ಅಶ್ಲೀಲ ಸಿನಿಮಾಗಳಿಗೆ 'ಬ್ಲೂ ಫಿಲಂ' ಎಂಬ ಹೆಸರು ಬಂದಿದ್ದು ಹೇಗೆ?
'ಬ್ಲೂ ಫಿಲಂ' ಪದ ಕೇಳದ ಮಂದಿ ಇಲ್ಲವೆಂದೆ ಹೇಳಬೇಕು. ನಗ್ನ ಸಿನಿಮಾಗಳು, ಅಶ್ಲೀಲ ಸಿನಿಮಾಗಳು ಅಥವಾ ಪೋರ್ನ್ ಸಿನಿಮಾಗಳಿಗೆ ಹೀಗೆ ಬ್ಲೂ ಫಿಲಂ ಎನ್ನುವುದು ರೂಢಿ. ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಪ್ರಕರಣದ ವಿಷಯದಲ್ಲಂತೂ ಈ ಪದ ತಸು ಹೆಚ್ಚಿಗೇ ಬಳಕೆಯಲ್ಲಿದೆ.
ಈ ನೀಲಿ ಚಿತ್ರಗಳಿಗೂ ದಶಕಗಳ ಇತಿಹಾಸವಿದೆ. ನೀಲಿ ಬಣ್ಣದ್ದಲ್ಲದಿದ್ದರೂ ಈ ಸಿನಿಮಾಗಳಿಗೆ ನೀಲಿ ಸಿನಿಮಾ ಅಥವಾ ಬ್ಲೂ ಫಿಲಂ ಎನ್ನಲು ಕಾರಣವೂ ಇದೆ.
ಮೋಷನ್ ಸಿನಿಮಾಗಳು ಪ್ರಾರಂಭವಾದ ಕೂಡಲೇ ನೀಲಿ ಚಿತ್ರಗಳೂ ಸಹ ಅವುಗಳ ಜೊತೆಯಲ್ಲಿಯೇ ಪ್ರಾರಂಭವಾದವು. ಆದರೆ ಆರಂಭದಲ್ಲಿಯೇ ಪೋರ್ನ್ ಸಿನಿಮಾಗಳಿಗೆ ಒಂದು ಬಗೆಯ ಸಾಮಾಜಿಕ ಬಹಿಷ್ಕಾರ ಎದುರಿಸಿಬೇಕಾಗಿ ಬಂತು. ಆಗಲೂ ಸಹ ಅದನ್ನು ಕದ್ದು ಮುಚ್ಚಿ ಚಿತ್ರೀಕರಿಸಿ, ಮೆನ್ಸ್ ಥಿಯೇಟರ್‌ಗಳಲ್ಲಿ ಮಾತ್ರವೇ ಪ್ರದರ್ಶಿಸುವ ಪರಿಪಾಠವಿತ್ತು.

ನೀಲಿ ಚಿತ್ರಗಳಿಗೆ ಆ ಹೆಸರೇಕೆ ಬಂತು?
1900ರ ದಶಕದ ಆರಂಭದಲ್ಲಿ ಪೋರ್ನ್ ಸಿನಿಮಾ ಅಥವಾ ಅಶ್ಲೀಲ ಸಿನಿಮಾಗಳಿಗೆ ಅಧಿಕೃತ ಪರವಾಗಿ ಇರಲಿಲ್ಲವಾದ್ದರಿಂದ ಕದ್ದು ಮುಚ್ಚಿ ಚಿತ್ರೀಕರಣ ಹಾಗೂ ಪ್ರದರ್ಶನ ಮಾಡಬೇಕಿತ್ತು. ಆಗ ಅದರ ಬಜೆಟ್ ಅನ್ನು ಸಹ ಕಡಿಮೆಯೇ ಇಟ್ಟುಕೊಳ್ಳುವುದು ಅನಿವಾರ್ಯವಾಗಿತ್ತು. ಆಗ ಬಳಸಿದ, ರೀಲ್‌ಗಳನ್ನು ಕಡಿಮೆ ದರಕ್ಕೆ ಖರೀದಿಸಿ ಅದನ್ನು ಮತ್ತೆ ಕ್ಯಾಮೆರಾದಲ್ಲಿ ಬಳಸುವಂತೆ ಮಾಡುವ ಸಂದರ್ಭದಲ್ಲಿ ಅದಕ್ಕೆ ಹಾಕುವ ರಸಾಯನದಿಂದಾಗಿ ಅದಕ್ಕೆ ವಿಶೇಷ ಗುಣವೊಂದು ಪ್ರಾಪ್ತವಾಗುತ್ತಿತ್ತು. ಆ ರೀಲ್ ಬಳಸಿ ಚಿತ್ರೀಕರಣ ಮಾಡಿ ಅದನ್ನು ಪರದೆ ಮೇಲೆ ಪ್ರದರ್ಶಿಸಿದಾಗ ತುಸು ನೀಲಿ ಬಣ್ಣವುಳ್ಳ ದೃಶ್ಯಗಳು ಪರದೆಯ ಮೇಲೆ ಮೂಡುತ್ತಿದ್ದವು. ಹೀಗಾಗಿ ಈ ಸಿನಿಮಾಗಳಿಗೆ ನೀಲಿ ಚಿತ್ರಗಳೆನ್ನುತ್ತಾರೆ ಎಂಬ ವಾದ ಹೆಚ್ಚು ಪ್ರಚಲಿತದಲ್ಲಿದೆ.

