ಕಿಸ್ಸಿಂಗ್ ಸೀನ್ ಬಂದ ತಕ್ಷಣ ಯಾಕೆ ಟಿವಿ ಚಾನಲ್ ಚೇಂಜ್ ಮಾಡುತ್ತಾರೆ?

ಕಿಸ್ಸಿಂಗ್ ಪದ ಹಲವರಿಗೆ ಹಲವು ತರದ ಭಾವನೆಗಳನ್ನು ಪ್ರಚೋದಿಸುತ್ತದೆ. ಕಿಸ್ ಕನ್ನಡದಲ್ಲಿ ಚುಂಬನ, ಮುತ್ತು ಕೊಡುವುದು ಅಂದರೆ ಪ್ರಾಕೃತಿಕವಾದ ಒಂದು ಆಕರ್ಷಣೆ ಎಂದರ್ಥ. ಕವಿಗಳು ಕೂಡ ಅದಕ್ಕೆ ಆದ್ಯತೆ ಕೊಡುತ್ತಾರೆ. ಒಬ್ಬ ಕವಿ ಅಧರವನ್ನು ತಾಂಬೂಲಕ್ಕೆ ಹೋಲಿಸುತ್ತಾನೆ. ಅಧರದ ಆಕರ್ಷಣೆ ಎಷ್ಟು ಇರುತ್ತದೆ ಎಂದರೆ ಕವಿಯೊಬ್ಬ ಹೇಳುತ್ತಾನೆ 'ಅಧರದಿ ಆಕಾಶವ ಚುಂಬಿಸುವ ಆಸೆ' ಅಂತ. ಅಂದರೆ ಒಟ್ಟಾರೆ ರಸಿಕತೆಗೆ, ಕಾಮಪ್ರಚೋದನೆಯಲ್ಲಿ ಅಧರ ಪ್ರಮುಖವಾದದ್ದು.

ಕಣ್ಣು ನೋಡುತ್ತದೆ ತುಟಿ ಮಾತನಾಡುತ್ತದೆ: ಸಿನಿಮಾಗಳಲ್ಲಿ ಯಾವುದೇ ಲವ್ ಸೀನ್‌ಗಳನ್ನು ನೋಡಿದಾಗ ಹೀರೋ- ಹೀರೋಯಿನ್ ನಡುವೆ ಕಣ್ಣಿನ ನಡುವಿನ ಸಂಭಾಷಣೆ ಕ್ಯಾಮರಾದಲ್ಲಿ ಮೊದಲು ಸೆರೆಯಾಗುತ್ತದೆ. ಕಣ್ಣು ಕಣ್ಣಿನ ನಡುವಿನ ಆ ದೃಶ್ಯದಲ್ಲಿಯೇ ಪ್ರೀತಿ ಕವಲೊಡೆಯುತ್ತದೆ. ಕವಲೊಡೆದ ಪ್ರೀತಿಯ ಆಕರ್ಷಣೆಯನ್ನು ಅಭಿವ್ಯಕ್ತಿಸುವ ಸಾಧನ ತುಟಿಯ ಮೇಲೆ ಮೂಡುವ ಲಜ್ಜೆ. ತುಟಿಯ ಮೇಲೆ ಮೂಡುವ ಭಾವನೆ ಹಲವು ತರದ ಕಥೆಗಳನ್ನು ಹೇಳುತ್ತದೆ. ಹೀಗಾಗಿಯೇ ಕವಿಗಳು, ಸಿನಿಮಾ ನಿರ್ದೇಶಕರು, ಕಥೆಗಾರರು, ಎಲ್ಲರೂ ಕೂಡ ಪ್ರೀತಿಯ ಅಭಿವ್ಯಕ್ತಗೊಳಿಸುವ ಪ್ರಸಂಗಗಳು ಬಂದಾಗ ತುಟಿಯನ್ನು ಪ್ರಧಾನವಾಗಿ ಬಳಸಿಕೊಳ್ಳುತ್ತಾರೆ.

