twitter
    For Quick Alerts
    ALLOW NOTIFICATIONS  
    For Daily Alerts

    ಭವಿಷ್ಯದ 'ಲೀಡರ್ಸ್' ಆಗಲು ಈ ಮೂರು ಯಂಗ್ ಸ್ಟಾರ್ ರೆಡಿ!

    |

    Recommended Video

    ತ್ರಿಮೂರ್ತಿಗಳ ಬಳಿಕ ಕನ್ನಡ ಚಿತ್ರರಂಗ ಆಳೋದು ಇವರೆ..? | 3 stars | Puneeth | Sudeep | Darshan

    ಕನ್ನಡ ಚಿತ್ರರಂಗಕ್ಕೆ ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಅಂತಹ ದಿಗ್ಗಜರು ದಾರಿ ಹಾಕಿಕೊಟ್ಟವರು. ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್, ಉಪೇಂದ್ರ ಅಂತಹ ಕಲಾವಿದರು ಆ ದಾರಿಯಲ್ಲಿ ಸಾಗಿ ಯಶಸ್ಸು ಕಂಡವರು.

    ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ಇಂಡಸ್ಟ್ರಿಯನ್ನು ಆಳುತ್ತಿದ್ದಾರೆ. ಈಗ ಇಂಡಸ್ಟ್ರಿಯವರಿಗೆ ಇವರ ಹಿರಿಯ ಕಲಾವಿದರು ಎನಿಸಿಕೊಳ್ಳುತ್ತಿದ್ದಾರೆ.

    ಮಂಡ್ಯ ಎಫೆಕ್ಟ್: ಒಂದೇ ಚಿತ್ರದಲ್ಲಿ ದರ್ಶನ್-ಯಶ್ ನಟನೆ.!ಮಂಡ್ಯ ಎಫೆಕ್ಟ್: ಒಂದೇ ಚಿತ್ರದಲ್ಲಿ ದರ್ಶನ್-ಯಶ್ ನಟನೆ.!

    ಈ ತ್ರಿವಳಿ ಸ್ಟಾರ್ ಗಳ ಬಳಿಕ ಭವಿಷ್ಯದ ಕನ್ನಡ ಇಂಡಸ್ಟ್ರಿಯನ್ನು ಯಾರು ಮುನ್ನಡೆಸಬಹುದು ಎಂಬ ಪ್ರಶ್ನೆ ಕಾಡುವುದು ಸಹಜ. ಅದಕ್ಕೆ ಇಂಡಸ್ಟ್ರಿಯಲ್ಲಿ ಉತ್ತರವೂ ಸಿಕ್ಕಿದೆ ಎನ್ನಲಾಗಿದೆ. ಮೂರು ಜನ ಯಂಗ್ ಸ್ಟಾರ್ ಗಳು ಸ್ಯಾಂಡಲ್ ವುಡ್ ಮುನ್ನಡೆಸಲು ಸಜ್ಜಾಗಿದ್ದಾರಂತೆ. ಯಾರು ಆ ಮೂವರು? ಮುಂದೆ ಓದಿ....

    ಎರಡು ದಶಕಕ್ಕೆ ಇವರೇ 'ಬಾಸ್'

    ಎರಡು ದಶಕಕ್ಕೆ ಇವರೇ 'ಬಾಸ್'

