ರಜನಿ, ಚಿರು, ವಿಜಯ್, ಪ್ರಭಾಸ್, ಯಶ್ ಅಲ್ಲ; ದಕ್ಷಿಣದ ಅತ್ಯಂತ ಶ್ರೀಮಂತ ನಟ ಯಾರು ಗೊತ್ತಾ?
ಸೌತ್ ಸಿನಿದುನಿಯಾದಲ್ಲಿ ಸಾಕಷ್ಟು ಜನ ಸೂಪರ್ ಸ್ಟಾರ್‌ಗಳಿದ್ದಾರೆ. ಚಿತ್ರವೊಂದರಕ್ಕೆ 100 ಕೋಟಿ ಸಂಭಾವನೆ ಪಡೆಯುವ ನಟರು ಇದ್ದಾರೆ. ನಟನೆ ಮಾತ್ರವಲ್ಲದೇ ಇತರೆ ಉದ್ಯಮಗಳಲ್ಲಿ ಹಣ ಹೂಡಿಕೆ ಸ್ಟಾರ್ಸ್ ಲಾಭ ಗಳಿಸುತ್ತಿದ್ದಾರೆ. ಸಾವಿರಾರು ಕೋಟಿ ಆಸ್ತಿ ಪಾಸ್ತಿ ಕೂಡಿಟ್ಟಿದ್ದಾರೆ. ಆ ಲೆಕ್ಕದಲ್ಲಿ ಒಬ್ಬರಿಗಿಂತ ಒಬ್ಬರು ಕುಬೇರರೇ ಸರಿ.
ಅತಿಹೆಚ್ಚು ಸಂಭಾವನೆ ಪಡೆಯುವ ದಕ್ಷಿಣದ ಕಲಾವಿದರು ಯಾರು ಎಂದರೆ ರಜನಿಕಾಂತ್, ಚಿರಂಜೀವಿ, ದಳಪತಿ ವಿಜಯ್, ಅಜಿತ್, ರಾಮ್ ಚರಣ್, ಪ್ರಭಾಸ್, ಪವನ್ ಕಲ್ಯಾಣ್, ಕಮಲ್ ಹಾಸನ್, ಯಶ್ ಹೆಸರುಗಳು ಕೇಳಿಬರುತ್ತದೆ. ಇವರಲ್ಲೇ ಯಾರೋ ಒಬ್ಬರು ಅತ್ಯಂತ ಶ್ರೀಮಂತರು ಎಂದು ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ಎಲ್ಲರ ಊಹೆ ತಪ್ಪು ಎನ್ನಲಾಗ್ತಿದೆ.

ರಜನಿಕಾಂತ್, ಪ್ರಭಾಸ್ ಸಂಭಾವನೆ ಈಗಾಗಲೇ 100 ಕೋಟಿ ರೂ. ಗಡಿ ದಾಟಿದೆ. ದಳಪತಿ ವಿಜಯ್ ಸಂಭಾವನೆ ಕೂಡ 100 ಕೋಟಿ ರೂ. ಆಸುಪಾಸಿನಲ್ಲಿದೆ. ಪವನ್, ಚರಣ್, ತಾರಕ್, ಮಹೇಶ್ ಎಲ್ಲರೂ 50 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುವ ಅಂದಾಜಿದೆ. ಇವರನ್ನೆಲ್ಲಾ ಬಿಟ್ಟು ಅತಿ ಶ್ರೀಮಂತ ಯಾರು? ಎನ್ನುವ ಅನುಮಾನ ಕೆಲವರನ್ನು ಕಾಡದೇ ಇರುವುದಿಲ್ಲ. ವರದಿಗಳ ಪ್ರಕಾರ ಇವರೆಲ್ಲರಿಗಿಂತೂ ಶ್ರೀಮಂತ ನಟ ಇದ್ದಾರೆ ಎನ್ನಲಾಗುತ್ತಿದೆ.
ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ದಕ್ಷಿಣ ಭಾರತದಲ್ಲೇ ಅತ್ಯಂತ ಶ್ರೀಮಂತ ನಟ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಕೇಳಿಬರ್ತಿದೆ. GQ ಇಂಡಿಯಾ ವರದಿಯ ಪ್ರಕಾರ, ನಾಗಾರ್ಜುನ 3010 ಕೋಟಿ ರೂ. ನಿವ್ವಳ ಆಸ್ತಿ ಮೌಲ್ಯದೊಂದಿಗೆ ದಕ್ಷಿಣದ ಶ್ರೀಮಂತ ನಟ ಎನಿಸಿಕೊಂಡಿದ್ದಾರೆ.