ಅರಗಿಣಿಗೆ ಹೆಣ್ಣನ್ನು ಹೋಲಿಸುತ್ತಾರೆ

ಅರಗಿಣಿಗೆ ಹೆಣ್ಣನ್ನು ಹೋಲಿಸುತ್ತಾರೆ

ಮುದ್ದಾದ ಅರಗಿಣಿ ಹಸಿರಿನಲ್ಲಿದ್ದರೂ ಕೂಡ ಅದರ ಮೂಗು ಮಾತ್ರ ಕೆಂಪು. ಆ ಕೆಂಪು ಮೂಗು ಅರಗಿಣಿಯನ್ನು ಇತರ ಪಕ್ಷಿಗಳಿಂದ ಭಿನ್ನವಾಗಿಸುವುದು. ಅರಗಿಣಿಯ ಆಕರ್ಷಣೆ ಅದರ ಮೂಗಿನಲ್ಲಿ ಇದೆ. ಸಿನಿಮಾ ಎಂಬ ವ್ಯಾಪಾರ ಮನೋಧರ್ಮದಲ್ಲಿ ಹೆಣ್ಣು ಮತ್ತು ಹೆಣ್ಣಿನ ಆಕರ್ಷಣೆ ಅದರ ಮೈಮಾಟ ಪ್ರಚೋದನೆಯಲ್ಲಿ ಅಡಗಿದೆ. ಅರಗಿಣಿಯ ಆ ಕೆಂಪು ಮೂಗು ಇತರ ಪಕ್ಷಗಳಿಂದ ಅದನ್ನು ಭಿನ್ನವಾಗಿಸುತ್ತದೆ. ಹಾಗೆ ಸಿನಿಮಾರಂಗ ಕೂಡ ಹೆಣ್ಣನ್ನು ಒಂದು ಅರಗಿಣಿಯಂತೆ ನೋಡುತ್ತದೆ ಮತ್ತು ಅರಗಿಣಿಯ ಕೆಂಪು ಮೂಗಿನಂತೆ ಹೆಣ್ಣಿನ ಕೆಲವು ಪ್ರಚೋದನಕಾರಿ ಭಂಗಿಗಳನ್ನು ಸೆರೆಹಿಡಿದು ಜನರಲ್ಲಿ ಜನರನ್ನು ಸೆಳೆಯುವ ಮತ್ತು ಹಣವನ್ನು ಅದರ ಮೂಲಕ ಮಾಡುವ ಕೆಲಸ ಮಾಡುತ್ತದೆ. ಸಿನಿಮಾಗಳು ಹೆಣ್ಣನ್ನು ಒಂದು ವ್ಯಾಪಾರದ ಸರಕಿನಂತೆ ನೋಡುತ್ತದೆ. ಹೇಗೆ ಒಂದು ಝೂಗೆ ಹೋದರೆ ಅರಗಿಣಿ ಯನ್ನು ಪ್ರತ್ಯೇಕವಾಗಿ ನೋಡುತ್ತೇವೆ, ಹಾಗೆ ಸಿನಿಮಾಗಳಲ್ಲಿ ಹೆಣ್ಣಿನ ಮೇಲೆ ಚಿತ್ರಿಸುವ ಕೆಲವು ದೃಶ್ಯಗಳು ಕೂಡ.

ಸಿನಿಮಾಗಳಲ್ಲಿ ಯಾಕೆ ಚುಂಬನ ದೃಶ್ಯಗಳನ್ನು ಬಳಕೆ ಮಾಡುತ್ತಾರೆ?

ಸಿನಿಮಾಗಳಲ್ಲಿ ಯಾಕೆ ಚುಂಬನ ದೃಶ್ಯಗಳನ್ನು ಬಳಕೆ ಮಾಡುತ್ತಾರೆ?

ಪ್ರೀತಿ ಸಾರ್ವಜನಿಕವಾಗಿ ಕೂಡ ವ್ಯಕ್ತಪಡಿಸಬಹುದಾದ ಒಂದು ಭಾವನೆ. ಆದರೆ ಕಾಮ ಗೌಪ್ಯವಾಗಿ ಇಬ್ಬರ ನಡುವೆ ನಡೆಯುವ ಒಂದು ಕ್ರಿಯೆ. ಸಿನಿಮಾಗಳಲ್ಲಿ ಹೆಚ್ಚಿಗೆ ಪ್ರೀತಿ ಒಂದು ವಸ್ತುವಾಗಿರುವುದರಿಂದ ಇಬ್ಬರೂ ಪರಸ್ಪರ ಪ್ರೀತಿಗೆ ಒಪ್ಪಿಗೆ ನೀಡಿದ ಕ್ಷಣಕ್ಕೆ ಸಾಂಕೇತಿಕವಾಗಿ ಚುಂಬನವನ್ನು ಮೊದಲು ಬಳಸುವ ಕ್ರಿಯೆ ಆರಂಭವಾಯಿತು. ಚುಂಬನ ಪ್ರೀತಿಯ ಒಪ್ಪಿಗೆಯ ಸಂಕೇತ. ಪ್ರೀತಿಯ ಒಪ್ಪಿಗೆ ಎಲ್ಲಿ ಕೊನೆಗೊಳ್ಳುತ್ತದೆ ಅಲ್ಲಿಂದಲೇ ಕಾಮದ ಆರಂಭ ಕೂಡ ಮೊದಲಾಗುತ್ತದೆ. ಸಿನಿಮಾ ಎಂಬುದು ವ್ಯಾಪಾರ ವಾಗಿರುವುದರಿಂದ ಯಾವುದು ಪದೇಪದೇ ನೋಡುಗನನ್ನು ಪ್ರಚೋದಿಸುತ್ತದೆ ಅದನ್ನೇ ಮತ್ತೆ ಮತ್ತೆ ಬೇರೆ ಬೇರೆ ತರದಲ್ಲಿ ತೆರೆಯ ಮೇಲೆ ಮೂಡಿಸಲು ಮುಂದಾಗುತ್ತದೆ.

