ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ ರಿಹಾನ್ನಾ: ಯಾರೀಕೆ? ಹಿನ್ನೆಲೆಯೇನು?

ಜನವರಿ 26 ರ ಘಟನೆ ನಂತರ ರೈತ ಪ್ರತಿಭಟನೆಗೆ ಮೆತ್ತಲಾದ ಮಸಿಯಿಂದಾಗಿ, ಚದುರಿಹೋಯಿತು ಎಂದು ಕೊಂಡ ರೈತ ಪ್ರತಿಭಟನೆ ಮತ್ತೆ ಪುಟಿದೇಳುತ್ತಿದೆ.

ರೈತ ಪ್ರತಿಭಟನೆಗೆ ಹೊರ ದೇಶಗಳ ಗಣ್ಯರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ರಿಹಾನ್ನಾ ಹೆಸರು ಸಾಮಾಜಿಕ ಜಾಲತಾಣದಲ್ಲಿ ತುಸು ಹೆಚ್ಚಾಗಿ ಕೇಳಿಬರುತ್ತಿದೆ. 'ನಾವು ಏಕೆ ಇದರ ಬಗ್ಗೆ ಮಾತನಾಡುತ್ತಿಲ್ಲ' ಎಂಬ ಒಂದು ಟ್ವೀಟ್ ರಿಹಾನ್ನಾ ದೊಡ್ಡ ಮಟ್ಟದ ಚರ್ಚೆ ಏಳಲು ಕಾರಣವಾಗಿದೆ. ಭಾರತೀಯ ವಿದೇಶಾಂಗ ವ್ಯವಹಾರ ಸಚಿವಾಲಯ ಸಹ ಗಾಬರಿಯಾಗಿ ಆತುರಾತುರವಾಗಿ ಪ್ರತಿಕ್ರಿಯೆ ಕೊಟ್ಟಿದೆ. ರೈತ ಪ್ರತಿಭಟನೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ರೂಪಿಸುತ್ತಿರುವವರಿಗೂ ರಿಹಾನ್ನಾ 'ಶಕ್ತಿ' ಬಗ್ಗೆ ಅರಿವಿದೆ. ಹಾಗಾಗಿ ರಿಹಾನ್ನಾರ ತೇಜೋವಧೆ ಮಾಡಲು ದೊಡ್ಡ ಟ್ರೋಲ್ ಪಡೆಯೇ ಅಖಾಡಕ್ಕಿಳಿದಿದೆ. 'ರಿಹಾನ್ನಾ ಪೋಷಕರು ಮುಸ್ಲೀಮರು, ಆಕೆಯ ಬಾಯ್‌ಫ್ರೆಂಡ್ ಮುಸ್ಲಿಂ' ಇತ್ಯಾದಿ ಸುಳ್ಳುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಯಾರೀ ರಿಹಾನ್ನಾ, ಈಕೆಯ ಒಂದು ಟ್ವೀಟ್‌ಗೆ ಕೆಲವರು ಇಷ್ಟೋಂದು ಹೆದರುತ್ತಿರುವುದೇಕೆ, ಈಕೆಗಿರುವ ಮಹತ್ವವೇನು?

32 ವರ್ಷ ವಯಸ್ಸಿನ ರಿಹಾನ್ನಾ, ವಿಶ್ವದ ಜನಪ್ರಿಯ ಪಾಪ್ ಗಾಯಕಿ ಮತ್ತು ಹಾಲಿವುಡ್ ನಟಿ. ಟ್ವಿಟ್ಟರ್ ಒಂದರಲ್ಲೇ ರಿಹಾನ್ನಾಗೆ 10 ಕೋಟಿಗೂ ಹೆಚ್ಚು ಮಂದಿ ಫಾಲೋವರ್‌ಗಳಿದ್ದಾರೆ. ಭಾರತದ ಯಾವ ರಾಜಕಾರಣಿ, ನಟ-ನಟಿಯರಿಗೂ ಇಷ್ಟೋಂದು ಮಂದಿ ಫಾಲೋವರ್‌ಗಳಿಲ್ಲ. ವಿಶ್ವದ ಪ್ರಭಾವಿ 'ಇನ್‌ಫ್ಲುಯೆನ್ಸರ್‌'ಗಳಲ್ಲಿ ರಿಹಾನ್ನಾ ಸಹ ಒಬ್ಬರು.

