ನಟ ವಿನೋದ್ ರಾಜ್ ಪತ್ನಿ, ಮಗ ಚೆನ್ನೈನಲ್ಲಿ ಇರೋದ್ಯಾಕೆ? ಮಗ ಏನ್ ಕೆಲ್ಸ ಮಾಡ್ತಿದ್ದಾನೆ?
ನಟಿ ಲೀಲಾವತಿ ಪುತ್ರ ವಿನೋದ್ ರಾಜ್ ಕೂಡ ಚಿತ್ರರಂಗ ಪ್ರವೇಶಿಸಿದ್ದರು. ಒಂದಷ್ಟು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದರು. ಆದರೆ ದೊಡ್ಡ ಸಕ್ಸಸ್ ಸಿಗಲಿಲ್ಲ. ಇನ್ನು ವೈಯಕ್ತಿಕ ವಿಚಾರಗಳಿಂದ ಲೀಲಾವತಿ ಹಾಗೂ ವಿನೋದ್ ರಾಜ್ ಪದೇ ಪದೆ ಸುದ್ದಿ ಆಗಿದ್ದರು. ಬಹಳ ವರ್ಷಗಳ ಕಾಲ ವಿನೋದ್ ರಾಜ್ ತಮ್ಮ ಮದುವೆ ವಿಚಾರವನ್ನು ಮುಚ್ಚಿಟ್ಟಿದ್ದರು.
ಅನು ಎಂಬುವವರ ಜೊತೆ ವಿನೋದ್ ರಾಜ್ ಮದುವೆ ಆಗಿತ್ತು. ಅದು ಅರೇಂಜ್ಡ್ ಮ್ಯಾರೇಜ್ ಆಗಿತ್ತು. ತಿರುಪತಿಯಲ್ಲಿ ಮಗನ ಮದುವೆ ಮಾಡಿಸಿದ್ದರು ಲೀಲಾವತಿ. 3 ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಗನ ಮದುವೆ ಬಗ್ಗೆ ಲೀಲಾವತಿ ಮಾತನಾಡಿದ್ದರು. ಸದ್ಯ ವಿನೋದ್ ರಾಜ್ ಪತ್ನಿ ಅನು ಹಾಗೂ ಮಗ ಯುವರಾಜ್ ಚೆನ್ನೈನಲ್ಲಿ ನೆಲೆಸಿದ್ದಾರೆ. ಲೀಲಾವತಿ ಅವರಿಗೆ ಚೆನ್ನೈನಲ್ಲಿ ತೋಟ ಇದೆ. ಅದನ್ನು ತಾಯಿ, ಮಗ ನೋಡಿಕೊಳ್ಳುತ್ತಿದ್ದಾರೆ ಎಂದು ವಿನೋದ್ ರಾಜ್ ತಿಳಿಸಿದ್ದಾರೆ. Beyond Limits ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ದಿಢೀರನೆ ಮದುವೆ ನಿಶ್ಚಯವಾಯಿತು. ಅರಕಲು ಬಟ್ಟೆಯಲ್ಲಿ ಹೋಗಿ ಮದುವೆ ಆಗಿ ಬಂದೆ. ತಿರುಪತಿಯಲ್ಲಿ ಅಮ್ಮ ನಿಂತು ನಮ್ಮ ಮದುವೆ ಮಾಡಿಸಿದರು. ಲವ್ ಅಲ್ಲ ಅರೇಜ್ ಮ್ಯಾರೇಜ್ ಎಂದು ವಿನೋದ್ ರಾಜ್ ನೆನಪಿಸಿಕೊಂಡಿದ್ದಾರೆ. "ಚೆನ್ನೈ ತೋಟದಲ್ಲಿ ಇದ್ದಾರೆ. ಮನೆ ಕಟ್ಟಿಸಿ ಕೊಟ್ಟಿದ್ದೀವಿ. ಇಲ್ಲಿ ಕೆಲ ದಿನಗಳ ಕಾಲ ಇದ್ದರು. ಆ ಆಸ್ತಿ ಬೆಲೆ ಈಗ ಹೆಚ್ಚಾಗಿದೆ. ಅದನ್ನು ನೋಡಿಕೊಳ್ಳಬೇಕು. ಹಾಗಾಗಿ ಅಲ್ಲಿ ಇದ್ದಾರೆ" ಎಂದು ತಿಳಿಸಿದ್ದಾರೆ.
