twitter
    For Quick Alerts
    ALLOW NOTIFICATIONS  
    For Daily Alerts

    ಶ್ರೀಲಂಕನ್ ತಮಿಳರ ಕತೆ ಏನು: ಪ್ರಭಾಕರನ್ ಯಾರು? ಸಿನಿಮಾದವರಿಗೇಕೆ ಇವರ ಮೇಲೆ ಪ್ರೀತಿ

    |

    ಇತ್ತೀಚೆಗೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆದ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಗೆ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಶ್ರೀಲಂಕನ್ ತಮಿಳು ಬಂಡಾಯಕೋರರನ್ನು ಋಣಾತ್ಮಕವಾಗಿ ಬಿಂಬಿಸಲಾಗಿದೆ, ಎಲ್‌ಟಿಟಿಯು ಭಯೋತ್ಪಾದಕ ಸಂಘಟನೆ ಜೊತೆ ಕೈಜೋಡಿಸಿದೆ ಎಂಬಂತೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿ ವೆಬ್ ಸರಣಿಯನ್ನು ನಿಷೇಧಿಸಬೇಕೆಂದು ಕೇಂದ್ರ ಸಚಿವರಿಗೆ ಪತ್ರ ಬರೆಯಲಾಯಿತು.

    ಇದಾದ ಬೆನ್ನಲ್ಲೆ ಕನ್ನಡದಲ್ಲಿ ಎಲ್‌ಟಿಟಿಇ ನಾಯಕ, ಸಂಸ್ಥಾಪಕ ಪ್ರಭಾಕರನ್ ಬಗ್ಗೆ ವೆಬ್ ಸರಣಿ ನಿರ್ಮಾಣವಾಗುತ್ತಿರುವ ಸುದ್ದಿ ಹೊರಬಿದ್ದಿತು. ಹಾಗಿದ್ದರೆ ಯಾರು ಈ ಶ್ರೀಲಂಕನ್ ತಮಿಳರು? ಅವರ ಹೋರಾಟವೇನು? ಎಲ್‌ಟಿಟಿಇ ಏನು? ಪ್ರಭಾಕರನ್ ಯಾರು? ಎಲ್‌ಟಿಟಿಇ ಹಾಗೂ ಪ್ರಭಾಕರನ್ ಬಗ್ಗೆ ಸಿನಿಮಾ ಮಂದಿಗೇಕೆ ಅಷ್ಟೋಂದು ಆಸಕ್ತಿ? ಇದಕ್ಕೆಲ್ಲ ಉತ್ತರ ಇರುವುದು ಶ್ರೀಲಂಕಾದಲ್ಲಿ.

    ಶ್ರೀಲಂಕಾದಲ್ಲಿ ಸಮಸ್ಯೆ ಪ್ರಾರಂಭವಾಗಿದ್ದು 1948ರಲ್ಲಿ ಸ್ವಾತಂತ್ರ್ಯ ಬಂದಮೇಲೆ. ಲಂಕಾದಲ್ಲಿ ಬಹುಸಂಖ್ಯಾತ ಸಿಂಹಳರು ಅಲ್ಪ ಸಂಖ್ಯಾತ ತಮಿಳರ ಮೇಲೆ ಮೊದಲಿಗೆ ಪರೋಕ್ಷ ದಬ್ಬಾಳಿಕೆ ಆರಂಭಿಸಿದರು. ಸಿಂಹಳರಿಗೆ ಹೆಚ್ಚಿನ ಉದ್ಯೋಗ ಅವಕಾಶ, ಕಲಿಕೆಯ ಅವಕಾಶ ಆಸ್ತಿ ಹೊಂದು ಅವಕಾಶ ಹೀಗೆ ಹಲವು ಕಾನೂನುಗಳನ್ನು ಜಾರಿಗೆ ತಂದು ಶತಮಾನಗಳಿಂದ ಶ್ರೀಲಂಕಾದಲ್ಲಿಯೇ ಬಾಳಿ ಬದುಕಿದ ತಮಿಳರನ್ನು ಎರಡನೇ ದರ್ಜೆ ಪ್ರಜೆಗಳು ಎನ್ನುವಂತೆ ಮಾಡಿದರು.