ಕಷ್ಟದ ಬಾಲ್ಯ ಕಂಡ ರಿಹಾನ್ನಾ

ಕಷ್ಟದ ಬಾಲ್ಯ ಕಂಡ ರಿಹಾನ್ನಾ

ಈಗ ಬಹು ದೊಡ್ಡ ಸೆಲೆಬ್ರಿಟಿಯಾಗಿರುವ ರಿಹಾನ್ನಾ ಹುಟ್ಟಿದ್ದು ಕೆರೆಬಿಯನ್ ದ್ವೀಪ ಸಮೂಹದ ದೇಶ ಬಾರ್ಬೊಡೋಸ್‌ನಲ್ಲಿ. ರಿಹಾನ್ನಾರದ್ದು ಬಹು ಕಷ್ಟದ ಬಾಲ್ಯ. ಕುಡುಕ, ಮಾದಕ ವ್ಯಸನಿ ತಂದೆ ಪ್ರತಿದಿನ ತಾಯಿಯನ್ನು ಹೊಡೆಯುತ್ತಿದ್ದ. ಹಿಂಸೆ, ಮೂದಲಿಕೆಗಳನ್ನು ನೋಡಿಯೇ ಬೆಳೆದರು ರಿಹಾನ್ನಾ. ಬಾಲ್ಯದಲ್ಲಿ ಬಟ್ಟೆ ಮಾರುವ ಕೆಲಸ ಮಾಡುತ್ತಿದ್ದ ರಿಹಾನ್ನಾ. ಬಡತನ, ಹಿಂಸೆ, ಅಪ್ಪನ ಮದುವೆಯಾಗುವ ಚಟ (ಐದು ಮದುವೆಯಾಗಿದ್ದ ರಿಹಾನ್ನಾಳ ತಂದೆ) ಎಲ್ಲವನ್ನೂ ನೋಡಿ ಬಾಲ್ಯದಲ್ಲಿ ವಿಚಿತ್ರ ಖಾಯಿಲೆಗೆ ಗುರಿಯಾಗಿದ್ದರು. ಪ್ರತಿದಿನ ಅಸಾಧ್ಯ ತಲೆ ನೋವು ಬರುತ್ತಿತ್ತು ರಿಹಾನ್ನಾಗೆ. ಹಲವು ಸಿ.ಟಿ ಸ್ಕ್ಯಾನ್ ಗಳಾಯಿತು. ಇದೇನೋ ಮೆದುಳಿನ ಟ್ಯೂಮರ್ ಇರಬಹುದೆಂದು ವೈದ್ಯರು ಅಂದಾಜಿಸಿದರು. ಆದರೆ ರಿಹಾನ್ನಾಳ ತಂದೆ-ತಾಯಿ ಬೇರಾದ ಮೇಲೆ ರಿಹಾನ್ನಾಳ ತಲೆ ನೋವು ಹೊರಟುಹೋಯಿತು. ತಂದೆಯ ಹಿಂಸಾತ್ಮಕ ಪ್ರವೃತ್ತಿ ಬಾಲಕಿ ರಿಹಾನ್ನಾಳ ಮನಸ್ಸಿನ ಮೇಲೆ ಗಾಢ ಋಣಾತ್ಮಕ ಪರಿಣಾಮ ಬೀರಿಬಿಟ್ಟಿತ್ತು.

