ದರ್ಶನ್ ವಿವಾದದಲ್ಲಿ ಕೇಳಿಬರುತ್ತಿರುವ ಈ ಪವಿತ್ರಾ ಗೌಡ ಯಾರು?

By ಫಿಲ್ಮಿಬೀಟ್ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿವಾದ ಕಳೆದ ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ಗೆ ಬೆಂಕಿ ಹಚ್ಚಿದೆ. 25 ಕೋಟಿ ವಂಚನೆ ಪ್ರಕರಣದಿಂದ ಪ್ರಾರಂಭವಾದ ವಿವಾದ ಬಳಿಕ ಹಲ್ಲೆ, ಇಂದ್ರಜಿತ್ ಆರೋಪ, ನಿರ್ಮಾಪಕ ಉಮಾಪತಿ ಮೇಲೆ ಮುನಿಸು, ದೊಡ್ಮನೆ ವಿಚಾರ ನಂತರ ನಿರ್ದೇಶಕ ಪ್ರೇಮ್ ವರೆಗೂ ಬಂದಿದೆ.

ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತ, ದಿನಕ್ಕೊಬ್ಬರು ಸೇರಿಕೊಳ್ಳುತ್ತಾ ಈ ವಿವಾದ ಮೈಸೂರಿನಿಂದ ಕೊನೆಗೆ ಧರ್ಮಸ್ಥಳದ ಮೆಟ್ಟಿಲೇರುವವರೆಗೂ ಬಂದು ತಲುಪಿದೆ. ದರ್ಶನ್ ವಿವಾದ ದೊಡ್ಡದಾಗುತ್ತಾ ಸಾಕಷ್ಟು ಜನರ ಹೆಸರುಗಳು ತಳುಕುಹಾಕಿಕೊಳ್ಳಲು ಶುರುವಾಯಿತು. ಈ ವಿವಾದದಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳಲ್ಲಿ ಪವಿತ್ರಾ ಗೌಡ ಹೆಸರು ಕೂಡ ಇದೆ.

ಹೋಟೆಲ್ ಗಲಾಟೆಯಲ್ಲಿ ದರ್ಶನ್ ಸ್ನೇಹಿತರ ಜೊತೆಗೆ ಪವಿತ್ರಾ ಗೌಡ ಹೆಸರು ಕೂಡ ಸದ್ದು ಮಾಡುತ್ತಿದೆ. ಅಂದಹಾಗೆ ದರ್ಶನ್ ಜೊತೆ ಪವಿತ್ರಾ ಗೌಡ ಹೆಸರು ಸೇರಿಕೊಂಡಿರುವುದು ಈಗೇನಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ದರ್ಶನ್ ಜೊತೆ ಪವಿತ್ರಾ ಗೌಡ ಹೆಸರು ಗಾಂಧಿನಗರದಲ್ಲಿ ಓಡಾಡುತ್ತಿದೆ. ಮುಂದೆ ಓದಿ...

ದರ್ಶನ್ ಜೊತೆ ಇದ್ದ ಫೋಟೋ ಶೇರ್ ಮಾಡಿದ್ದ ಪವಿತ್ರಾ

ದರ್ಶನ್ ಜೊತೆ ಇದ್ದ ಫೋಟೋ ಶೇರ್ ಮಾಡಿದ್ದ ಪವಿತ್ರಾ

ಪವಿತ್ರಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರೀಯರಾಗಿದ್ದಾರೆ. ಆಗಾಗ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ದರ್ಶನ್ ಮತ್ತು ಪವಿತ್ರಾ ಗೌಡ ಬಗ್ಗೆ ಗುಸುಗುಸು ಕೇಳಿಬರುತ್ತಿರುವಾಗಲೇ ದರ್ಶನ್ ಜೊತೆಗಿನ ಫೋಟೋ ಶೇರ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು. ದರ್ಶನ್ ಜೊತೆ ಪವಿತ್ರಾ ಆಪ್ತವಾಗಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ದರ್ಶನ್ ಕುಟುಂಬದವರ ಜೊತೆ ಪವಿತ್ರಾ

