಿದೆ?

    |

    ಭಾರತದಲ್ಲಿ ಚಿತ್ರಮಂದರಿಗಳಿಗೆ ದೊಡ್ಡ ಇತಿಹಾಸವಿದೆ. ಭಾರತದ ಮೊದಲ ಸಿನಿಮಾ ನಿರ್ಮಾಣವಾಗುವ ಮೂರು ದಶಕಕ್ಕೂ ಮುಂಚೆಯೇ ಚಿತ್ರಮಂದಿರ ಇತ್ತು. ಕಲಾ ಪ್ರದರ್ಶನ ಮಾಡುವ ಸಭಾ ಭವನಗಳಂತೂ ಊರಿಗೊಂದಂದರಂತೆ ಇದ್ದವು.

    ಇದೀಗ ಭಾರತದಲ್ಲಿ 4000ಕ್ಕೂ ಹೆಚ್ಚು ಚಿತ್ರಮಂದಿರಗಳು ಕಾರ್ಯ ನಿರ್ವಹಿಸುತ್ತಿವೆ. ಭಾರತ ಎಲ್ಲ ರಾಜ್ಯಗಳಲ್ಲಿಯೂ ಚಿತ್ರಮಂದಿರಗಳಿವೆ. ಜಮ್ಮು ಕಾಶ್ಮೀರದಲ್ಲಿಯೂ ಮುಚ್ಚಿದ್ದ ಚಿತ್ರಮಂದಿರಗಳನ್ನು ತೆಗೆಯುವ, ಹೊಸ ಚಿತ್ರಮಂದಿರಗಳನ್ನು ಕಟ್ಟುವ ಕುರಿತು ಮಾತುಕತೆಗಳು ಜೋರಾಗಿ ನಡೆಯುತ್ತಿದೆ.

    ಭಾರತದಲ್ಲಿನ ಸಿನಿಮಾ ಉದ್ಯಮ ಲಕ್ಷಾಂತರ ಕೋಟಿ ಮೌಲ್ಯದ ಉದ್ಯಮ. ಈ ಉದ್ಯಮ ತನ್ನ ಅಂತಿಮ ಲಾಭ ಗಳಿಸುವುದು ಇದೇ ಚಿತ್ರಮಂದಿರಗಳಿಂದ. ಸಿನಿಮಾ ಉದ್ಯಮ ಲಾಭ ಗಳಿಸಿ ಶ್ರೀಮಂತವಾಗುವ ಚಿತ್ರಮಂದಿರಗಳ ಸ್ಥಿತಿ ಏನು? ಟಿಕೆಟ್ ದರ ಎಷ್ಟು? ಯಾವ ನಗರದಲ್ಲಿ ಟಿಕೆಟ್ ದರ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.

    ಭಾರತದಲ್ಲಿ ಪ್ರತಿ 93,000 ಜನರಿಗೆ ಒಂದು ಚಿತ್ರಮಂದಿರ ಇದೆ ಎನ್ನಲಾಗುತ್ತದೆ. ಅಮೆರಿಕದಲ್ಲಿ ಪ್ರತಿ 7500 ಮಂದಿಗೆ ಒಂದು ಚಿತ್ರಮಂದಿರ ಇದೆಯಂತೆ. ಆದರೆ ಅಮೆರಿಕಕ್ಕೆ ಹೋಲಿಸಿಕೊಂಡರೆ ಭಾರತದಲ್ಲಿ ಚಿತ್ರಮಂದಿರಗಳು ದುಬಾರಿಯಲ್ಲ. ಅಸಲಿಗೆ ಬಹಳವೇ ಅಗ್ಗ ಎಂದೇ ಹೇಳಬಹುದು. ಆದರೂ ಭಾರತದಲ್ಲಿ ಯಾವ ಪಟ್ಟಣದಲ್ಲಿ ಸಿನಿಮಾ ನೋಡುವುದು ಬಹಳ ಕಡಿಮೆ ಖರ್ಚುಂಟು ಮಾಡಬಹುದು?

