twitter
    For Quick Alerts
    ALLOW NOTIFICATIONS  
    For Daily Alerts

    ಇಂಗ್ಲೆಂಡ್ ರಾಜಮನೆತನದ ಸಣ್ಣತನ ಜಗಜ್ಜಾಹೀರು ಮಾಡಿದ ಓಪ್ರಾ ವಿನ್‌ಫ್ರಿ ಯಾರು?

    |

    ವಿಶ್ವದಾದ್ಯಂತ ಕಳೆದ ಕೆಲವು ದಿನಗಳಿಂದಲೂ ಇಂಗ್ಲೆಂಡ್ ರಾಜಮನೆತನದ್ದೇ ಚರ್ಚೆ. ರಾಜಮನೆತನದಿಂದ ನಿರ್ಗಮಿಸಿರುವ ಮೆಗಾನ್ ಹಾಗೂ ಪ್ರಿನ್ಸ್ ಹ್ಯಾರಿ ಅವರುಗಳು ಅರಮನೆಯಲ್ಲಿರುವವರ 'ಸಣ್ಣತನ'ಗಳ ಬಗ್ಗೆ ಸಂದರ್ಶನವೊಂದಲ್ಲಿ ಮಾತನಾಡಿರುವುದು ವಿಶ್ವದ ಗಮನ ಸೆಳೆದಿದೆ. ಇಂಗ್ಲೆಂಡ್‌ನಲ್ಲಿಯಂತೂ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಿದೆ.

    ಇಂಗ್ಲೆಂಡ್‌ನ ರಾಜಮನೆತನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇಂಗ್ಲೆಂಡ್ ರಾಣಿ ಎಲಿಜಿಬೆತ್ 2 ಅವರ ಅಧಿಕೃತ ವಾಸಸ್ಥಾನ ಬಂಕಿಂಗ್‌ಹ್ಯಾಮ್ ಅರಮನೆ ನಿರ್ಮಾಣವಾಗಿದ್ದು 1703 ರಲ್ಲಿ ಅಲ್ಲಿಂದ ಇಲ್ಲಿಯವರೆಗೆ ಅರಮನೆಯ ಆಂತರಿಕ ವಿಷಯಗಳು, ರಾಜಮನೆತನದವರ ವಿಷಯಗಳು ಇಷ್ಟು ಬಹಿರಂಗವಾಗಿ 'ಸಾಕ್ಷಿ ಸಮೇತ' ಜನರ ಬಾಯಿಗೆ ದೊರಕಿದ್ದಿಲ್ಲ. ಅರಮನೆಯ ಒಳಗಿನವರ ಬಗ್ಗೆ ಗಾಳಿ ಸುದ್ದಿಗಳು ಸದಾ ಇರುತ್ತಿದ್ದವಾದರೂ ನಿಖರ ಸುದ್ದಿ ದೊರಕಿಯೇ ಇರಲಿಲ್ಲ ಆದರೆ ಈಗ ಎಲ್ಲವೂ ಖುಲ್ಲಂ-ಖುಲ್ಲಾ ಆಗಿದೆ. ಇದಕ್ಕೆ ಕಾರಣ ಓಪ್ರಾ ವಿನ್‌ಫ್ರಿ ಎಂಬ ಛಲಗಾರ್ತಿ.

    ಇಂಗ್ಲೆಂಡ್ ರಾಜಮನೆತನದ ಕರಾಳ ಮುಖ ಬಿಚ್ಚಿಟ್ಟ ನಿರ್ಗಮಿತ ರಾಜ-ರಾಣಿಇಂಗ್ಲೆಂಡ್ ರಾಜಮನೆತನದ ಕರಾಳ ಮುಖ ಬಿಚ್ಚಿಟ್ಟ ನಿರ್ಗಮಿತ ರಾಜ-ರಾಣಿ

