ಅಯ್ಯೋ ನಿನ್ನ, ಧೋನಿ ಔಟಾದಾಗ ಹಲ್ಲಲ್ಲು ಕಡಿದ ಈ ಚೆಲುವೆ ಯಾರು?
ಐಪಿಎಲ್ ಟೂರ್ನಿ ಕಾವೇರುತ್ತಿದೆ. ಒಂದಕ್ಕಿಂತ ಒಂದು ಪಂದ್ಯ ರೋಚಕವಾಗಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸುತ್ತಿದೆ. 30ಕ್ಕೂ ಅಧಿಕ ಕ್ಯಾಮರಾಗಳು ಮೈದಾನದ ಪ್ರತಿ ಕ್ಷಣವನ್ನು ಸೆರೆಹಿಡಿದು ಟಿವಿ ಪರದೆಯಲ್ಲಿ ಮೂಡಿಸುತ್ತಿವೆ. ಆಟಗಾರರ ಆರ್ಭಟ ಮಾತ್ರವಲ್ಲ ಮ್ಯಾಚ್ ನೋಡಲು ಬಂದ ಕ್ರಿಕೆಟ್ ಪ್ರೇಮಿಗಳ ಚಲನವಲನವೂ ಸೆರೆಯಾಗುತ್ತಿದೆ.
ಸಾವಿರಾರು ರೂಪಾಯಿ ತೆತ್ತು ಟಿಕೆಟ್ ಖರೀದಿಸಿ ಜನ ಐಪಿಎಲ್ ಮ್ಯಾಚ್ ನೋಡಲು ಹೋಗುತ್ತಾರೆ. ತಮ್ಮ ತಂಡವನ್ನು ಹುರಿದುಂಬಿಸುತ್ತಾರೆ. ಸಿಕ್ಸರ್, ಬೌಂಡರಿ ಸಿಡಿಸಿದಾಗ ಹುಚ್ಚೆದ್ದು ಕುಣಿಯುತ್ತಾರೆ. ಎದುರಾಳಿ ತಂಡದ ಆಟಗಾರರು ಔಟ್ ಆದರೂ ಸಂಭ್ರಮಿಸುತ್ತಾರೆ. ತಮ್ಮ ಫೇವರಿಟ್ ತಂಡದ ಆಟಗಾರರು ಔಟ್ ಆದರೆ ಹತಾಶೆಯಿಂದ ನಿಟ್ಟುಸಿರು ಬಿಡುತ್ತಾರೆ.

ಭಾನುವಾರ(ಮಾರ್ಚ್ 30) ನಡೆದ ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ 6 ರನ್‌ಗಳ ರೋಚಕ ಗೆಲುವು ಸಾಧಿಸಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದೇ ಬಿಡುತ್ತದೆ ಎಂದು ಬಹುತೇಕರು ಭಾವಿಸಿದ್ದರು. ಅದರಲ್ಲೂ ಸಿಎಸ್‌ಕೆ ತಂಡದ ನಾಯಕ ಧೋನಿ ಮೇಲೆ ಬಹಳ ನಿರೀಕ್ಷೆ ಇತ್ತು. 11 ಎಸೆತಗಳಲ್ಲಿ 16 ರನ್ ಸಿಡಿಸಿದ ಧೋನಿ ಬೌಂಡರಿ ಲೈನ್‌ನಲ್ಲಿ ಕ್ಯಾಚ್ ನೀಡಿ ಔಟ್ ಆಗಿದ್ದರು. ಆಗ ಸಿಎಸ್‌ಕೆ ಅಭಿಮಾನಿ ಯುವತಿಯೊಬ್ಬಳು ಬೇಸರದಿಂದ ನಿಟ್ಟುಸಿರು ಬಿಟ್ಟ ವೀಡಿಯೋ ವೈರಲ್ ಆಗ್ತಿದೆ.
