ವಿಸ್ಕಿ ಕುಡಿದು ಚಿತ್ರತಂಡದ ಎದುರು ಬೆತ್ತಲೆಯಾಗಿದ್ದಳು ಈ ಖ್ಯಾತ ನಟಿ..!

ಚಿತ್ರರಂಗದ ಮೇಲಿನ ಸೆಳೆತ, ಕಲಾವಿದನಾಗಬೇಕು ಎನ್ನುವ ಬಯಕೆ ಯಾರನ್ನು ಎಲ್ಲಿಗೆ ಬೇಕಾದರೂ ತಂದು ನಿಲ್ಲಿಸಬಹುದು. ಹಾಗಂಥ ಕೇವಲ ಅದೃಷ್ಟವನ್ನೇ ನಂಬಿ ಇಲ್ಲಿ ಕೂರಲು ಆಗುವುದಿಲ್ಲ. ಸತತ ಪ್ರಯತ್ನವನ್ನು ಮಾಡಿದಾಗಲೇ ಸಿಗಬೇಕಾದ ಸ್ಥಾನ-ಮಾನ ಚಿತ್ರರಂಗದಲ್ಲಿ ಸಿಗುತ್ತೆ.ಇನ್ನು, ಗೆಲುವು - ಸೋಲು- ವ್ಯಾಪಾರ-ವ್ಯವಹಾರ ಏನೇ ಇರಲಿ ಕೆಲ ಚಿತ್ರಗಳು ಮತ್ತು ಪಾತ್ರಗಳು ಕಲಾವಿದರ ಹೃದಯಕ್ಕೆ ಹತ್ತಿರವಾಗಿರುತ್ತಾವೆ. ಮರೆಯಲಾಗದ ಅನುಭವಕ್ಕೆ ಕಾರಣವಾಗಿರುತ್ತಾವೆ.

ಇನ್ನು, ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಮಾನ್ಯವಾಗಿ ಕಲಾವಿದರು ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಪರಕಾಯ ಪ್ರವೇಶವನ್ನು ಮಾಡುತ್ತಾರೆ. ಮುಜುಗರಕ್ಕೀಡಾಗುವ ಸನ್ನಿವೇಶಗಳಿದ್ದರು ಕೂಡ ಪಾತ್ರದ ದೃಷ್ಟಿಯಿಂದ ಅಭಿನಯಿಸುತ್ತಾರೆ. ಅದರಲ್ಲಿಯೂ ನಾಯಕಿಯರಿಗೆ ಇಲ್ಲಿ ಅನೇಕ ಸವಾಲುಗಳು ಎದುರಾಗುತ್ತಾವೆ. ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾಗುವ ಪಾತ್ರಗಳನ್ನು ನಾಯಕಿಯರು ಮಾಡಬೇಕಾಗುತ್ತೆ.

Whiskey Nerves and Seven Takes Did You Know Kubbra Sait s Bold Sacred Games Moment

ಕೆಲವೊಮ್ಮೆ ಎಲ್ಲರೆದುರು ಪಾತ್ರಕ್ಕೆ ನ್ಯಾಯ ಸಲ್ಲಿಸಲು ಅರೆಬೆತ್ತಲೆ/ ಬೆತ್ತಲೆ ಕೂಡ ಆಗಬೇಕಾಗುತ್ತೆ. ಕುಬ್ರಾ ಸೇಠ್ ಗೆ ಇಂತಹದ್ದೇ ಒಂದು ಅನುಭವ ಹಿಂದೊಮ್ಮೆ ಆಗಿತ್ತು. ಹೌದು, ಕುಬ್ರಾ ಸೇಠ್.. ದಾನಿಶ್ ಸೇಠ್ ಅವರ ಸಹೋದರಿ. ಬಾಲಿವುಡ್‌ನ ವೆಬ್ ಸರಣಿಗಳಲ್ಲಿ ಮಿಂಚುತ್ತಿರುವ ಕುಬ್ರಾ ಸೇಠ್ ಅವರನ್ನು ಅನೇಕರು ಇವತ್ತು ಕೂಡ ಕುಕೂ ಎಂದೇ ಕರೆಯುತ್ತಾರೆ.

ಅಷ್ಟರ ಮಟ್ಟಿಗೆ ಅನುರಾಗ್ ಕಶ್ಯಪ್ ಮತ್ತು ವಿಕ್ರಮಾದಿತ್ಯ ಮೋಟ್ವಾನೆ ನಿರ್ದೇಶನದ ಸೇಕ್ರೆಡ್​ ಗೇಮ್ಸ್​ ವೆಬ್ ಸರಣಿ ಇವರಿಗೆ ಹೆಸರನ್ನು ತಂದು ಕೊಟ್ಟಿದೆ. ಆದರೆ ಈ ಹೆಸರು ಸಂಪಾದಿಸಲು, ಪಾತ್ರಕ್ಕೆ ನ್ಯಾಯ ಸಲ್ಲಿಸಲು ಕುಬ್ರಾ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಕೇವಲ ಒಂದು ಸನ್ನಿವೇಶಕ್ಕೆ ಒಂದಲ್ಲ, ಎರಡಲ್ಲ, ಏಳು ಬಾರಿ ಬೆತ್ತಲಾಗಿದ್ದರು ಕುಬ್ರಾ.

