ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತದಲ್ಲಿ ಓಡುವುದಿಲ್ಲ ಏಕೆ?

ದಕ್ಷಿಣ ಭಾರತದ ಸಿನಿಮಾಗಳು ಹಿಂದಿ ಭಾಷಿಕ ಪ್ರದೇಶದಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸುತ್ತಿವೆ. ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತ ಸಿನಿಮಾಗಳು ಮುಂದೆ ಮಕಾಡೆ ಮಲಗಿವೆ. ಬಾಲಿವುಡ್‌ ತನ್ನ ಏಕಸ್ವಾಮ್ಯತೆ ಇದ್ದ ಏರಿಯಾದ ಹಿಡಿತವನ್ನು ನಿಧಾನಕ್ಕೆ ಕಳೆದುಕೊಳ್ಳುತ್ತಿದೆ.

ಸಹಜವಾಗಿಯೇ ಇದು ಬಾಲಿವುಡ್ಡಿಗರಲ್ಲಿ ಆತಂಕ ಮೂಡಿಸಿದೆ, ಕೆಲವು ದಿನಗಳ ಹಿಂದೆಯಷ್ಟೆ ಇದೇ ವಿಷಯವಾಗಿ ಮಾತನಾಡಿದ್ದ ನಟ ಸಲ್ಮಾನ್ ಖಾನ್, ''ದಕ್ಷಿಣದ ಸಿನಿಮಾಗಳು ಇಲ್ಲಿ ಸೂಪರ್ ಹಿಟ್ ಆಗುತ್ತಿವೆ, ನಮ್ಮ ಸಿನಿಮಾಗಳೇಕೆ ದಕ್ಷಿಣ ಭಾರತದಲ್ಲಿ ಚೆನ್ನಾಗಿ ಪ್ರದರ್ಶನ ಕಾಣುವುದಿಲ್ಲ'' ಎಂದು ಅಸಮಾಧಾನಭರಿತ ಅನುಮಾನವನ್ನು ವ್ಯಕ್ತಪಡಿಸಿದ್ದರು.

ಸಲ್ಮಾನ್ ಖಾನ್ ಎತ್ತಿರುವ ಪ್ರಶ್ನೆ ಬಹುತೇಕ ಬಾಲಿವುಡ್ ಸ್ಟಾರ್ ನಟರ, ನಿರ್ಮಾಪಕರ ಪ್ರಶ್ನೆಯೂ ಹೌದು, ಬಾಲಿವುಡ್ ಸಿನಿಮಾಗಳು ದಕ್ಷಿಣ ಭಾರತದಲ್ಲಿ ಚೆನ್ನಾಗಿ ಪ್ರದರ್ಶನ ಕಾಣುವುದಿಲ್ಲ ಏಕೆ ಎಂಬುದಕ್ಕೆ ಒಂದು ನೇರ ಉತ್ತರವಿಲ್ಲ.

ಮೊದಲಿಗೆ ಭಾಷೆಯ ಸಮಸ್ಯೆ

ಮೊದಲಿಗೆ ಭಾಷೆಯ ಸಮಸ್ಯೆ

ಬಾಲಿವುಡ್ ಸಿನಿಮಾಗಳು ದಕ್ಷಿಣದಲ್ಲಿ ಓಡದೇ ಇರಲು ಮೊದಲ ಕಾರಣ ಭಾಷೆ. ದಕ್ಷಿಣ ಭಾರತದ ಜನರಿಗೆ ಹಿಂದಿ ಅಷ್ಟಕ್ಕಷ್ಟೆ. ದಕ್ಷಿಣ ಭಾರತದಲ್ಲಿ ಸಾಮಾನ್ಯ ವರ್ಗದ ಜನ ಹೆಚ್ಚಾಗಿ ಸಿನಿಮಾ ನೋಡುತ್ತಾರೆ. ಕಾರ್ಪೊರೇಟ್ ಜನ ಚಿತ್ರಮಂದಿರಗಳಿಗೆ ಬರುವುದು ಕಡಿಮೆ. ಸಾಮಾನ್ಯ ಜನರಿಗೆ ಹಿಂದಿ ಅರ್ಥವಾಗುವುದಿಲ್ಲ. ಹಾಗಾಗಿ ಬಾಲಿವುಡ್‌ನ ಹಲವು ಸಿನಿಮಾಗಳು ದಕ್ಷಿಣ ಭಾರತದ ಚಿತ್ರಮಂದಿರಗಳನ್ನು ಸಹ ತಲುಪುವುದಿಲ್ಲ.

