ಗರುಡ ರುಂಡ ಚೆಂಡಾಡಿದ ರಾಕಿ.. ಇಂತಾ ಸೀನ್ ಸಿನಿಮಾ ಹಿಸ್ಟರಿಯಲ್ಲೇ ಇಲ್ಲ.. ಮೇಕಿಂಗ್ ಟೈಮ್ ಫನ್ ಹೇಗಿತ್ತು?
ರಾಕಿಂಗ್ ಸ್ಟಾರ್ ಯಶ್ ನಟನೆಯ 'KGF' ಸರಣಿ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಪ್ರಶಾಂತ್ ನೀಲ್ ಟೇಕಿಂಗ್, ಯಶ್ ಆಕ್ಟಿಂಗ್, ರವಿ ಬಸ್ರೂರು ಮ್ಯೂಸಿಕ್ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಚಾಪ್ಟರ್- 2 ಗಿಂತ ಚಾಪ್ಟರ್- 1 ಚೆನ್ನಾಗಿದೆ ಎಂದು ಸಾಕಷ್ಟು ಜನ ಹೇಳಿದ್ದು ಇದೆ. ಅದೆಲ್ಲ ಏನೇಇದ್ರು ಕನ್ನಡ ಚಿತ್ರರಂಗದ ಹೆಮ್ಮೆ 'KGF'.
2018ರಲ್ಲಿ ಚಿತ್ರದ ಮೊದಲ ಭಾಗ ರಿಲೀಸ್ ಆಗಿ 250 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಕಳೆದ ವರ್ಷ ಚಾಪ್ಟರ್-2 ತೆರೆಗಪ್ಪಳಿಸಿ 1200 ಕೋಟಿ ರೂ. ಬಾಚಿ ದಾಖಲೆ ಬರೆದಿತ್ತು. ಕನ್ನಡ ಸಿನಿಮಾಗಳು 100 ಕೋಟಿ ರೂ. ಗಳಿಸೋದೆ ಕಷ್ಟ ಎನ್ನುವ ಸಮಯದಲ್ಲಿ ಅಸಾಧ್ಯವನ್ನು ಸಾಧಿಸಿ ತೋರಿಸಿದ ಸಿನಿಮಾ ಇದು. ಯಶ್, ಹೊಂಬಾಳೆ ಸಂಸ್ಥೆ ಹಾಗೂ ಪ್ರಶಾಂತ್ ನೀಲ್ ಎಲ್ಲರಿಗೂ ಈ ಯಶಸ್ಸಿನಲ್ಲಿ ಪಾಲಿದೆ. 'KGF' ಸರಣಿಯ 3ನೇ ಸಿನಿಮಾ ಮಾಡುವುದಾಗಿಯೂ ಚಿತ್ರತಂಡ ಸುಳಿವು ಕೊಟ್ಟಿದೆ. ಆದರೆ ಯಾವಾಗ ಎನ್ನುವುದು ಮಾತ್ರ ಸದ್ಯಕ್ಕೆ ಉತ್ತರ ಸಿಗದ ಪ್ರಶ್ನೆ.

ಇತ್ತೀವೆಗೆ ಜಪಾನ್ ದೇಶದಲ್ಲಿ 'KGF' ಸರಣಿ ಸಿನಿಮಾಗಳು ರಿಲೀಸ್ ಆಗಿ ಸದ್ದು ಮಾಡಿದ್ದವು. ಜಪಾನೀಯರು ಕೂಡ ರಾಕಿಭಾಯ್ ಅಭಿಮಾನಿಗಳಾಗಿಬಿಟ್ಟಿದ್ದಾರೆ. ಸಲಾಂ ರಾಕಿಭಾಯ್ ಎಂದು ಜೈಕಾರ ಹಾಕಿದ್ದಾರೆ. ಕನ್ನಡ ಚಿತ್ರವೊಂದು ದೂರದ ಜಪಾನ್ ದೇಶದಲ್ಲಿ ಈ ಪಾಟಿ ಸದ್ದು ಮಾಡುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಇದೆಲ್ಲದರ ನಡುವೆ 'KGF' ಚಾಪ್ಟರ್-1 ಕ್ಲೈಮ್ಯಾಕ್ಸ್ ಮೇಕಿಂಗ್ ವಿಡಿಯೋ ವೈರಲ್ ಆಗ್ತಿದೆ.
ಕ್ಲೈಮ್ಯಾಕ್ಸ್ ಮೇಕಿಂಗ್ ಫನ್
ಮಾರಿ ಜಾತ್ರೆಯಲ್ಲಿ ರಾಕಿ ಗರುಡನ ರುಂಡ ಕಡಿಯುವ ಸೀನ್ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿತ್ತು. ಗರುಡ ತಾನೆಷ್ಟು ಕ್ರೂರಿ, ದುಷ್ಟ ಎಂದು ತೋರಿಸಿ ಗಣಿ ಕಾರ್ಮಿಕರನ್ನು ಹೆದರಿಸಲು ಇಬ್ಬರು ಅಮಾಯಕರ ತಲೆಗಳನ್ನು ಕಡಿಯುತ್ತಾನೆ. ಆದರೆ ರಾಕಿ ಆ ಗಣಿ ಕಾರ್ಮಿಕರನ್ನೆಲ್ಲಾ ಗರುಡನ ಕಪಿಮುಷ್ಠಿಯಿಂದ ಬಿಡಿಸಲು, ಅವರಿಗೆ ಸ್ವಾತಂತ್ರ್ಯ ಕೊಡಿಸಲು ಅವನ ತಲೆ ತೆಗೆಯುತ್ತಾನೆ. ಈ ಸೀನ್ ನೋಡಿ ಅಭಿಮಾನಿಗಳಂತೂ ಹುಚ್ಚೆದ್ದು ಕುಣಿದಿದ್ದರು. ಸದ್ಯ ಈ ಸನ್ನಿವೇಶದ ಸಣ್ಣ ಮೇಕಿಂಗ್ ಝಲಕ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಅಷ್ಟೊಂದು ಗಂಭೀರವಾದ ಸನ್ನಿವೇಶ ಚಿತ್ರೀಕರಣದ ವೇಳೆ ಚಿತ್ರತಂಡ ಸಿಕ್ಕಾಪಟ್ಟೆ ಎಂಜಾಯ್ ಮಾಡಿರೋದನ್ನು ನೋಡಬಹುದು.