ದರ್ಶನ್ ಕುಟುಂಬದವರ ಜೊತೆ ಪವಿತ್ರಾ

ಬಳಿಕ ದರ್ಶನ್ ಕುಟುಂಬದ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು. ದರ್ಶನ್ ಸಹೋದರಿ, ತಾಯಿ ಜೊತೆ ನಗುತ್ತಾ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋವನ್ನು ಶೇರ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದರು. ಈ ಫೋಟೋಗಳು ದರ್ಶನ್ ಮತ್ತು ಅವರ ಕುಟುಂಬದ ಜೊತೆ ಪವಿತ್ರಾ ಆಪ್ತತೆ ಬಗ್ಗೆ ಹೇಳುತ್ತಿತ್ತು.

ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದ ಪವಿತ್ರಾ ಗೌಡ

ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದ ಪವಿತ್ರಾ ಗೌಡ

ದರ್ಶನ್ ನಟನೆಯ ಸಿನಿಮಾಗಳ ಶೂಟಿಂಗ್ ಸೆಟ್‌ಗಳಲ್ಲೂ ಪವಿತ್ರಾ ಕಾಣಿಸಿಕೊಂಡಿದ್ದರು. ಕುರುಕ್ಷೇತ್ರ ಚಿತ್ರೀಕರಣ ವೇಳೆ ದರ್ಶನ್ ಭೇಟಿಯಾಗಲು ಹೈದರಾಬಾದ್‌ಗೆ ತೆರಳಿದ್ದರು. ಚಿತ್ರೀಕರಣ ವೇಳೆ ದರ್ಶನ್ ಜೊತೆ ಪವಿತ್ರಾ ಗೌಡ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಇಬ್ಬರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದರು ಈ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಫೋಟೋ ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದ್ದ ಪವಿತ್ರಾ

ಫೋಟೋ ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದ್ದ ಪವಿತ್ರಾ

ಪವಿತ್ರಾ ಗೌಡ ಶೇರ್ ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆಯುವಂತೆ ದರ್ಶನ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದರು. ಆದರೂ ಪವಿತ್ರಾ ತಲೆಕೆಡಿಸಿಕೊಂಡವರಲ್ಲ. ಆದರೆ ಸ್ವಲ್ಪ ದಿನಗಳ ಬಳಿಕ ಎಲ್ಲಾ ಫೋಟೋಗಳು ಪವಿತ್ರಾ ಗೌಡ ಖಾತೆಯಿಂದ ಡಿಲೀಟ್ ಆಗಿದ್ದವು. ದಿಢೀರ್ ಅಂತ ಫೋಟೋಗಳು ಮಾಯವಾಗಿದ್ದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. ಇಬ್ಬರ ನಡುವಿನ ಆಪ್ತತೆ ಮುರಿದು ಬಿತ್ತಾ? ಎನ್ನುವ ಮಾತುಗಳು ಕೇಳಿಬರುತ್ತಿತ್ತು.

ರೂಪದರ್ಶಿ, ನಟಿ ಪವಿತ್ರಾ ಗೌಡ

ರೂಪದರ್ಶಿ, ನಟಿ ಪವಿತ್ರಾ ಗೌಡ

ಇದೀಗ ಎರಡು ವರ್ಷಗಳ ಬಳಿಕ ಮತ್ತೆ ಪವಿತ್ರಾ ಗೌಡ ಹೆಸರು ಜೋರಾಗಿ ಕೇಳಿಬರುತ್ತಿದೆ. ಅಷ್ಟಕ್ಕೂ ಪವಿತ್ರಾ ಗೌಡ ಯಾರು? ದರ್ಶನ್ ಜೊತೆ ಈ ಹೆಸರು ತಳಕುಹಾಕಿಕೊಂಡಿದ್ದು ಹೇಗೆ? ಪವಿತ್ರಾ ಗೌಡ ರೂಪದರ್ಶಿ ಮತ್ತು ನಟಿ. ಸಿನಿಮಾ ಮತ್ತು ಕಿರುತೆರೆಯಲ್ಲೂ ಮಿಂಚಿದ್ದಾರೆ. ಇವರಿಗೆ ಒಬ್ಬಳು ಹೆಣ್ಣುಮಗಳಿದ್ದಾಳೆ.