    ಓಪ್ರಾ ವಿನ್‌ಫ್ರೆ ಅಲ್ಲದೆ ಇನ್ನಾರಿಂದಲೂ ಇಂಥಹಾ ಒಂದು ಸಂದರ್ಶನ ಮಾಡಲಾಗುತ್ತಿರಲಿಲ್ಲ ಎನ್ನಲಾಗುತ್ತಿದೆ. ಓಪ್ರಾ ಅಲ್ಲದೆ ಮುಂದೆ ಇನ್ನಾರೇ ಕುಳಿತಿದ್ದರೂ ಮೆಗಾನ್ ಹಾಗೂ ಪ್ರಿನ್ಸ್ ಹ್ಯಾರಿ ಅಷ್ಟು ಸುಲಭವಾಗಿ, ಅಳುಕಿಲ್ಲದೆ, ಸರಾಗವಾಗಿ ಈ ಎಲ್ಲ ವಿಷಯವನ್ನೂ ಹಂಚಿಕೊಳ್ಳುತ್ತಿರಲಿಲ್ಲವೇನೋ? ಓಪ್ರಾ ವಿನ್‌ಫ್ರಿ ರ ವ್ಯಕ್ತಿತ್ವ, ಆಕೆಯ ಹಿನ್ನೆಲೆ, ಆಕೆಯ ಬುದ್ಧಿವಂತಿಕೆ, ಸತ್ಯದ ಪರ ನಿಲ್ಲುವ ಛಾತಿ, ನಿರ್ಬಿಡತೆ ಇದೆಲ್ಲದರ ಅರಿವೂ ಸಂದರ್ಶನ ನೀಡುತ್ತಿರುವರಿಗೆ ಇದ್ದಿದ್ದರಿಂದಲೇ ಅನುಮಾನವಿಲ್ಲದೆ ಮಾತನಾಡಲು ಸಾಧ್ಯವಾಯಿತು. ಇಂಥಹಾ ಒಂದು ಐತಿಹಾಸಿಕ ಸಂದರ್ಶನ ಸಾಧ್ಯವಾಯಿತು. ಕಠು ಸತ್ಯವೊಂದು ಜಗತ್ತಿಗೆ ತಿಳಿಯಿತು. ಹಾಗಿದ್ದರೆ ಯಾರು ಓಪ್ರಾ ವಿನ್‌ಫ್ರಿ? ಏನು ಆಕೆಯ ಹಿನ್ನೆಲೆ?

    ವಿಶ್ವದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬಾಕೆ ಓಪ್ರಾ ವಿನ್‌ಫ್ರಿ

    ವಿಶ್ವದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬಾಕೆ ಓಪ್ರಾ ವಿನ್‌ಫ್ರಿ

    ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಓಪ್ರಾ ವಿನ್‌ಫ್ರಿ ಹೆಸರು ಕೇಳಿಬರುತ್ತದೆ. ಆಫ್ರಿಕನ್-ಅಮೆರಿಕನ್ ಸಮುದಾಯದ ಓಪ್ರಾ ಮಿಸಿಸಿಪ್ಪಿಯಲ್ಲಿ 1954 ರಲ್ಲಿ ಜನಿಸಿದರು. ಕಪ್ಪುವರ್ಣಿಯರು ಈಗಿನಿದ್ದಕ್ಕಿಂತಲೂ ನೂರು ಪಟ್ಟು ಹೆಚ್ಚು ಅಸಮಾನತೆ, ದೌರ್ಜನ್ಯಕ್ಕೆ ಸಮಯದಲ್ಲಿ ಕಪ್ಪುವರ್ಣಿಯರಾಗಿ ಹುಟ್ಟಿದ ಓಪ್ರಾ ಬಾಲ್ಯದಿಂದಲೇ ಪ್ರತಿಭಾವಂತೆ ಆದರೆ ಅದಕ್ಕೆ ಹೊಂದಿಕೊಂಡಂತೆ ಬಡತನವೂ ಜೊತೆಗೆ ಬಂದಿತ್ತು. ಹದಿಹರಯಕ್ಕೆ ಬರುವ ಮುನ್ನವೇ ಅತ್ಯಾಚಾರಕ್ಕೆ ಒಳಗಾದ ಓಪ್ರಾ ತಮ್ಮ ಆ ಕೆಟ್ಟ ಅನುಭವವನ್ನು ಬಹು ವರ್ಷಗಳ ನಂತರ ಜಗತ್ತಿನ ಮುಂದೆ ಹೇಳಿಕೊಂಡರು. 'ಓಪ್ರಾ ಯಾವುದಾದರೂ ಒಳ್ಳೆಯ ಬಿಳಿಯರ ಮನೆಯಲ್ಲಿ ಕೆಲಸದವಳಾಗಿ ಇದ್ದುಬಿಡಲಿ ಸಾಕು' ಎಂದುಕೊಂಡಿದ್ದರಂತೆ ಅವರ ಅಜ್ಜಿ ಆದರೆ ಓಪ್ರಾಳ ಬದುಕು ಬದಲಾಯಿಸಿದ್ದು ಸ್ವತಃ ಓಪ್ರಾ!

