For Quick Alerts
  ALLOW NOTIFICATIONS  
  For Daily Alerts

  ಬ್ಲೂ ಫಿಲಂ ಕೇಸಲ್ಲಿ ಜೈಲು ಸೇರಿದ್ದ ಸುಮನ್: ಬಲೆ ಹೆಣೆದಿದ್ದು ಯಾರು?

  |

  ನಟ ಸುಮನ್ ಈಗ ಬಹುಬೇಡಿಕೆಯ ಪೋಷಕ ನಟ. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಈಗಲೂ ಬೇಡಿಕೆಯಲ್ಲಿದ್ದಾರೆ. ಈಗ ಪೋಷಕ ನಟ ಆಗಿರುವ ಸುಮನ್ ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಬ್ಯುಸಿ ನಾಯಕ ನಟ. ಮೆಗಾಸ್ಟಾರ್ ಚಿರಂಜೀವಿ, ರಜನೀಕಾಂತ್‌ಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಸುಮನ್.

  ಹೌದು, 80 ರ ದಶಕದಲ್ಲಿ ಸುಮನ್ ಅನ್ನು ಮೀರಿಸುವ ನಟ ತೆಲುಗು-ತಮಿಳಿನಲ್ಲಿ ಇರಲಿಲ್ಲ. ವರ್ಷವೊಂದಕ್ಕೆ ಹತ್ತು-ಹದಿನೈದು ಸಿನಿಮಾಗಳಿಗೆ ಸಹಿ ಹಾಕುತ್ತಿದ್ದರು. ಸಿನಿಮಾ ಒಂದಕ್ಕೆ ಆ ಕಾಲದಲ್ಲಿಯೇ 5 ಲಕ್ಷಕ್ಕೂ ಹೆಚ್ಚು ಸಂಭಾವನೆ ಪಡೆದಿದ್ದರು. ಸುಮನ್ ಐದು ಲಕ್ಷ ಸಂಭಾವನೆ ಪಡೆವ ವೇಳೆಗೆ ಮೆಗಾಸ್ಟಾರ್ ಚಿರಂಜೀವಿ ಪಡೆಯುತ್ತಿದ್ದಿದ್ದು ಒಂದು ಲಕ್ಷ ಸಂಭಾವನೆ ಅಷ್ಟೆ.

  ಸುಮನ್ ಬಹಳ ಜೋರಿನಲ್ಲಿರುವಾಗಲೆ ಭಾರಿ ದೊಡ್ಡ ತಡೆಯೊಂದು ಅವರ ವೃತ್ತಿ ಜೀವನಕ್ಕೆ ಎದುರಾಯಿತು. 1985 ರ ಮೇ 18ನೇ ತಾರೀಖಿನಂದು ಸುಮನ್ ಮನೆಗೆ ಅರ್ಧರಾತ್ರಿ ನುಗ್ಗಿದ ಪೊಲೀಸರು ಏನೋ ಸುಳ್ಳು ನೆಪ ಹೇಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ರಾತ್ರಿಯೆಲ್ಲ ಅವರನ್ನು ಅಲ್ಲಿಯೇ ಇರಿಸಿಕೊಂಡು ಮಾರನೇಯ ದಿನ ಬಂಧಿಸಿ ಜೈಲಿಗಟ್ಟಿದ್ದರು. ಇದು ಸ್ವತಃ ಸುಮನ್‌ಗೆ, ಅವರ ಅಭಿಮಾನಿಗಳಿಗೆ, ತೆಲುಗು, ತಮಿಳು ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯಾಗಿತ್ತು.

  ಬ್ಲೂ ಫಿಲಂ ನಿರ್ಮಿಸುತ್ತಿದ್ದ ನಟ ಸುಮನ್?

  ಬ್ಲೂ ಫಿಲಂ ನಿರ್ಮಿಸುತ್ತಿದ್ದ ನಟ ಸುಮನ್?

