ಈ ಫೇಮಸ್ ವ್ಯಕ್ತಿಯ ಹಿನ್ನೆಲೆ ಏನು: ವಿಡಿಯೋಗಳಿಂದ ಗಳಿಸುತ್ತಿರುವುದೆಷ್ಟು?

ಸಾಮಾಜಿಕ ಜಾಲತಾಣ ಬಳಸುವ ಬಹುತೇಕರಿಗೆ ಚಿತ್ರದಲ್ಲಿ ಕಾಣುತ್ತಿರುವ ಈ ವ್ಯಕ್ತಿಯ ಪರಿಚಯ ಇದ್ದೇ ಇರುತ್ತದೆ. ಈ ವ್ಯಕ್ತಿಯ ಮೀಮ್‌ಗಳು ಜಗತ್‌ ಪ್ರಸಿದ್ಧ. ಅಷ್ಟಕ್ಕೂ ಈ ವ್ಯಕ್ತಿ ಯಾರು, ಈತನ ಹಿನ್ನೆಲೆ ಏನು? ಈತ ಇಷ್ಟೋಂದು ಖ್ಯಾತಿ ಗಳಿಸಿಕೊಂಡಿದ್ದು ಹೇಗೆ? ಈತನ ಸಂಪಾದನೆ ಎಷ್ಟು? ಬನ್ನಿ ತಿಳಿಯೋಣ.

ಕಬಾನೆ ಲೇಮ್ ಹೆಸರಿನ ಈತ ಕಾಬಿ ಲೇಮ್ ಎಂದೇ ಹೆಚ್ಚು ಪರಿಚಿತ. 2000ದ ಮಾರ್ಚ್ 09ರಂದು ಜನಿಸಿದ ಈತನ ವಯಸ್ಸು ಈಗಿನ್ನು 21. ಸೆನೆಗಲ್ ಮೂಲದವರಾದ ಕಾಬಿ ನೆಲೆಸಿರುವುದು ಇಟಲಿಯಲ್ಲಿ. ಈಗ ಆತ ಇಟಲಿಯ ನಾಗರೀಕ.

ಟಿಕ್‌-ಟಾಕ್‌ನಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಎರಡನೇ ಸೆಲೆಬ್ರಿಟಿ ಕಾಬಿ. ಟಿಕ್‌ಟಾಕ್‌ನಲ್ಲಿ ಈತನನ್ನು 9.47 ಕೋಟಿ ಮಂದಿ ಫಾಲೋ ಮಾಡುತ್ತಾರೆ. ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಟಿಕ್‌ಟಾಕ್ ಬ್ಯಾನ್ ಆಗಿದೆ. ಹಾಗಿದ್ದರೂ ಈತನ ಫಾಲೋವರ್‌ಗಳ ಸಂಖ್ಯೆ 9 ಕೋಟಿಗೂ ಹೆಚ್ಚು. ಅತ್ಯಂತ ಕಡಿಮೆ ಅವಧಿಯಲ್ಲಿಯೇ ಅತಿ ಹೆಚ್ಚು ಫಾಲೋವರ್ಸ್‌ಗಳನ್ನು ಪಡೆದ ಶ್ರೇಯವೂ ಕಾಬಿಯದ್ದೇ.

ಕಾಬಿಯ ಕಿರು ವಿಡಿಯೋಗಳು ಜನಪ್ರಿಯ

ಕಾಬಿಯ ಕಿರು ವಿಡಿಯೋಗಳು ಜನಪ್ರಿಯ

ಟಿಕ್‌ಟಾಕ್‌ನಲ್ಲಿ ಇವರ ತಮಾಷೆಯ ಕಿರು ವಿಡಿಯೋಗಳು ಬಹಳ ಜನಪ್ರಿಯ. ಸರಳ ಸಂಗತಿಗಳನ್ನು ಸಂಕೀರ್ಣಗೊಳಿಸಿ ಅವುಗಳ ವಿಡಿಯೋ ಪ್ರಕಟಿಸುವವರೇ ಕಾಬಿಯ 'ಶಿಕಾರಿ'. ಕಾಫಿ ಕಪ್‌ನ ಹ್ಯಾಂಡಲ್‌ನಲ್ಲಿ ಸಿಲುಕಿಕೊಂಡ ವೈಯರ್ ಅನ್ನು ತೆಗೆಯಲು ಕಪ್‌ ಅನ್ನು ಒಡೆಯುವವರು, ಬಾಳೆಹಣ್ಣಿನ ಸಿಪ್ಪೆಯನ್ನು ಸುಲಿಯುವ ಬದಲು ಚಾಕುವಿನಿಂದ ಕತ್ತರಿಸುವವರು. ಇಂಥಹವರ ವಿಡಿಯೋಗಳಿಗೆ ಪ್ರತಿಕ್ರಿಯಿಸಿರುವ ಕಾಬಿ ಸರಳವಾಗಿ, ನೇರವಾಗಿ ಆ ಕೆಲಸಗಳನ್ನು ಹೀಗೆ ಮಾಡಬಹುದು ಎಂದು ಮಾಡಿ ತೋರಿಸುತ್ತಾರೆ. ಇವರ ಈ ವಿಡಿಯೋಗಳು ವಿಶ್ವದಾದ್ಯಂತ ಜನಪ್ರಿಯವಾಗಿವೆ.

