ಡಾನ್,ಟೈಗರ್,ಕ್ರಿಶ್,ಸನ್ ಆಫ್ ಸರ್ದಾರ್ ;ದೀಪಾವಳಿಗೆ ಬಂದ ಈ ಚಿತ್ರಗಳಲ್ಲಿ ಗೆದ್ದಿದ್ದು ಯಾವುದು ಸೋತಿದ್ದು ಯಾವುದು?

ದೀಪಾವಳಿ ಮೊದಲಿಂದ ಶಾರುಖ್ ಖಾನ್‌ಗೆ ತುಂಬಾ ಲಕ್ಕಿ. ಈ ಹಬ್ಬದಂದು ಕಿಂಗ್ ಖಾನ್ ಅಖಾಡಕ್ಕೆ ಇಳಿದಾಗೆಲ್ಲ ಬಹುತೇಕ ಬಾರಿ ಗೆಲುವಿನ ನಗೆಯನ್ನು ಬೀರಿದ್ದಾರೆ. ಆದರೆ, ಸಲ್ಮಾನ್ ಖಾನ್ ದೀಪಾವಳಿಯಂದು ಗೆಲುವನ್ನು ನೋಡಿದ್ದಾರೆ. ಸೋಲಿನ ರುಚಿಯನ್ನು ಕೂಡ ಅನುಭವಿಸಿದ್ದಾರೆ. ಅಕ್ಷಯ್ ಕುಮಾರ್ ಕಥೆ ಕೂಡ ಇದಕ್ಕಿಂತ ಭಿನ್ನವೇನು ಇಲ್ಲ. ಒಮ್ಮೆ ಗೆದ್ದು ಮತ್ತೊಮ್ಮೆ ಸೋತ ಅಕ್ಷಯ್ ಸದ್ಯಕ್ಕೆ ತಮ್ಮ ಹಳೆಯ ಚಾರ್ಮ್ ಕಳೆದುಕೊಂಡಿದ್ದಾರೆ. ಫಾರ್ಮ್ ಕೂಡ ಕಳೆದುಕೊಂಡಿದ್ದಾರೆ. ಇಂಥಾ ಅಕ್ಷಯ್ ಕುಮಾರ್ ಅಭಿನಯದ ಐತರಾಜ್ ಚಿತ್ರ ಆ ಕಾಲದಲ್ಲಿ ಶಾರುಖ್ ಖಾನ್ ಅಭಿನಯದ ವೀರ್ ಜಾರಾ ಚಿತ್ರದ ಮುಂದೆ ಗೆದ್ದಿತ್ತು

ಹಿಟ್ ಚಿತ್ರಗಳು

ಅಕ್ಷಯ್ ಕುಮಾರ್, ಕರೀನಾ ಕಪೂರ್ ಮತ್ತು ಪ್ರಿಯಾಂಕ ಚೋಪ್ರಾ ಅಭಿನಯದ ಐತರಾಜ್ ಚಿತ್ರ ಕೂಡ ದೀಪಾವಳಿ ಹಬ್ಬದ ಪ್ರಯುಕ್ತ 2004ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರದ ಎದುರು ವೀರ್ ಜಾರಾ ಬಿಡುಗಡೆಯಾಗಿತ್ತು. ಎಲ್ಲೆಡೆ ವೀರ್ ಜಾರಾ ಅಲೆ ಎದ್ದಿತ್ತು. ಆದರೂ ಪ್ರೇಕ್ಷಕರ ಹೃದಯವನ್ನು ಗೆಲ್ಲುವಲ್ಲಿ ಐತರಾಜ್ ಯಶಸ್ವಿಯಾಗಿತ್ತು. ಇನ್ನೂ 2005ರಲ್ಲಿ ಅಕ್ಷಯ್ ಕುಮಾರ್ ಮತ್ತು ಜಾನ್ ಅಬ್ರಾಹಿಂ ಅಭಿನಯದ ಪ್ರಿಯದರ್ಶನ್ ನಿರ್ದೇಶನದ ಗರಂ ಮಸಾಲಾ ತೆರೆಗೆ ಬಂದಿತ್ತು. ಹೊಟ್ಟೆ ಹುಣ್ಣಾಗುವಂತೆ ನಗಿಸಿತ್ತು. 2006ರಲ್ಲಿ ಶಾರುಖ್ ಖಾನ್ ಅಭಿನಯದ ಡಾನ್ ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿತ್ತು.