    ಮೊದಲ ಕಪ್ಪುವರ್ಣೀಯ ಸುದ್ದಿ ವಾಚಕಿ

    ಮೊದಲ ಕಪ್ಪುವರ್ಣೀಯ ಸುದ್ದಿ ವಾಚಕಿ

    ಎಳವೆಯಲ್ಲೆ ಉತ್ತಮ ಚಿಂತಕಿ ವಾಗ್ಮಿ ಆಗಿದ್ದ ಓಪ್ರಾ ಶಿಕ್ಷಣಕ್ಕೆ ಆಯ್ಕೆ ಮಾಡಿಕೊಂಡಿದ್ದು 'ಕಮ್ಯುನಿಕೇಷನ್'. ಆಕೆಯ ಪ್ರತಿಭೆಗೆ ಮೆಚ್ಚಿ ಸ್ಕಾಲರ್‌ಶಿಪ್ ಸಹ ನೀಡಲಾಗಿತ್ತು. ಶಿಕ್ಷಣ ಮುಗಿಸಿ ಹೊರಬಂದ ಕೂಡಲೇ ಸ್ಥಳೀಯ ರೇಡಿಯೋ ನಲ್ಲಿ ಕೆಲಸ ಆರಂಭಿಸಿ ಕೆಲವೇ ತಿಂಗಳಿಗೆ ಸಾಧಾರಣ ಟಿವಿ ಚಾನೆಲ್‌ ಒಂದಕ್ಕೆ ನಿರೂಪಕಿಯಾಗಿ ಸೇರಿಕೊಂಡರು. ಆಕೆಯ ವಾಕ್ಚಾತುರ್ಯ ಹಾಗೂ ವಿಷಯ ಮಂಡನೆ ರೀತಿ ಎಷ್ಟು ಅದ್ಭುತವಾಗಿತ್ತೆಂದರೆ ಕೆಲವೇ ದಿನಕ್ಕೆ ಓಪ್ರಾಗೆ ಸುದ್ದಿವಾಚಕಿ ಮತ್ತು ವಿಷ್ಲೇಶಕಿಯಾಗಿ ಬಡ್ತಿ ಸಿಕ್ಕಿತು. ಆಗಿನ ಕಾಲಕ್ಕೆ ಓಪ್ರಾ ವಿನ್‌ಫ್ರಿ ಅಮೆರಿಕದ ಮೊತ್ತ ಮೊದಲ ಕಪ್ಪುವರ್ಣೀಯ ಸುದ್ದಿವಾಚಕಿ ಅಷ್ಟೇ ಅಲ್ಲ ಅತ್ಯಂತ ಕಿರಿಯ ವಯಸ್ಸಿನ ಸುದ್ದಿ ವಾಚಕಿ ಸಹ ಎಂದು ಖ್ಯಾತಿ ಗಳಿಸಿದರು.

