Womens Day 2025 ;ಕಳೆದೊಂದು ದಶಕದಲ್ಲಿ ಬಂದ ಮಹಿಳಾ ಶಕ್ತಿಯನ್ನು ಸಾರುವ ಅದ್ಭುತ ಸಿನಿಮಾಗಳಿವು, ತಪ್ಪದೇ ನೋಡಿ...!

ಭಾರತೀಯ ಚಿತ್ರರಂಗದಲ್ಲಿ ನಾಯಕಿ ಪ್ರಧಾನ ಚಿತ್ರಗಳಿಗೆ ವಿಶೇಷ ಸ್ಥಾನ ಇದೆ. ಕೇವಲ ಇಂದು, ನಿನ್ನೆಯಲ್ಲ. 1957ರಲ್ಲಿ ಬಿಡುಗಡೆಯಾದ ಮದರ್ ಇಂಡಿಯಾ ಚಿತ್ರದಿಂದಲೂ ಬಾಲಿವುಡ್‌ನಲ್ಲಿ ನಾಯಕಿ ಪ್ರಧಾನ ಚಿತ್ರಗಳು ತಯಾರಾಗುತ್ತಿವೆ.

ಆ ಪೈಕಿ ಕಳೆದೊಂದು ದಶಕದಲ್ಲಿ ಸದ್ದು ಮಾಡಿ ಸುದ್ದಿಯಾದ ಕೆಲ ಬಾಲಿವುಡ್ ಚಿತ್ರಗಳ ಒಂದು ಪಟ್ಟಿಯನ್ನು ಮಹಿಳೆಯರ ದಿನಾಚರಣೆಯ ಪ್ರಯುಕ್ತ ಇಂದು ಪ್ರಕಟಿಸಲಾಗಿದೆ. ಹಾಗಿದ್ದರೆ ಆ ಚಿತ್ರಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.

Women s Day 2025 Check Out These Bollywood Movies That Showcase Women s Empowerment

ಕ್ವೀನ್ - 2013

2013ರಲ್ಲಿ ಕಂಗನಾ ರಣಾವತ್ ಅಭಿನಯದ ಕ್ವೀನ್ ಚಿತ್ರ ಬಿಡುಗಡೆಯಾಗಿತ್ತು. ದೆಹಲಿಯ ರಾಣಿ ಎಂಬ ಯುವತಿಯ ಸುತ್ತ ಸುತ್ತುವ ಈ ಚಿತ್ರದಲ್ಲಿ ಮನ ಮಿಡಿಯುವ ಕಥೆ ಇತ್ತು. ಕಂಗನಾ ರಣಾವತ್ ಈ ಚಿತ್ರದಲ್ಲಿನ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದಿದ್ದರು. ಆ ಕಾಲದಲ್ಲಿ ತುಂಬಾನೇ ಸದ್ದು ಮಾಡಿದ್ದ ಈ ಚಿತ್ರವನ್ನು ರಮೇಶ್ ಅರವಿಂದ್ ದಕ್ಷಿಣದ ನಾಲ್ಕು ಭಾಷೆಗಳಲ್ಲಿ ರಿಮೇಕ್ ಮಾಡುವ ಪ್ರಯತ್ನವನ್ನು ಮಾಡಿದ್ದರು. ಎಲ್ಲ ಭಾಷೆಯಲ್ಲಿ ಏಕಕಾಲಕ್ಕೆ ಬಹುತೇಕ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದರು. ಆದರೆ, ದುರಾದೃಷ್ಟಕ್ಕೆ ರಮೇಶ್ ಅವರ ಪ್ರಯತ್ನ ಯಶಸ್ವಿಯಾಗಲಿಲ್ಲ.

