KGF 2: ಕೆಜಿಎಫ್ 2 ಸಿನಿಮಾ ವೀಕ್ಷಿಸಲು ಇಲ್ಲಿವೆ ಐದು ಕಾರಣಗಳು

ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದ 'ಕೆಜಿಎಫ್ 2' ಇಂದು ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನೆರೆಯ ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಅಂತೂ ರಾಕಿಭಾಯ್ ಹೊಸ ಹವಾನೇ ಸೃಷ್ಟಿಯಾಗಿದೆ. ತಮಿಳುನಾಡಿನಲ್ಲಿ ಸಿನಿಮಾ ನೋಡಿದ ಅಭಿಮಾನಿಗಳು, ವಿಜಯ್‌ರ 'ಬೀಸ್ಟ್' ಸಿನಿಮಾಗಿಂತಲೂ ಬಹುಪಾಲು ಉತ್ತಮ ಸಿನಿಮಾ 'ಕೆಜಿಎಫ್ 2' ಎಂದು ಹೊಗಳಿದ್ದಾರೆ.

ಕರ್ನಾಟಕದಲ್ಲಿಯೂ ಏಪ್ರಿಲ್ 13 ರ ಮಧ್ಯರಾತ್ರಿಯಿಂದಲೇ ಜನ ಮುಗಿಬಿದ್ದು ಸಿನಿಮಾವನ್ನು ನೋಡುತ್ತಿದ್ದಾರೆ. ಸಿನಿಮಾ ನೋಡಿದವರು ಸಿನಿಮಾದ ಒಳ್ಳೆಯ ಅಂಶಗಳನ್ನು ಪಟ್ಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. 'ಕೆಜಿಎಫ್ 2' ನಲ್ಲಿ ಗಮನ ಸೆಳೆಯುವ ಐದು ಅಂಶಗಳು ಅಥವಾ 'ಕೆಜಿಎಫ್ 2' ಸಿನಿಮಾ ನೋಡಲು ಕಾರಣವಾಗಬಹುದಾದ ಐದು ಅಂಶಗಳು ಇಲ್ಲಿವೆ...

ಅದ್ಭುತವಾದ ಮೇಕಿಂಗ್

ಅದ್ಭುತವಾದ ಮೇಕಿಂಗ್

ಕನ್ನಡ ಚಿತ್ರರಂಗ ಈವರೆಗೂ ನೋಡದ ರೀತಿಯ ಅದ್ಭುತ ಮೇಕಿಂಗ್ 'ಕೆಜಿಎಫ್ 2' ಸಿನಿಮಾದ್ದು. 'ಕೆಜಿಎಫ್ 1' ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದ ಪ್ರಶಾಂತ್ ನೀಲ್ ಅದಕ್ಕಿಂತಲೂ ಅದ್ಭುತವಾಗಿ 'ಕೆಜಿಎಫ್ 2' ಅನ್ನು ಕಟ್ಟಿಕೊಟ್ಟಿದ್ದಾರೆ. ಸಿನಿಮಾದ ರಿಚ್‌ನೆಸ್, ಎಡಿಟಿಂಗ್, ಸೆಟ್‌ಗಳು ಎಲ್ಲವೂ ಹೊಸದೊಂದು ಲೋಕಕ್ಕೆ ಪ್ರೇಕ್ಷಕನನ್ನು ಕರೆದುಕೊಂಡು ಹೋಗುತ್ತವೆ. ಆ ಅದ್ಭುತ ಮೇಕಿಂಗ್‌ನ ಅನುಭವ ಪಡೆದುಕೊಳ್ಳಲಿಕ್ಕೆ 'ಕೆಜಿಎಫ್ 2' ಸಿನಿಮಾವನ್ನು ನೋಡಲೇ ಬೇಕು.

ಅತ್ಯುತ್ತಮ ನಟನೆ

ಅತ್ಯುತ್ತಮ ನಟನೆ

ಸಿನಿಮಾದಲ್ಲಿ ಪ್ರತಿಭಾವಂತ ಸ್ಟಾರ್ ನಟರ ದಂಡೇ ಇದೆ. ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್‌ನ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ತೆಲುಗಿನ ರಾವ್ ರಮೇಶ್, ರಾಕಿ ಭಾಯ್ ತಾಯಿ ಪಾತ್ರದಲ್ಲಿ ನಟಿಸಿರುವ ಅರ್ಚನಾ ಜೋಯಿಸ್, ಮಾಳವಿಕಾ ಅವಿನಾಶ್ ಇನ್ನೂ ಹಲವರು ಅದ್ಭುತವಾಗಿ ನಟಿಸಿದ್ದಾರೆ. ಅದರ ಜೊತೆಗೆ ಕೆಲವು ಸಣ್ಣ ಪುಟ್ಟ ಪಾತ್ರಗಳ ನಟನೆಯೂ ಆಶ್ಚರ್ಯಕರವಾಗಿ ಚೆನ್ನಾಗಿದೆ. ಸಿನಿಮಾದ ಸಂಭಾಷಣೆಯೂ ಭೂಷಣವೇ.

ರಾಕಿ ಭವಿಷ್ಯ ಏನು?

ರಾಕಿ ಭವಿಷ್ಯ ಏನು?