    ದೇಶದಲ್ಲೇ ಅತಿ ಕಡಿಮೆ ಬೆಲೆ ತಮಿಳುನಾಡಿನಲ್ಲಿ

    ದೇಶದಲ್ಲೇ ಅತಿ ಕಡಿಮೆ ಬೆಲೆ ತಮಿಳುನಾಡಿನಲ್ಲಿ

    ಇಡೀಯ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿನಿಮಾ ಟಿಕೆಟ್ ಸಿಗುವುದು ತಮಿಳುನಾಡಿನಲ್ಲಿ. ಚೆನ್ನೈ ನಗರದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸರಾಸರಿ ಟಿಕೆಟ್‌ ಬೆಲೆ ಕೇವಲ 80 ರುಪಾಯಿಗಳು. ಅದೇ ಮಲ್ಟಿಫ್ಲೆಕ್ಸ್‌ಗಳ ಸರಾಸರಿ ಟಿಕೆಟ್ ಬೆಲೆ ಕೇವಲ 109. ಇಡೀ ದೇಶದಲ್ಲಿ ಇನ್ನಾವ ನಗರ ಅಥವಾ ರಾಜ್ಯದಲ್ಲೂ ಇಷ್ಟು ಕಡಿಮೆ ಬೆಲೆಗೆ ಸಿನಿಮಾ ಟಿಕೆಟ್‌ಗಳು ದೊರೆಯುವುದಿಲ್ಲ. ಚೆನ್ನೈ ನಗರದಲ್ಲಿ 40 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿದ್ದರೆ 79 ಮಲ್ಟಿಫ್ಲೆಕ್ಸ್ ಸ್ಕ್ರೀನ್‌ಗಳಿವೆ. ಚೆನ್ನೈನಂಥಹಾ ಮುಖ್ಯ ನಗರಕ್ಕೆ ಈ ಸಂಖ್ಯೆ ಕಡಿಮೆ ಆದರೆ ಇಡೀಯ ತಮಿಳುನಾಡು ರಾಜ್ಯದಲ್ಲಿ ಬರೋಬ್ಬರಿ 1671 ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ತಮಿಳುನಾಡು ಹೊರತಾಗಿ ಇನ್ನಾವ ರಾಜ್ಯದಲ್ಲೂ ಇಷ್ಟೋಂದು ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಿಲ್ಲ.