ಮರ್ದಾನಿ- 2014

ಮಕ್ಕಳ ಕಳ್ಳ ಸಾಗಾಣೆ ಮತ್ತು ಮಾಫಿಯಾ ಸುತ್ತ ಹೆಣೆಯಲಾಗಿದ್ದ ಮರ್ದಾನಿ ಚಿತ್ರದಲ್ಲಿ ರಾಣಿ ಮುಖರ್ಜಿ ಕಾಣಿಸಿಕೊಂಡಿದ್ದರು. ಶಿವಾನಿ ರಾಯ್ ಎಂಬ ಮಹಿಳಾ ಪೊಲೀಸ್ ಅಧಿಕಾರಿಯ ಪಾತ್ರವನ್ನು ಕೂಡ ನಿರ್ವಹಿಸಿದ್ದರು. ಆ ಕಾಲದಲ್ಲಿ ಸಖತ್ ಸದ್ದು ಮಾಡಿದ್ದ ಈ ಚಿತ್ರದ ಮುಂದುವರೆದ ಭಾಗ ಕೂಡ ಆ ನಂತರದ ದಿನಗಳಲ್ಲಿ ತೆರೆಗೆ ಬಂದಿತ್ತು

ಗುಲಾಬ್ ಗ್ಯಾಂಗ್ - 2014

2014ರಲ್ಲಿಯೇ ಗುಲಾಬ್ ಗ್ಯಾಂಗ್ ಎಂಬ ಚಿತ್ರ ತೆರೆಗೆ ಬಂದಿತ್ತು. ಹಳ್ಳಿಯಲ್ಲಿ ಮಹಿಳೆಯರ ವಿರುದ್ದ ನಡೆಯುವ ದೌರ್ಜನ್ಯದ ವಿರುದ್ದ ಮಹಿಳೆಯರೇ ಸೆಟೆದು ನಿಲ್ಲುವ ಕಥಾಹಂದರ ಹೊಂದಿದ್ದ ಈ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಮತ್ತು ಜ್ಯೂಹಿ ಚಾವ್ಲಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.

ಲಿಪ್ ಸ್ಟಿಕ್ ಅಂಡರ್ ಮೈ ಬುರ್ಖಾ -2016

2016ರ ಆಚೀಚೆ ಲಿಪ್'ಸ್ಟಿಕ್ ಅಂಡರ್ ಮೈ ಬುರ್ಖಾ ಚಿತ್ರ ಭಾರತದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಚಿತ್ರದಲ್ಲಿ ಲೈಂಗಿಕತೆ ದೃಶ್ಯಗಳು, ಕೆಟ್ಟ ಭಾಷೆ ಬಳಕೆ, ಲೈಂಗಿಕತೆಯ ಧ್ವನಿ, ಸಮಾಜದ ಒಂದು ವರ್ಗದ ಬಗ್ಗೆ ಕೆಲ ಸೂಕ್ಷ್ಮ ಸಂಗತಿಗಳು ಇತ್ಯಾದಿಗಳು ಚಿತ್ರದಲ್ಲಿವೆ ಎಂದು ಆರೋಪವನ್ನು ಮಾಡಲಾಗಿತ್ತು, ಲಖನೌ ನಗರದ ನಾಲ್ವರು ಮಹಿಳೆಯರ ಜೀವನದ ಕಥೆಯನ್ನು ಹೊಂದಿದ್ದ ಈ ಚಿತ್ರದಲ್ಲಿ ಕೊಂಕಣಾ ಸೇನ್ ಶರ್ಮಾ, ರತ್ನಾ ಪಾಠಕ್ ಹಾಗೂ ಮೊದಲಾದವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.


ದಂಗಲ್ - 2016

ಅಮೀರ್ ಖಾನ್ ನಿರ್ಮಾಣ ಮಾಡಿ ಅಭಿನಯಿಸಿದ್ದ ದಂಗಲ್ 2016ರಲ್ಲಿ ಐತಿಹಾಸಿಕ ದಾಖಲೆಯನ್ನು ಬರೆದಿತ್ತು. ಫಾತಿಮಾ ಸನಾ ಶೇಖ್ ಮತ್ತು ಸಾನ್ಯಾ ಮಲ್ಹೋತ್ರಾ ಅಭಿನಯದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆಯನ್ನೇ ಹರಿಸುವುದಲ್ಲದೇ ಮಹಿಳಾ ಸಬಲೀಕರಣದ ಕುರಿತು ಪಾಠವನ್ನು ಮಾಡಿತ್ತು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X