ನೋವು ಕಳೆಯಲು ಸಂಗೀತದ ಆಸರೆ

ನೋವು ಕಳೆಯಲು ಸಂಗೀತದ ಆಸರೆ

ಬಾಲ್ಯದ ನೋವುಗಳನ್ನು ಕಳೆಯಲು, ಸಂಕಟದ ಬದುಕಿನಿಂದ ತಾತ್ಕಾಲಿಕ ನೆಮ್ಮದಿ ಪಡೆಯಲು ಇಬ್ಬರು ಶಾಲಾ ಸಹಪಾಠಿಗಳೊಂದಿಗೆ ಸಂಗೀತ ತಂಡ ಪ್ರರಾಂಭಿಸಿದ ರಿಹಾನ್ನಾ ಹಾಡಲು ಪ್ರಾರಂಭಿಸಿದರು. 2003 ರಲ್ಲಿ ತಂಡ ಪ್ರಾರಂಭಿಸಿದ ರಿಹಾನ್ನಾ ಳ ಪ್ರತಿಭೆ ಗುರುತಿಸಿದ್ದು ಸಂಗೀತಗಾರ ಇವಾನ್ ರೋಜರ್ಸ್. ಆ ನಂತರ ಆಕೆ ಮುಟ್ಟಿದ್ದೆಲ್ಲವೂ ಚಿನ್ನವಾಗಿ ಪರಿಣಮಿಸಿತು. ಆಕೆಯ ಹಾಡುಗಳು, ಆಲ್ಬಂ ಗಳು ದಾಖಲೆಗಳು ಬರೆದವು.

ಆರು ಗಿನ್ನೆಸ್ ವಿಶ್ವದಾಖಲೆ, ಒಂಬತ್ತು ಗ್ರಾಮಿ ಪ್ರಶಸ್ತಿ

ಆರು ಗಿನ್ನೆಸ್ ವಿಶ್ವದಾಖಲೆ, ಒಂಬತ್ತು ಗ್ರಾಮಿ ಪ್ರಶಸ್ತಿ

ವಿಶ್ವದಲ್ಲಿ ಅತಿ ಹೆಚ್ಚು ಮಾರಾಟವಾದ ಹಾಡು ಅಥವಾ ಆಲ್ಬಂ ರಿಹಾನ್ನಾರದ್ದು. ಸಂಗೀತಕ್ಕೆ ನೀಡಲಾಗುವ ವಿಶ್ವ ಶ್ರೇಷ್ಠ ಪ್ರಶಸ್ತಿ ಎಂದು ಪರಿಗಣಿಸ್ಪಟ್ಟಿರುವ ಗ್ರಾಮಿ ಪ್ರಶಸ್ತಿ 9 ಬಾರಿ ರಿಹಾನ್ನಾರನ್ನು ಅರಸಿ ಬಂದಿದೆ. 33 ಬಾರಿ ಗ್ರಾಮಿಗೆ ನಾಮಿನೇಶನ್ ಸಹ ಆಗಿದ್ದಾರೆ. 12 ಬಿಲ್‌ಬೋರ್ಡ್ ಪ್ರಶಸ್ತಿ, 13 ಅಮೆರಿಕನ್ ಮ್ಯೂಸಿಕ್ ಪ್ರಶಸ್ತಿ. 8 ಪೀಪಲ್ ಚಾಯ್ಸ್ ಪ್ರಶಸ್ತಿ, ಇದೆಲ್ಲದರ ಜೊತೆಗೆ ಆರು ಗಿನ್ನೆಸ್ ವಿಶ್ವದಾಖಲೆಗಳು ರಿಹಾನ್ನಾ ಹೆಸರಿನಲ್ಲಿವೆ. 2008ರ ಫೆಬ್ರವರಿ 22 ರಂದು ಅಂದಿನ ಬಾರ್ಬಡೋಸ್ ಸರ್ಕಾರ ರಿಹಾನಾಗೆ ಗೌರವ ನೀಡಲೆಂದು "ರಿಹಾನಾ ದಿನಾಚರಣೆ" (ರಿಹಾನಾ ಡೇ) ಆಚರಿಸಿತು. ಅದಾದ ನಂತರ ಪ್ರತಿವರ್ಷ ಫೆಬ್ರವರಿ 22ರಂದು ಬಾರ್ಬಡೋಸ್ ದೇಶದಲ್ಲಿ 'ರಿಹಾನಾ ಡೇ' ಆಚರಿಸಲಾಗುತ್ತಿದೆ. ಇದು ರಿಹಾನ್ನಾಗೆ ದೇಶವೊಂದು ಕೊಡುತ್ತಿರುವ ಗೌರವಕ್ಕೆ ಸಾಕ್ಷಿ.