'ಬ್ಲೂ ಲಾ' ನಿಂದಾಗಿ ಬ್ಲೂ ಫಿಲಂ ಹೆಸರು!
ಇದರ ಹೊರತಾಗಿ ಮತ್ತೊಂದು ಜನಪ್ರಿಯ ವಾದವೂ ಇದೆ. 1500-1600 ದಶದಲ್ಲಿಯೇ ಪಾಶ್ಚಿಮಾತ್ಯದ ಕೆಲವು ರಾಷ್ಟ್ರಗಳಲ್ಲಿ 'ಬ್ಲೂ ಲಾ' ಎಂಬುದೊಂದು ಪ್ರಚಲಿತದಲ್ಲಿತ್ತು. ಭಾನುವಾರ ದೇವರ ಆರಾಧನೆಯ ದಿನವಾದ್ದರಿಂದ ಅಂದಿನ ದಿನ ಹಲವು ವಿಷಯ, ವಸ್ತುಗಳು, ಮಾರಾಟಗಳ ಮೇಲೆ ನಿಷೇಧ ಹೇರಲಾಗಿತ್ತು. ಅಂತೆಯೇ ಅಶ್ಲೀಲ ಸಿನಿಮಾಗಳಿಗೂ ನಿಷೇಧವಿದ್ಧ ಕಾರಣ ಅದನ್ನು ನಿಷೇಧಿತ ಸಿನಿಮಾ ಅಥವಾ ಬ್ಲೂ ಸಿನಿಮಾ ಎಂದು ಕರೆಯುವುದು ರೂಢಿಯಾಯಿತು ಎನ್ನಲಾಗುತ್ತದೆ.

ನೀಲಿ ಬಣ್ಣದ ಕವರ್‌ನಲ್ಲಿ ಕ್ಯಾಸೆಟ್‌ಗಳು
ಇನ್ನೊಂದು ವಾದವೂ ಬ್ಲೂ ಫಿಲಂ ಹೆಸರಿನ ಕುರಿತಾಗಿದೆ. ವಿಸಿಆರ್‌ಗಳು ಜನಪ್ರಿಯಗೊಳ್ಳುವ ಸಂದರ್ಭದಲ್ಲಿ ಸಾಮಾನ್ಯ ಸಿನಿಮಾಗಳ ವಿಸಿಆರ್ ಕ್ಯಾಸೆಟ್ ಅನ್ನು ಬಣ್ಣ ಬಣ್ಣದ ಕವರ್‌ನಲ್ಲಿ ಇಡುತ್ತಿದ್ದ ವಿಸಿಆರ್ ಅಂಗಡಿಯವರು, ನೀಲಿ ಚಿತ್ರಗಳ ವಿಡಿಯೋಗಳನ್ನು ಮಾತ್ರ ನೀಲಿ ಬಣ್ಣದ ಕವರ್‌ನಲ್ಲಿ ಇಡುತ್ತಿದ್ದರಂತೆ. ಹಾಗಾಗಿ ಈ ಸಿನಿಮಾಗಳಿಗೆ ನೀಲಿ ಚಿತ್ರಗಳೆನ್ನುತ್ತಾರೆ ಎಂಬ ವಾದವೂ ಇದೆ.

ನೀಲಿ ಹಾಗೂ ಬಿಳಿ ಬಣ್ಣಗಳ ಬಳಕೆ
ಈ ಅಶ್ಲೀಲ ಚಿತ್ರಗಳ ಪ್ರದರ್ಶನ ಕೆಲವೆಡೆ ಕಾನೂನುಬದ್ಧವಾದ ಬಳಿಕವೂ ಕೆಲವು ನಿಯಮಗಳು ಉಳಿದುಕೊಂಡಿದ್ದುವಂತೆ. ಈ ಸಿನಿಮಾದ ಪ್ರಚಾರ ಮಾಡಬಾರದು, ಮಾಡಿದರೂ ಮಕ್ಕಳನ್ನು ಸೆಳೆಯುವಂತಿರಬಾರದು ಎಂಬ ನಿಯಮ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಾರಂಭವಾಯಿತಂತೆ. ಆಗ ವಿವಿಧ ಆಕರ್ಷಕ ಬಣ್ಣಗಳನ್ನು ಬಳಸುವ ಬದಲಿಗೆ, ನೀಲಿ ಹಾಗೂ ಬಿಳಿ ಬಣ್ಣಗಳನ್ನಷ್ಟೆ ಬಳಸಿ ಈ ಸಿನಿಮಾಗಳ ಪ್ರದರ್ಶನದ ಬಗ್ಗೆ ಪ್ರಚಾರ ಆರಂಭಿಸಲಾಯ್ತಂತೆ. ಈ ಸಿನಿಮಾಗಳನ್ನು ಬ್ಲೂ ಫಿಲಂ ಎಂದು ಕರೆಯಲು ಇದೂ ಒಂದು ಕಾರಣ ಎನ್ನಲಾಗುತ್ತದೆ.


Click it and Unblock the Notifications











