'ಹುಚ್ಚ' ಸಿನಿಮಾದ ನಿರ್ಮಾಪಕನಿಗೆ ಕಾಲ್ ಶೀಟ್ ಕೊಡಲ್ಲ ಎಂದಿದ್ದೇಕೆ ದರ್ಶನ್? ರೆಹಮಾನ್ ಮೇಲೆ ದರ್ಶನ್‌ಗ್ಯಾಕೆ ಕೋಪ?
ಕಿಚ್ಚ ಸುದೀಪ್ ಹಾಗೂ ದರ್ಶನ್ ಮಧ್ಯೆ ಸ್ನೇಹ ಸರಿಯಿಲ್ಲ ಅನ್ನೋದು ಗೊತ್ತಿರೋ ವಿಷಯವೇ. ಒಂದು ಕಾಲದಲ್ಲಿ ದರ್ಶನ್ ಹಾಗೂ ಸುದೀಪ್ ಕುಚಿಕು ಗೆಳೆಯರಾಗಿದ್ದರು. ಸದಾ ಒಟ್ಟಿಗೆ ಇರುತ್ತಿದ್ದ ಈ ಗೆಳೆಯರು ಈಗ ಒಬ್ಬರ ಮೇಲೊಬ್ಬರು ಮುನಿಸಿಕೊಂಡಿದ್ದಾರೆ. ಒಬ್ಬರ ಬಗ್ಗೆ ಇನ್ನೊಬ್ಬರು ಮಾತಾಡುವುದಿಲ್ಲ. ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ. ಜೊತೆಗೆ ಸೇರುವುದೂ ಇಲ್ಲ.
ಕಿಚ್ಚನ ಕೆಲವು ಅಭಿಮಾನಿಗಳಿಗೆ, ದರ್ಶನ್‌ರ ಕೆಲವು ಅಭಿಮಾನಿಗಳಿಗೆ ಇಬ್ಬರೂ ಒಟ್ಟಿಗೆ ನಟಿಸಬೇಕು. ಆ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕು ಅನ್ನೋ ಆಸೆಯಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಆಸೆ ಈಡೇರುವುದು ಅನುಮಾನ. ಆದರೆ, ಆರಂಭದ ದಿನಗಳಲ್ಲಿ ಇಂತಹದ್ದೊಂದು ಚಾನ್ಸ್ ಇತ್ತು. ಅದ್ಯಾರ ತಪ್ಪೋ ಇದೊಂದು ಅವಕಾಶ ಕೈ ತಪ್ಪಿ ಹೋಯ್ತು. ಒಂದ್ವೇಳೆ ಎಲ್ಲರೂ ಒಪ್ಪಿದ್ದರೆ, ಕಿಚ್ಚ ಸುದೀಪ್ ಗೆಳೆಯನಾಗಿ ದರ್ಶನ್ ನಟಿಸಿದ ಅಭಿಮಾನಿಗಳ ಜೊತೆಯಲ್ಲಿ ಇರುತ್ತಿತ್ತು.

ಈಗಾಗಲೇ 'ಮೆಜೆಸ್ಟಿಕ್'ಗೆ ದರ್ಶನ್ ಹಾಕಿಕೊಳ್ಳಿ ಅಂತ ಹೇಳಿದ್ದೇ ನಾನು ಅಂತ ಕಿಚ್ಚ ಸುದೀಪ್ ಹೇಳಿದ್ದರು. ಆ ಬಳಿಕ ಇಬ್ಬರ ಸ್ನೇಹವೇ ಮುರಿದು ಬಿದ್ದಿತ್ತು. ಇನ್ನು ದರ್ಶನ್ ಯಾಕೆ ಕಿಚ್ಚ ಸುದೀಪ್ ಗೆಳೆಯನಾಗಿ ನಟಿಸುತ್ತಾರೆ? ಅನ್ನೋ ಎದ್ದಿದ್ದರು. ಅದಕ್ಕೆ ಹುಚ್ಚ ಸಿನಿಮಾದ ನಿರ್ಮಾಪಕ ರೆಹಮಾನ್ ಉತ್ತರ ಕೊಡುತ್ತಾರೆ. ಅಷ್ಟಕ್ಕೂ ಏನಿದು ಘಟನೆ? ದರ್ಶನ್ ಕಿಚ್ಚ ಸುದೀಪ್ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು? ಹುಚ್ಚ ಸಿನಿಮಾ ನಿರ್ಮಾಪಕರ ಮೇಲೆ ದರ್ಶನ್‌ಗ್ಯಾಕೆ ಕೋಪ? ಇದೆಲ್ಲವನ್ನು ತಿಳಿಯಲು ಮುಂದೆ ಓದಿ.
ಕನ್ನಡದ ನಿರ್ಮಾಪಕ ರೆಹಮಾನ್ 'ಹುಚ್ಚ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಆ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಇದೇ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳಯನ ಪಾತ್ರವನ್ನು ತನಗೆ ಕೊಡಿ ಅಂತ ಹೇಳಿಕೊಂಡು ಬಂದಿದ್ದರಂತೆ. ಆದರೆ ಆ ಸಮಯದಲ್ಲಿ ಅದಾಗಲೇ ತಾರಕೇಶ್ ಪಟೇಲ್ ಫಿಕ್ಸ್ ಆಗಿದ್ದರು. ಈ ಕಾರಣಕ್ಕೆ ದರ್ಶನ್‌ಗೆ ಪಾತ್ರ ಸಿಗಲಿಲ್ಲ ಎಂಬ ಸ್ವಾರಸ್ಯಕರ ಘಟನೆಯನ್ನು ಕನ್ನಡ ಮಾಣಿಕ್ಯ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಲಾಗಿದೆ.