ವಿಡಿಯೋಗಳಲ್ಲಿ ಮಾತನಾಡುವುದಿಲ್ಲ ಕಾಬಿ

ವಿಡಿಯೋಗಳಲ್ಲಿ ಮಾತನಾಡುವುದಿಲ್ಲ ಕಾಬಿ

ವಿಡಿಯೋದ ಅಂತ್ಯದಲ್ಲಿ ಕಾಬಿ ಕೊಡುವ ಲುಕ್‌, ಅವರ ಆಂಗಿಕ ಅಭಿನಯ, ತಾತ್ಸಾರದ ಭಾವ ಇವೆಲ್ಲವೂ ಸಖತ್ ಫೇಮಸ್ ಆಗಿವೆ. ತಮ್ಮ ವಿಡಿಯೋಗಳಲ್ಲಿ ಕಾಬಿ ಒಮ್ಮೆಯೂ ಮಾತನಾಡುವುದಿಲ್ಲ. ಬದಲಿಗೆ ಕೇವಲ ಆಂಗಿಕ ಅಭಿನಯ, ಹಾವ-ಭಾವದಲ್ಲೇ ಹೇಳಬೇಕಾದುದನ್ನು ಹೇಳಿಬಿಡುತ್ತಾರೆ. ವಿಶ್ವದಾದ್ಯಂತ ಅತ್ಯಂತ ಫೇಮಸ್ ಆಗಿರುವ ಮೀಮ್‌ ವಿಡಿಯೋಗಳು ಇವರದ್ದೇ.

ಹಾಲಿವುಡ್‌ ನಟರಿಗಿಂತಲೂ ಹೆಚ್ಚು ಫಾಲೋವರ್ಸ್

ಹಾಲಿವುಡ್‌ ನಟರಿಗಿಂತಲೂ ಹೆಚ್ಚು ಫಾಲೋವರ್ಸ್

ತಮ್ಮ ವಿಡಿಯೋಗಳಿಂದ ಕೋಟ್ಯಂತರ ಅಭಿಮಾನಿಗಳನ್ನು ಕಾಬಿ ಗಳಿಸಿದ್ದಾರೆ. ಟಿಕ್‌ಟಾಕ್‌ನಲ್ಲಿ ಸ್ವತಃ ಟಿಕ್‌ಟಾಕ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳು ಕಾಬಿಗೆ ಇದ್ದಾರೆ. ಹಾಲಿವುಡ್ ನಟ ವಿಲ್ ಸ್ಮಿತ್, ರಾಕ್ ಖ್ಯಾತಿಯ ಡ್ವೇನ್ ಜೋನ್ಸ್‌, ಪ್ರಖ್ಯಾತ ಬ್ಯಾಂಡ್ ಬಿಟಿಎಸ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಕಾಬಿ ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿಯೂ ಖಾತೆ ಹೊಂದಿರುವ ಕಾಬಿಯನ್ನು ಅಲ್ಲಿ 3.17 ಕೋಟಿ ಮಂದಿ ಫಾಲೋ ಮಾಡುತ್ತಾರೆ.

ಕಾಬಿ ಗಳಿಸುತ್ತಿರುವ ಹಣವೆಷ್ಟು?

ಕಾಬಿ ಗಳಿಸುತ್ತಿರುವ ಹಣವೆಷ್ಟು?

ಕಾಬಿ ತಮ್ಮ ಕಿರು ವಿಡಿಯೋಗಳಿಂದ ಕೋಟ್ಯಂತರ ಹಣ ಗಳಿಸುತ್ತಿದ್ದಾರೆ. ಸುಮಾರು 14 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಕಾಬಿ ವಿಡಿಯೋಗಳಿಂದ ಗಳಿಸುತ್ತಿದ್ದಾರೆ. ಯಾವುದೇ ಪ್ರಮೋಷನಲ್ ವಿಡಿಯೋಗಳನ್ನು ಮಾಡದಿದ್ದರೂ ಇಷ್ಟು ದೊಡ್ಡ ಮೊತ್ತದ ಹಣವನ್ನು ಕಾಬಿ ಕೇವಲ ವಿಡಿಯೋಗಳಿಂದಷ್ಟೆ ಗಳಿಸುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಕಾಬಿ ವಿಡಿಯೋಗಳನ್ನು ಪ್ರಕಟಿಸುತ್ತಿಲ್ಲ ಒಂದೊಮ್ಮೆ ಅಲ್ಲಿಯೂ ವಿಡಿಯೋ ಪ್ರಕಟಿಸಲು ಆರಂಭಿಸಿದರೆ ಅವರ ಆದಾಯ ದುಪ್ಪಟ್ಟಾಗುವುದರಲ್ಲಿ ಸಂಶಯವಿಲ್ಲ. ಅಂದಹಾಗೆ ಕಾಬಿಗೆ ಜರಿಯಾ ನೂಸಿ ಹೆಸರಿನ ಗರ್ಲ್‌ಫ್ರೆಂಡ್ ಸಹ ಇದ್ದಾಳೆ.

More from Filmibeat

English summary
Who is Khaby Lame how he became famous and how much he earning from his short videos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X