ಯಶ್-ರಮ್ಯಾ ನಡುವೆ ಮನಸ್ತಾಪ: 'ಲಕ್ಕಿ' ಸಿನಿಮಾ ಬಳಿಕ ಈ ಜೋಡಿ ಮತ್ತೆ ಒಟ್ಟಿಗೆ ನಟಿಸಲಿಲ್ಲ ಏಕೆ?
ರಾಕಿಂಗ್ ಸ್ಟಾರ್ ಯಶ್ ಕನ್ನಡ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನವೇ ಮೋಹಕತಾರೆ ರಮ್ಯಾ ಸಿನಿಮಾಗಳಿಗೆ ಬಣ್ಣ ಹಚ್ಚಿ ಆಗಿತ್ತು. ವಯಸ್ಸಿನಲ್ಲಿಯೂ ಯಶ್‌ಗಿಂತ ರಮ್ಯಾ ಸ್ವಲ್ಪ ದೊಡ್ಡವರೇ. ರಮ್ಯಾ ಯಶಸ್ಸಿನ ತುತ್ತತುದಿಯಲ್ಲಿ ಇರುವಾಗ ಯಶ್ ಕನ್ನಡ ಚಿತ್ರರಂಗದ ಉದಯೋನ್ಮುಖ ನಟನಾಗಿ ಹೊರ ಹೊಮ್ಮಿದ್ದರು. ಕನ್ನಡ ಚಿತ್ರರಂಗ ಹ್ಯಾಂಡ್ಸಮ್ ಹೀರೋ ಆಗಿದ್ದರು.
ಇತ್ತೀಚೆಗಷ್ಟೇ ತೆರೆಕಂಡ 'ಬಘೀರ' ಸಿನಿಮಾದ ನಿರ್ದೇಶಕ ಡಾ.ಸೂರಿ ಇವರಿಬ್ಬರನ್ನೂ ಇಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಹೊರಟಿದ್ದರು. ಅದುವೇ 'ಲಕ್ಕಿ'. ರಮ್ಯಾಗೆ ನಾಯಕನಾಗಿ ಯಶ್ ನಟಿಸಿದ್ದರು. ಸಿನಿಮಾ ಶೂಟಿಂಗ್ ವೇಳೆ ಇಬ್ಬರು ನಡುವಿನ ಮನಸ್ತಾಪ ಹೊರಬಂದಿರಲಿಲ್ಲ. ಆದರೆ, ಸಿನಿಮಾ ಪ್ರಮೋಷನ್‌ಗೆ ಅಂತ ಹೊರಟಾಗ ಇಬ್ಬರ ನಡುವಿನ ಅಸಮಧಾನ ಹೊರಬಿದ್ದಿತ್ತು.

ಓಪನ್ ಆಗಿ ಯಶ್ ಬಗ್ಗೆ ಮೋಹಕತಾರೆ ರಮ್ಯಾ ಟ್ವೀಟ್ ಮಾಡಿ ಅಸಮಧಾನ ಹೊರ ಹಾಕಿದ್ದರು. ಇಲ್ಲಿಂದ ಶುರುವಾಗಿದ್ದು, ಮಾಧ್ಯಮಗಳಲ್ಲಿ ಸುದ್ದಿಯಾಗುವವರೆಗೂ ಹೋಯ್ತು. ಆ ವೇಳೆ ಯಶ್ ಹಾಗೂ ರಮ್ಯಾ ಇಬ್ಬರೂ ಯಾಕೆ ಜಗಳ ಮಾಡಿಕೊಂಡರು? ಇಬ್ಬರ ನಡುವೆ ಏನು ನಡೀತಿದೆ? ಅನ್ನೋದು ಇಬ್ಬರ ಅಭಿಮಾನಿಗಳಿಗೂ ಗೊತ್ತಾಗಲೇ ಇಲ್ಲ. ಸ್ವಲ್ಪ ದಿನಗಳ ಬಳಿಕ ಖುದ್ದಾಗಿ ಯಶ್ ಆ ಮನಸ್ತಾಪಕ್ಕೆ ಕಾರಣವೇನು? ಅನ್ನೋದನ್ನು ಮಾಧ್ಯಮಗಳಿಗೆ ಬಹಿರಂಗ ಪಡಿಸಿದ್ದರು.
ರಮ್ಯಾ ಹಾಗೂ ಯಶ್ ನಡುವೆ ಕಿತ್ತಾಟಕ್ಕೆ ಕಾರಣ 'ಲಕ್ಕಿ' ಸಿನಿಮಾದ ಸಂದರ್ಶನ. ಲಕ್ಕಿ ಸಿನಿಮಾದ ಪ್ರಮೋಷನ್ ವೇಳೆ ಒಂದು ಕಾರ್ಯಕ್ರಮದಲ್ಲಿ ರಮ್ಯಾಗೆ ಯಶ್ ತಮಾಷೆ ಮಾಡಿದ್ದರು. ಅದು ರಮ್ಯಾಗೆ ಇಷ್ಟ ಆಗಿರಲಿಲ್ಲ. ಆ ವೇಳೆ ರಮ್ಯಾ ಪಕ್ಕಕ್ಕೆ ಸುಮ್ಮನೆ ಕೂರುವುದಕ್ಕೆ ನಾನ್ಯಾಕೆ ಬರಬೇಕು ಅನ್ನುವ ದಾಟಿಯಲ್ಲಿ ಯಶ್ ಇದ್ದರು. ಆಗ ಯಶ್ ಬಗ್ಗೆ ರಮ್ಯಾ ಏನೋ ಹೇಳಿದ್ದರು. ಯಶ್ ಕೂಡ ರಮ್ಯಾ ಬಗ್ಗೆ ಏನೋ ಹೇಳಿಕೆ ಕೊಟ್ಟು ಬಿಟ್ಟರು.
ಯಾವುದೋ ಒಂದು ಪತ್ರಿಕಾಗೋಷ್ಠಿಯಲ್ಲಿ ಯಶ್ ತುಂಬಾ ಸ್ಕೋಪ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿಬಿಟ್ಟಿದ್ದರು. ಅದು ಕೂಡ ಅಂದು ಚರ್ಚೆಯಾಗಿತ್ತು. ಆದರೆ, ರಮ್ಯಾ ಹೀಗೆ ಅಂದಿದ್ದು ಬೇಜಾರಾಗಿಲ್ಲ ಎಂದು ಯಶ್ ಹೇಳಿದ್ದರು. ಆದರೆ, ಇದು ದೊಡ್ಡ ಸುದ್ದಿಯಾದಾಗ ಯಶ್ ಕೂಡ ಕೌಂಟರ್ ಕೊಟ್ಟಿದ್ದರು. ಆಗ ಪ್ಯಾಚ್ ಮಾಡುವುದಕ್ಕೆ ರಮ್ಯಾ ಮೆಸೇಜ್ ಹಾಕಿ ಒಳ್ಳೆಯ ಸಹ ನಟ ಎಂದಿದ್ದರು.