ಹೌದು, ಈ ಕುರಿತು ಹಿಂದೊಮ್ಮೆ ಕುಬ್ರಾ ಸೇಠ್ ಟೈಮ್ಸ್ ನೌಗೆ ಸಂದರ್ಶನವನ್ನು ನೀಡಿದ್ದರು. ಸಂದರ್ಶನದ ಸಮಯದಲ್ಲಿ ಅನುರಾಗ್ ಕಶ್ಯಪ್ ತಮಗೆ ವಿಸ್ಕಿ ಕುಡಿಸಿ ಆ ನಂತರ ಬೆತ್ತಲಾಗುವಂತೆ ಹೇಳಿದ್ದರು ಎಂದು ಹೇಳಿದ್ದರು. ಈ ಕುರಿತು ಮಾತನಾಡಿದ್ದ ಕುಬ್ರಾ ಸೇಠ್ , ಕುಕೂ ಪಾತ್ರಕ್ಕೆ ಆಡಿಷನ್ ನೀಡಲು ನಾನು ಹೋದಾಗ ಒಂದು ದೃಶ್ಯದಲ್ಲಿ ಬಟ್ಟೆ ಬಿಚ್ಚಬೇಕಾಗುತ್ತೆ ಎಂದು ನನಗೆ ಹೇಳಿದ್ದರು. ಆದರೂ ಕೂಡ ನಾನು ಆ ಪಾತ್ರ ಒಪ್ಪಿಕೊಂಡೆ ಎಂದು ಹೇಳಿದ್ದರು.

ಆ ನಂತರ ಅನುರಾಗ್ ಕಶ್ಯಪ್ ನನ್ನ ವ್ಯಾನಿಟಿ ವ್ಯಾನ್‌ಗೆ ಬಂದು ಯಾವ ಎಣ್ಣೆ ನೀವು ಹೊಡೆಯುತ್ತೀರಾ ಎಂದು ಕೇಳಿದ್ದರು ಎಂದಿದ್ದ ಕುಬ್ರಾ, ಆಗ ನಾನು ವೈನ್ ಎಂಬ ಉತ್ತರವನ್ನು ನೀಡಿದ್ದೇ ಆದರೆ ಆ ನಂತರ ಅನುರಾಗ್ ಕಶ್ಯಪ್ ವಿಸ್ಕಿ ತೆಗೆದುಕೊಂಡು ಬರಲು ಅಲ್ಲಿದ್ದವರಿಗೆ ಹೇಳಿದರು ಎಂದು ಹೇಳಿದ್ದರು.

ಮುಂದುವರೆದು ವಿಸ್ಕಿ ಕುಡಿಯುತ್ತಾ ನಾನು ನನ್ನ ಸಂಭಾಷಣೆಯ ಸಾಲುಗಳನ್ನು ಓದಲು ಶುರು ಮಾಡಿದೆ ಆಗ ಪೇಪರ್ ಕಸಿದುಕೊಂಡ ಅನುರಾಗ್ ಕಶ್ಯಪ್, ಪಾತ್ರದ ಭಾವನೆಗಳನ್ನು ಅರ್ಥ ಮಾಡಿಕೊಂಡು ಅಭಿನಯಿಸುವಂತೆ ಹೇಳಿದರು. ನನ್ನ ಸಾಲುಗಳನ್ನು ಅವರೇ ಓದಿದರು ಎಂದು ಹೇಳಿದ್ದರು.

ಅವರು ನನ್ನ ಸಾಲುಗಳನ್ನು ಓದುತ್ತಿದ್ದಂತೆಯೇ ನನ್ನ ಕಣ್ಣಲ್ಲಿ ಸ್ವಲ್ಪ ನೀರು ಬಂತು ಅದನ್ನು ಗಮನಿಸಿದ ಅನುರಾಗ್ ಕಶ್ಯಪ್ ಈಗ ಯಾರು ಇವರ ಜೊತೆ ಮಾತನಾಡುವಂತೆ ಇಲ್ಲ ಎಂದು ಆದೇಶ ಹೊರಡಿಸಿ ಇನ್ನೊಂದು ಗ್ಲಾಸ್ ವಿಸ್ಕಿ ಹಾಕಿ ಚಿತ್ರೀಕರಣಕ್ಕೆ ಎಲ್ಲರೂ ಸಿದ್ದರಾದ ಮೇಲೆ ಕರೆಯುವುದಾಗಿ ಹೇಳಿ ಹೋದರು ಎಂದು ಹೇಳಿದ್ದರು ಕುಬ್ರಾ.