    ಟಾಕ್‌ ಶೋ ಗೆ ಮಾದರಿ ಹಾಕಿಕೊಟ್ಟ ಓಪ್ರಾ

    ಟಾಕ್‌ ಶೋ ಗೆ ಮಾದರಿ ಹಾಕಿಕೊಟ್ಟ ಓಪ್ರಾ

    1984 ರಲ್ಲಿ ಎಎಂ ಚಿಕಾಗೊ ದ ನಿರೂಪಕಿ ಆದ ಓಪ್ರಾ ಅದನ್ನು ಅಮೆರಿಕದ ನಂಬರ್ ಒನ್ ಶೋ ಮಾಡಿದರು, ಅದರಿಂದಲೇ ಬಹುದೊಡ್ಡ ಹೆಸರು ಗಳಿಸಿದರು. ಆ ನಂತರ ತಮ್ಮದೇ ಆದ ಟಾಕ್‌ ಶೋ ಆರಂಭಿಸಿದ ಓಪ್ರಾ 'ಟಾಕ್‌ ಶೋ'ಗಳಿಗೆ ಭಿನ್ನ ಅರ್ಥ ಮತ್ತು ವ್ಯಾಪ್ತಿಯನ್ನು ತಂದು ಕೊಟ್ಟರು. ಓಪ್ರಾ ರ ಟಾಕ್‌ಶೋ ಅನ್ನು ಮಾದರಿಯಾಗಿಟ್ಟುಕೊಂಡು ವಿಶ್ವದಾದ್ಯಂತ ಹಲವಾರು ಟಾಕ್‌ಶೋ ಗಳು ಬಂದವು. ಈಗಂತೂ ಅಮೆರಿಕದ ಟಾಕ್‌ಶೋ ಹೋಸ್ಟ್‌ಗಳು ಸ್ಟಾರ್‌ಗಳಂತೆ ಸೆಲೆಬ್ರಿಟಿಗಳಾಗಿದ್ದಾರೆ ಅದಕ್ಕೆಲ್ಲಾ ಮೂಲ ಕಾರಣ ಓಪ್ರಾ ವಿನ್‌ಫ್ರಿ. ಭಾರತದಲ್ಲಿ ಸಿಮಿ ಗೆರೆವಾಲ್ ಸಹ ಅಂಥಹದ್ದೊಂದು ಪ್ರಯತ್ನ ಮಾಡಿ ಸಾಕಷ್ಟು ಯಶಸ್ಸನ್ನೂ ಗಳಿಸಿದರು.

