For Quick Alerts
  ALLOW NOTIFICATIONS  
  For Daily Alerts

  'ದುರಂತ ನಾಯಕ' ದಿಲೀಪ್ ಕುಮಾರ್ ಜೀವನದಿಂದ ಮಧುಬಾಲಾ ದೂರವಾಗಿದ್ದೇಕೆ?

  |

  ಬಾಲಿವುಡ್ ನಟ ದಿಲೀಪ್ ಕುಮಾರ್ ಜೀವನದಲ್ಲಿ ಎವರ್‌ಗ್ರೀನ್ ನಟಿ ಮಧುಬಾಲಾ ಮರೆಯಲಾಗದ ಅಧ್ಯಾಯವಾಗಿ ಉಳಿದುಕೊಂಡಿದ್ದಾರೆ. ಸುಮಾರು ವರ್ಷಗಳ ಕಾಲ ಇಬ್ಬರು ಪರಸ್ಪರ ಪ್ರೀತಿಸಿದ್ದರು. ಇನ್ನೇನು ಮದುವೆ ಆಗ್ತಾರೆ ಎಂದು ಎಲ್ಲರೂ ಅಂದುಕೊಂಡಿರುವಾಗಲೇ ಯಾರೂ ಊಹಿಸಿದಂತೆ ಬೇರ್ಪಟ್ಟರು.

  1951ರಲ್ಲಿ ತೆರೆಕಂಡ 'ತರಾನ' ಸಿನಿಮಾ ಚಿತ್ರೀಕರಣ ವೇಳೆ ದಿಲೀಪ್ ಕುಮಾರ್ ಮತ್ತು ಮಧುಬಾಲಾ ನಡುವಿನ ಪ್ರೇಮಕಥೆ ಹೊರ ಪ್ರಪಂಚಕ್ಕೆ ತಿಳಿಯಿತು. ಮಧುಬಾಲಾ ಸಾರ್ವಜನಿಕವಾಗಿ ಹೆಚ್ಚು ಕಾಣಿಸುತ್ತಿರಲಿಲ್ಲ. ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಿದ್ದೆ ಬಹಳ ಅಪರೂಪ. ಇನ್ನು ಮಾಧ್ಯಮಗಳಿಗೆ ಕೊಡುತ್ತಿದ್ದ ಸಂದರ್ಶನದಲ್ಲಿ ದಿಲೀಪ್ ಕುಮಾರ್ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆ ಸಾಮಾನ್ಯವಾಗಿತ್ತು.

  Breaking: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ನಿಧನBreaking: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ನಿಧನ

  'ತರಾನ' ಸಿನಿಮಾ ನಂತರ ನಾಲ್ಕೈದು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದರು. ಸುಮಾರು ಏಳು ವರ್ಷ ದಿಲೀಪ್ ಕುಮಾರ್ ಮತ್ತು ಮಧುಬಾಲಾ ಲವ್ ಸ್ಟೋರಿ ಬಿಟೌನ್‌ನ ಪ್ರಮುಖ ವಿಷಯವಾಗಿತ್ತು. ಮಧುಬಾಲಾ ನಟಿಸುತ್ತಿದ್ದ ಚಿತ್ರದ ಸೆಟ್‌ಗೂ ದಿಲೀಪ್ ಕುಮಾರ್ ಹೋಗುತ್ತಿದ್ದರು. ಅಷ್ಟರ ಮಟ್ಟಿಗೆ ಇಬ್ಬರು ನಡುವಿನ ಪ್ರೀತಿ ಇಂಡಸ್ಟ್ರಿಗೆ ಗೊತ್ತಿತ್ತು. ಆದರೆ, ಇವರ ಲವ್ ಸ್ಟೋರಿಗೆ ಮಧುಬಾಲಾ ತಂದೆ 'ಖಳನಾಯಕ' ಆದರು ಎಂಬ ಮಾತಿದೆ. ಮುಂದೆ ಓದಿ...