    ಕಡಿಮೆ ಬೆಲೆಗೆ ಸಿನಿಮಾ ನೋಡಿ ಹೈದರಾಬಾದ್‌ನಲ್ಲಿ

    ಕಡಿಮೆ ಬೆಲೆಗೆ ಸಿನಿಮಾ ನೋಡಿ ಹೈದರಾಬಾದ್‌ನಲ್ಲಿ

    ಹೈದರಾಬಾದ್‌ನಲ್ಲಿ ಸಹ ಸಿನಿಮಾ ನೋಡುವುದು ಬಹಳ ಸುಲಭ. ತಮಿಳುನಾಡು ಹೊರತುಪಡಿಸಿದರೆ ಅತ್ಯಂತ ಕಡಿಮೆ ಬೆಲೆಗೆ ಸಿನಿಮಾ ಟಿಕೆಟ್ ದೊರೆಯುವುದು ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ. ಹೈದರಾಬಾದ್‌ನಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸರಾಸರಿ ಟಿಕೆಟ್ ಬೆಲೆ 82 ರು ಮಾತ್ರ. ಕೆಲವು ಚಿತ್ರಮಂದಿರಗಳಲ್ಲಿ 50 ರುಪಾಯಿಗೂ ಸಿನಿಮಾ ನೋಡಬಹುದು. ಇನ್ನು ಮಲ್ಟಿಫ್ಲೆಕ್ಸ್‌ಗಳಲ್ಲಿ ಸರಾಸರಿ ಟಿಕೆಟ್ ಬೆಲೆ 143 ರುಪಾಯಿಗಳು ಮಾತ್ರ. ತೆಲಂಗಾಣ, ಆಂಧ್ರದ ಕೆಲವು ಪಟ್ಟಣಗಳಲ್ಲಿ 30 ರುಪಾಯಿಗೂ ಸಿನಿಮಾ ನೋಡಬಹುದಾದ ಚಿತ್ರಮಂದಿರಗಳು ಈಗಲೂ ಇವೆ. ಹೈದರಾಬಾದ್‌ ಒಂದರಲ್ಲೇ 113 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿದ್ದರೆ 93 ಮಲ್ಟಿಫ್ಲೆಕ್ಸ್‌ಗಳಿವೆ. ಆಂಧ್ರ ಪ್ರದೇಶದಲ್ಲಿ ಬರೋಬ್ಬರಿ 572 ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿದ್ದರೆ, ತೆಲಂಗಾಣ ರಾಜ್ಯದಲ್ಲಿ 352 ಚಿತ್ರಮಂದಿರಗಳು ಇವೆ.

    ಕೇರಳದಲ್ಲಿಯೂ ಟಿಕೆಟ್ ದರ ಹೆಚ್ಚು ದುಬಾರಿಯಲ್ಲ

    ಕೇರಳದಲ್ಲಿಯೂ ಟಿಕೆಟ್ ದರ ಹೆಚ್ಚು ದುಬಾರಿಯಲ್ಲ

    ಕೇರಳದಲ್ಲಿ ಸಹ ಸಿನಿಮಾ ನೋಡುವುದು ಬಹಳ ದುಬಾರಿಯಾದ ಕಾರ್ಯವಲ್ಲ. ಕೇರಳದ ಕೊಚ್ಚಿಯಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸರಾಸರಿ ಟಿಕೆಟ್ ಬೆಲೆ 110, ಕೊಚ್ಚಿನಲ್ಲಿ ಮಲ್ಟಿಫ್ಲೆಕ್ಸ್‌ಗಳ ಸರಾಸರಿ ಟಿಕೆಟ್ ಬೆಲೆ 127. ಕೇರಳದಾದ್ಯಂತ ಇರುವುದು ಕೇವಲ 289 ಚಿತ್ರಮಂದಿರಗಳಷ್ಟೆ. ಆದರೂ ಹೆಚ್ಚೇನೂ ದುಬಾರಿ ಅಲ್ಲದೆ ಕಡಿಮೆ ಬೆಲೆಗೆ ಟಿಕೆಟ್‌ಗಳನ್ನು ಕೇರಳದಲ್ಲಿ ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ ಮಲಯಾಳಂನ ಹಲವು ಸಿನಿಮಾಗಳು ನೇರವಾಗಿ ಒಟಿಟಿಗೆ ಬಿಡುಗಡೆ ಆಗುತ್ತಿವೆ. ಅತ್ಯುತ್ತಮ ಸಿನಿಮಾಗಳನ್ನು ಕಡಿಮೆ ಹಣದಲ್ಲಿ ನಿರ್ಮಿಸುವುದರಲ್ಲಿ ಮಲಯಾಳಿಗರು ಸಿದ್ಧ ಹಸ್ತರು.