ಮುಂದೆ ಇದೇ 'ಹುಚ್ಚ' ಸಿನಿಮಾದ ನಿರ್ಮಾಪಕ ರೆಹಮಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಲ್‌ಶೀಟ್ ಪಡೆಯುವುದಕ್ಕೆ ಹೊರಟಿದ್ದರು. ಅಷ್ಟರಲ್ಲೇ ದರ್ಶನ್ ಅವರಿಗೆ ಕಾಲ್‌ಶೀಟ್ ಕೊಡುವುದಿಲ್ಲ ಅನ್ನೋದು ಅವರಿಗೆ ಮನವರಿಕೆ ಆಗಿತ್ತು. ಅಸಲಿಗೆ 'ಹುಚ್ಚ' ಸಿನಿಮಾದ ಶೂಟಿಂಗ್ ಸೆಟ್ಟಿನಲ್ಲಿ ಅಂತಹದ್ದೇನು ನಡೀತೋ ಗೊತ್ತಿಲ್ಲ. ದರ್ಶನ್ 'ಹುಚ್ಚ' ಸಿನಿಮಾದ ನಿರ್ಮಾಪಕರಿಗೆ ಕಾಲ್‌ಶೀಟ್ ಕೊಡುವುದಿಲ್ಲ ಅಂತ ನಿರ್ಧರಿಸಿಬಿಟ್ಟರು.
ನಿರ್ಮಾಪಕ ರೆಹಮಾನ್ ಅಂದು ಹುಚ್ಚ ಸಿನಿಮಾಗೆ ದರ್ಶನ್‌ಗೆ ಅವಕಾಶ ಕೊಟ್ಟಿರಲಿಲ್ಲ. ಇದನ್ನೇ ದರ್ಶನ್ ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು. ಅಂದೇ ಮುಂದೊಂದು ದಿನ ರೆಹಮನ್‌ಗೆ ಕಾಲ್‌ಶೀಟ್ ಕೊಡುವುದಿಲ್ಲ ಅಂತ ನಿರ್ಧರಿಸಿದ್ದರಂತೆ. ದರ್ಶನ್ ಹೀರೋ ಎಂಟ್ರಿ ಕೊಟ್ಮೇಕೆ ಮುಂದೊಂದು ದಿನ ರೆಹಮಾನ್ ಅವರ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು. ಆಗ ನಿರ್ಮಾಪಕ ಅಣಜಿ ಬಳಿಕ ಇದೇ ಹುಚ್ಚ ಸಿನಿಮಾ ನಿರ್ಮಾಪಕ ಕಾಲ್ ಶೀಟ್ ಬಗ್ಗೆ ಮಾತಾಡೋಣ ಎಂದಿದ್ದರಂತೆ. ಆಗದ ಅಣಜಿ ನಾಗರಾಜ್ "ಅಣ್ಣ ನಿಮಗೆ ದರ್ಶನ್ ಕಾಲ್‌ಶೀಟ್ ಕೊಡುವುದಿಲ್ಲ" ಎಂದಿದ್ದರಂತೆ.
ಬಳಿಕ ಹುಚ್ಚ ಸಿನಿಮಾದ ನಿರ್ಮಾಪಕ ದರ್ಶನ್ ಬಳಿವೂ ಕಾಲ್ ಶೀಟ್ ಹೇಳುವುದಕ್ಕೆ ಹೋಗಲಿಲ್ಲ. ಈ ಕಾರಣಕ್ಕೆ ದರ್ಶನ್ ಜೊತೆ ನಿರ್ಮಾಪಕ ರೆಹಮಾನ್ ಸಿನಿಮಾ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಒಂದು ವೇಳೆ ಕಿಚ್ಚ ಸುದೀಪ್ ಗೆಳೆಯನಾಗಿ ದರ್ಶನ್ ನಟಿಸಿದ್ದರೆ, ಅದೊಂದು ಅದ್ಭುತವೇ ಆಗಿರುತ್ತಿತ್ತು. ಹೀಗಾಗಿ ದರ್ಶನ್‌ಗೆ ಕೋಪ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಲಿಂದಲೇ ಇತ್ತು ಅಂತ ಊಹಿಸಬಹುದು.


Click it and Unblock the Notifications