    1970 ರ ಸಮಯದ ವೇಳೆಗೆ ಈ ದಬ್ಬಾಳಿಕೆ ದೊಡ್ಡ ಹಂತಕ್ಕೆ ಹೋಗಿದ್ದು, ತಮಿಳು ವಿದ್ಯಾರ್ಥಿಗಳಿಗೆ ವಿವಿಗಳಲ್ಲಿ ದಾಖಲಾತಿ ನಿರಾಕರಿಸಲಾಗುತ್ತಿತ್ತು. ಅದೇ ಸಮಯದಲ್ಲಿ ಪ್ರಭಾಕರನ್ ತಮಿಳು ಬಂಡಾಯ ಗುಂಪು ಸೇರ್ಪಡೆಗೊಂಡು ತಮಿಳರ ಹಕ್ಕುಗಳಿಗಾಗಿ ಹೋರಾಡಲು ಆರಂಭಿಸಿದರು. ತನ್ನ ಹದಿ ವಯಸ್ಸಿನಲ್ಲಿಯೇ ಟಿಎನ್‌ಟಿ (ತಮಿಳ್ ನ್ಯೂ ಟೈಗರ್ಸ್) ಹೆಸರಲ್ಲಿ ಯುವಕರ ಪಡೆ ಕಟ್ಟಿದರು. ಸಿಂಹಳದ ಸಿಎಂಗೆ ಬೆಂಬಲವಾಗಿದ್ದ ಜಾಫ್ನಾದ ಮೇಯರ್ ಆಲ್ಫ್ರೆಡ್ ಧುರಿಯಪ್ಪನನ್ನು ಕೊಲ್ಲಲು ಬಾಂಬ್ ಇಟ್ಟಿದ್ದ ಪ್ರಭಾಕರನ್ ಹಾಗೂ ತಂಡ ಅದರಿಂದ ತಪ್ಪಿಸಿಕೊಂಡ ಧುರಿಯಪ್ಪನನ್ನು ಹಾಡಹಗಲೆ ಶೂಟ್ ಮಾಡಿ ಮುಗಿಸಿಬಿಟ್ಟರು ಪ್ರಭಾಕರನ್ ಆಗಿನ್ನೂ ಅವರಿಗೆ 21 ವರ್ಷ ವಯಸ್ಸು. ಆಗ ಮೊದಲ ಭಾರಿಗೆ ಪ್ರಭಾಕರನ್ ಹೆಸರು ಕೇಳತೊಡಗಿತು. ತಾನು ಸ್ಥಾಪಿಸಿದ್ದ ಟಿಎನ್‌ಟಿ ಯನ್ನು 1976ರಲ್ಲಿ ಎಲ್‌ಟಿಟಿಇ (ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಇಳಂ) ಆಗಿ ಬದಲಾಯಿಸಿದರು ಪ್ರಭಾಕರನ್.

    30 ವರ್ಷಗಳ ಕಾಲ ನಡೆದ ಯುದ್ಧ

    30 ವರ್ಷಗಳ ಕಾಲ ನಡೆದ ಯುದ್ಧ

    1983ರಲ್ಲಿ ಪ್ರಭಾಕರನ್ ನೇತೃತ್ವದ ಎಲ್‌ಟಿಟಿಇ ತಂಡ 13 ಮಂದಿ ಶ್ರೀಲಂಕಾದ ಯೋಧರನ್ನು ಕೊಂದ ನಂತರ ಶ್ರೀಲಂಕಾದಲ್ಲಿ ನಿಜವಾದ ಯುದ್ಧ ಆರಂಭವಾಯಿತು. ಶ್ರೀಲಂಕನ್ ಸೈನ್ಯ ಹಾಗೂ ಎಲ್‌ಟಿಟಿಇ ನಡುವೆ ಸುಮಾರು 30 ವರ್ಷಗಳ ಕಾಲ ಸಶಸ್ತ್ರ ಯುದ್ಧ ನಡೆದು ಲಕ್ಷಾಂತರ ಮಂದಿ ತಮಿಳರು, ಶ್ರೀಲಂಕಾ ಯೋಧರು, ಸಾಮಾನ್ಯ ನಾಗರೀಕರು ಮೃತಪಟ್ಟರು.