    ಗುಜರಾತ್‌ನಲ್ಲಿಯೂ ಕಡಿಮೆ ಹಣಕ್ಕೆ ಸಿನಿಮಾ ನೋಡಬಹುದು

    ಗುಜರಾತ್‌ನಲ್ಲಿಯೂ ಕಡಿಮೆ ಹಣಕ್ಕೆ ಸಿನಿಮಾ ನೋಡಬಹುದು

    ಕೇರಳದ ನಂತರ ಅತ್ಯಂತ ಕಡಿಮೆ ಹಣಕ್ಕೆ ಸಿನಿಮಾ ನೋಡಬಹುದಾದ ರಾಜ್ಯವೆಂದರೆ ಗುಜರಾತ್. ಈ ರಾಜ್ಯದ ಅತಿ ದೊಡ್ಡ ನಗರವಾದ ಅಹ್ಮದಾಬಾದ್‌ನಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಸರಾಸರಿ ಟಿಕೆಟ್ ದರ 113 ರುಪಾಯಿಗಳಷ್ಟೆ. ಅಹ್ಮದಾಬಾದ್‌ನ ಮಲ್ಟಿಫ್ಲೆಕ್ಸ್‌ಗಳ ಸರಾಸರಿ ಟಿಕೆಟ್ ದರ 152 ರು. ಗುರಾಜ್ ರಾಜ್ಯದಲ್ಲಿ ಒಟ್ಟು ಇರುವುದು 199 ಚಿತ್ರಮಂದಿರಗಳು ಮಾತ್ರ. ಗುಜರಾತಿ ಭಾಷೆಯ ಸಿನಿಮಾಗಳು ಸಹ ಈ ರಾಜ್ಯದಲ್ಲಿ ತಯಾರಾಗುತ್ತವೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲ. ಬಹುತೇಕ ಹಿಂದಿ ಸಿನಿಮಾಗಳೇ ಇಲ್ಲಿ ಹೆಚ್ಚು ಪ್ರದರ್ಶನ ಕಾಣುತ್ತವೆ.

    ಅತಿ ಹೆಚ್ಚು ಮಲ್ಟಿಫ್ಲೆಕ್ಸ್‌ಗಳನ್ನು ಹೊಂದಿರುವ ನಗರ ಮುಂಬೈ

    ಅತಿ ಹೆಚ್ಚು ಮಲ್ಟಿಫ್ಲೆಕ್ಸ್‌ಗಳನ್ನು ಹೊಂದಿರುವ ನಗರ ಮುಂಬೈ

    ಬಾಲಿವುಡ್‌ನ ಮೂಲ ಸ್ಥಾನವಾಗಿರುವ ಮುಂಬೈನಲ್ಲಿ ಟಿಕೆಟ್‌ ದರಗಳು ಅತ್ತ ಅಗ್ಗವೂ ಅಲ್ಲ ಇತ್ತ ದುಬಾರಿಯೂ ಅಲ್ಲ ಎಂಬಂತಿವೆ. ಮುಂಬೈನಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸರಾಸರಿ ಟಿಕೆಟ್ ದರ 159 ರುಪಾಯಿಗಳು ಮಾತ್ರ. ಮುಂಬೈನ ಮಲ್ಟಿಫ್ಲೆಕ್ಸ್‌ಗಳ ಸರಾಸರಿ ಟಿಕೆಟ್ ದರ 229 ರುಪಾಯಿಗಳು. ಮುಂಬೈ ನಗರದಲ್ಲಿ ಕೇವಲ 59 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿವೆ. ಆದರೆ 194 ಮಲ್ಟಿಫ್ಲೆಕ್ಸ್‌ಗಳಿವೆ. ಇಡೀ ದೇಶದಲ್ಲಿ ಅತಿ ಹೆಚ್ಚು ಮಲ್ಟಿಫ್ಲೆಕ್ಸ್‌ ಸ್ಕ್ರೀನ್ ಹೊಂದಿರುವ ನಗರ ಮುಂಬೈ.

