ಅಣ್ಣಾವ್ರು 'ಮಣ್ಣಿನ ಮಗ' ಸಿನಿಮಾ ನೋಡಿ 'ಮಂಗನ ಮಗ' ಎಂದಿದ್ಯಾರು? ಹಾಗಂದವರ ಬಾಯಿ ಮುಚ್ಚಿದ್ದೇಗೆ?

By ಫಿಲ್ಮಿಬೀಟ್ ಡೆಸ್ಕ್

ಡಾ.ರಾಜ್‌ಕುಮಾರ್ ಅವರನ್ನು ಸುಖಾಸುಮ್ಮನೆ ವರನಟ ಅಂತ ಕರೆದಿಲ್ಲ. ಅಭಿಮಾನಿಗಳು ಅಣ್ಣಾವ್ರನ್ನು ಹಾಡಿಕೊಂಡಾಡುವುದಕ್ಕೆ ಅವರ ಸಿನಿಮಾಗಳೇ ಪ್ರಮುಖ ಕಾರಣ. ಇವರು ನಟಿಸಿದ ಒಂದೊಂದು ಸಿನಿಮಾವೂ ಇಂದಿಗೂ ಒಂದೊಂದು ಕಥೆಯನ್ನು ಹೇಳುತ್ತವೆ. ನಟ ಸಾರ್ವಭೌಮ ನಟಿಸಿದ ಸಿನಿಮಾಗಳ ಒಂದೊಂದು ಪಾತ್ರವನ್ನು, ಸೀನ್‌ಗಳನ್ನು ಕಣ್ಣಿಗೆ ಕಟ್ಟಿದ ಹಾಗೆ ಹೇಳುವ ಅಭಿಮಾನಿಗಳು ಇದ್ದಾರೆ.

ಅಣ್ಣಾವ್ರ ಸಿನಿಮಾಗಳು ಆ ಮಟ್ಟಿಗೆ ಅಭಿಮಾನಿಗಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿತ್ತು. ರಾಜ್‌ಕುಮಾರ್ ಸಿನಿಮಾಗಳನ್ನು ನೋಡಿ ಬದುಕು ಬದಲಿಸಿಕೊಂಡಿರುವ ಅದೆಷ್ಟೋ ಅಭಿಮಾನಿಗಳನ್ನು ನೋಡಿದ್ದೇವೆ. ರಾಜ್‌ಕುಮಾರ್ ಅವರ ಅಭಿನಯ, ಸಿನಿಮಾದ ಕಥೆ, ಮೇಕಿಂಗ್ ಆ ಮಟ್ಟಿಗೆ ಪರಿಣಾಮವನ್ನು ಬೀರುತ್ತಿದ್ದವು. ಇಂತಹದ್ದೇ ಸಿನಿಮಾಗಳ ಸಾಲಿನಲ್ಲಿ 'ಮಣ್ಣಿನ ಮಗ' ಕೂಡ ಒಂದು.