Recommended Video

'KGF 2' 14th Day Collection | ಭಾರತದ ಹೆಚ್ಚು ಗಳಿಕೆಯ ಸಿನಿಮಾ ಆಗತ್ತಾ KGF 2 ? | Yash | Prashanth Neel
ಬಾಲಿವುಡ್‌ನ ಗ್ಲಾಮರ್‌ ಅನ್ನು ಅರಗಿಸಿಕೊಳ್ಳುವುದು ಕಷ್ಟ

ಬಾಲಿವುಡ್‌ನ ಗ್ಲಾಮರ್‌ ಅನ್ನು ಅರಗಿಸಿಕೊಳ್ಳುವುದು ಕಷ್ಟ

ಬಾಲಿವುಡ್‌ನ ಸಿನಿಮಾಗಳ ಅತಿಯಾದ ಗ್ಲಾಮರ್, ಅತಿಯಾದ ರೊಮ್ಯಾನ್ಸ್ ಅನ್ನು ದಕ್ಷಿಣ ಭಾರತದ ಕೌಟುಂಬಿಕ ಮನಸ್ಥಿತಿಯ ಜನ ಅರಗಿಸಿಕೊಳ್ಳಲಾರರು. ದಕ್ಷಿಣ ಭಾರತದ ಸಿನಿಮಾಗಳಲ್ಲಿ ತೆರೆಯ ಮೇಲೆ ನಾಯಕ-ನಾಯಕಿಯ ಚುಂಬನದ ದೃಶ್ಯಗಳು ಕಾಣಿಸಿಕೊಳ್ಳುತ್ತಿರುವುದು ತೀರ ಇತ್ತೀಚೆಗೆ, ಅವನ್ನೂ ಪೂರ್ಣವಾಗಿ ಇಲ್ಲಿಯ ಪ್ರೇಕ್ಷಕ ಒಪ್ಪಿಕೊಂಡಿಲ್ಲ. ದಕ್ಷಿಣದ ಸಿನಿಮಾಗಳಲ್ಲಿ ಐಟಂ ಡ್ಯಾನ್ಸರ್‌ಗಿಂತಲೂ ಹೆಚ್ಚಿಗೆ ಗ್ಲಾಮರಸ್ ಉಡುಗೆಗಳನ್ನು ಬಾಲಿವುಡ್‌ನ ನಾಯಕಿಯರು ಧರಿಸಿರುತ್ತಾರೆ, ಸ್ವಿಮ್ ಸೂಟ್ ಕಾನ್ಸೆಪ್ಟ್ ಅಲ್ಲಿ ತೀರ ಸಾಮಾನ್ಯ, ಅಂಥಹುದ್ದೆಲ್ಲ ದಕ್ಷಿಣ ಭಾರತ ಸಿನಿಮಾಗಳಲ್ಲಿ ಕಾಣ ಸಿಗುವುದು ಬಹು ಅಪರೂಪ. ಅತಿಯಾದ ಗ್ಲಾಮರ್ ಅನ್ನು ಇಲ್ಲಿನ ಪ್ರೇಕ್ಷಕ ಒಪ್ಪಲಾರ.

ಬಾಲಿವುಡ್‌ ಕತೆಗಳು ತೀರಾ ಮಾಡರ್ನ್

ಬಾಲಿವುಡ್‌ ಕತೆಗಳು ತೀರಾ ಮಾಡರ್ನ್

ಬಾಲಿವುಡ್ ಸಿನಿಮಾಗಳ ಕತೆಗಳಲ್ಲಿನ ಬೋಲ್ಡ್‌ನೆಸ್ ಅಥವಾ ಪಾಶ್ಚಾತ್ಯ ಮಾದರಿ ದಕ್ಷಿಣದ ಪ್ರೇಕ್ಷಕರಿಗೆ ಪಚನವಾಗದು. ಸಲಿಂಗಕಾಮ, ಸಿಂಗಲ್ ಮದರ್, ವಿವಾಹೇತರ ಸಂಬಂಧ, ಅಂಡಾಣು ದಾನ, ವೃದ್ಧ-ಯುವತಿಯೊಂದಿಗೆ ಸಂಬಂಧ ಈ ವಿಷಯಗಳ ಮೇಲೆಲ್ಲ ಬಾಲಿವುಡ್‌ನಲ್ಲಿ ಸಿನಿಮಾ ಮಾಡಲಾಗಿದೆ. ಆದರೆ ದಕ್ಷಿಣ ಭಾರತದ ಸಾಮಾನ್ಯ ವರ್ಗದ ಪ್ರೇಕ್ಷಕನಿಗೆ ಈ ವಿಷಯಗಳು ಪಚನವಾಗುವುದಿಲ್ಲ. ದಕ್ಷಿಣ ಭಾರತದಲ್ಲಿ ನಾಯಕ ಎಂದರೆ ಆದರ್ಶ ಪುರುಷ, ನಾಯಕಿಯೂ ಅಷ್ಟೆ. ಹಾಗಾಗಿ ಇಂಥಹಾ ಕತೆಗಳೆಲ್ಲ ಇಲ್ಲಿನ ಪ್ರೇಕ್ಷಕರಿಗೆ ರುಚಿಸುವುದು ಅಸಾಧ್ಯ.