    ಎಷ್ಟೋ ಮಂದಿಯ ಜೀವನ ಬದಲಿಸಿದ ಓಪ್ರಾ

    ಎಷ್ಟೋ ಮಂದಿಯ ಜೀವನ ಬದಲಿಸಿದ ಓಪ್ರಾ

    ಟಾಕ್ ಶೋ ಮೂಲಕ ದನಿ ಇಲ್ಲದವರ ದನಿ ಆದರು ಓಪ್ರಾ. ಆ ವರೆಗೂ ಮುಟ್ಟಲು ಹೆದರುತ್ತಿದ್ದ ವಿಷಯಗಳ ಬಗ್ಗೆ 1980-90 ರಲ್ಲಿಯೇ ನಿರ್ಭಿಡೆಯಿಂದ ಚರ್ಚೆಗಳನ್ನು ಆರಂಭಿಸಿದರು. ಸಲಿಂಗಕಾಮ, ವರ್ಣಭೇದ, ಮಾನಸಿಕ ಅಸ್ವಸ್ಥತೆ, ತ್ರಿಲಿಂಗಿಗಳ ಸಮಸ್ಯೆಗಳು ಹೀಗೆ ಸಮಾಜದಲ್ಲಿ ಮೂಲೆಗುಂಪು ಮಾಡಲಾಗಿದ್ದ, ಹೀನವಾಗಿ ಕಾಣಲಾಗುತ್ತಿದ್ದ ಎಲ್ಲ ವ್ಯಕ್ತಿಗಳ ಬಗ್ಗೆ ಓಪ್ರಾ ಮಾತನಾಡಿದರು. ಅಂಥಹವರನ್ನು ತಮ್ಮ ಶೋ ಗೆ ಕರೆದುಕೊಂಡು ಬಂದು ಮಾತನಾಡಿದರು, ಅವರ ಸಮುದಾಯಕ್ಕೆ ಧೈರ್ಯ ತುಂಬಿದರು. ತಮ್ಮ ಶೋ ನಿಂದ ಜನರ ಅಭಿಪ್ರಾಯವನ್ನು ರೂಪಿಸುವ ಕಾರ್ಯ ಮಾಡಿದರು ಓಪ್ರಾ. ಕೆಲವೇ ವರ್ಷಗಳಲ್ಲಿ ಅಮೆರಿಕದ ಅತ್ಯಂತ ಪ್ರಭಾವಿ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾದರು ಓಪ್ರಾ. ಸಲಿಂಗಿಯಾಗಿದ್ದ ಎಲೆನ್ ಡಿ ಜನರಸ್‌ ಅನ್ನು ತಮ್ಮ ಶೋ ಗೆ ಕರೆದು ಧೈರ್ಯ ತುಂಬಿದರು ಓಪ್ರಾ. ಈಗ ಎಲೆನ್ ಡಿ ಜನರಸ್ ಅಮೆರಿಕದ ಟಾಪ್ ಟಾಕ್‌ ಶೋ ನಿರೂಪಕಿ. 'ದಿ ಎಲೆನ್ ಶೋ' ಅಮೆರಿಕದ ಖ್ಯಾತ ಟಿವಿ ಶೋಗಳಲ್ಲಿ ಒಂದು.

    25 ವರ್ಷ ನಡೆದ 'ಓಪ್ರಾ ವಿನ್‌ಫ್ರಿ ಶೋ'

    25 ವರ್ಷ ನಡೆದ 'ಓಪ್ರಾ ವಿನ್‌ಫ್ರಿ ಶೋ'

    1986 ರಲ್ಲಿ ಆರಂಭವಾದ 'ಓಪ್ರಾ ವಿನ್‌ಫ್ರಿ ಶೋ' ಕೊನೆಯಾಗಿದ್ದು 2011 ರಲ್ಲಿ. 25 ವರ್ಷ ಸತತವಾಗಿ ನಡೆದ ಈ ಶೋ ವಿಶ್ವದ ಅತ್ಯಂತ ಪ್ರಸಿದ್ಧ ಟಾಕ್ ಶೋ ಎನಿಸಿಕೊಂಡಿತು. ಹಾಸ್ಯ, ಚಳವಳಿ, ಅಧ್ಯಾತ್ಮ, ಪ್ರತಿಭಟನೆ, ರಾಜಕೀಯ, ಶಾಂತಿ ಎಲ್ಲ ವಿಷಯಗಳ ಬಗ್ಗೆ ಶೋ ನಲ್ಲಿ ಚರ್ಚೆಯಾಗುತ್ತಿತ್ತು. ತಮ್ಮ ಶೋ ಮೂಲಕ ಅಮೆರಿಕದ ಕೋಟ್ಯಂತರ ಜನರ ಅಭಿಪ್ರಾಯ ಬದಲಾಯಿಸುತ್ತಿದ್ದರು ಓಪ್ರಾ. ಬರಾಕ್ ಒಬಾಮಾ ಇಂದ ಹಿಡಿದು ವಿಶ್ವಸಂಸ್ಥೆಯ ಅಧ್ಯಕ್ಷರ ವರೆಗೆ ಎಲ್ಲರೂ ಓಪ್ರಾಳ ಜೊತೆ ಶೋ ನಲ್ಲಿ ಸೀಟು ಹಂಚಿಕೊಂಡರು. 'ದಿ ಓಫ್ರಾ ಎಫೆಕ್ಟ್' ಎಂಬ ಮಾತು ಚಾಲ್ತಿಗೆ ಬಂತು. ಆಕೆಯ ಪುಸ್ತಕಗಳು ಬಿಸಿ ದೋಸೆಗಳಾದವು. ಆಕೆಯ ಸಂದರ್ಶನಕ್ಕಾಗಿ ಟಿವಿಗಳು ಸಾಲುಗಟ್ಟಿ ನಿಂತವು. ಸ್ಟಿವನ್ ಸ್ಪೀಲ್‌ಬರ್ಗ್ ಸಹ ಆಕೆಯನ್ನು ತನ್ನ ಸಿನಿಮಾ 'ದಿ ಕಲರ್ ಆಫ್ ಪರ್ಪಲ್' ಗೆ ಆಯ್ಕೆ ಮಾಡಿಕೊಂಡರು. ಅಲ್ಲಿಯೂ ಓಪ್ರಾ ಗೆದ್ದರು. ಆಕೆಯ ಪಾತ್ರ ಆಸ್ಕರ್‌ಗೆ ನಾಮನಿರ್ದೇಶನ ಗಳಿಸಿಕೊಂಡಿತು. ಅಂತಿಮ ಸುತ್ತಿನಲ್ಲಿ ಪ್ರಶಸ್ತಿ ಜಯಿಸಲು ವಿಫಲವಾಯ್ತು.

