ಶಿವಣ್ಣನ 'ಜೋಗಿ' ನೋಡಿ ಏನಿದೆ ಈ ಚಿತ್ರದಲ್ಲಿ ಎಂದಿದ್ದ ಪ್ರಭಾಸ್.. ಬಳಿಕ..

ಪ್ರಭಾಸ್.. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್. ತೆಲುಗು ಚಿತ್ರರಂಗದ ಅಜಾತಶತ್ರು. ತಾನಾಯ್ತು ತನ್ನ ಸಿನಿಮಾ ಆಯ್ತು ಎಂದು ಸೈಲೆಂಟ್ ಆಗಿ ಇದ್ದು ಬಿಡುತ್ತಾರೆ. 25ಕ್ಕೂ ಅಧಿಕ ಸಿನಿಮಾಗಳಲ್ಲಿ ಯಂಗ್ ಪ್ರಭಾಸ್ ಸ್ಟಾರ್ ಅಬ್ಬರಿಸಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರದಲ್ಲಿ ಬಣ್ಣ ಹಚ್ಚಿ ಗೆದ್ದಿದ್ದಾರೆ.

ಆರಂಭದಲ್ಲಿ ಪ್ರಭಾಸ್ ಸಿನಿ ಜರ್ನಿ ಸಾಧಾರಣವಾಗಿಯೇ ಶುರುವಾಗಿತ್ತು. ಬಳಿಕ ರಾಜಮೌಳಿ ನಿರ್ದೇಶನದ 'ಛತ್ರಪತಿ' ಚಿತ್ರ ದೊಡ್ಡದಾಗಿ ಬ್ರೇಕ್ ಕೊಟ್ಟಿತ್ತು. ಮುಂದೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. 'ಬಾಹುಬಲಿ' ಸರಣಿ ಸಿನಿಮಾಗಳ ನಂತರ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿಬಿಟ್ಟರು. ಪ್ರಭಾಸ್ ತಮ್ಮ ಸಿನಿ ಕರಿಯರ್‌ನಲ್ಲಿ ಎರಡು ರೀಮೆಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಒಂದು ಕನ್ನಡದ 'ಜೋಗಿ' ಸಿನಿಮಾ ರೀಮೆಕ್ 'ಯೋಗಿ'.

Why Prabhas starrer Kannada Jogi remake Yogi film flop in telugu

ಕನ್ನಡದಲ್ಲಿ ಪ್ರೇಮ್ ನಿರ್ದೇಶನದ 'ಜೋಗಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಟೈಟಲ್‌ ರೋಲ್‌ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟಿಸಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಮುಂದೆ ಈ ಸಿನಿಮಾ ತೆಲುಗು ಹಾಗೂ ತಮಿಳಿಗೆ ರೀಮೆಕ್ ಆಗಿತ್ತು. ಇದೇ ಚಿತ್ರವನ್ನು ತೆಲುಗು ನಿರ್ದೇಶಕ ವಿ. ವಿ ವಿನಾಯಕ್ ರೀಮೆಕ್ ಮಾಡಲು ಬಯಸಿದ್ದರು.

ತೆಲುಗಿನಲ್ಲಿ ಪ್ರಭಾಸ್ ಹಾಗೂ ನಯನತಾರ ನಟಿಸಿದ 'ಯೋಗಿ' ಸಿನಿಮಾ ಗೆಲ್ಲಲಿಲ್ಲ. ಬಹಳ ಅದ್ಧೂರಿಯಾಗಿಯೇ ಚಿತ್ರ ಮೂಡಿ ಬಂದಿತ್ತು. ಆರಂಭದಲ್ಲಿ ಸಿನಿಮಾ ರೀಮೆಕ್ ಮಾಡಬೇಕಾ? ಎಂದು ಪ್ರಭಾಸ್ ಯೋಚಿಸಿದ್ದರಂತೆ. ಕಾರಣ 'ಜೋಗಿ' ಕನ್ನಡದ ನೇಟಿವಿಟಿಗೆ ತಕ್ಕಂತ ಸಿನಿಮಾ. ಆದರೆ ಮದರ್ ಸೆಂಟಿಮೆಂಟ್ ಹಾಗೂ ರೌಡಿಸಂ ಎಲ್ಲರಿಗೂ ಕನೆಕ್ಟ್ ಆಗುತ್ತದೆ ಎಂದು ನಿರ್ದೇಶಕರು ಭಾವಿಸಿದ್ದರು.