  ಪೊಲೀಸರು ಸುಮನ್ ಮೇಲೆ ಬಹಳ ಗಂಭೀರವಾದ ಗೂಂಡಾ ಆಕ್ಟ್ ಹೇರಿದ್ದರು. ಕಠಿಣ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ನಟ ಸುಮನ್ ಬ್ಲೂ ಫಿಲಂಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದೇ ಪ್ರಕರಣದಲ್ಲಿ ಇನ್ನೂ ಕೆಲವರನ್ನು ಬಂಧಿಸಲಾಗಿತ್ತು. ಪೊಲೀಸರು ಸಾಕ್ಷ್ಯವಾಗಿ ನೀಡಿದ್ದ ಬ್ಲೂ ಫಿಲಂ ಒಂದರಲ್ಲಿ ಸುಮನ್‌ಗೆ ಸೇರಿದ ಕಾರು ಇತ್ತು. ಇದು ಸುಮನ್‌ ಮೇಲೆ ಅನುಮಾನ ಹೆಚ್ಚುವಂತೆ ಮಾಡಿತ್ತು.

  ಬ್ಲೂ ಫಿಲಂನಲ್ಲಿ ಸುಮನ್ ಕಾರು

  ಬ್ಲೂ ಫಿಲಂನಲ್ಲಿ ಸುಮನ್ ಕಾರು

  ಸುಮನ್ ಗೆಳೆಯ ದಿವಾಕರ್ ಎಂಬಾತ ಸಿನಿಮಾ ಕ್ಯಾಸೆಟ್‌ ಮಾರುವ ಅಂಗಡಿ ಇಟ್ಟಿದ್ದ. ಸುಮನ್ ಆಗಾಗ್ಗೆ ಅಲ್ಲಿಂದ ವಿಸಿಆರ್ ಪಡೆಯುತ್ತಿದ್ದರು. ಸುಮನ್ ಬಳಿ ಹಲವು ಕಾರುಗಳು ಇದ್ದ ಕಾರಣ ಒಂದು ಕಾರನ್ನು ತನ್ನ ಬಳಕೆಗೆ ಕೇಳಿ ಪಡೆದುಕೊಂಡಿದ್ದ ದಿವಾಕರ್. ಇದೇ ದಿವಾಕರ್ ಬ್ಲೂ ಫಿಲಂ ನಿರ್ಮಾಣ ದಂಧೆ ಮಾಡುತ್ತಿದ್ದ. ಆತನನ್ನು ಬಂಧಿಸಿದಾಗ ತಾನು ಬಚಾವಾಗಲು ಸುಮನ್ ಹೆಸರನ್ನೂ ಹೇಳಿದ್ದ. ಅಷ್ಟೇ ಅಲ್ಲದೆ ಆತ ತೆಗೆದ ಬ್ಲೂ ಫಿಲಂನಲ್ಲಿ ಸುಮನ್ ಕಾರು ಸಹ ಇದ್ದದ್ದು ಪೊಲೀಸರಿಗೆ ದೊಡ್ಡ ಸಾಕ್ಷ್ಯವನ್ನೇ ಒದಗಿಸಿತ್ತು.

  ಕರುಣಾನಿಧಿ ಸಹ ಅದೇ ಜೈಲಿನಲ್ಲಿದ್ದರು

  ಕರುಣಾನಿಧಿ ಸಹ ಅದೇ ಜೈಲಿನಲ್ಲಿದ್ದರು

  ಜಾಮೀನುರಹಿತ ಗೋಂಡಾ ಆಕ್ಟ್‌ನಲ್ಲಿ ಸುಮನ್ ಜೈಲು ಸೇರಿದರು. ಅವರನ್ನು ತೀವ್ರ ಅಪರಾಧಿಗಳನ್ನು ಇಡಲಾಗುವ ಸೆಲ್‌ನಲ್ಲಿ ಇಡಲಾಗಿತ್ತು. ಅದೇ ಸಮಯದಲ್ಲಿ ರಾಜಕೀಯ ಸಂಬಂಧಿತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅದೇ ಜೈಲಿನಲ್ಲಿ ಇದ್ದರು. ಅವರು ಪೊಲೀಸರಿಗೆ ಹೇಳಿ ಸುಮನ್‌ರನ್ನು ಜನರಲ್ ಸೆಲ್‌ಗೆ ವರ್ಗಾಯಿಸಿದ್ದರು.