    ಸ್ವಂತ ಬಲದಿಂದ ಮಿಲೇನಿಯರ್ ಆದ ಮೊದಲ ಮಹಿಳೆ

    ಸ್ವಂತ ಬಲದಿಂದ ಮಿಲೇನಿಯರ್ ಆದ ಮೊದಲ ಮಹಿಳೆ

    1986-87 ರಲ್ಲಿ ಓಪ್ರಾ ಮಿಲೇನಿಯರ್ ಎನಿಸಿಕೊಂಡರು. ಕುಟುಂಬದ ಆಸ್ತಿ ಇಲ್ಲದೆ ಆಕೆಯ ಸ್ವಂತ ಬಲದ ಮೇಲೆ ಮಿಲೇನಿಯರ್ ಆದ ಮೊದಲ ಅಮೆರಿಕನ್ ಮಹಿಳೆ ಎಂಬ ಖ್ಯಾತಿ ಓಪ್ರಾರದ್ದು. ಆ ನಂತರ ಓಪ್ರಾ 1993 ರಲ್ಲಿ ಮಾಡಿದ ಮೈಕಲ್ ಜಾಕ್‌ಸನ್ ಸಂದರ್ಶನ್ ಟಿವಿ ಇತಿಹಾಸದಲ್ಲಿ ಅತಿ ಹೆಚ್ಚು ಮಂದಿ ನೋಡಿದ ಟಿವಿ ಸಂದರ್ಶನವಾಗಿ ಇಂದಿಗೂ ದಾಖಲೆಯಲ್ಲಿದೆ. ಓಪ್ರಾ ಸಂದರ್ಶನವನ್ನು ಮಾಡುತ್ತಿದ್ದ ರೀತಿಯೇ ಬಹಳ ವಿಭಿನ್ನವಾಗಿರುತ್ತಿತ್ತು. ಸೆಲೆಬ್ರಿಟಿಗಳನ್ನು ಒಂದು 'ಕಂಪರ್ಟ್‌ ಜೋನ್'ಗೆ ಇಳಿಸಿ ಅಲ್ಲಿ ಅವರಿಂದ ಎಲ್ಲ ಮಾಹಿತಿಗಳನ್ನು ಹೊರಗೆ ಎಳೆಯುತ್ತಿದ್ದರು ಓಪ್ರಾ. ಆಕೆಯ ಮಾದರಿಯ ಸಂದರ್ಶನ ಆ ನಂತರ ಬಹಳ ಖ್ಯಾತವಾಯಿತು. ಅಕ್ಷಯ್ ಕುಮಾರ್-ಮೋದಿ ಅವರ ಸಂದರ್ಶನವು ಓಪ್ರಾ ಮಾದರಿಯ ಸಂದರ್ಶನವೇ ಆಗಿತ್ತು. ಆದರೆ ಅಕ್ಷಯ್ ಗಟ್ಟಿಯಾದ ಪ್ರಶ್ನೆಗಳನ್ನು ಕೇಳಲಿಲ್ಲವಷ್ಟೆ.