ಚಿತ್ರಮಂದಿರದಲ್ಲಿ ಸಿನಿಮಾ ನೋಡುವಾಗ ಆ ದೃಶ್ಯ ಬಂದಾಗ..

ಚಿತ್ರಮಂದಿರದಲ್ಲಿ ಸಿನಿಮಾ ನೋಡುವಾಗ ಆ ದೃಶ್ಯ ಬಂದಾಗ..

ಯುವಕರನ್ನು ಆಕರ್ಷಿಸುವ ದೃಷ್ಟಿಯಿಂದಲೇ ಹೀರೋ-ಹೀರೋಯಿನ್ ನಡುವಿನ ಚುಂಬನ ದೃಶ್ಯಗಳನ್ನು ಪೋಸ್ಟರ್ ಗಳಲ್ಲಿ ದೊಡ್ಡದಾಗಿ ಹಾಕಿರುತ್ತಾರೆ. ಇದೊಂದು ರೀತಿಯಲ್ಲಿ ಸಿನಿಮಾ ಕಡೆಗೆ ಜನರನ್ನು ಕರೆದು ತರುವ ಪ್ರಯತ್ನ. ಈಗ ಥಿಯೇಟರ್ ಗಳಲ್ಲಿ ನೀವು ಗಮನಿಸಿದ್ದರೆ ಅಂತಹ ದೃಶ್ಯಗಳು ಇರುವಂತಹ ಚಿತ್ರಗಳನ್ನು ನೋಡುವುದಕ್ಕೆ ಬಹುತೇಕ ಯುವಕರು, ಕಾಲೇಜು ಹುಡುಗ- ಹುಡುಗಿಯರು ಹೋಗುತ್ತಾರೆ. ಥಿಯೇಟರ್‌ನಲ್ಲಿ ಇಂತಹ ದೃಶ್ಯಗಳು ಬಂದಾಗ ನೋಡುವಂಥವರಲ್ಲಿ ಅಂತಹ ಮುಜುಗರ ಇರುವುದಿಲ್ಲ. ಅಲ್ಲಿ ಅದನ್ನು ಓಪನ್ ಅಪ್ ಆಗಿ ನೋಡುತ್ತಾರೆ. ಮತ್ತು ಅಂತಹ ದೃಶ್ಯಗಳನ್ನು ಸಾಕಷ್ಟು ಎಂಜಾಯ್ ಮಾಡುತ್ತಾರೆ.

ಇದಕ್ಕೆ ಮುಖ್ಯ ಕಾರಣ ತನ್ನ ಅಕ್ಕಪಕ್ಕದಲ್ಲಿ ಕುಟುಂಬದ ಸದಸ್ಯರು ವಿಶೇಷವಾಗಿ ಮಹಿಳೆ ಮತ್ತು ಮಕ್ಕಳು ಇರುವುದಿಲ್ಲ. ಒಂದು ತರದಲ್ಲಿ ಪ್ರೈವೆಸಿ ಎನ್ನುವುದು ಅಲ್ಲಿರುತ್ತದೆ. ಕಾಲೇಜು ಹುಡುಗ -ಹುಡುಗಿಯರು ಪ್ರೇಮಿಗಳೇ ಆಗಿರುವುದರಿಂದ ಅಂತಹ ದೃಶ್ಯಗಳನ್ನು ಕೂಡ ಒಂದು ಸಹಜವಾದ ತರದಲ್ಲಿ ತೆಗೆದುಕೊಂಡು ನೋಡುತ್ತಾರೆ. ಅಂತಹದೊಂದು ಅನುಭವ ತಮ್ಮ ಜೀವನದಲ್ಲಿ ಅವರು ಬಯಸುವುದರಿಂದ ಸಹಜವಾಗಿಯೇ ಕೂಡ ಅವರು ಆ ದೃಶ್ಯಗಳನ್ನು ಎಂಜಾಯ್ ಮಾಡುತ್ತಾರೆ. ಥಿಯೇಟರ್‌ನಲ್ಲಿ ಕೂತ ಬಹುತೇಕರ ಮನಸ್ಥಿತಿ ಆ ಸಮಯದಲ್ಲಿ ಒಂದೇ ಆಗಿರುತ್ತದೆ. ಹೀಗಾಗಿ ಅಲ್ಲಿ ನೋಡುವ ಸಮಯದಲ್ಲಿ ಯಾವುದೇ ತರದ ಮುಜುಗರದ ಅನುಭವ ಉಂಟಾಗುವುದಿಲ್ಲ.