Why Prabhas starrer Kannada Jogi remake Yogi film flop in telugu

ವಿ. ವಿ ವಿನಾಯಕ್ ಮೊದಲು ಪ್ರಭಾಸ್ ಭೇಟಿ ಆಗಿ ಕನ್ನಡದ 'ಜೋಗಿ' ಸಿನಿಮಾ ರೀಮೆಕ್ ಮಾಡೋಣ ಎಂದು ಚರ್ಚಿಸಿದ್ದರು. ಆಗ 'ಜೋಗಿ' ಚಿತ್ರ ನೋಡಿದ್ದ ಪ್ರಭಾಸ್, ಇದರಲ್ಲಿ ರೀಮೆಕ್ ಮಾಡುವಂಥದ್ದು ಏನಿದೆ? ಎಂದು ಕೇಳಿದ್ದರಂತೆ. ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾ. ಅಲ್ಲಿನ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಇಲ್ಲಿನ ಪ್ರೇಕ್ಷಕರಿಗೆ ರುಚಿಸುತ್ತಾ? ಎಂದು ಕೇಳಿದ್ದರಂತೆ. ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಸ್ವತಃ ಪ್ರಭಾಸ್ ಹೇಳಿಕೊಂಡಿದ್ದರು.

ಪ್ರಭಾಸ್ ಮಾತಿಗೆ ನಿರ್ದೇಶಕರು ಕಥೆಯ ತಿರುಳನ್ನು ಮಾತ್ರ ಇಟ್ಟುಕೊಂಡು ನಮ್ಮ ನೇಟಿವಿಟಿಗೆ ತಕ್ಕಂತೆ ಬದಲಿಸಿಕೊಳ್ಳೋಣ ಎಂದು ಹೇಳಿ ಒಪ್ಪಿಸಿದ್ದರಂತೆ. ತೆಲುಗಿನಲ್ಲಿ ಕಾಮಿಡಿ ದೃಶ್ಯಗಳನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಲಾಗಿತ್ತು. ರಮಣ ಗೋಗುಲ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಆದರೆ ಗುರುಕಿರಣ್ ಹಿನ್ನೆಲೆ ಸಂಗೀತ ನೀಡಿದ್ದರು. ಭಾರೀ ನಿರೀಕ್ಷೆ ಮೂಡಿಸಿದ್ದ 'ಯೋಗಿ' ಚಿತ್ರ ತೆಲುಗಿನಲ್ಲಿ ಗೆಲ್ಲಲಿಲ್ಲ.

ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಬಿ, ಸಿ ಸೆಂಟರ್‌ಗಳಲ್ಲಿ ತಕ್ಕಮಟ್ಟಿಗೆ 'ಯೋಗಿ' ಸಿನಿಮಾ ಸಕ್ಸಸ್ ಕಂಡಿತ್ತು. ಚಿತ್ರದಲ್ಲಿ ಪ್ರಭಾಸ್ ತಾಯಿ ಪಾತ್ರದಲ್ಲಿ ಶಾರದಾ ನಟಿಸಿದ್ದರು. ಅದಾಗಲೇ ಆಕೆ ಅಜ್ಜಿ ಪಾತ್ರಗಳಲ್ಲಿ ನಟಿಸಿದ್ದರು. ಅವರನ್ನು ಪ್ರಭಾಸ್ ತಾಯಿಯಾಗಿ ಪ್ರೇಕ್ಷಕರು ಸ್ವೀಕರಿಸಲಿಲ್ಲ, ಜೊತೆಗೆ ನಯನತಾರಾ ನಾಯಕಿಯಾಗಿ ಸೂಟ್ ಆಗಲಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು.

ಕನ್ನಡದಲ್ಲಿ ಮಾದೇಶ ಹಾಗೂ ಯೋಗೇಶ ಕಾಮಿಡಿ ಹೈಲೆಟ್ ಆಗಿತ್ತು. ಆದರೆ ತೆಲುಗಿನಲ್ಲಿ ವೇಣು ಮಾಧವನ್ ಕಾಂಬಿನೇಷನ್‌ನಲ್ಲಿ ಒಂದಷ್ಟು ಹೊಸ ಕಾಮಿಡಿ ದೃಶ್ಯಗಳನ್ನು ಸೇರಿಸಿದ್ದರು. ಒಟ್ಟಾರೆ ಸಿನಿಮಾ ಪ್ರೇಕ್ಷಕರನ್ನು ದೊಡ್ಡದಾಗಿ ರಂಜಿಸಲಿಲ್ಲ. 'ಯೋಗಿ' ಬಳಿಕ ಪ್ರಭಾಸ್ ನಟಿಸಿದ ಮತ್ತೊಂದು ರೀಮೆಕ್ ಸಿನಿಮಾ 'ಬಿಲ್ಲಾ'. ನಂತರ ಯಾವುದೇ ರೀಮೆಕ್ ಚಿತ್ರ ಒಪ್ಪಿಕೊಳ್ಳಲಿಲ್ಲ.

More from Filmibeat

English summary
Telugu Actor Prabhas first reaction after watching shivarajkumar starrer Kannada film Jogi
Read more about: prabhas shivarajkumar tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X