    ಕೋಟ್ಯಂತರ ಹಣ ದಾನ ಮಾಡಿದ ಓಪ್ರಾ

    ಕೋಟ್ಯಂತರ ಹಣ ದಾನ ಮಾಡಿದ ಓಪ್ರಾ

    41 ನೇ ವಯಸ್ಸಿಗೆ ಅಮೆರಿಕದ ಮೊದಲ ಹಾಗೂ ಶ್ರೀಮಂತ ಆಫ್ರಿಕನ್-ಅಮೆರಿಕನ್ ಮಹಿಳೆ ಎಂಬ ಖ್ಯಾತಿಯನ್ನು ಓಪ್ರಾ ಗಳಿಸಿದರು. ಟಿವಿ ಪ್ರೊಡಕ್ಷನ್ ಸಂಸ್ಥೆ ಕಟ್ಟಿದರು, ಆಹಾರ ಉದ್ಯಮದಲ್ಲಿ ತೊಡಗಿಕೊಂಡರು ಇದೆಲ್ಲದರ ಜೊತೆಗೆ ಅತಿ ಹೆಚ್ಚು ದಾನ ಮಾಡುವ ಅಮೆರಿಕದ ವ್ಯಕ್ತಿಗಳ ಪಟ್ಟಿಯಲ್ಲಿಯೂ ಸೇರಿಕೊಂಡರು ಓಪ್ರಾ. ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಕಪ್ಪು ವರ್ಣೀಯರ ಏಳಿಗೆಗಾಗಿ ನೂರಾರು ಕೋಟಿಗಳನ್ನು ದಾನ ನೀಡಿದ್ದಲ್ಲದೆ, ಹಲವಾರು ಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ ಓಪ್ರಾ.

    ರಾಜಮನೆತನದ ಹಳವಂಡ ಹೊರಗೆಳೆದ ಓಪ್ರಾ

    ರಾಜಮನೆತನದ ಹಳವಂಡ ಹೊರಗೆಳೆದ ಓಪ್ರಾ

    ವಿಶ್ವದ ಪ್ರಭಾವಿ ಮಹಿಳೆಯರಲ್ಲಿ ಒಬ್ಬರಾದ ಓಪ್ರಾ ಇದೀಗ ಇಂಗ್ಲೆಂಡ್‌ನ ರಾಜಮನೆತನದಿಂದ ನಿರ್ಗಮಿಸಿರುವ ರಾಜ ಹ್ಯಾರಿ ಹಾಗೂ ಮೆಗಾನ್ ದಂಪತಿಯನ್ನು ಸಂದರ್ಶನ ಮಾಡಿ ರಾಜಮನೆತನದಲ್ಲಿ ನಡೆವು ಹಳವಂಡಗಳನ್ನೆಲ್ಲಾ ಬಹಿರಂಗಗೊಳಿಸಿದ್ದಾರೆ. ವಿಶ್ವಕ್ಕೆ ಮಾನವೀಯತೆ, ಸಮಾನತೆಯ ಪಾಠ ಮಾಡುವ ಕುಟುಂಬ ಅಂತರಾಳದಲ್ಲಿ ಎಷ್ಟು 'ಕಪ್ಪು' ತುಂಬಿಕೊಂಡಿದೆ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ.

    English summary
    Oprah Winfrey exposed British Royal family in her interview. Who is Oprah Winfrey.
    Wednesday, March 10, 2021, 19:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X