Why the Rajkumar starrer Mannina Maga film was criticized as Mangana Maga

'ಮಣ್ಣಿನ ಮಗ' ಕನ್ನಡದ ಮತ್ತೊಬ್ಬ ಲೆಜೆಂಡರಿ ನಿರ್ದೇಶಕ ಗೀತ ಪ್ರಿಯ ನಿರ್ದೇಶಿಸಿದ್ದ ಚೊಚ್ಚಲ ಸಿನಿಮಾ. ರಾಜ್‌ಕುಮಾರ್ ಹಾಗೂ ಗೀತ ಪ್ರಿಯ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಬಂದಿತ್ತು. ಈ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ವಿತರಕರು ಯಾರೂ ಮುಂದೆ ಬಂದಿರಲಿಲ್ಲ. ಅಲ್ಲದೆ 'ಮಣ್ಣಿನ ಮಗ' ಸಿನಿಮಾವನ್ನು 'ಮಂಗನ ಮಗ' ಎಂದು ಟೀಕಿಸಿದ್ದರಂತೆ. ಆದರೆ, ಈ ಸಿನಿಮಾ ಬಿಡುಗಡೆ ಆದ್ಮೇಲೆ ಆಗಿದ್ದೇ ಬೇರೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ಗೀತ ಪ್ರಿಯ 'ಮಣ್ಣಿನ ಮಗ' ಸಿನಿಮಾದ ಕತೆಯೇ ಹಾಕಿತ್ತು. 1968ರಲ್ಲಿ ಈ ಸಿನಿಮಾ ಕಥೆಯನ್ನು ಯಾರೂ ನಂಬುವಂತೆ ಇರಲಿಲ್ಲ. ನಾಯಕಿ ಹಳ್ಳಿಯ ಬದುಕಿಗಾಗಿ ನಗರದ ಬದುಕನ್ನು ತಿರಸ್ಕರಿಸುವ ಕಥೆ. ಈ ಪಾತ್ರದಲ್ಲಿ ಮಿನುಗುತಾರೆ ಕಲ್ಪನಾ ಅವರು ನಟಿಸಿದ್ದರು. ಇವರೊಂದಿಗೆ ಅಣ್ಣಾವ್ರು ರಾಜನ ಪಾತ್ರದಲ್ಲಿ ನಟಿಸಿದ್ದರು. ಆಗತಾನೇ ಜನರು ನಗರದ ಬದುಕಿಗೆ ತೆರೆದುಕೊಳ್ಳುತ್ತಿದ್ದರು. ನಗರ ಜೀವನದ ಕಡೆಗೆ ಆಕರ್ಷಿತರಾಗಿದ್ದರು. ಆದರೆ, ಗೀತ ಪ್ರಿಯ ಉಲ್ಟ ಕಥೆಯನ್ನು ಹೇಳಿದ್ದರು. ಹೀಗಾಗಿ ಆಗಿನ ಕಾಲದ ವಿತರಕರು ಈ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರಂತೆ.

ರಾಜ್‌ಕುಮಾರ್, ಕಲ್ಪನಾ ನಟಿಸಿದ 'ಮಣ್ಣಿನ ಮಗ' ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ವಿತರಕರೇ ಇರಲಿಲ್ಲವಂತೆ. ಹೀಗಾಗಿ ಸಿನಿಮಾ ರೆಡಿಯಾಗಿದ್ದರೂ ಒಂದು ವರ್ಷಗಳ ಕಾಲ ಬಿಡುಗಡೆಯೇ ಆಗಿರಲಿಲ್ಲ. ಕೆಲವ ವಿತರಕರು ಈ ಹಳ್ಳಿ ಕಥೆಯನ್ನು ಯಾರು ನೋಡುತ್ತಾರೆ ಎಂದು ಟೀಕಿಸಿದ್ದರಂತೆ. ಆದರೂ ಹೇಗೋ ಕಷ್ಟ ಪಟ್ಟು ಈ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ನಂತರ ಚಿತ್ರಮಂದಿರದಲ್ಲಿ ಆಗಿದ್ದು, ಇತಿಹಾಸ.

ಇದೇ ಸಮಯಕ್ಕೆ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಒಳ್ಳೆಯ ಸುದ್ದಿ ಸಿಕ್ಕಿತ್ತು. ಬೆಂಗಳೂರಿನಲ್ಲಿ ಏಷ್ಯಾದ ಅತೀ ದೊಡ್ಡ ಚಿತ್ರಮಂದಿರ ಕಾರ್ಯಾರಂಭ ಮಾಡಿತ್ತು. ಅದುವೇ ಕಪಾಲಿ ಚಿತ್ರಮಂದಿರ. 1465 ಸೀಟುಗಳನ್ನು ಹೊಂದಿರುವ ಈ ಚಿತ್ರಮಂದಿರದಲ್ಲಿ ಕನ್ನಡದ ಎಷ್ಟೋ ಸಿನಿಮಾಗಳು ಸೂಪರ್‌ ಹಿಟ್ ಆಗಿವೆ. 1968ರಲ್ಲಿ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಮೊರಾರ್ಜಿ ದೇಸಾಯಿ ಕಪಾಲಿ ಥಿಯೇಟರ್‌ ಅನ್ನು ಉದ್ಘಾಟನೆ ಮಾಡಿದ್ದರು. ಈ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೊದಲ ಸಿನಿಮಾವೇ 'ಮಣ್ಣಿನ ಮಗ'.