    2000ರಲ್ಲಿ 'ಸ್ಪರ್ಶ' ಚಿತ್ರದಿಂದ ಸುದೀಪ್, 2002ರಲ್ಲಿ 'ಮೆಜಿಸ್ಟಿಕ್' ಚಿತ್ರದಿಂದ ದರ್ಶನ್, 2002ರಲ್ಲಿ 'ಅಪ್ಪು' ಚಿತ್ರದ ಪುನೀತ್ ಹೀರೋಗಳಾಗಿ ಪರಿಚಯವಾದರು. ಅಲ್ಲಿಂದ ಇಲ್ಲಿಯವರೆಗೂ ಈ ಮೂವರು ಸ್ಯಾಂಡಲ್ ವುಡ್ ಇಂಡಸ್ಟ್ರಿ ರೂಲ್ ಮಾಡ್ತಿದ್ದಾರೆ. ಸುಮಾರು ಎರಡು ದಶಕ ಕನ್ನಡ ಚಿತ್ರರಂಗ ಆಳಿದ ಖ್ಯಾತಿ ಇವರದ್ದೇ. ಈ ನಟರ ವಯಸ್ಸು ಬಹುತೇಕ 42-45 ದಾಟಿದೆ. ಈ ನಟರ ಬಳಿಕ ಇಂಡಸ್ಟ್ರಿ ರೂಲ್ ಮಾಡುವ, ಮುನ್ನಡೆಸುವ ಅಥವಾ ಭವಿಷ್ಯ ಲೀಡರ್ಸ್ ಯಾರಾಗಬಹುದು ಎಂಬ ಚರ್ಚೆ ಚಾಲ್ತಿಯಲ್ಲಿದೆ.

    ರಾಕಿ ಭಾಯ್ ಗೆ ವೋಟ್!

    ರಾಕಿ ಭಾಯ್ ಗೆ ವೋಟ್!

    ಸುದೀಪ್, ಪುನೀತ್, ದರ್ಶನ್ ಅವರ ಮಟ್ಟಕ್ಕೆ ಕ್ರೇಜ್, ಫ್ಯಾನ್ಸ್ ಹೊಂದಿರುವ ನಟ ಯಶ್ ಚಿತ್ರರಂಗಕ್ಕೆ ಭವಿಷ್ಯದ ಸ್ಟಾರ್ ಹಾಗೂ ಲೀಡರ್ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕೆಜಿಎಫ್ ಸಿನಿಮಾ ಬಳಿಕ ದೇಶದ ಗಮನ ತನ್ನತ್ತ ಸೆಳೆದುಕೊಂಡಿರುವ ಯಶ್ ಸ್ಯಾಂಡಲ್ ವುಡ್ ರೂಲ್ ಮಾಡಲಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಮುಂದಿನ ಜನರೇಷನ್ ಕಲಾವಿದರಿಗೆ ಯಶ್ ನಾಯಕತ್ವ ವಹಿಸಿದರೂ ಅಚ್ಚರಿ ಇಲ್ಲ.

    ಈ 4 ಸ್ಟಾರ್ ಗಳು ನ್ಯಾಷನಲ್ ಲೆವೆಲ್ ಗೆ ಹೋಗಲು ಈ 4 ಸಿನಿಮಾಗಳೆ ಕಾರಣಈ 4 ಸ್ಟಾರ್ ಗಳು ನ್ಯಾಷನಲ್ ಲೆವೆಲ್ ಗೆ ಹೋಗಲು ಈ 4 ಸಿನಿಮಾಗಳೆ ಕಾರಣ

    ಅಂಬರೀಶ್ ಜೊತೆಯಲ್ಲಿ ಯಶ್

    ಅಂಬರೀಶ್ ಜೊತೆಯಲ್ಲಿ ಯಶ್

    ಅಂಬರೀಶ್ ಒಂದು ರೀತಿ ಯಶ್ ಗೆ ಮಾರ್ಗದರ್ಶಕರಾಗಿದ್ದರು. ನಂತರ ಸುದೀಪ್, ದರ್ಶನ್, ಪುನೀತ್, ಶಿವಣ್ಣ ಹೀಗೆ ಸ್ಟಾರ್ ನಟರ ಜೊತೆ ಬೆಳೆದ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಸದ್ಯಕ್ಕೆ ಯಶ್ ಅವರ ಸಿನಿಮಾಗಳು, ಡೆಡಿಕೇಷನ್, ಅವರ ಸ್ವಭಾವ, ಹೊಸಬರಿಗೆ ನೀಡುತ್ತಿರುವ ಪ್ರೋತ್ಸಾಹ ಇದೆಲ್ಲವೂ ಯಶ್ ಭವಿಷ್ಯ ಹೀಗೆ ಇರುತ್ತೆ ಎಂದು ಹೇಳುತ್ತಿದೆ.