ಆ ನಂತರ ಬಟ್ಟೆ ಬಿಚ್ಚಬೇಕಾಯ್ತು, ಚಿತ್ರದ ಚಿತ್ರೀಕರಣ ಕೂಡ ಶುರುವಾಯಿತು ಆದರೆ ಅದ್ಯಾಕೋ ಅನುರಾಗ್ ಕಶ್ಯಪ್‌ಗೆ ಸಂತೃಪ್ತಿಯೇ ಆಗುತ್ತಿರಲಿಲ್ಲ ಎಂದು ಹೇಳಿದ್ದ ಕುಬ್ರಾ ಸೇಠ್ ಆರು ಬಾರಿ ಆ ಸನ್ನಿವೇಶವನ್ನು ನಾವು ಚಿತ್ರೀಕರಿಸಿದ್ದೇವು ಎಂದು ನೆನಪು ಮಾಡಿಕೊಂಡಿದ್ದರು. ಪ್ರತಿ ಬಾರಿ ಕೂಡ ಅನುರಾಗ್ ಕಶ್ಯಪ್ ನನ್ನ ಬಳಿ ಬಂದು ಕ್ಷಮೆ ಕೇಳುತ್ತಿದ್ದರು, ನನ್ನನ್ನು ನೀವು ಈಗ ದ್ವೇಷಿಸುತ್ತಿದ್ದೀರಾ ಎನ್ನುವುದು ನನಗೆ ಗೊತ್ತು ಆದರೂ ಕೂಡ ನನ್ನ ದ್ವೇಷಿಸಬೇಡಿ ಎಂದು ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಿದ್ದ ಅನುರಾಗ್ ದೃಶ್ಯ ಪರಿಪೂರ್ಣವಾಗಬೇಕೆನ್ನುವುಷ್ಟೇ ನನ್ನ ಉದ್ದೇಶ ಎಂದು ಹೇಳಿದ್ದರು ಎಂದು ಕುಬ್ರಾ ಸಂದರ್ಶನದಲ್ಲಿ ಹೇಳಿದ್ದರು.

ಏಳನೇ ಬಾರಿ ಆ ದೃಶ್ಯದಲ್ಲಿ ಅಭಿನಯಿಸಿದಾಗ ಅನುರಾಗ್ ಕಶ್ಯಪ್‌ಗೆ ಖುಷಿಯಾಯ್ತು, ಕೊನೆಗೂ ಆ ದೃಶ್ಯ ಮುಕ್ತಾಯವಾಯ್ತು ಎಂದು ಹೇಳಿದ್ದ ಕುಬ್ರಾ ಏಳು ಬಾರಿ ಕೂಡ ನಾನು ನೆಲದ ಮೇಲೆ ಬಿಕ್ಕಿ ಬಿಕ್ಕಿ ಅತ್ತಿದ್ದೆ, ದೃಶ್ಯ ಮುಗಿದ ನಂತರ ಕೂಡ ನಾನು ಕಣ್ಣೀರು ಹಾಕುತ್ತಿದ್ದೆ ಆಗ ನನ್ನ ಬಳಿ ಬಂದ ಅನುರಾಗ್ ಕಶ್ಯಪ್ ಐ ಲವ್ ಯೂ ಎಂದು ಹೇಳಿದ್ದರು. ಈ ದೃಶ್ಯದಲ್ಲಿ ಅಭಿನಯಿಸಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದರು ಎಂದು ನೆನಪು ಮಾಡಿಕೊಂಡಿದ್ದರು. ನಾನು ಅಲ್ಲಿಂದ ಎದ್ದು ಹೋಗುವಾಗ ಅಲ್ಲಿದ್ದ ಎಲ್ಲರು ಕೂಡ ಚಪ್ಪಾಳೆ ತಟ್ಟಿದ್ದರು ಎಂದಿದ್ದರು.

ಆ ದೃಶ್ಯ ಅಷ್ಟೊಂದು ಅದ್ಭುತವಾಗಿ ಬರುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದ ಕುಬ್ರಾ, ಬೆತ್ತಲಾಗಿ ಅಭಿನಯಿಸಿದ್ದಕ್ಕೆ ನನಗೆ ಯಾವ ವಿಷಾದ ಕೂಡ ಎಂದು ಹೇಳಿದ್ದರು. ಅನುರಾಗ್ ಕಶ್ಯಪ್ ಜೊತೆ ಮಾಡಿದ ಅನುಭವ ಅದ್ಭುತವಾಗಿತ್ತು ಎಂದು ಕುಬ್ರಾ ಸೇಠ್ ಟೈಮ್ಸ್ ನೌಗೆ ನೀಡಿದ್ದ ಈ ಸಂದರ್ಶನದಲ್ಲಿ ಮಾತನಾಡಿದ್ದರು.

More from Filmibeat

English summary
Seven takes. One fearless performance. Kubbra Sait bares it all — emotionally and physically — in Sacred Games. Before the cameras rolled, before the lights hit the set, there was silence… and a glass of whiskey. Director Anurag Kashyap handed it to Kubbra Sait — a quiet gesture to calm the storm brewing inside her. What followed was raw, intense, and unforgettable. It took seven takes to capture a moment that would become one of the most talked-about scenes in Indian streaming history. This is the untold story behind that iconic scene.
Read more about: kubbra sait feature bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X