ಸೂಪರ್ ಸೀನ್
ದೊಡ್ಡ ಮಾರಿ ವಿಗ್ರಹದ ಎದುರು ನೀರಿನ ಹಳ್ಳದಲ್ಲಿ ಈ ಸನ್ನಿವೇಶವನ್ನು ತೆರೆಮೇಲೆ ನೋಡಬಹುದು. ಇದಕ್ಕಾಗಿ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿತ್ತು. ತುಂಬಾ ನೈಜವಾಗಿ ದೃಶ್ಯ ಬರಬೇಕು ಎಂದು ಸಾಕಷ್ಟು ಟೇಕ್‌ಗಳನ್ನು ತೆಗೆದುಕೊಂಡು ಚಿತ್ರೀಕರಣ ನಡೆಸಲಾಗಿದೆ. ನೀರಿನ ಒಳಗಿಂದ ಯಶ್ ಎದ್ದು ಗರುಡ ರಾಮ್ ಕಡೆ ದೊಡ್ಡ ಕತ್ತಿ ಬೀಸುವ ಸನ್ನಿವೇಶವನ್ನು ಭುವನ್ ಗೌಡ ಅಂಡ್ ಟೀಂ ಸೆರೆಹಿಡಿದಿರುವ ಪರಿಯನ್ನು ಮೇಕಿಂಗ್ ವಿಡಿಯೋದಲ್ಲಿ ಗಮನಿಸಬಹುದು.
ಇಂತ ಸನ್ನಿವೇಶ ಬಹಳ ವಿರಳ
ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾಯಕನಿಗೆ ಖಳನಾಯಕ ಯಾರು? ಖಳ ನಾಯಕನಿಗೆ ನಾಯಕ ಯಾರು ಎಂದು ಗೊತ್ತಿರುತ್ತದೆ. ಆದರೆ ವಿಚಿತ್ರ ಏನಪ್ಪಾ ಅಂದರೆ 'KGF' ಚಿತ್ರದಲ್ಲಿ ತನ್ನ ತಲೆ ಕಡಿಯುವ ರಾಕಿ ಯಾರು ಎನ್ನುವುದೇ ಗರುಡನಿಗೆ ಗೊತ್ತಾಗುವುದಿಲ್ಲ. ಅವನ ಮುಖ ನೋಡದೆಯೇ ಸತ್ತು ಹೋಗುತ್ತಾನೆ. ನಿಜಕ್ಕೂ ಇದೊಂದು ವಿಭಿನ್ನ ಪ್ರಯತ್ನ ಎಂದೇ ಹೇಳಬಹುದು. ಯಾವುದೇ ಸನ್ನಿವೇಶದಲ್ಲಿ ಗರುಡ- ರಾಮ್ ಮುಖಾಮುಖಿ ಆಗುವುದಿಲ್ಲ. ಆರಂಭದಲ್ಲಿ ಗರುಡನ ವಿಗ್ರಹ ಲೋಕಾರ್ಪಣೆ ಸನ್ನಿವೇಶದಲ್ಲಿ ರಾಕಿ ಗರುಡನ ಎದುರು ಬಂದರೂ, ಗರುಡನಿಗೆ ತನ್ನನ್ನು ಹೊಡೆಯೋಕೆ ರಾಕಿ ಎಂಬುವನೊಬ್ಬ ಬಂದಿದ್ದಾನೆ ಅನ್ನೋದು ಗೊತ್ತಾಗಲ್ಲ. ಇನ್ನು ರಾಕಿಗೆ ಅಲ್ಲೇ ಗರುಡನನ್ನು ಹೊಡೆಯುವ ಅವಕಾಶ ಇದ್ದರೂ ಕ್ಲೈಮ್ಯಾಕ್ಸ್‌ವರೆಗೂ ಕಾಯುತ್ತಾನೆ.
ಗರುಡ ರಾಮ್ ಜನಪ್ರಿಯ
'KGF' ಸರಣಿ ಸಿನಿಮಾಗಳಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಪ್ರತಿಯೊಂದು ಪಾತ್ರವನ್ನು ನೀಲ್ ಚೆನ್ನಾಗಿ ಡಿಸೈನ್ ಮಾಡಿದ್ದರು. ಪಾತ್ರಗಳ ಲುಕ್ ಕೂಡ ವಿಶೇಷವಾಗಿತ್ತು. ರಾಕಿಭಾಯ್ ಅಷ್ಟೇ ಗರುಡ ಪಾತ್ರವೂ ಜನಪ್ರಿಯವಾಯಿತು. ಖಡಕ್ ವಿಲನ್ ಆಗಿ ರಾಮ್ ಅಭಿನಯ ಇಷ್ಟವಾಗಿತ್ತು. ಮುಂದೆ ರಾಮ್ ತೆಲುಗು, ತಮಿಳು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಅಷ್ಟರಮಟ್ಟಿಗೆ ಗರುಡ ಪಾತ್ರ ಅವರಿಗೆ ಹೆಸರು ತಂದುಕೊಟ್ಟಿತ್ತು.


Click it and Unblock the Notifications