With 14 hits and 7 flops here s Bollywood s Diwali box office performance over the years

2012ರಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಅಭಿನಯದ ಜಬ್ ಥಕ್ ಹೈ ಜಾನ್ ಮತ್ತು ಅಜಯ್ ದೇವಗನ್ ಅಭಿನಯದ ಸನ್ ಆಫ್ ಸರ್ದಾರ್ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಗೆದ್ದವು. 2013ರಲ್ಲಿ ಕ್ರಿಶ್ 3 ಮೂಲಕ ಹೃತಿಕ್ ರೋಷನ್ ಗೆದ್ದು ಬೀಗಿದರೆ, 2014ರಲ್ಲಿ ಶಾರುಖ್ ಖಾನ್ ದೀಪಿಕಾ ಪಡುಕೋಣೆ ಅಭಿನಯದ ಬಹುತಾರಾಗಣದ ಹ್ಯಾಪಿ ನ್ಯೂ ಇಯರ್ ಕಮರ್ಷಿಯಲ್ ಹಿಟ್ ಎನಿಸಿಕೊಂಡಿತು. 2015ರಲ್ಲಿ ಸಲ್ಮಾನ್ ಖಾನ್ ಅಭಿನಯದ ಪ್ರೇಮ್ ರತನ್ ಧನ್ ಪಾಯೋ, 2019ರಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದ ಹೌಸ್‌ಫುಲ್ 4, 2021ರಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ ರೊಹೀತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ, 2023ರಲ್ಲಿ ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿ ಬಾಕ್ಸಾಫೀಸ್‌ನಲ್ಲಿ ಗೆದ್ದ ಇನ್ನುಳಿದ ಚಿತ್ರಗಳು.

ಫ್ಲಾಪ್ ಚಿತ್ರಗಳು

ಹಾಗಂಥ ದೀಪಾವಳಿ ಹಬ್ಬದ ಪ್ರಯುಕ್ತ ಬಾಲಿವುಡ್‌ಗೆ ಕೇವಲ ಸಿಹಿ ಸಿಕ್ಕಿದೆ ಎಂದೇನಿಲ್ಲ. ನಿರೀಕ್ಷೆ ಮೂಡಿಸಿದ ಅನೇಕ ಚಿತ್ರಗಳು ಇಲ್ಲಿ ಸೋತಿವೆ. ಆ ಪೈಕಿ 2003ರಲ್ಲಿ ತೆರೆಗೆ ಬಂದ ಪಿಂಜರ್ ಚಿತ್ರ ಒಂದಾದರೆ 2006ರಲ್ಲಿ ಶಾರುಖ್ ಖಾನ್ ಅಭಿನಯದ ಡಾನ್ ಚಿತ್ರದ ಎದುರು ಬಂದಿದ್ದ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಪ್ರೀತಿ ಜಿಂಟಾ ಅಭಿನಯದ ಜಾನೆಮನ್ ಚಿತ್ರ ಇನ್ನೊಂದು. ಇನ್ನೂ 2007ರಲ್ಲಿ ರಣ್ಬೀರ್ ಕಪೂರ್ ಅಭಿನಯದ ಚೊಚ್ಚಲ ಚಿತ್ರ ಸಾವರಿಯಾ ಕೂಡ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. 2010ರಲ್ಲಿ ಅಕ್ಷಯ್ ಕುಮಾರ್ ಅಭಿನಯದ ಆಕ್ಷನ್ ರಿಪ್ಲೈ, 2022ರಲ್ಲಿ ಬಂದ ರಾಮ್ ಸೇತು ಮತ್ತು ಥ್ಯಾಂಕ್ ಗಾಡ್ ಚಿತ್ರಗಳು ಕೂಡ ಸೋತು ಸುಣ್ಣವಾಗಿದ್ದವು. ಇನ್ನೂ 2018ರಲ್ಲಿ ತರೆಗೆ ಬಂದ ಅಮೀರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಅತೀ ಕೆಟ್ಟ ಚಿತ್ರ ಅನ್ನುವ ಕುಖ್ಯಾತಿಯನ್ನು ಗಳಿಸಿತು.

ಈ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ಸಿಂಗಂ ಅಗೈನ್ ಮತ್ತು ಭೂಲ್ ಭೂಲಯ್ಯ 3 ಚಿತ್ರಗಳು ಬಿಡುಗಡೆಯಾಗುತ್ತಿವೆ. ಎರಡು ಚಿತ್ರಗಳಲ್ಲಿ ದೊಡ್ಡ ತಾರಾಬಳಗ ಇದೆ. ಈ ಎರಡು ಚಿತ್ರಗಳಲ್ಲಿ ಯಾವ ಚಿತ್ರ ಬ್ಲಾಕ್ ಬಸ್ಟರ್ ಆಗುತ್ತೆ ಯಾವ ಚಿತ್ರ ಡಿಸಾಸ್ಟರ್ ಚಿತ್ರಗಳ ಸಾಲಿಗೆ ಸೇರುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Read more about: diwali box office bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X