'ಕೆಜಿಎಫ್ 1' ಸಿನಿಮಾ ನೋಡಿದ್ದ ಪ್ರೇಕ್ಷಕರಿಗೆ ಗೊತ್ತಿರುತ್ತದೆ, ಗರುಡನನ್ನು ಹೊಡೆದ ಬಳಿಕ ರಾಕಿಭಾಯ್ ಏನು ಮಾಡಲಿದ್ದಾನೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾದ ಕತೆಯನ್ನು ಕಟ್ಟಿದ್ದಾರೆ ಪ್ರಶಾಂತ್ ನೀಲ್. 'ಕೆಜಿಎಫ್' ಅನ್ನು ರಾಕಿಭಾಯ್‌ ಹೇಗೆ ವಿಸ್ತರಿಸುತ್ತಾನೆ, ಕಾಪಾಡಿಕೊಳ್ಳುತ್ತಾನೆ, ಅವನು ತನ್ನ ತಾಯಿಗೆ ಕೊಟ್ಟ ಮಾತನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎಂಬುದು ಸಿನಿಮಾದ ಕತೆ. ರಾಕಿ ಭಾಯ್ ಭವಿಷ್ಯ ತಿಳಿಯಲಾದರೂ ಸಿನಿಮಾವನ್ನು ನೋಡಲೇ ಬೇಕು.

ಸಿನಿಮಾದ ಹಿನ್ನೆಲೆ ಸಂಗೀತ ಮತ್ತು ಕ್ಯಾಮೆರಾ ಕೆಲಸ

ಸಿನಿಮಾದ ಹಿನ್ನೆಲೆ ಸಂಗೀತ ಮತ್ತು ಕ್ಯಾಮೆರಾ ಕೆಲಸ

ಸಿನಿಮಾದ ಹಿನ್ನೆಲೆ ಸಂಗೀತ ಹಾಗೂ ಕ್ಯಾಮೆರಾ ಕೆಲಸ ಬಹಳ ಚೆನ್ನಾಗಿದೆ. ರವಿ ಬಸ್ರೂರು ನೀಡಿರುವ ಸಂಗೀತ ಬಹಳ ಲೌಡ್ ಆಗಿದೆ, ಆದರೆ ರಾಕಿ ಭಾಯ್ ಅಂಥಹಾ ಪಾತ್ರಕ್ಕೆ ಆ ರೀತಿಯ ಅಬ್ಬರದ ಸಂಗೀತದ ಅವಶ್ಯಕತೆ ಇದೆ. ಸೆಂಟಿಮೆಂಟ್ ದೃಶ್ಯಗಳಲ್ಲಿಯೂ ಅವರ ಸಂಗೀತ ನೆನಪಾಗುತ್ತದೆ. ಸಿನಿಮಾದ ಕ್ಯಾಮೆರಾ ಕೆಲಸವಂತೂ ಅತ್ಯದ್ಭುತ. ಭುವನ್ ಗೌಡ ಪಟ್ಟಿರುವ ಶ್ರಮ ತೆರೆಯ ಮೇಲೆ ಕಾಣುತ್ತದೆ.

ಸಿನಿಮಾದ ಕ್ಲೈಮ್ಯಾಕ್ಸ್ ಅತ್ಯದ್ಭುತ

ಸಿನಿಮಾದ ಕ್ಲೈಮ್ಯಾಕ್ಸ್ ಅತ್ಯದ್ಭುತ

ಸಿನಿಮಾದ ಕ್ಲೈಮ್ಯಾಕ್ಸ್ ಅತ್ಯದ್ಭುತವಾಗಿದೆ. ಒಂದು ರೀತಿಯ ವೇದಾಂತವನ್ನು ಸಿನಿಮಾದ ಕ್ಲೈಮ್ಯಾಕ್ಸ್‌ಗೆ ನೀಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್‌. ಸಿನಿಮಾದ ಕ್ಲೈಮ್ಯಾಕ್ಸ್ ಕೆಲವರಿಗೆ ಹಿಡಿಸಬಹುದು, ರಾಕಿ ಅಭಿಮಾನಿಗಳಿಗೆ ಇಷ್ಟವಾಗದೆಯೂ ಇರಬಹುದು. ಆದರೆ ಕಮರ್ಶಿಯಲ್ ಸಿನಿಮಾದ ಮಟ್ಟಿಗೆ ಇದೊಂದು ತುಸು ಭಿನ್ನ ಕ್ಲೈಮ್ಯಾಕ್ಸ್ ಎನ್ನಬಹುದು. ಬಹುತೇಕ ಕಮರ್ಶಿಯಲ್ ಸಿನಿಮಾಗಳಲ್ಲಿ ಆಕ್ಷನ್‌ನಿಂದ ಸಿನಿಮಾ ಅಂತ್ಯಮಾಡಿದರೆ, 'ಕೆಜಿಎಫ್ 2' ಸಿನಿಮಾಕ್ಕೆ ಭಾವುಕ ಕ್ಲೈಮ್ಯಾಕ್ಸ್ ನೀಡಲಾಗಿದೆ.

More from Filmibeat

English summary
Why should people watch KGF 2 movie. Here is five reasons to watch the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X