ಹೊಸ ವರ್ಷದ 6 ತಿಂಗಳು ಕನ್ನಡ ಸಿನಿ ರಸಿಕರಿಗೆ ಹಬ್ಬ.. ಹಬ್ಬ.. ಅಬ್ಬಬ್ಬಾ

ಪ್ಯಾನ್ ಇಂಡಿಯಾ ಸಿನಿಮಾ ಗುಂಗಿಗೆ ಬಿದ್ದು ಕನ್ನಡದಲ್ಲಿ ದೊಡ್ಡ ಸಿನಿಮಾಗಳ ಸಂಖ್ಯೆ ಕಮ್ಮಿ ಆಗುತ್ತಿದೆ. ಸ್ಟಾರ್ ನಟರೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಹಠಕ್ಕೆ ಬಿದ್ದಂತೆ ಕಾಣ್ತಿದೆ. ಇದೇ ಕಾರಣಕ್ಕೆ ಒಳ್ಳೆ ಸಿನಿಮಾಗಳ ಬರ ಎದುರಿಸುವಂತಾಗಿದೆ.

'ಕಾಟೇರ', 'ಮಾರ್ಟಿನ್', 'ಮ್ಯಾಕ್ಸ್', 'UI', 'ಯುವ' ಹೀಗೆ ಈ ವರ್ಷ ಬರಬೇಕಿದ್ದ ಸಿನಿಮಾಗಳೆಲ್ಲಾ ಮುಂದಿನ ವರ್ಷಕ್ಕೆ ಪೋಸ್ಟ್‌ಪೋನ್ ಆಗಿದೆ. ದೊಡ್ಡ ಸಿನಿಮಾಗಳನ್ನು ಈ ವರ್ಷ ರಿಲೀಸ್ ಮಾಡಲು ಯಾರೂ ಪ್ರಯತ್ನಿಸುತ್ತಿಲ್ಲ. ಈ ವರ್ಷ ಕನ್ನಡದಲ್ಲಿ ಮೂರ್ನಾಲ್ಕು ದೊಡ್ಡ ಸಿನಿಮಾಗಳು ಮಾತ್ರ ಬಂದವು. ಆದರೆ ಯಾವುದು ಕೂಡ ದೊಡ್ಡಮಟ್ಟದಲ್ಲಿ ಸದ್ದು ಮಾಡಲಿಲ್ಲ.

why kannada audience Excited About 2024 first Half

'ಕ್ರಾಂತಿ', 'ಕಬ್ಜ', 'ಘೋಸ್ಟ್' ಸಿನಿಮಾಗಳು ಈ ವರ್ಷ ಕೊಂಚ ದೊಡ್ಡದಾಗಿ ಕಂಡ ಸಿನಿಮಾಗಳು. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. ಸದ್ಯ ಶಿವಣ್ಣನ 'ಘೋಸ್ಟ್' ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ಶುರುವಾದ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗುತ್ತಿದೆ. ಆ ನಿರೀಕ್ಷೆ ತಲುಪುವಲ್ಲಿ ಸಿನಿಮಾಗಳು ಮುಗ್ಗರಿಸುತ್ತಿವೆ.

KGF-2 ಬಂದೋಗಿ ಒಂದೂವರೆ ವರ್ಷ ಕಳೆದರೂ ಯಶ್ ಹೊಸ ಸಿನಿಮಾ ಘೋಷಿಸಲಿಲ್ಲ. ಸುದೀಪ್ ಒಂದು ವರ್ಷ ಬಿಡುವಿನ ಬಳಿಕ 'ಮ್ಯಾಕ್ಸ್' ಸಿನಿಮಾ ಶುರು ಮಾಡಿದರು. ಧ್ರುವ ಸರ್ಜಾ ಎಂದಿನಂತೆ ತಮ್ಮ ಸಿನಿಮಾ ರಿಲೀಸ್ ಡೇಟ್ ಮುಂದೂಡತ್ತಲೇ ಬರ್ತಿದ್ದಾರೆ. 'ಮಾರ್ಟಿನ್' ಈ ವರ್ಷ ಥಿಯೇಟರ್‌ಗೆ ಬರೋದಿಲ್ಲ ಎನ್ನುವುದು ಖಾತ್ರಿಯಾಗುತ್ತಿದೆ. ವಿಪರ್ಯಾಸ ಅಂದ್ರೆ ರಾಜ್ಯೋತ್ಸವ, ದೀಪಾವಳಿಗೆ ಒಳ್ಳೆ ಕನ್ನಡ ಸಿನಿಮಾಗಳು ತೆರೆಗೆ ಬರ್ತಿಲ್ಲ.

