twitter
    For Quick Alerts
    ALLOW NOTIFICATIONS  
    For Daily Alerts

    ಭಾರತಕ್ಕೆ 'ಆಸ್ಕರ್' ಗೆಲ್ಲಲು ಇದುವರೆಗೂ ಸಾಧ್ಯವಾಗಿಲ್ಲ ಏಕೆ?

    |

    ವಿಶ್ವ ಸಿನಿರಂಗದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್. ಸಿನಿಮಾ ಜಗತ್ತಿನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಆಸ್ಕರ್ ಗೆಲ್ಲಬೇಕು ಎನ್ನುವ ದೊಡ್ಡ ಕನಸು ಇದ್ದೇ ಇರುತ್ತೆ. ಅದರಲ್ಲು ಕೆಲವರು ಆಸ್ಕರ್ ಅನ್ನೆ ಗುರಿಯಾಗಿಸಿಕೊಂಡು, ಗೆದ್ದೆ ಗೆಲ್ಲಬೇಕು ಎನ್ನುವ ಹಠಕ್ಕೆ ಬಿದ್ದು ಸಿನಿಮಾ ಮಾಡಿ, ಪ್ರತೀವರ್ಷ ಅಕಾಡೆಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಚಿನ್ನದ ಪ್ರತಿಮೆ ಹಿಡಿದು ಬೀಗುತ್ತಾರೆ.

    ಆದರೆ ಈ ಆಸ್ಕರ್ ಎನ್ನುವುದು ಭಾರತೀಯರ ಪಾಲಿಗೆ ಗಗನಕುಸುಮವಾಗಿದೆ. ಉತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಭಾರತೀಯರು ಆಸ್ಕರ್ ಗೆದ್ದ ಉದಾಹರಣೆಯೇ ಇಲ್ಲ. ಗೆಲ್ಲುವುದಿರಲಿ ಭಾರತೀಯ ಚಿತ್ರಗಳು ಆಸ್ಕರ್ ಸ್ಪರ್ಧೆಗೆ ನಾಮನಿರ್ದೇಶನಗೊಳ್ಳುವುದೆ ತೀರಾ ವಿರಳ.

    ವಿಶ್ವಭೂಪಟದಲ್ಲಿ ಇರುವ ಪುಟ್ಟ ಪುಟ್ಟ ದೇಶಗಳು ಆಸ್ಕರ್ ಗೆದ್ದು ಬೀಗುತ್ತಿರುತ್ತಾರೆ. ಪ್ರತಿಷ್ಠಿತ ಒಲಂಪಿಕ್ ಮತ್ತು ನೋಬೆಲ್ ಪ್ರಶಸ್ತಿ ಪಡೆಯಲು ಸಾಧ್ಯವಾಗದಂತಹ ದೇಶಗಳು ಆಸ್ಕರ್ ಗೆಲ್ಲುವ ಮೂಲಕ ವಿಶ್ವ ಭೂಪಟದಲ್ಲಿ ತನ್ನ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿಕೊಂಡಿವೆ. ಅಲ್ಲದೆ ಆಸ್ಕರ್ ಮೂಲಕ ದೇಶದ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿವೆ.

    Why India Cant Win Oscar Awards

    ಪುಟ್ಟ ಪುಟ್ಟ ದೇಶಗಳು ಮಾಡುವ ಸಾಧನೆಯನ್ನು ವಿಶ್ವದಲ್ಲಿಯೆ ಅತೀ ಹೆಚ್ಚು ಜನ ಸಂಖ್ಯೆ ಹೊಂದಿರುವ ಚೀನಾ ಮತ್ತು ಭಾರತಕ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಎರಡು ದೇಶದಲ್ಲಿ ಏನಿಲ್ಲ ಅಂದರೂ ವರ್ಷಕ್ಕೆ 3000ಹೆಚ್ಚು ಸಿನಿಮಾಗಳು ತೆರೆಗೆ ಬರುತ್ತವೆ. ಅಕಾಡೆಮಿ ಅವಾರ್ಡ್ ವಿದೇಶಿ ಸಿನಿಮಾ ವಿಭಾಗ ಪರಿಚಯಿಸಿ 60 ವರ್ಷಗಳಾಗಿದೆ. ಇದುವರೆಗೂ ಸುಮಾರು 300 ಸಿನಿಮಾಗಳು ನಾಮನಿರ್ದೇಶನಗೊಂಡಿವೆ. ಆದರೆ ಇದುವರೆಗೂ ಭಾರತದಿಂದ ಕೇವಲ 3 ಸಿನಿಮಾಗಳು ನಾಮನಿರ್ದೇಶನಗೊಂಡಿವೆ. ಚೀನಾದಿಂದ 2 ಸಿನಿಮಾಗಳು ಮಾತ್ರ ನಾಮನಿರ್ದೇಶನಗೊಂಡಿವೆ.