ಆದರೆ, ಅಂದು ಇದೇ 'ಮಣ್ಣಿನ ಮಗ' ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ವಿತರಕರು ಯಾರೂ ಮುಂದೆ ಬಂದಿರಲಿಲ್ವಂತೆ. ಎಲ್ಲರೂ 'ಮಣ್ಣಿನ ಮಗ' ಸಿನಿಮಾವನ್ನು 'ಮಂಗನ ಮಗ' ಎಂದು ತಮಾಷೆ ಮಾಡಿದ್ದರು. "ಮಣ್ಣಿನ ಮಗ ಗೀತಪ್ರಿಯ ಅವರ ನಿರ್ದೇಶನ, ರಾಜ್ ಕುಮಾರ್, ಕಲ್ಪನಾ ಅಭಿನಯಿಸಿದ ಸಿನಿಮಾ. ಆ ಕಾಲದಲ್ಲಿ 'ಮಣ್ಣಿನ ಮಗ' ಚಿತ್ರದ ವಿತರಣೆಗೆ ಸರಿಯಾದ ಹಂಚಿಕೆದಾರರು ಸಿಗದೆ ಒಂದುವರೆ ವರ್ಷ ಡಬ್ಬದಲ್ಲಿದ್ದು, ಕೆಲ ವಿತರಕರು ಈ ಹಳ್ಳಿ ಕತೆ ಯಾರಿಗೆ ಬೇಕಾಗಿದೆ. ಇದು 'ಮಣ್ಣಿನ ಮಗ' ಬದಲಿಗೆ 'ಮಂಗನ ಮಗ' ಎಂದು ತಮಾಷೆ ಮಾಡಿದವರೆ ಹೆಚ್ಚು ಜನರಂತೆ. ಹೇಗೋ ಕಷ್ಟ ಪಟ್ಟು ಬಿಡುಗಡೆ ಮಾಡಿದರು. ಈ ಚಿತ್ರ ಎರಡು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡಿತು. 1968ರ ಬೆಸ್ಟ್ ಫಿಲಂ ನ್ಯಾಷನಲ್ ಅವಾರ್ಡ್ ಪಡೆಯಿತು. ಕರ್ನಾಟಕ ರಾಜ್ಯದ ಮೂರನೇ ಅತ್ಯುತ್ತಮ ಚಿತ್ರ ಮತ್ತು ಉತ್ತಮ ಚಿತ್ರಕಥಾ ಪ್ರಶಸ್ತಿ ಗೀತಪ್ರಿಯ ಅವರಿಗೆ ಲಭಿಸುತ್ತದೆ. ಬೆಂಗಳೂರು ನಗರದ ಕಪಾಲಿ ಚಿತ್ರಮಂದಿರದ ಪ್ರಥಮ ಪ್ರದರ್ಶನದ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಒಂದು ಸೃಜನಶೀಲ, ಕಥಾವಸ್ತುವಿನ ಮೌಲ್ಯ ಸಿನಿ ಜಗತ್ತಿಗೆ ಹಾಗೂ ಜನಕ್ಕೆ ಗೊತ್ತಾಗುವುದು ನಿಧಾನವೇ ಅಲ್ಲವೇ." ಎಂದು ಪರಮ್ ಗುಬ್ಬಿ ಎಂಬುವವರು ಬರೆದುಕೊಂಡಿದ್ದಾರೆ.