  ದಿಲೀಪ್-ಮಧುಬಾಲಾ ಬೇರ್ಪಡಲು ತಂದೆ ಕಾರಣ

  ದಿಲೀಪ್-ಮಧುಬಾಲಾ ಬೇರ್ಪಡಲು ತಂದೆ ಕಾರಣ

  ಮಧುಬಾಲಾ ಮತ್ತು ದಿಲೀಪ್ ಕುಮಾರ್ ಲವ್ ಸ್ಟೋರಿ ನಟಿಯ ತಂದೆ ಅತಾವುಲ್ಲಾ ಖಾನ್‌ಗೆ ತಿಳಿದಿತ್ತು. ಅದಕ್ಕೆ ಅವರ ವಿರೋಧವೂ ಇತ್ತು. ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಮಧುಬಾಲಾ, ದಿಲೀಪ್‌ ಕುಮಾರ್‌ರನ್ನು ಮದುವೆಯಾದ್ರೆ ಎಲ್ಲಿ ದೂರವಾಗ್ತಾಳೋ ಎಂಬ ಮುಂದಾಲೋಚನೆಯಿಂದ ಅವರಿಬ್ಬರು ಬಾಂಧವ್ಯಕ್ಕೆ ಅಡ್ಡಿ ವ್ಯಕ್ತಪಡಿಸಿದರು ಎಂದು ಈ ಹಿಂದಿನ ವರದಿಗಳಲ್ಲಿ ಉಲ್ಲೇಖವಾಗಿದೆ. ಈ ಮೂಲಕ 1951 ರಿಂದ 1956ರವರೆಗೂ ಬಹಳ ಉಲ್ಲಾಸದಿಂದ ಸುತ್ತಾಡಿಕೊಂಡಿದ್ದ ಜೋಡಿಯ ಸಂಬಂಧ ನಂತರದ ದಿನದಲ್ಲಿ ಮುರಿದು ಬಿತ್ತು.

  ಅದೊಂದು ಘಟನೆ ಕಾರಣವಾಯಿತೇ?

  ಅದೊಂದು ಘಟನೆ ಕಾರಣವಾಯಿತೇ?

  1957ರಲ್ಲಿ ಮಧುಬಾಲಾ ಮತ್ತು ದಿಲೀಪ್ ಕುಮಾರ್ ನಟನೆಯಲ್ಲಿ ಸೆಟ್ಟೇರಿದ್ದ 'ನಯಾ ದೌರ್' ಚಿತ್ರತಂಡ ಭೋಪಾಲ್‌ನಲ್ಲಿ ಚಿತ್ರೀಕರಣ ಮಾಡಲು ಯೋಜಿಸಿತ್ತು. ಬಿಆರ್ ಚೋಪ್ರಾ ಈ ಚಿತ್ರ ನಿರ್ದೇಶಿಸಿದ್ದರು. ಚಿತ್ರೀಕರಣದ ನೆಪವೊಡ್ಡಿ ಭೋಪಾಲ್ ಯೋಜನೆ ಹಾಕಿರುವುದು ನನ್ನ ಮಗಳ ಜೊತೆ ದಿಲೀಪ್ ಕುಮಾರ್ ಪ್ರಣಯಕ್ಕೆ ಪ್ರೋತ್ಸಾಹ ಕೊಡುವ ಕಾರಣಕ್ಕೆ ಎಂದು ನಟಿಯ ತಂದೆ ಅತಾವುಲ್ಲಾ ಖಾನ್ ಆರೋಪಿಸಿದರು. ಭೋಪಾಲ್ ಶೂಟಿಂಗ್‌ಗೆ ಸಮ್ಮತಿಸಲಿಲ್ಲ. ತಂದೆಯ ಮಾತಿಗೆ ಮಧುಬಾಲಾ ಸಹ ಕಟ್ಟಿ ಬಿದ್ದರು.