    ಬುಲೆಟ್ ಪ್ರೂಫ್ ಜಾಕೆಟ್ ಉಡುಗೊರೆ ನೀಡಿದ್ದ ರಾಜೀವ್ ಗಾಂಧಿ

    ಬುಲೆಟ್ ಪ್ರೂಫ್ ಜಾಕೆಟ್ ಉಡುಗೊರೆ ನೀಡಿದ್ದ ರಾಜೀವ್ ಗಾಂಧಿ

    ಕಾಲೇಜು ಮೆಟ್ಟಿಲು ಸಹ ಹತ್ತದೇ ಇದ್ದ ಪ್ರಭಾಕರನ್ ಉತ್ತಮ ನಾಯಕನಾಗಿದ್ದ. ವಿಶ್ವದ ಇನ್ನಾವುದೇ ಬಂಡಾಯಗಾರರ ಗುಂಪು ಸಹ ಎಲ್‌ಟಿಟಿಯಷ್ಟು ಶಿಸ್ತುಬದ್ಧ ಸೈನ್ಯವಾಗಿರಲಿಲ್ಲ. ಪ್ರಭಾಕರನ್ ಅನ್ನು ಚೆಗುವೇರಾಗೆ ಹೋಲಿಸಲಾಗುತ್ತಿತ್ತು. ವಿಶ್ವದ ಕೆಲವು ಶಕ್ತಿಶಾಲಿ ರಾಷ್ಟ್ರಗಳು ಸಹ ಎಲ್‌ಟಿಟಿಇಯನ್ನು ಸರ್ಕಾರ ಎಂದು ಒಪ್ಪಿಕೊಂಡಿದ್ದವು. ರಾಜೀವ್ ಗಾಂಧಿ ಜೊತೆಗೆ ಮಾತುಕತೆಗೆ ಅತಿಥಿಯಾಗಿ ಬಂದಿದ್ದರು ಪ್ರಭಾಕರನ್. ಹಲವು ಶಾಂತಿ ಸಭೆಗಳಲ್ಲಿ ಸಹ ಪಾಲ್ಗೊಂಡಿದ್ದರು. ರಾಜೀವ್ ಗಾಂಧಿ ತಮ್ಮ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ಪ್ರಭಾಕರನ್‌ಗೆ ಉಡುಗೊರೆಯಾಗಿ ನೀಡಿದ್ದರು. ಆದರೆ ರಾಜೀವ್ ಗಾಂಧಿ ಶ್ರೀಲಂಕಾಕ್ಕೆ ಶಾಂತಿ ಸೈನ್ಯವನ್ನು ಕಳಿಸಿದ್ದು ಪ್ರಭಾಕರನ್‌ಗೆ ಇಷ್ಟವಾಗಿರಲಿಲ್ಲ.

    ಮಾಜಿ ಪ್ರಧಾನಿಯನ್ನೇ ಕೊಂದ ಪ್ರಭಾಕರನ್

    ಮಾಜಿ ಪ್ರಧಾನಿಯನ್ನೇ ಕೊಂದ ಪ್ರಭಾಕರನ್

    1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ನಡೆದಾಗ ಮತ್ತೆ ಪ್ರಭಾಕರನ್ ಹೆಸರು ಭಾರಿ ದೊಡ್ಡದಾಗಿ ಕೇಳಿಬಂತು. ಶ್ರೀಲಂಕಾದಲ್ಲಿ ಕುಳಿತುಕೊಂಡು ಭಾರತದ ಮಾಜಿ ಪ್ರಧಾನಿಯನ್ನೇ ಕೊಂದುಬಿಟ್ಟ ಪ್ರಭಾಕರನ್. ಎಲ್‌ಟಿಟಿಇಯ ಯೋಧರನ್ನು ಅದು ಹೇಗೆ ಪ್ರಭಾವಿಸಿಬಿಟ್ಟಿದ್ದನೆಂದರೆ ಆತನ ಮಾತಿಗೆ ಪ್ರಾಣ ತೆಗೆಯಲು, ಪ್ರಾಣ ನೀಡಲು ಸಹ ಅವರು ಸಿದ್ಧರಿದ್ದರು. 2002ರಲ್ಲಿ ಪ್ರಭಾಕರನ್ ನಡೆಸಿದ ಮೊತ್ತ ಮೊದಲ ಐತಿಹಾಸಿಕ ಪ್ರೆಸ್‌ ಮೀಟ್‌ನಲ್ಲಿ ರಾಜೀವ್ ಗಾಂಧಿ ಹತ್ಯೆಯನ್ನು 'ಖೇದಕರ ಘಟನೆ' ಎಂದಷ್ಟೆ ಬಣ್ಣಿಸಿ ಸುಮ್ಮನಾಗಿದ್ದರು.