    ಕರ್ನಾಟಕದಲ್ಲಿಯೂ ಸಿನಿಮಾ ವೀಕ್ಷಣೆ ದುಬಾರಿಯೇ

    ಕರ್ನಾಟಕದಲ್ಲಿಯೂ ಸಿನಿಮಾ ವೀಕ್ಷಣೆ ದುಬಾರಿಯೇ

    ಭಾರತದಲ್ಲಿ ಅತಿ ಹೆಚ್ಚು ಟಿಕೆಟ್ ದರ ಇರುವ ರಾಜ್ಯಗಳಲ್ಲಿ ಒಂದು ಕರ್ನಾಟಕ. ಬೆಂಗಳೂರಿನಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸರಾಸರಿ ಟಿಕೆಟ್ ಬೆಲೆ 149 ಮತ್ತು ಮಲ್ಟಿಫ್ಲೆಕ್ಸ್‌ಗಳ ಸರಾಸರಿ ಟಿಕೆಟ್ ಬೆಲೆ 283. ಸಿದ್ದರಾಮಯ್ಯ ಸಿಎಂ ಆಗಿದ್ದ ಸಮಯದಲ್ಲಿ ಮಲ್ಟಿಫ್ಲೆಕ್ಸ್‌ಗಳ ಟಿಕೆಟ್ ದರದ ಮೇಲೆ ನಿಯಂತ್ರಣ ಹೇರಿದ್ದರು. ಅದಿಲ್ಲದೇ ಹೋಗಿದ್ದಿದ್ದರೆ ಮಲ್ಪಿಫ್ಲೆಕ್ಸ್‌ಗಳ ಟಿಕೆಟ್ ದರ ಇನ್ನಷ್ಟು ಹೆಚ್ಚಾಗಿರುತ್ತಿತ್ತು. ರಾಜ್ಯದ ಅದರಲ್ಲಿಯೂ ಬೆಂಗಳೂರಿನ ಹಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು 200 ಕ್ಕೂ ಹೆಚ್ಚು ಬೆಲೆಗೆ ಟಿಕೆಟ್‌ಗಳನ್ನು ಮಾರುತ್ತಿವೆ. ರಾಜ್ಯದಲ್ಲಿ ಒಟ್ಟು 368 ಚಿತ್ರಮಂದಿರಗಳಿವೆ. ಹಲವು ಮಲ್ಟಿಫ್ಲೆಕ್ಸ್‌ಗಳು ಸಹ ಕಾರ್ಯನಿರ್ವಹಿಸುತ್ತಿವೆ.

    ಅತ್ಯಂತ ದುಬಾರಿ ದೆಹಲಿ

    ಅತ್ಯಂತ ದುಬಾರಿ ದೆಹಲಿ

    ಇಡೀಯ ದೇಶದಲ್ಲಿ ಚಿತ್ರಮಂದಿರಗಳ ಟಿಕೆಟ್ ಬೆಲೆ ಅತಿ ಹೆಚ್ಚಿರುವುದು ದೇಶದ ರಾಜಧಾನಿ ದೆಹಲಿಯಲ್ಲಿ. ಇಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದ ಸರಾಸರಿ ಟಿಕೆಟ್ ಬೆಲೆ 263 ರುಪಾಯಿಗಳಿವೆ. ಇನ್ನು ನಗರದ ಮಲ್ಟಿಫ್ಲೆಕ್ಸ್‌ಗಳ ಸರಾಸರಿ ಟಿಕೆಟ್ ಬೆಲೆ 323 ರುಪಾಯಿಗಳಿವೆ. ದೆಹಲಿಯ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆ 500ಕ್ಕೂ ಹೆಚ್ಚಿದೆ. ಮಲ್ಟಿಫ್ಲೆಕ್ಸ್‌ಗಳಲ್ಲಿ 800ಕ್ಕೂ ಟಿಕೆಟ್ ಮಾರಾಟವಾಗುತ್ತದೆ. ಹಾಗಾಗಿ ಭಾರತದಲ್ಲಿ ಸಿನಿಮಾ ನೋಡಲು ಅತ್ಯಂತ ದುಬಾರಿ ನಗರ ದೆಹಲಿ.

    English summary
    Which is the best city to watch movie in India. Here is the price list of movie theaters in different cities of India.
    Thursday, August 19, 2021, 19:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X