  ಕೋರ್ಟ್ ಮೊರೆ ಹೋದ ಚೋಪ್ರಾ

  ಕೋರ್ಟ್ ಮೊರೆ ಹೋದ ಚೋಪ್ರಾ

  ನಟಿ ಮಧುಬಾಲಾ ಮುಂಗಡ ಹಣ ಪಡೆದು ಚಿತ್ರೀಕರಣಕ್ಕೆ ಬರ್ತಿಲ್ಲ ಎಂದು ನಿರ್ದೇಶಕ ಬಿಆರ್ ಚೋಪ್ರಾ ನ್ಯಾಯಾಲಯದ ಮೊರೆ ಹೋದರು. ತಂದೆಯ ಪರ ಮಧುಬಾಲಾ ನಿಂತರು. ನಿರ್ದೇಶಕರ ಪರ ದಿಲೀಪ್ ಕುಮಾರ್ ಸಾಕ್ಷ್ಯ ಹೇಳಿದರು. ಈ ಕೇಸ್‌ನಲ್ಲಿ ಮಧುಬಾಲಾ ತಂದೆಗೆ ಹಿನ್ನಡೆಯಾಯಿತು. ಮಧುಬಾಲಾ ಬದಲು ದಕ್ಷಿಣದ ಖ್ಯಾತ ನಟಿ ವೈಜಯಂತಿಮಾಲ ಅವರನ್ನು ಕರೆಸಿ ಪಾತ್ರ ಮಾಡಿಸಿದರು. ಈ ಘಟನೆಯಿಂದ ಮಧುಬಾಲಾ ಅಪಖ್ಯಾತಿಗೆ ಒಳಗಾದರು. ವಿಶ್ವಾಸಾರ್ಹ ಹಾಗೂ ವೃತ್ತಿಪರ ನಟಿ ಎಂದು ಖ್ಯಾತಿಗಳಿಸಿಕೊಂಡಿದ್ದ ಮಧುಬಾಲಾಗೆ ಈ ಘಟನೆ ನೋವುಂಟು ಮಾಡಿತು. ಇದರ ಪರಿಣಾಮ ದಿಲೀಪ್ ಕುಮಾರ್ ಜೊತೆಗಿನ ಸಂಬಂಧಕ್ಕೆ ಅಂತ್ಯವಾಡಿದರು.

  ಕಿಶೋರ್ ಕುಮಾರ್‌ರನ್ನು ವರಿಸಿದ ಮಧು

  ಕಿಶೋರ್ ಕುಮಾರ್‌ರನ್ನು ವರಿಸಿದ ಮಧು

  ದಿಲೀಪ್ ಕುಮಾರ್ ನನ್ನನ್ನು ಮದುವೆ ಆಗಲ್ಲ ಎಂದು ತಿಳಿದ ನಟಿ ಮಧುಬಾಲಾ ಮತ್ತೊಬ್ಬ ಖ್ಯಾತ ನಟ ಕಿಶೋರ್ ಕುಮಾರ್ ಜೊತೆ ವಿವಾಹವಾದರು. 'ಚಲ್ತಿ ಕಾ ನಾಮ್‌ಗಾಡಿ' ಸಿನಿಮಾ ಚಿತ್ರೀಕರಣ ವೇಳೆ ಕಿಶೋರ್ ಕುಮಾರ್ ಅವರೇ ಮಧುಬಾಲಾಗೆ ಪ್ರಪೋಸ್ ಮಾಡಿದರು. ಮಧುಬಾಲಾ ಮುಸ್ಲಿಂ, ಕಿಶೋರ್ ಕುಮಾರ್ ಹಿಂದೂ ಆಗಿದ್ದರು. ನಂತರ ರಿಜಿಸ್ಟರ್ ಮದುವೆ ಆದರು.

  ಸಾಯಿರಾ ಬಾನು ಜೊತೆ ಮದುವೆ

  ಸಾಯಿರಾ ಬಾನು ಜೊತೆ ಮದುವೆ

  ಮಧುಬಾಲಾರಿಂದ ದೂರವಾದ ಮೇಲೆ ನಟ ದಿಲೀಪ್ ಕುಮಾರ್ 1966ರಲ್ಲಿ ನಟಿ ಸಾಯಿರಾ ಬಾನು ಜೊತೆ ವಿವಾಹವಾದರು. ಆದ ದಿಲೀಪ್ ಕುಮಾರ್ ವಯಸ್ಸು 44 ವರ್ಷ, ಸಾಯಿರಾ ವಯಸ್ಸು 22. ನಂತರ 1980 ರಲ್ಲಿ ಅಸ್ಮಾ ಎಂಬಾಕೆ ಜೊತೆ ದಿಲೀಪ್ ಕುಮಾರ್ ಎರಡನೇ ವಿವಾಹವಾದರು. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ವಿಚ್ಛೇದನದೊಂದಿಗೆ ಕೊನೆಗೊಂಡಿತು. ಪ್ರಸ್ತುತ, ಬಾಂದ್ರಾದಲ್ಲಿ ಪತ್ನಿ ಸಾಯಿರಾ ಜೊತೆ ದಿಲೀಪ್ ಕುಮಾರ್ ನೆಲೆಸಿದ್ದರು.

  English summary
  Interesting Facts about veteran Bollywood legend actor Dilip Kumar: Why Dilip Kumar did not marry actress Madhubala.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X