ಪವಿತ್ರಾ ಗೌಡ ಸಿನಿಮಾಗಳು

ಪವಿತ್ರಾ ಗೌಡ ಸಿನಿಮಾಗಳು

ಅಗಮ್ಯಾ, ಛತ್ರಿಗಳು ಸಾರ್ ಛತ್ರಿಗಳು, ಸಾಗುವ ದಾರಿ, ಪ್ರೀತಿ ಕಿತಾಬು ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾಗಳು ಹೇಳಿಕೊಳ್ಳುವಷ್ಟು ಹೆಸರು, ಯಶಸ್ಸು ತಂದುಕೊಟ್ಟಿಲ್ಲ. ಪವಿತ್ರಾ ಸಿನಿಮಾಗಿಂತ ಹೆಚ್ಚಾಗಿ ದರ್ಶನ್ ವಿಚಾರವಾಗಿಯೇ ಖ್ಯಾತಿಗಳಿಸಿದವರು.

ಮದುವೆಯಾಗಿ ಮಗಳಿದ್ದಾಳೆ

ಮದುವೆಯಾಗಿ ಮಗಳಿದ್ದಾಳೆ

ಪವಿತ್ರಾ ಗೌಡ ಅವರಿಗೆ ಈಗಾಗಲೇ ಮದುವೆಯಾಗಿದೆ. ಖುಷಿ ಎನ್ನುವ ಒಬ್ಬಳು ಮಗಳು ಕೂಡ ಇದ್ದಾಳೆ. ಪವಿತ್ರಾ ಪತಿಯಿಂದ ದೂರ ಆಗಿ ಅನೇಕ ವರ್ಷಗಳಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಸದ್ಯ ದರ್ಶನ್ ಜೊತೆ ಪವಿತ್ರಾ ಗೌಡ ಹೆಸರು ಜೋರಾಗಿ ಕೇಳಿಬರುತ್ತಿದೆ.

Recommended Video

ದರ್ಶನ್ ಬೆಂಬಲಕ್ಕೆ ನಿಂತ ಜೀವದ ಗೆಳೆಯರು
ಹೋಟೆಲ್ ಗಲಾಟೆಯಲ್ಲಿ ಇದ್ರಾ ಪವಿತ್ರಾ ಗೌಡ?

ಹೋಟೆಲ್ ಗಲಾಟೆಯಲ್ಲಿ ಇದ್ರಾ ಪವಿತ್ರಾ ಗೌಡ?

ಇತ್ತೀಚಿಗೆ ಮೈಸೂರಿನ ಸಂದೇಶ ನಾಗರಾಜ್ ಹೋಟೆಲ್‌ನಲ್ಲಿ ನಡೆದ ಗಲಾಟೆ ಸಮಯದಲ್ಲಿ ಪವಿತ್ರಾ ಗೌಡ ಸಹ ಇದ್ದರೂ ಎಂದು ನಿರ್ದೇಶಕ ಇಂದ್ರಜಿತ್ ಬಹಿರಂಗ ಪಡಿಸಿದ್ದಾರೆ. ದರ್ಶನ್ ಸ್ನೇಹಿತರ ಜೊತೆ ಪವಿತ್ರಾ ಗೌಡ ಹೋಟೆಲ್ ನಲ್ಲಿದ್ದರು ಎಂದು ಇಂದ್ರಜಿತ್ ಆರೋಪಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಸೈಲೆಂಟ್ ಆಗಿದ್ದ ಪವಿತ್ರಾ ಗೌಡ ಹೆಸರು ಇದೀಗ ಮತ್ತೆ ಸದ್ದು ಮಾಡುತ್ತಿದೆ. ಅಷ್ಟಕ್ಕೂ ದರ್ಶನ್ ಜೊತೆ ಪವಿತ್ರಾ ಗೌಡ ಹೆಸರು ಪದೇ ಪದೇ ಯಾಕೆ ಕೇಳಿಬರುತ್ತಿದೆ ಎನ್ನುವ ಸತ್ಯವನ್ನು ಅವರೇ ಬಹಿರಂಗ ಪಡಿಸಬೇಕಿದೆ.

More from Filmibeat

English summary
Who is this Pavithra Gowda heard in Actor Darshan Controversy?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X