ಮಗ ಕಂಪ್ಯೂಟರ್ ಇಂಜಿನಿಯರ್ ಆಗಿದ್ದಾನೆ. ಯುಕೆ ಕಂಪನಿಗೆ ಕೆಲಸ ಮಾಡ್ತಾನೆ. ಸಂಬಳ ತರ್ತಾನೆ ಎಂದು ವಿನೋದ್ ರಾಜ್ ತಿಳಿಸಿದ್ದಾರೆ. "ಸಂಬಳದ ಹಣವನ್ನು ಅಮ್ಮನಿಗೆ ಕೊಡು, ಅಮ್ಮನಿಗೆ ಕೊಟ್ಟು ನಿನಗೆ ಬೇಕಿರುವಷ್ಟು ತೆಗೆದುಕೋ ಎಂದು ಹೇಳಿದ್ದೀನಿ. ನಾನು ನಮ್ಮ ಅಮ್ಮನ ಜೊತೆ ಇದ್ದಂತೆ, ಅವ್ನು ಅವ್ರ ಅಮ್ಮನಿಗೆ ಬೆಂಬಲವಾಗಿ ನಿಂತಿದ್ದಾನೆ. ನೀವು ಇಲ್ಲಿಗೆ ಬಂದಿದ್ರೆ ಚೆನ್ನಾಗಿತ್ತು ಎಂದು ಫೋನ್ ಅಲ್ಲಿ ಹೇಳ್ತಿರ್ತಾನೆ. ನಾನು ಅಲ್ಲಿಗೆ ಬಂದ್ರೆ, ಇಲ್ಲಿನ ವ್ಯವಸ್ಥೆ ಹದಗೆಡುತ್ತೆ. ನಾನು ನಮ್ಮ ಅಮ್ಮನನ್ನು ನೋಡ್ಕೊಂಡೆ, ನೀನು ನಿಮ್ಮ ಅಮ್ಮನನ್ನು ನೋಡ್ಕೊ ಅಂತೀತಿ" ಎಂದಿದ್ದಾರೆ.

ದಿನಾ ಫೋನ್ ಮಾಡಿ ಮಾತನಾಡ್ತೀನಿ. ಮಗನಿಗೆ ಸಲಹೆ ನೀಡುತ್ತೇನೆ. ನಾನು ಮಗುವಾಗಿದ್ದಾಗ ಸೇವಕರ ಬಳಿ ನನ್ನನ್ನು ಬಿಟ್ಟು ಅಮ್ಮ ಚಿತ್ರೀಕರಣಕ್ಕೆ ಹೋಗ್ತಿದ್ರು. ನಾನು ಅವ್ರ ಬಳಿ ಬೆಳೆದೆ. ನನಗೆ ಬುದ್ಧಿ ಬಂದಮೇಲೆ ಅಮ್ಮ ನನಗೆ ಜವಾಬ್ದಾರಿ ಕೊಡಲು ಶುರು ಮಾಡಿದರು ಎಂದು ವಿನೋದ್ ರಾಜ್ ವಿವರಿಸಿದ್ದಾರೆ.
ವಿನೋದ್ ರಾಜ್ ಮದುವೆ ಆಗಿಲ್ಲ. ತಾಯಿಯ ಸೇವೆ ಮಾಡಿಕೊಂಡು ಮದುವೆ ಆಗದೇ ಉಳಿದುಬಿಟ್ಟಿದ್ದಾರೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ ವಿನೋದ್ ರಾಜ್ ಅವರಿಗೆ ಮದುವೆ ಆಗಿದೆ ಎಂದು 3 ವರ್ಷಗಳ ಹಿಂದೆ ಡಾ. ರಾಜ್ ಕುಟುಂಬಕ್ಕೆ ಆಪ್ತರಾಗಿದ್ದ ಪ್ರಕಾಶ್ ರಾಜ್ ಮೇಹು ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಸಮೇತ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈ ವಿಚಾರ ಭಾರೀ ಚರ್ಚೆ ಆಗುತ್ತಿದ್ದಂತೆ ಸ್ವತಃ ಲೀಲಾವತಿ ಹಾಗೂ ವಿನೋದ್ ರಾಜ್ ಪ್ರತಿಕ್ರಿಯಿಸಿದ್ದರು. ಸಿನಿ ವರ್ಲ್ಡ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿದ್ದರು.
ಲೀಲಾವತಿ ನಿಧನರಾದಾಗ ಅಂತ್ಯಕ್ರಿಯೆಯಲ್ಲಿ ವಿನೋದ್ ರಾಜ್ ಪತ್ನಿ ಅನು ಹಾಗೂ ಮಗ ಯುವರಾಜ್ ಸಹ ಭಾಗಿ ಆಗಿದ್ದರು. ಅಜ್ಜಿಯ ಬಗ್ಗೆ ಯುವರಾಜ್ ಮಾಧ್ಯಮಗಳ ಜೊತೆ ಮಾತನಾಡಿದ್ದರು.


Click it and Unblock the Notifications