    ಅಂಬರೀಶ್ ನೀಡಿದ ಉಡುಗೊರೆ ಬಗ್ಗೆ ಯಶ್ ಭಾವುಕ ನುಡಿಅಂಬರೀಶ್ ನೀಡಿದ ಉಡುಗೊರೆ ಬಗ್ಗೆ ಯಶ್ ಭಾವುಕ ನುಡಿ

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

    ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

    ದರ್ಶನ್, ಸುದೀಪ್, ಪುನೀತ್ ಗಳು ಬರ್ತಿದೆ ಅಂದ್ರೆ ಅದ್ಹೇಗೆ ಗಾಂಧಿನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತೋ ಅದೇ ರೀತಿ ಧ್ರುವ ಸರ್ಜಾ ಚಿತ್ರಗಳಿಗೆ ಓಪನಿಂಗ್ ಸಿಗ್ತಿದೆ. ಅಭಿಮಾನಿಗಳ ಸಂಖ್ಯೆ ಕೂಡ ದಿನದಿಂದ ಹೆಚ್ಚಾಗಿದೆ. ಮಾಡಿರುವುದು ಮೂರೇ ಸಿನಿಮಾ, ಮೂರಕ್ಕೂ ಮೂರು ಹಿಟ್. ಕಲೆಕ್ಷನ್, ಬಜೆಟ್, ಹಾಗೂ ಸಂಭಾವನೆ ವಿಚಾರದಲ್ಲೂ ಧ್ರುವ ಪವರ್ ಫುಲ್ ಎಂದು ಸಾಬೀತು ಮಾಡಿದ್ದಾರೆ. ಧ್ರುವ ಕ್ರೇಜ್ ನೋಡಿದ್ರೆ ದರ್ಶನ್, ಸುದೀಪ್, ಪುನೀತ್ ಅವರಂತೆ ಮುಂದಿನ ದಿನಗಳಲ್ಲಿ ಕ್ರೇಜ್ ನೋಡಬಹುದು. ಮಾಸ್ ಆಡಿಯೆನ್ಸ್ ಪಾಲಿಗೆ ಧ್ರುವ 'ಬಾಸ್' ಆಗಬಹುದು.

    ನಿಖಿಲ್ ಮೇಲೆ ಹೆಚ್ಚಿದ ಭರವಸೆ

    ನಿಖಿಲ್ ಮೇಲೆ ಹೆಚ್ಚಿದ ಭರವಸೆ

    ಜಾಗ್ವಾರ್, ಸೀತಾರಾಮ ಕಲ್ಯಾಣ ಅಂತಹ ಸಿನಿಮಾ ಮಾಡಿದ ನಿಖಿಲ್ ಕುಮಾರ್ ಮೇಲೆ ಭರವಸೆ ಹೆಚ್ಚಿದೆ. ಸಿನಿಮಾದ ಮೇಲೆ ನಿಖಿಲ್ ಗೆ ಇರುವ ಡೆಡಿಕೇಷನ್, ಪ್ಯಾಷನ್ ಬಗ್ಗೆ ಪಾಸಿಟೀವ್ ಟಾಕ್ ಇದೆ. ಆ ಕಡೆ ರಾಜಕೀಯವಾಗಿಯೂ ನಿಖಿಲ್ ಗುರುತಿಸಿಕೊಂಡಿದ್ದು ಹಾಗೂ ವೈಯಕ್ತಿಕ ವಿಚಾರಗಳನ್ನು ಸ್ವೀಕರಿಸಿರುವ ರೀತಿ, ಅದಕ್ಕೆ ಪ್ರತಿಕ್ರಿಯೆ ನೀಡುವ ವಿಚಾರದಲ್ಲಿ ತೋರುವ ಜಾಣ್ಮೆ ಇದೆಲ್ಲವೂ ನಿಖಿಲ್ ಮೇಲೆ ನಂಬಿಕೆ ಹುಟ್ಟಿಸಿದೆ.

    English summary
    After Darshan, sudeep, puneeth rajkumar, who will lead the kannada film industry in future.
    Friday, February 14, 2020, 13:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X