    ತಲೆನೋವಾದ ಮಹೇಂದ್ರ ರಾಜಪಕ್ಸೆ

    ತಲೆನೋವಾದ ಮಹೇಂದ್ರ ರಾಜಪಕ್ಸೆ

    ಪ್ರಭಾಕರನ್‌ಗೆ ನಿಜವಾದ ಸಮಸ್ಯೆ ಎದುರಾಗಿದ್ದು 2005ರಲ್ಲಿ ಮಹೇಂದ್ರ ರಾಜಪಕ್ಸೆ ಶ್ರೀಲಂಕಾದ ಅಧ್ಯಕ್ಷರಾಗಿ ಆಯ್ಕೆ ಆದಾಗ. ಎಲ್‌ಟಿಟಿಇ ಮೇಲೆ ನಿರ್ದಯವವಾಗಿ ಸಮರವನ್ನು ತೀವ್ರಗೊಳಿಸಿದ ರಾಜಪಕ್ಸೆ. ಪ್ರಭಾಕರನ್‌ ಹೆಡೆಮುರಿ ಕಟ್ಟಿದರು. 2005 ರಿಂದ 2009 ರವರೆಗೆ ಶ್ರೀಲಂಕಾ ಜನರು ತೀವ್ರತರವಾದ ಯುದ್ಧಕ್ಕೆ ಸಾಕ್ಷಿಯಾದರು. ಶ್ರೀಲಂಕಾದ ದೊಡ್ಡ ಸೈನ್ಯದ ಮುಂದೆ ದಿನೇ-ದಿನೇ ಶಕ್ತಿಕಳೆದುಕೊಳ್ಳುತ್ತಾ ಬಂದ ಎಲ್‌ಟಿಟಿಇ 2009 ರ ವೇಳೆಗೆ ಪೂರ್ಣವಾಗಿ ಬಡಕಲಾಗಿಬಿಟ್ಟಿತು.

    ಪ್ರಭಾಕರನ್ ಸಾವು

    ಪ್ರಭಾಕರನ್ ಸಾವು

    2009ರ ಮೇ 18 ರಂದು ಶ್ರೀಲಂಕಾ ಸೈನ್ಯವು ಪ್ರಭಾಕರನ್ ಮಗನನ್ನು 100 ಇತರ ಎಲ್‌ಟಿಟಿಇ ಸೈನಿಕರನ್ನು ಹೊಡೆದುರುಳಿಸಿತು. ಆ ಸಂದರ್ಭದಲ್ಲಿ ಪ್ರಭಾಕರನ್ ಮಗನ ಬಳಿ 1.20 ಕೋಟಿ ಹಣವನ್ನು ಸಹ ಶ್ರೀಲಂಕಾ ಸೇನೆ ವಶಪಡಿಸಿಕೊಂಡಿತು. ಅದಾದ ಮಾರನೇಯ ದಿನ ಮೇ 19ರಂದು ಪ್ರಭಾಕರನ್ ಹಾಗೂ ಅವರ 30 ಮಂದಿ ಭಧ್ರತಾ ಪಡೆಯನ್ನು ಹೊಡೆದುರುಳಿಸಿತು ಸೇನೆ. ಪ್ರಭಾಕರನ್ ಸತ್ತಿದ್ದಾನೆ ಎಂದು ಸುದ್ದಿ ಹರಡಿದಾಗ ಅದನ್ನು ನಂಬಲು ಯಾರೂ ತಯಾರಿರಲಿಲ್ಲ. ಕೊನೆಗೆ ಪ್ರಭಾಕರನ್ ಡಿಎನ್‌ಎ ಪರೀಕ್ಷೆ ಮಾಡಲಾಯಿತು. ಪ್ರಭಾಕರನ್ ಆಪ್ತ ಸೆಲ್ವರಸನ್ ಸಹ ಪ್ರಭಾಕರನ್ ಮೃತಪಟ್ಟಿದ್ದನ್ನು ಖಚಿತಪಡಿಸಿದ. ಪ್ರಭಾಕರನ್ ಜೀವನ ಸುಮಾರು 10 ಸಿನಿಮಾಗಳಿ ಆಗಬಹುದಾದಷ್ಟು ರೋಚಕ ಕತೆಗಳನ್ನು ಹೊಂದಿದೆ ಹಾಗಾಗಿಯೇ ಪ್ರಭಾಕರನ್ ಎಂದರೆ ಸಿನಿಮಾದವರಿಗೆ ಆಸಕ್ತಿ ಹೆಚ್ಚು.

    English summary
    Who is Prabhakaran? What is LTTE? Movie and web series makers love Prabhakaran story.
    Thursday, June 10, 2021, 19:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X