  ಬಂಧನವಾದ ಐದು ತಿಂಗಳ ಬಳಿಕ ಜಾಮೀನು

  ಬಂಧನವಾದ ಐದು ತಿಂಗಳ ಬಳಿಕ ಜಾಮೀನು

  ಗೂಂಡಾ ಕಾಯ್ದೆಯಲ್ಲಿ ಬಂಧಿತವಾದವರು ಒಂದು ವರ್ಷ ಜೈಲಿನಿಂದ ಹೊರಗೆ ಬರುವುದು ಅಸಾಧ್ಯ ಎಂಬಂಥಹಾ ಕಾಲವದು. ಆದರೆ ಸುಮನ್ ತಮಿಳುನಾಡಿನ ಅತ್ಯುತ್ತಮ ಲಾಯರ್ ಜಿಆರ್‌ ಎಂಬವರನ್ನು ಹಿಡಿದು ಕರೆತಂದರು. ಪ್ರಕರಣದ ಪೂರ್ಣ ಮಾಹಿತಿ ಪಡೆದ ಜಿಆರ್‌ ಎಫ್‌ಐಆರ್‌ನಲ್ಲಿ ಇದ್ದ ಹುಳುಕುಗಳು, ಸುಮನ್‌ರನ್ನು ಬಂಧಿಸಿ ತಿಂಗಳುಗಳಾದರೂ ಚಾರ್ಜ್‌ಶೀಟ್ ಫೈಲ್ ಮಾಡದೇ ಇದ್ದ ವಿಷಯಗಳನ್ನೆಲ್ಲಾ ನ್ಯಾಯಾಲಯದ ಮುಂದೆ ವಾದಿಸಿ ಬಂಧನವಾದ ಐದು ತಿಂಗಳ ಬಳಿಕ ಸುಮನ್‌ಗೆ ಷರತ್ತುಬದ್ಧ ಜಾಮೀನು ಕೊಡಿಸಿದರು.

  ಕಠಿಣವಾದ ಷರತ್ತುಗಳನ್ನು ವಿಧಿಸಿದ್ದ ನ್ಯಾಯಾಲಯ

  ಕಠಿಣವಾದ ಷರತ್ತುಗಳನ್ನು ವಿಧಿಸಿದ್ದ ನ್ಯಾಯಾಲಯ

  ನ್ಯಾಯಾಲಯ ಜಾಮೀನು ನೀಡಿತಾದರೂ ಸುಮನ್ ಎವಿಎಂ ಸ್ಟುಡಿಯೋಕ್ಕೆ ಬಿಟ್ಟು ಇನ್ನೆಲ್ಲೂ ಹೋಗುವಂತಿರಲಿಲ್ಲ. ಒಂದು ವರ್ಷ ಪ್ರತಿದಿನ ಪೊಲೀಸ್ ಠಾಣೆಗೆ ಹೋಗುವುದು ಅಲ್ಲಿಂದ ಎವಿಎಂ ಸ್ಟುಡಿಯೋಕ್ಕೆ ಹೋಗುವುದು ಇಷ್ಟೇ ಮಾಡಿದ್ದರು. ಅವರು ಒಪ್ಪಿಕೊಂಡಿದ್ದ ಬಹುತೇಕ ಎಲ್ಲ ಸಿನಿಮಾಗಳು ಆ ಅವಧಿಯಲ್ಲಿ ಎವಿಎಂನಲ್ಲಿಯೇ ಚಿತ್ರೀಕರಣವಾದವು. ಆ ಅವಧದಿಯಲ್ಲೂ ಸುಮನ್‌ ಹಲವು ಹಿಟ್ ಸಿನಿಮಾಗಳನ್ನು ನೀಡಿದರು. ಆ ಸಮಯದಲ್ಲಿ ಹೆಚ್ಚು-ಹೆಚ್ಚು ತೆಲುಗು ಸಿನಿಮಾಗಳಲ್ಲಿಯೇ ನಟಿಸಿದರು ಸುಮನ್.