ನೋಡ ನೋಡುತ್ತಿದ್ದಂತೆ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಮೀಮ್ಸ್ ಆಗಿ ಗಮನ ಸೆಳೆಯುತ್ತಿದೆ. ನೆಟ್ಟಿಗರಿಗೆ ಹೊಸ ಮೀಮ್ಸ್ ಸಿಕ್ತು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಕರ್ನಾಟಕ ಬಿಜೆಪಿ ಪಕ್ಷದ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೂಡ ಈ ವಿಡಿಯೋ ಸದ್ದು ಮಾಡ್ತಿದೆ. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ನೋಡಿ ಜನರ ಹತಾಶೆ ಹೀಗಿದೆ ನೋಡಿ ಎಂದು ವ್ಯಂಗ್ಯ ಮಾಡಿ ಪೋಸ್ಟ್ ಮಾಡಲಾಗಿದೆ. ಅಷ್ಟರಮಟ್ಟಿಗೆ ಈ ಯುವತಿಯ ಎಕ್ಸ್‌ಪ್ರೆಷನ್ ವೈರಲ್ ಆಗ್ತಿದೆ.
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ರಾಜಸ್ಥಾನ ರಾಯಲ್ಸ್ ತಂಡ 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು. ದೊಡ್ಡ ಮೊತ್ತ ಬೆನ್ನಟ್ಟಿದ ಸಿಎಸ್‌ಕೆ ಅಂತಿಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಧೋನಿ ಕ್ರೀಸ್‌ನಲ್ಲಿದ್ದರು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಬಂದು ಧೋನಿ ಟೀಕೆಗೆ ಗುರಿಯಾಗಿದ್ದರು. ಹಾಗಾಗಿ ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದಿದ್ದರು. ಆದರೂ ತಂಡವನ್ನು ಸೋಲಿನ ದವಡೆಯಿಂದ ಪಾರುಮಾಡಲು ಅವರಿಂದ ಸಾಧ್ಯವಾಗಲಿಲ್ಲ.
ಕೊನೆ ಓವರ್‌ನಲ್ಲಿ ತಂಡಕ್ಕೆ 19 ರನ್ ಅಗತ್ಯವಿತ್ತು. ಧೋನಿ ಮೇಲೆ ಬಹಳ ಭರವಸೆ ಇತ್ತು. ಪಂದ್ಯವನ್ನು ಗೆಲ್ಲಿಸಿಬಿಡುತ್ತಾರೆ ಎಂದು ಅಭಿಮಾನಿಗಳು ನಂಬಿದ್ದರು. ಸಂದೀಪ್ ಶರ್ಮಾ ಎಸೆದ 20ನೇ ಓವರ್ ಮೊದಲ ಎಸೆತದಲ್ಲಿ ಧೋನಿ ಬಿರುಸಿನ ಹೊಡೆತಕ್ಕೆ ಕೈ ಹಾಕಿದ್ದರು. ಡೀಪ್ ಮಿಡ್ ವಿಕೆಟ್ನಲ್ಲಿ ಬಾರಿಸಿದ ಚೆಂಡನ್ನು ಶಿಮ್ರಾನ್ ಹೆಟ್ಮೇಯರ್ ಕ್ಯಾಚ್ ಹಿಡಿದರು. ಸಿಎಸ್‌ಕೆ ಅಭಿಮಾನಿಗಳಂತೂ ಥೋ.. ಎಂದು ಬೇಸರ ವ್ಯಕ್ತಪಡಿಸಿದರು.