ಬಾಲಿವುಡ್ ಸಿನಿಮಾದ ಕಾರ್ಪೊರೇಟ್ ಕತೆಗಳು

ಬಾಲಿವುಡ್ ಸಿನಿಮಾದ ಕಾರ್ಪೊರೇಟ್ ಕತೆಗಳು

ಬಾಲಿವುಡ್‌ನ ಬಹುತೇಕ ಸಿನಿಮಾಗಳು ಕಾರ್ಪೊರೇಟ್ ಕತೆಗಳು ಅಥವಾ ವಿವಿಐಪಿ ಸಮುದಾಯದ ಕುರಿತಾದ ಕತೆಗಳು. ಸಾಮಾನ್ಯ ಜನರ ಸಿನಿಮಾಗಳು ಕಡಿಮೆಯೆ. ಆದರೆ ದಕ್ಷಿಣ ಭಾರತದಲ್ಲಿ ಹಾಗಿಲ್ಲ, ಇಲ್ಲಿನ ಸಿನಿಮಾಗಳು ಸಾಮಾನ್ಯ ವ್ಯಕ್ತಿಯ ಕತೆಗಳಾಗಿರುತ್ತವೆ. ಇಲ್ಲಿನ ಸಿನಿಮಾದಲ್ಲಿ ಕಾಲೇಜಿಗೆ ನಾಯಕ ಬೈಕ್‌ನಲ್ಲಿ ತೆರಳಿದರೆ ಅದೇ ದೊಡ್ಡದು, ಬಾಲಿವುಡ್‌ನ ಕರಣ್ ಜೋಹರ್ ಸಿನಿಮಾದಲ್ಲಿ ನಾಯಕ ಕಾಲೇಜಿಗೆ ಹೋಗುವುದು ಫೆರಾರಿಯಲ್ಲಿ, ನಾಯಕಿ ಸಣ್ಣ ಉಡುಗೆ ಉಟ್ಟು ಕಾಲೇಜಿಗೆ ಕಾಲಿಡುತ್ತಾಳೆ! ಬಾಲಿವುಡ್ ಸಿನಿಮಾಗಳು ಬಹುತೇಕ ಮೇಲ್ವರ್ಗದ ಜನರ ಕತೆಗಳನ್ನೇ ಒಳಗೊಂಡಿರುತ್ತದೆ, ದಕ್ಷಿಣದ ಜನ ಸಂಪ್ರದಾಯಿಕ ಮಂದಿಯಾಗಿದ್ದು, ಅವರಿಗೆ ಕಾರ್ಪೊರೇಟ್ ಬದುಕು ಅಷ್ಟಾಗಿ ರುಚಿಸುವುದಿಲ್ಲ, ಅವರ ಕತೆಗಳೂ ಅಷ್ಟೆ.

ನಾಯಕರ ಬಗ್ಗೆ ಅಭಿಪ್ರಾಯ ಭಿನ್ನ

ನಾಯಕರ ಬಗ್ಗೆ ಅಭಿಪ್ರಾಯ ಭಿನ್ನ

ಸಿನಿಮಾದ ನಾಯಕರ ಬಗ್ಗೆ ಅಭಿಪ್ರಾಯ ಬಾಲಿವುಡ್‌ನಲ್ಲಿ ಒಂದು ರೀತಿಯಾಗಿದ್ದರೆ, ದಕ್ಷಿಣದಲ್ಲಿ ಅದು ಬೇರೆಯದ್ದೇ ರೀತಿಯಲ್ಲಿದೆ. ಇಲ್ಲಿ, ಕಪ್ಪು ಬಣ್ಣದ, ದಪ್ಪ ದೇಹದ, ಮೀಸೆ ಇರುವ ವ್ಯಕ್ತಿಗಳು ನಾಯಕರು. ಆದರೆ ಬಾಲಿವುಡ್‌ನಲ್ಲಿ ಬಿಳಿ ಬಣ್ಣದ ಮೇಲೆ ಪ್ರೀತಿ ಹೆಚ್ಚು, ಮೀಸೆ ಇಲ್ಲದ ಬಿಳಿ ಬಣ್ಣದವರಷ್ಟೆ ಅಲ್ಲಿ ನಾಯಕರು. ಬಹುತೇಕ ಶ್ಯಾಮ ವರ್ಣದವಾಗಿರುವ ದಕ್ಷಿಣದವರು ಸ್ಟೀರಿಯೋಟೈಪ್ ಬಿಳಿ ತೊಗಲಿನವರನ್ನು ಅಷ್ಟಾಗಿ ಮೆಚ್ಚಿಕೊಳ್ಳುವುದಿಲ್ಲ. ದಕ್ಷಿಣದ ನಟಿಯರೂ ಸಹ ಹಲವರು ಶ್ಯಾಮಲ ವರ್ಣದವರಿದ್ದಾರೆ. ಆದರೆ ಬಾಲಿವುಡ್‌ಗೆ ಬಿಳಿ ಬಣ್ಣದ ಮೇಲೆ ಮಾತ್ರವೇ ಪ್ರೀತಿ.

More from Filmibeat

English summary
Why Bollywood movies do not perform well in South India. There is so many reasons for that.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X