    ಆಸ್ಕರ್ 2020 LIVE: ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿಆಸ್ಕರ್ 2020 LIVE: ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

    ಆಸ್ಕರ್ ಗೆಲ್ಲಲು ಭಾರತಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ

    ಮುಖ್ಯವಾದ ಕಾರಣವೆಂದರೆ ಆಸ್ಕರ್ ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ಯುರೋಪಿಯನ್ ಸಿನಿಮಾಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಸುಮಾರು 80ರಷ್ಟು ವಿದೇಶಿ ವಿಭಾಗದ ಸಿನಿಮಾಗಳು ಯುರೋಪ್ ದೇಶಗಳ ಪಾಲಾಗಿವೆ. ಇನ್ನು ಯುರೋಪ್ ಬಿಟ್ಟರೆ ಜಪಾನ್, ಇಸ್ರೇಲ್, ಮ್ಯಕ್ಸಿಕೋ ಮತ್ತು ಚೀನಾದ ನೆರೆ ರಾಷ್ಟ್ರಗಳಾದ ತೈವಾನ್, ಹಾಂಕ್ ಕಾಂಗ್ ದೇಶಗಳು ಸಹ ವಿದೇಶಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿವೆ. ಆದರೆ ಚೀನಾ ಮತ್ತು ಭಾರತ ದೇಶಗಳಿಗೆ ಇದು ಸಾಧ್ಯವಾಗದಿರುವುದು ದುರಂತ.

    Why India Cant Win Oscar Awards

    ಆಸ್ಕರ್ ಗುರಿಯಾಗಿಸಿಕೊಂಡು ಸಿನಿಮಾ ಮಾಡುತ್ತಿಲ್ಲ

    ಈಗಾಗಲೆ ಹೇಳಿದ ಹಾಗೆ ಭಾರತ ಮತ್ತು ಚೀನಾದಲ್ಲಿ ವರ್ಷಕ್ಕೆ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ ಆಸ್ಕರ್ ಗೆಲ್ಲುವಂತ ಮೌಲ್ಯಯುತ ಸಿನಿಮಾಗಳು ಭಾರತದಲ್ಲಿ ತಯಾರಾಗುತ್ತಿಲ್ಲ. ಇಲ್ಲಿ ಸ್ಥಳಿಯ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಜನಪ್ರಿಯ ಸಿನಿಮಾಗಳನ್ನು ತಯಾರಿಸುವಲ್ಲಿ ಮಾತ್ರ ಹೆಚ್ಚು ಒಲವು ತೋರುತ್ತಾರೆಯೆ ಹೊರತು, ಪ್ರಪಂಚದ ಪ್ರೇಕ್ಷಕರನ್ನು ಆಕರ್ಷಿಸುವ ಅಗತ್ಯ ಅವರಿಗೆ ಇರುವುದಿಲ್ಲ. ಇನ್ನು ಚೀನಾದ ವಿಚಾರಕ್ಕೆ ಬಂದರೆ ಅಲ್ಲಿ ಕಟ್ಟು ನಿಟ್ಟಾದ ಸೆನ್ಸಾರ್ ಇದೆ. ಕಲಾತ್ಮಕ ಅಭಿವ್ಯಕ್ತಿಯನ್ನು ಸೀಮಿತಗೊಳಿಸಿಕೊಂಡಿದೆ. ಹಾಗಾಗಿ ಕಲಾತ್ಮಕ ಚಿತ್ರಗಳನ್ನು ತಯಾರಿಸುವಲ್ಲಿ ಚೀನಾ ಹಿಂದೆ ಬಿದ್ದಿದೆ.