'ಮಣ್ಣಿನ ಮಗ' ಸಿನಿಮಾ ಕನ್ನಡ ಚಿತ್ರರಂಗ ಕಂಡ ಬೆಸ್ಟ್ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಬಿಡುಗಡೆಯಾಗುವುದೇ ಕಷ್ಟ ಎನಿಸಿತ್ತು. ಈ ಸಿನಿಮಾವನ್ನು ಹಂಚಿಕೆ ಮಾಡುವುದಕ್ಕೆ ಹಿಂದೇಟು ಹಾಕಿದವರು ಕೈ ಕೈ ಹಿಸುಕಿ ಕೊಳ್ಳುವಂತಾಯ್ತು. ಡಾ.ರಾಜ್‌ಕುಮಾರ್, ಕಲ್ಪನಾ ಹಾಗೂ ನಿರ್ದೇಶಕ ಗೀತ ಪ್ರಿಯಾ ಜೋಡಿ ತೆರೆಮೇಲೆ ಮೋಡಿ ಮಾಡಿತ್ತು. ಪ್ರೇಕ್ಷಕರು ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡರು. ಸಾಮಾಜಿಕ ಸಂದೇಶ ಸಾರಿದ ಸಿನಿಮಾವನ್ನು ಹೊಗಳಿಕೊಂಡಾಡಿದ್ದರು.

ನಿರ್ದೇಶನದ ಜೊತೆ ಜೊತೆಗೆ ಸಿನಿಮಾದ ಹಾಡುಗಳು ಕೂಡ ಪ್ರೇಕ್ಷಕರಿಗೆ ಮೋಡಿ ಮಾಡಿದ್ದವು. ಅದರಲ್ಲೂ, ವಿಜಯ್ ಭಾಸ್ಕರ್ ಸಂಗೀತ ಸಂಯೋಜಿಸಿದ "ಭಗವಂತ ಕೈ ಕೊಟ್ಟ ದುಡಿಯೋಕಂತಾ.." ಹಾಗೂ "ಇದೇನಾ ಸಭ್ಯತೆ.."ಯಂತಹ ಹಾಡುಗಳು ಸಿನಿಪ್ರಿಯರ ಇಷ್ಟ ಆಗಿದ್ದವು. ಪಿ ಬಿ ಶ್ರೀ ನಿವಾಸ್ ಹಾಗೂ ಪಿ. ಸುಶೀಲ ಹಾಡಿದ ಈ ಎರಡು ಹಾಡುಗಳು ಸೂಪರ್ ಹಿಟ್ ಆಗಿದ್ದವು. ಸಿನಿಮಾದ ಜೊತೆ ಜೊತೆಗೆ ಹಾಡುಗಳು ಕೂಡ ಗೆದ್ದಿದ್ದವು.

ಡಾ.ರಾಜ್‌ಕುಮಾರ್, ಕಲ್ಪನಾ ಜೊತೆಗೆ ಎಂ.ಪಿ ಶಂಕರ್, ಜಯಕುಮಾರಿ, ಡಿಕ್ಕಿ ಮಾಧವ ರಾವ್ ಸೇರಿದಂತೆ ಹಲವರು ನಟಿಸಿದ್ದರು. ಗೀತಾ ಪ್ರಿಯಾ ನಿರ್ದೇಶನಕ್ಕೆ ಮೆಚ್ಚುಗೆ ವ್ಯಕ್ತವಾಗಿ ಕರ್ನಾಟಕದ ಎರಡು ಪ್ರಮುಖ ಚಿತ್ರಮಂದಿರಗಳಲ್ಲಿ ಈ ಸಿನಿಮಾ 100 ದಿನಗಳನ್ನು ಪೂರೈಸಿತ್ತು. ಇದು 'ಮಣ್ಣಿನ ಮಗ' ಅಲ್ಲ 'ಮಂಗನ ಮಗ' ಎಂದು ನಕ್ಕಿದ್ದವರು, ಸಿನಿಮಾ ಬಿಡುಗಡೆಯಾದ ಬಳಿಕ ಕೈ ಕೈ ಹಿಸುಕಿ ಕೊಳ್ಳುವಂತೆ ಆಗಿತ್ತು.