ಟ್ರಂಪ್ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದ ರಿಹಾನ್ನಾ

ಟ್ರಂಪ್ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದ ರಿಹಾನ್ನಾ

ಬಾಲ್ಯದಲ್ಲಿ ಬಡತನ ಕಂಡ ರಿಹಾನ್ನಾ ಸೆಲೆಬ್ರಿಟಿ ಆದ ಬಳಿಕವೂ ಬಡವರು, ಶೋಷಿತರಗಾಗಿ ದನಿ ಎತ್ತುತ್ತಲೇ ಇರುತ್ತಾರೆ. ಅದರ ಭಾಗವಾಗಿಯೇ ಈಗ ಭಾರತದ ರೈತರ ಪ್ರತಿಭಟನೆ ಬಗ್ಗೆಯೂ ಮಾತನಾಡಿದ್ದಾರೆ ರಿಹಾನ್ನಾ. ಈ ಹಿಂದೆ ಟ್ರಂಪ್ ಸರ್ಕಾರವನ್ನು ಕಟುವಾಗಿ ಟೀಕಿಸಿ, ಟ್ರಂಪ್ ವಿರುದ್ಧ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಮಯನ್ಮಾರ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆಯೂ ಟ್ವೀಟ್ ಮಾಡಿದ್ದಾರೆ ರಿಹಾನ್ನಾ. ನೈಜೀರಿಯಾ, ಸೂಡನ್‌ಗಳಲ್ಲಿ ನಡೆಯುತ್ತಿರುವ ಸಾಮಾಜಿಕ ಹೋರಾಟಗಳನ್ನು ಸಹ ರಿಹಾನ್ನಾ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.

ರೈತ ಹೋರಾಟಕ್ಕೆ ಹೆಚ್ಚಿನ ಬಲ ದೊರೆತಿದೆ

ರೈತ ಹೋರಾಟಕ್ಕೆ ಹೆಚ್ಚಿನ ಬಲ ದೊರೆತಿದೆ

ಭಾರತದ ರೈತ ಹೋರಾಟದ ಬಗ್ಗೆ ರಿಹಾನ್ನಾ ಟ್ವೀಟ್ ಮಾಡಿದ ಬೆನ್ನಲ್ಲೇ ಹಲವರು ರೈತ ಪ್ರತಿಭಟನೆ ಬೆಂಬಲಿಸಿ ಟ್ವೀಟ್ ಮಾಡುತ್ತಿದ್ದಾರೆ. ಗ್ರೆಟಾ ಥೆನ್‌ಬರ್ಗ್, ಮಿಯಾ ಖಲೀಫಾ, ಹಲವು ಅಂತರರಾಷ್ಟ್ರೀಯ ರಾಜಕಾರಣಿಗಳು, ಗಣ್ಯರು ರೈತ ಹೋರಾಟದ ಬೆಂಬಲಕ್ಕೆ ಇಳಿದಿದ್ದಾರೆ. ಇದು ರೈತ ಹೋರಾಟಕ್ಕೆ ಇನ್ನಷ್ಟು ಶಕ್ತಿ ತುಂಬಿದೆ. ಇದೇ ತಿಂಗಳ ಆರರಂದು ಮತ್ತೊಮ್ಮೆ ಟ್ರಾಕ್ಟರ್‌ಗಳು ಸದ್ದು ಮಾಡಲಿವೆ. ರೈತರ ಹಾದಿಯಲ್ಲಿ ಸರ್ಕಾರ ನೆಟ್ಟಿರುವ ಮುಳ್ಳುಗಳನ್ನು ಹಾದು ದೆಹಲಿಗೆ ನುಗ್ಗುವ ಮತ್ತೊಂದು ಪ್ರಯತ್ನ ರೈತರಿಂದ ಆಗಲಿದೆ.

More from Filmibeat

English summary
Who Is Rihanna, Why she supporting Indian farmers protest. Here is the full details about Rihanna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X