ಮನೆಯಲ್ಲಿ ನೋಡುವಾಗ ಯಾಕೆ ಮುಜುಗರ ಆಗುತ್ತದೆ?

ಮನೆಯಲ್ಲಿ ನೋಡುವಾಗ ಯಾಕೆ ಮುಜುಗರ ಆಗುತ್ತದೆ?

ಭಾರತೀಯ ಕುಟುಂಬ ವ್ಯವಸ್ಥೆ ಕೆಲವೊಂದು ಪಾರಿವಾರಿಕ ಮೌಲ್ಯಗಳನ್ನು ರೂಢಿಸಿಕೊಂಡು ಬಂದಿದೆ. ಹೆಣ್ಣನ್ನು ಇಲ್ಲಿ ಭೋಗದ ವಸ್ತುವಾಗಿ ನೋಡುವುದಿಲ್ಲ. ಹೆಣ್ಣು ಎಂದಾಗ ಹೆಂಡತಿ ಮಾತ್ರವಲ್ಲ ತಾಯಿ-ಮಗಳು, ಅಕ್ಕ-ತಂಗಿ ಹೀಗೆ ಹಲವು ಸಂಬಂಧಗಳು ಕೂಡ ಇರುತ್ತದೆ. ಜೊತೆಗೆ ಮಕ್ಕಳು ಬೆಳೆಯುವಾಗ ದಾರಿ ತಪ್ಪದಂತೆ ಎಚ್ಚರ ವಹಿಸುವ ಕೆಲಸವನ್ನು ಕೂಡ ತಂದೆ-ತಾಯಿಗಳು ಮಾಡುತ್ತಿರುತ್ತಾರೆ. ಈಗ ಒಂದು ಇಡಿ ಕುಟುಂಬ ಒಂದು ಸಿನಿಮಾ ನೋಡುತ್ತಿರುವಾಗ ಒಂದು ಚುಂಬನದ ದೃಶ್ಯ ಅಥವಾ ಅರೆನಗ್ನವಾಗಿ ನಾಯಕ-ನಾಯಕಿ ಕುಣಿಯುವ ಒಂದು ಹಾಡು ಬಂದ ತಕ್ಷಣ ಕೈ ತಕ್ಷಣ ರಿಮೋಟ್ ಮೇಲೆ ಹೋಗಿ ಮತ್ತೊಂದು ಚಾನಲ್ ಅನ್ನು ಬದಲಾಯಿಸುತ್ತದೆ. ಹೀಗೆ ಬದಲಾಯಿಸುವುದರ ಹಿಂದೆ ಅಂತರ್ ಪ್ರಜ್ಞೆ ಎಂಬುದು ಕೆಲಸ ಮಾಡುತ್ತದೆ.

ಮನೆಯಲ್ಲಿರುವಾಗ ಅಂತರ್ ಪ್ರಜ್ಞೆ ಯಾಕೆ ಕೆಲಸ ಮಾಡುತ್ತದೆ?

ಮನೆಯಲ್ಲಿರುವಾಗ ಅಂತರ್ ಪ್ರಜ್ಞೆ ಯಾಕೆ ಕೆಲಸ ಮಾಡುತ್ತದೆ?