65ರ ಹರೆಯದ ನಾಗಾರ್ಜುನ ನಟನಾಗಿ, ನಿರ್ಮಾಪಕರಾಗಿ, ನಿರೂಪಕರಾಗಿ, ಉದ್ಯಮಿಯಾಗಿ ಗುರ್ತಿಸಿಕೊಂಡಿದ್ದಾರೆ. 3 ದಶಕಗಳಿಂದ ತೆಲುಗು ಸಿನಿಮಾ ಹೀರೋ ನಾಗ್ ಅಬ್ಬರಿಸುತ್ತಾ ಬರ್ತಿದ್ದಾರೆ. ಸದ್ಯ ಚಿತ್ರವೊಂದಕ್ಕೆ 15ರಿಂ 20 ಕೋಟಿ ರೂ.ಗೂ ಹೆಚ್ಚು ಸಂಭಾವನೆ ಜೇಬಿಗಿಳಿಸುತ್ತಿದ್ದಾರೆ. ಇದಲ್ಲದೇ ನಾಗಾರ್ಜುನ ತಮ್ಮ ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆ ಅನ್ನಪೂರ್ಣ ಸ್ಟುಡಿಯೋದಲ್ಲಿ ನಿರ್ಮಾಪಕರಾಗಿ ಸಿನಿಮಾ ಮಾಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ. ಇನ್ನು ನಾಗಾರ್ಜುನ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಇನ್ನು ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡದ ಸಹ-ಮಾಲೀಕರಾಗಿದ್ದಾರೆ. ಅಲ್ಲದೆ, ನಾಗಾರ್ಜುನಗೆ ಹೈದರಾಬಾದಿನಲ್ಲಿ ಎನ್-ಕನ್ವೆನ್ಷನ್ ಹೆಸರಿನ ಕನ್ವೆನ್ಷನ್ ಹಾಲ್ ಇದೆ. ಸಿನಿಮಾ ಸೆಲೆಬ್ರಿಟಿಗಳ ಹೆಚ್ಚಿನ ಕಾರ್ಯಕ್ರಮಗಳು ಇಲ್ಲೇ ನಡೆಯುತ್ತವೆ.
ಬರೀ ಇಷ್ಟೇ ಅಲ್ಲ ನಾಗಾರ್ಜುನ ಜನಪ್ರಿಯ ಬ್ರಾಂಡ್‌ಗಳ ಸ್ಟಾರ್ ಪ್ರಚಾರಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಹಲವು ಮೂಲಗಳಿಂದ ನಾಗಾರ್ಜುನ ಆದಾಯ ಗಳಿಸುತ್ತಿದ್ದಾರೆ. ಹೀಗಾಗಿ ನಾಗಾರ್ಜುನ ದಕ್ಷಿಣ ಭಾರತದ ಶ್ರೀಮಂತ ನಟ ಎನಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ 45 ಕೋಟಿ ರೂ. ಮೌಲ್ಯದ ಬಂಗಲೆ, ಐಷಾರಾಮಿ ಕಾರುಗಳು ಮತ್ತು ಖಾಸಗಿ ಜೆಟ್ ಕೂಡ ಟಾಲಿವುಡ್ ಮನ್ಮಥ ಹೊಂದಿರುವುದಾಗಿ ವರದಿಗಳು ಹೇಳುತ್ತವೆ.
ನಾಗಾರ್ಜುನ ಬಳಿಕ 2200 ಕೋಟಿ ರೂ. ಆಸ್ತಿ ಮೌಲ್ಯದೊಂದಿಗೆ ನಟ ವೆಂಕಟೇಶ್ 2ನೇ ಸ್ಥಾನದಲ್ಲಿದ್ದಾರೆ ಎನ್ನಲಾಗುತ್ತದೆ. ಅದೇ ರೀತಿ 1650 ಕೋಟಿ ರೂ. ಆಸ್ತಿ ಮೌಲ್ಯ ಹೊಂದಿರುವ ಚಿರಂಜೀವಿ 3ನೇ ಸ್ಥಾನದಲ್ಲಿರುವುದಾಗಿ ಹೇಳಲಾಗುತ್ತದೆ. ಇನ್ನು ರಜನಿಕಾಂತ್ 450 ಕೋಟಿ ರೂ. ಆಸ್ತಿ ಮೌಲ್ಯ ಹೊಂದಿದ್ದಾರೆ ಎನ್ನುವ ಅಂದಾಜಿದೆ.


Click it and Unblock the Notifications