ಯುವ ರಾಜ್‌ಕುಮಾರ್ ನಟನೆಯ ಚೊಚ್ಚಲ ಸಿನಿಮಾ ಮಾರ್ಚ್‌ಗೆ ಪೋಸ್ಟ್‌ಪೋನ್ ಆಗಿದೆ. ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್ 22ಕ್ಕೆ 'ಯುವ' ದರ್ಬಾರ್ ಶುರುವಾಗಬೇಕಿತ್ತು. ಆದರೆ ಆ ಜಾಗಕ್ಕೆ ಪ್ರಭಾಸ್ 'ಸಲಾರ್' ಎಂಟ್ರಿ ಕೊಟ್ಟು 'ಯುವ'ನನ್ನು ಮುಂದಕ್ಕೆ ತಳ್ಳಿದೆ. ಮಾರ್ಚ್ 28ಕ್ಕೆ ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗಕ್ಕೆ ಪರಿಚಿತರಾಗಲಿದ್ದಾರೆ. 'ಭೀಮ'ನ ಅವತಾರದಲ್ಲಿ ದುನಿಯಾ ವಿಜಯ್‌ನ ನೋಡುವುದಕ್ಕೆ ಹೊಸ ವರ್ಷದವರೆಗೆ ಕಾಯಬೇಕಿದೆ.

2024ರಲ್ಲಿ ಮೊದಲ 6 ತಿಂಗಳು ದೊಡ್ಡ ದೊಡ್ಡ ಕನ್ನಡ ಸಿನಿಮಾಗಳು ಬರಲಿದೆ. ಸುದೀಪ್ ನಟನೆಯ 'ಮ್ಯಾಕ್ಸ್', ದರ್ಶನ್ ಅಭಿನಯದ 'ಕಾಟೇರ', ಧ್ರುವ 'ಮಾರ್ಟಿನ್', ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ 'ಯುವ', ಉಪೇಂದ್ರ ನಿರ್ದೇಶಿಸಿ ನಟಿಸಿರುವ 'UI', ದುನಿಯಾ ವಿಜಯ್ ಸಾರಥ್ಯದ 'ಭೀಮ' ಹೀಗೆ ಸಾಲು ಸಾಲು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿದೆ. ಮುಂದಿನ ವರ್ಷ ಕನ್ನಡ ಸಿನಿರಸಿಕರಿಗೆ ಮನರಂಜನೆಯ ರಸದೌತಣ ಕಾದಿದೆ.

ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಈ ವರ್ಷ ಕೊನೆಯದಾಗಿ ಬಿಡುಗಡೆಯಾಗಲಿರುವ ಕನ್ನಡ ಸಿನಿಮಾ ಅಂದ್ರೆ ತಪ್ಪಾಗಲ್ಲ. ನವೆಂಬರ್ 17ಕ್ಕೆ ಸಿನಿಮಾ ತೆರೆಗಪ್ಪಳಲಿದೆ. ಅದಕ್ಕಿಂತ ಒಂದು ವಾರ ಮುನ್ನ ಯಶಸ್ ಸೂರ್ಯ ನಟನೆಯ 'ಗರಡಿ' ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.

ಈ ಎರಡು ಸಿನಿಮಾಗಳನ್ನು ಹೊರತುಪಡಿಸಿ ಯಾವುದೇ ದೊಡ್ಡ ಸಿನಿಮಾ ಈ ವರ್ಷ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿಲ್ಲ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಕುತೂಹಲ ಮೂಡಿಸಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದಲ್ಲಿ ಸುದೀಪ್ 'ಮ್ಯಾಕ್ಸ್' ಚಿತ್ರದಲ್ಲಿ ನಟಿಸ್ತಿದ್ದಾರೆ. ಉಪ್ಪಿ ಬಹಳ ವರ್ಷಗಳ ನಂತರ 'UI' ಸಿನಿಮಾ ನಿರ್ದೇಶಿಸಿ ನಟಿಸಿದ್ದಾರೆ. ಎ. ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಟೀಸರ್ ರಿಲೀಸ್ ಆಗಿ ಸದ್ದು ಮಾಡಿದೆ.

More from Filmibeat

English summary
2024 First Half Will Definitely Go Big For sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X