     ಅಂದು ನೋವು ನುಂಗಿದ್ದ ನಟಿ ಇಂದು ಆಸ್ಕರ್ ವೇದಿಕೆ ಮೇಲೆ ಚಪ್ಪಾಳೆ ಗಿಟ್ಟಿಸಿದ್ಳು.! ಅಂದು ನೋವು ನುಂಗಿದ್ದ ನಟಿ ಇಂದು ಆಸ್ಕರ್ ವೇದಿಕೆ ಮೇಲೆ ಚಪ್ಪಾಳೆ ಗಿಟ್ಟಿಸಿದ್ಳು.!

    ಉತ್ತಮ ಸಿನಿಮಾಗಳು ಬಂದರೂ ಆಯ್ಕೆ ಆಗಲ್ಲ

    ಭಾರತದಲ್ಲಿ ಸಾಕಷ್ಟು ಉತ್ತಮ ಸಿನಿಮಾಗಳು ಬರುತ್ತಿವೆ. ಆದರೆ ಆಸ್ಕರ್ ಅಂತಹ ಪ್ರತಿಷ್ಠಿತ ಅವಾರ್ಡ್ ಗೆ ಕಳುಹಿಸುವಾಗ ಉತ್ತಮ ಸಿನಿಮಾಗಳನ್ನು ಕಡೆಗಣಿಸಲಾಗುತ್ತಿದೆ. ಅಲ್ಲದೆ ಭಾರತದಲ್ಲಿ ದಕ್ಷಿಣ ಭಾರತೀಯ ಸಿನಿಮಾಗಳಿಗೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿಲ್ಲ. ಬಾಲಿವುಡ್ ಸಿನಿಮಾಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತೆ. ಸಿನಿಮಾಗಳ ಆಯ್ಕೆಯಲ್ಲಿ ತಾರತಮ್ಯ ಧೋರಣೆ ಮಾಡುತ್ತಿರುವುದರಿಂದ ಭಾರತ ಆಸ್ಕರ್ ನಿಂದ ಬಹುದೂರ ಉಳಿಯುವಂತಾಗಿದೆ.

    Why India Cant Win Oscar Awards

    ಭಾರತ ಮಾಡಬೇಕಾಗಿದ್ದು ಏನು?

    ಭಾರತ ಮತ್ತು ಚೀನಾ ಮೊದಲು ಮಾಡಬೇಕಾದ್ದು ಇಷ್ಟೆ. ಆಸ್ಕರ್ ಅನ್ನು ತುಂಬ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು. ಆಸ್ಕರ್ ಬಗ್ಗೆ ಸರಿಯಾಗಿ ತಿಳಿದುಕೊಂಡು, ಆಸ್ಕರ್ ಗೆಲುವಿಗೆ ಏನು ಮಾಡಬೇಕೆಂದು ಅರಿತು ಆ ಕಡೆ ಹೆಚ್ಚು ಗಮನಹರಿಸಿ ಸಿನಿಮಾ ಮಾಡಬೇಕು. ಆಸ್ಕರ್ ಬಗ್ಗೆ ಸಲಹೆಗಾರರು ಇರುತ್ತಾರೆ. ಅವರ ಬಳಿ ಸರಿಯಾದ ಸಲಹೆ ಪಡೆದುಕೊಂಡು ಸರಿಯಾದ ಸಿನಿಮಾ ಮಾಡಬೇಕು. ಆಸ್ಕರ್ ಗಾಗಿಯೆ ಸಿನಿಮಾ ಮಾಡಿದರೆ ಖಂಡಿತ ಭಾರತ ಕೂಡ ಆಸ್ಕರ್ ಗೆದ್ದು ವಿಶ್ವಮಟ್ಟದಲ್ಲಿ ಬೀಗಬಹುದು.

    English summary
    why India can't win Oscar awards. Here are the reasons why Indians don't win an Oscar.
    Friday, February 21, 2020, 9:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X