ಇನ್ನೇನು ಇಲ್ಲಿಗೆ ಮುಗೀತು ಅನ್ನುವಾಗಲೇ ಸಂದರ್ಶನವೊಂದರಲ್ಲಿ ಕಿತ್ತಾಡಿಕೊಂಡಿದ್ದರು. ರಮ್ಯಾ ಲೇಟಾಗಿ ಬಂದರು ಅಂತ ಯಶ್ ಎದ್ದು ಹೋಗಿದ್ದರು. ಯಶ್ ಲೇಟಾಗಿ ಬಂದರು ಅಂತ ರಮ್ಯಾ ಎದ್ದು ಹೋಗಿದ್ದರು. ಈ ವೇಳೆ ರಮ್ಯಾ ಅವರ ಸಂದರ್ಶನವನ್ನು ಕಟ್ ಮಾಡುವಂತೆ ಯಶ್ ಹೇಳಿದ್ದಾರೆಂದು ರಂಪಾಟವಾಗಿತ್ತು. ಅದಕ್ಕೆ ನಾನ್ಯಾಕೆ ಹಾಗೆ ಹೇಳಲಿ ಅಂತ ಯಶ್ ಕೂಡ ಉತ್ತರ ಕೊಟ್ಟಿದ್ದರು.
ಹೀಗಿ ಇಬ್ಬರ ನಡುವಿನ ಕೋಳಿ ಜಗಳ ಸಿನಿಮಾ ರಿಲೀಸ್ ಜೊತೆಗೆ ಮುಗಿದು ಹೋಯ್ತು. ಅಲ್ಲಿಂದ ಯಶ್ ಹಾಗೂ ರಮ್ಯಾ ಇಬ್ಬರೂ ಮತ್ತೆ ಒಟ್ಟಿಗೆ ಸಿನಿಮಾ ಮಾಡಲಿಲ್ಲ. ಒಟ್ಟಿಗೆ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದೂ ವಿರಳ. ಆದರೆ, ಆ ವೇಳೆನೇ ಯಶ್ ತಮ್ಮ ನಡುವೆ ಏನೂ ವಿವಾದವಿಲ್ಲ ಎಂದು ಸ್ಪಷ್ಟ ಪಡಿಸಿದ್ದರು. "ನನ್ನ ಮತ್ತು ರಮ್ಯಾ ನಡುವೆ ಯಾವುದೇ ಸಮಸ್ಯೆಯಿಲ್ಲ. ನನ್ನ ಮತ್ತು ಅವರ ನಡುವೆ ಏನು ಸಮಸ್ಯೆ ಇರೋಕೆ ಸಾಧ್ಯ ಹೇಳಿ. ನಮ್ಮದು ಚಿಕ್ಕ ಮಕ್ಕಳ ಜಗಳ ಇದ್ದ ಹಾಗೆ. ಪೇಪರ್‌ನಲ್ಲಿ ನನಗೂ ರಮ್ಯಾಗೂ ಜಗಳ ಇದೆ ಎಂದು ಬರೆದಿದ್ದರು. ಅಲ್ಲಿವರೆಗೂ ನನಗೂ ರಮ್ಯಾಗೂ ಯಾವುದೇ ರೀತಿಯ ಜಗಳ ಇರಲಿಲ್ಲ." ಎಂದಿದ್ದರು.


Click it and Unblock the Notifications