ಅಂತರ್ ಪ್ರಜ್ಞೆ ಎಂದರೆ ಮನದೊಳಗೆ ಸದಾ ಎಚ್ಚರದಿಂದಿರುವ ಮನೋಭಾವನೆ. ಇಲ್ಲಿ ಪ್ರತಿಯೊಬ್ಬರಿಗೂ ಕೌಟುಂಬಿಕ ವ್ಯವಸ್ಥೆಯಿದೆ, ಮೌಲ್ಯಗಳು ಅದರಲ್ಲಿ ಅಡಕವಾಗಿದೆ. ಕೆಲವೊಂದು ಸರಿ, ಕೆಲವೊಂದು ತಪ್ಪು ಎಂಬ ಭಾವನೆಗಳು ಇದೆ. ಕೆಲವೊಂದು ಸಾರ್ವಜನಿಕವಾಗಿ ನೋಡಬಹುದು ನೋಡಬಾರದು, ಮಾಡಬಹುದು ಮಾಡಬಾರದು ಎಂಬ ರೂಪುರೇಷಗಳನ್ನು ಸಮಾಜದ ಮೂಲಕ ಕುಟುಂಬದ ಮೂಲಕ ಪಡೆದುಕೊಂಡಿದ್ದಾರೆ. ಇದರ ವಿರುದ್ಧ ಯಾವುದೇ ವಿಚಾರ ಬಂದರೂ ತಕ್ಷಣ ಮನಸ್ಸಿನೊಳಗೆ ಅಂತರ್ ಪ್ರಜ್ಞೆ ಅದರ ವಿರುದ್ಧ ಸೆಟೆದು ನಿಲ್ಲುತ್ತದೆ. ಕುಟುಂಬದ ಇತರ ಸದಸ್ಯರ ಮಧ್ಯೆ ಟಿವಿ ನೋಡುತ್ತಿರುವಾಗ ಅಂತಹ ದೃಶ್ಯ ಬಂದಾಗ ಸಹಜವಾಗಿಯೇ ಮುಜುಗರ ಅಲ್ಲಿ ಮೂಡುತ್ತದೆ. ಅಲ್ಲಿರುವ ಎಲ್ಲರಿಗೂ ಕೂಡ ಒಂದೇ ತರದ ಭಾವನೆ. ಎಲ್ಲರೊಳಗೂ ಒಂದು ತರದ ಹೇಳಲಾಗದ ಮುಜುಗರ. ಅದು ತೀರಾ ಖಾಸಗಿ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಹೀಗಾಗಿಯೇ ಅದು ಸಹಜವಾಗಿಯೇ ಕುಟುಂಬದ ಎಲ್ಲರೊಳಗೊಂದು ಮುಜುಗರ ಉಂಟುಮಾಡುತ್ತದೆ. ಹೀಗಾಗಿಯೇ ತಕ್ಷಣ ಅಂತರ ಪ್ರಜ್ಞೆ ಚುರುಕುಗೊಂಡು ಕೈ ರಿಮೋಟ್ ಹಿಡಿದು ಚಾನಲ್ ಬದಲಾಯಿಸುತ್ತದೆ.

ಕುಟುಂಬವನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗುವ ಮೊದಲು...

ಕುಟುಂಬವನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗುವ ಮೊದಲು...

ಕುಟುಂಬವನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗುವ ಮೊದಲು ಆ ಕುಟುಂಬದ ಹಿರಿಯ ತನ್ನ ಸ್ನೇಹಿತರ ಜೊತೆಯಲ್ಲಿ ಸಿನಿಮಾ ನೋಡಿಕೊಂಡು ಬರುತ್ತಿದ್ದ. ಈ ಸಿನಿಮಾ ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೆ ನೋಡಬಹುದು ಎಂಬುದು ಖಾತ್ರಿಯಾದರೆ ಮಾತ್ರ ತನ್ನ ಕುಟುಂಬವನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗುತ್ತಿದ್ದರು. ಈಗಲೂ ಅನೇಕರು ಇದೇ ತರದ ಮಾನದಂಡವನ್ನು ಪ್ರಯೋಗಿಸುತ್ತಾರೆ. ಸೆಕ್ಸ್- ವೈಲೆನ್ಸ್ ಹೆಚ್ಚಿಗೆ ಇರುವ ಚಿತ್ರಗಳು ಈಗಲೂ ಕೂಡ ನಿರ್ದಿಷ್ಟವಾಗಿ ಒಂದಷ್ಟು ಯುವಸಮುದಾಯ ಬಿಟ್ಟರೆ ಪೂರ್ತಿಯಾಗಿ ಭಾರತೀಯರು ಇಂದಿಗೂ ಕೂಡ ಒಪ್ಪಿಕೊಂಡಿಲ್ಲ. ಇಂತಹ ಸಿನಿಮಾಗಳಿಗೆ ಜನ ಮನ್ನಣೆ ದೊರೆಯುವುದು ಇಲ್ಲ.

More from Filmibeat

English summary
Why do people change the TV channels, when kissing scenes are start to play? for Indians family values are more than anything. and they don't wish see any Provocative scenes with family members.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X