ಧೋನಿ ಔಟ್ ಆಗುತ್ತಿದ್ದಂತೆ ಬೈಯಲು ಮುಂದಾಗಿ ಹತಾಶೆ, ಕೋಪದಿಂದ ಯುವತಿಯೊಬ್ಬಳು ಕೈ ಸನ್ನೆ ಮಾಡಿದ ವೀಡಿಯೋ ಎಲ್ಲರ ಗಮನ ಸೆಳೆದಿತ್ತು. ಧೋನಿ ಔಟ್ ಆದಾಗ ಬಹುತೇಕ ಅಭಿಮಾನಿಗಳ ಭಾವನೆ ಇದೇ ಆಗಿತ್ತು. ಐಪಿಎಲ್ ಪಂದ್ಯ ನೋಡಲು ಬರುವ ಅಭಿಮಾನಿಗಳಲ್ಲಿ ಕೆಲವರು ಹೀಗೆ ವೈರಲ್ ಆಗುತ್ತಾರೆ. ಸುಂದರ ಯುವತಿಯರೇ ಇದರಲ್ಲಿ ಮುಂದಿರುತ್ತಾರೆ. ಅದೇನೋ ಗೊತ್ತಿಲ್ಲ, ಕ್ರೀಡಾಂಗಣದಲ್ಲಿರುವ ಕ್ಯಾಮರಾಗಳು ಸುಂದರ ಯುವತಿಯರನ್ನು ಫೋಕಸ್ ಮಾಡುತ್ತಿರುತ್ತದೆ ಎನ್ನುವವರು ಇದ್ದಾರೆ.
ಅಂದಹಾಗೆ ಧೋನಿ ಔಟ್ ಆದಾಗ ಹೀಗೆ ಫಸ್ಟ್ರೇಷನ್‌ನಿಂದ ಕಲ್ಲು ಕಡಿದು ಸುಮ್ಮನಾದ ಹುಡುಗಿ ಯಾರು? ಆಕೆಯ ಹಿನ್ನೆಲೆ ಏನು? ಎಂದು ಕೆಲವರು ತಡಕಾಡುತ್ತಿದ್ದಾರೆ. "ನಿಮ್ಮನ್ನೆಲ್ಲಾ ನಂಬಿ ಸ್ಟೇಡಿಯಂಗೆ ಬಂದ್ರೆ ಅಷ್ಟೇ" ಎನ್ನುವಂತೆ ಧೋನಿ ಔಟಾದಾಗ ಪ್ರತಿಕ್ರಿಯಿಸಿದ ಈಕೆ ಯಾರು ಇನ್ನುವುದು ಗೊತ್ತಾಗಿಲ್ಲ. ಆಕೆ ಇನ್‌ಸ್ಟಾಗ್ರಾಮ್ ಇನ್ಫುಯೆನ್ಸರ್ ಆರ್ಯಪ್ರಿಯಾ ಭುಯಾನ್ ಆಗಿರಬಹುದು ಎಂದು ಕೆಲ ನೆಟ್ಟಿಗರು ಊಹಿಸುತ್ತಿದ್ದಾರೆ.
ಸದ್ಯ ಆಕೆಯ ಇನ್‌ಸ್ಟಾಗ್ರಾಮ್ ಖಾತೆ ಸಖತ್ ವೈರಲ್ ಆಗುತ್ತಿದೆ. ಹೊಸದಾಗಿ ಆಕೆ ಯಾವುದೇ ಪೋಸ್ಟ್ ಮಾಡಿಲ್ಲ. ಆದರೆ ಈ ಹಿಂದೆ ಮಾಡಿದ್ದ ಪೋಸ್ಟ್‌ಗಳಿಗೆ ನೆಟ್ಟಿಗರು ಕಾಮೆಂಟ್ ಸುರಿಮಳೆ ಸುರಿಸಲು ಆರಂಭಿಸಿದ್ದಾರೆ. 2 ದಿನಗಳ ಹಿಂದೆ 10 ಸಾವಿರ ಫಾಲೋವರ್ಸ್ ಇದ್ದ ಆಕೆಯ ಖಾತೆಯನ್ನು ಈಗ ಬರೋಬ್ಬರಿ 97 ಸಾವಿರಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.


Click it and Unblock the Notifications