'ಮಣ್ಣಿನ ಮಗ' ಸಿನಿಮಾಗೆ ಪ್ರತಿಷ್ಠಿತ ಪ್ರಶಸ್ತಿಗಳ ಸುರಿಮಳೆಯೇ ಆಗಿತ್ತು. ಅತ್ಯುತ್ತಮ ಸಿನಿಮಾ ಕ್ಯಾಟಗರಿಯಲ್ಲಿ ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಗೀತ ಪ್ರಿಯ ನಿರ್ದೇಶಿಸಿದ ಮೊದಲ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ವಿಶೇಷ. ಹಾಗೇ ಅತ್ಯುತ್ತಮ ಪ್ರಶಸ್ತಿ ವಿಭಾಗದಲ್ಲಿ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಕೂಡ ಬಂದಿದೆ. ಅತ್ಯುತ್ತಮ ಸ್ಕ್ರೀನ್ ಪ್ಲೇಗಾಗಿ ಗೀತಾ ಪ್ರಿಯಾಗೆ ಇದೇ ವರ್ಷ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

ಅಣ್ಣಾವ್ರಿಗೆ 'ಮಣ್ಣಿನ ಮಗ' ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಅದಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಜನಪ್ರಿಯರಾಗಿದ್ದ ರಾಜ್‌ಕುಮಾರ್‌ಗೆ ಈ ಸಿನಿಮಾ ಮತ್ತೊಂದು ಗೆಲುವು ತಂದುಕೊಟ್ಟಿತ್ತು. ಅಣ್ಣಾವ್ರ ಹಾಗೂ ಕಲ್ಪನಾ ಕಾಂಬಿನೇಷನ್ ಹಿಟ್ ಆಗಿತ್ತು. ಅಲ್ಲದೆ ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ದೇಶಕ ಸಿಕ್ಕಿದ್ದರು. ತಿರಸ್ಕರಿಸಲ್ಪಟ್ಟ ಸಿನಿಮಾ ಹಲವರ ಬದುಕನ್ನೇ ಬದಲಿಸಿತ್ತು. ಅಣ್ಣಾವ್ರು ತಮ್ಮ ಜೀವಿತಾವಧಿಯಲ್ಲಿ ಪ್ರಶಸ್ತಿಗಳ ಲೆಕ್ಕವೇ ಇಲ್ಲ. ಅವರ ಜೀವಿತಾವಧಿಯಲ್ಲಿ 11 ರಾಜ್ಯ ಪ್ರಶಸ್ತಿ ಲಭಿಸಿದೆ. ಇದರಲ್ಲಿ ಅತ್ಯುತ್ತಮ ನಟ, ಅತ್ಯುತ್ತಮ ಗಾಯಕ ಪ್ರಶಸ್ತಿಗಳೂ ಸೇರಿಕೊಂಡಿವೆ. 8 ಫಿಲ್ಮ್ ಫೇರ್ ಸೌತ್ ಪ್ರಶಸ್ತಿ, ಒಂದು ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಡಾ.ರಾಜ್‌ಕುಮಾರ್ ಅವರ ಸಿನಿಮಾಗಳನ್ನು ಇಂದಿಗೂ ಸಂಭ್ರಮಿಸುತ್ತಾರೆ. ಇಂದಿನ ಪೀಳಿಗೆ ಕೂಡ ಅವರ ಹಾಡುಗಳನ್ನು ಎಂಜಾಯ್ ಮಾಡುತ್ತೆ. ಅಭಿನಯಕ್ಕೆ ಶಿಳ್ಳೆಗಳನ್ನು ಹಾಕುತ್ತಾರೆ.

More from Filmibeat

English summary
Rajkumar starrer Mannina Maga film was criticized as Mangana Maga. Here is the result of the movie?
Read more about: rajkumar kannada movie sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X