  ಮೆಗಾಸ್ಟಾರ್ ಚಿರಂಜೀವಿ, ರಜನೀಕಾಂತ್‌ ಮೇಲೆ ಆರೋಪ

  ಮೆಗಾಸ್ಟಾರ್ ಚಿರಂಜೀವಿ, ರಜನೀಕಾಂತ್‌ ಮೇಲೆ ಆರೋಪ

  ಸುಮನ್ ಜೈಲಿಗೆ ಹೋದ ಸಂದರ್ಭದಲ್ಲಿ ಆಗಿನ ಟಾಪ್ ನಟಿಯರಾದ ಸುಹಾಸಿನಿ, ಸುಮಲತಾ ಇನ್ನೂ ಕೆಲವರು ಸುಮನ್‌ ಪರವಾಗಿ ಹೇಳಿಕೆಗಳನ್ನು ನೀಡಿದರು. ಆದರೆ ಜನರೆಲ್ಲ ಮೆಗಾಸ್ಟಾರ್ ಚಿರಂಜೀವಿ ಅವರೇ ತಂತ್ರ ಮಾಡಿ ಸುಮನ್ ಅನ್ನು ಜೈಲಿಗೆ ಅಟ್ಟಿದ್ದಾರೆ ಎಂದು ಮಾತನಾಡಿಕೊಂಡರು. ರಜನೀಕಾಂತ್ ಮೇಲೆಯೂ ಇದೇ ಮಾದರಿಯ ಆರೋಪ ಬಂದಿತ್ತು. ಆಗಿನ ಸಂದರ್ಭದಲ್ಲಿ ಕೆಲವು ಪತ್ರಿಕೆಗಳು ಸಹ ಇದನ್ನೇ ಬರೆದವು. ಇತ್ತೀಚಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸುಮನ್, 'ನನ್ನ ಮ್ಯಾನೇಜರ್‌ ಹಾಗೂ ಇತರರು ಹೇಳುತ್ತಿರುತ್ತಾರೆ ಕೆಲವರು ನಿಮ್ಮ ವಿರುದ್ಧ ತಂತ್ರ ಮಾಡಿದರೆಂದು. ಆದರೆ ಅದನ್ನು ನಿರೂಪಿಸಲು ನನ್ನ ಬಳಿ ಸಾಕ್ಷ್ಯವಿಲ್ಲ ಹಾಗಾಗಿ ಅಂಥಹಾ ಸುದ್ದಿಗಳನ್ನು ನಾನು ಅಲ್ಲಗಳೆಯುತ್ತೇನೆ' ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟರು.

  ಶಂಖನಾದ ಅರವಿಂದ್ ಸಾವಿಗೆ ಭಾವುಕರಾದ ಪುನೀತ್ ರಾಜಕುಮಾರ್ | Filmibeat Kannada
  ಸಾಕ್ಷ್ಯ ಕೊರತೆಯಿಂದ ಹೆಸರು ಕೈಬಿಡಲಾಯಿತು

  ಸಾಕ್ಷ್ಯ ಕೊರತೆಯಿಂದ ಹೆಸರು ಕೈಬಿಡಲಾಯಿತು

  ಪ್ರಕರಣ ದಾಖಲಾಗಿ ನಾಲ್ಕು ವರ್ಷಗಳ ನಂತರ ಸುಮನ್ ಅವರ ಹೆಸರನ್ನು ಸಾಕ್ಷ್ಯಗಳ ಕೊರತೆಯಿಂದಾಗಿ ಪ್ರಕರಣದಿಂದ ಕೈಬಿಡಲಾಯಿತು. ಇತರ ಕೆಲವು ಆರೋಪಿಗಳಿಗೆ ಶಿಕ್ಷೆಯಾಯಿತು. ಜೈಲುವಾಸವಾದ ಬಳಿಕವೂ ಸುಮನ್ ಅವರ ಸ್ಟಾರ್‌ಗಿರಿ ಕಡಿಮೆಯೇನೂ ಆಗಲಿಲ್ಲ. ಆದರೆ ಆ ನಂತರ ಚಿರಂಜೀವಿ, ತಮಿಳಿನಲ್ಲಿ ರಜನೀಕಾಂತ್, ಕಮಲ್ ಹಾಸನ್ ಅವರುಗಳೆಲ್ಲ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಲೂ ಸುಮನ್‌ಗೆ ನಾಯಕ ನಟನ ಪಾತ್ರಗಳು ಕಡಿಮೆಯಾಗುತ್ತಾ ಬಂದವು. ಆದರೆ ಈಗಲೂ ಅವರು ಬಹಳ ಬ್ಯುಸಿ ಪೋಷಕ ನಟ.

  English summary
  Actor Suman went to jail in 1985 he spent 5 months in jail then got bail. Who did conspiracy in that incident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X