ಯಶ್, ಸುದೀಪ್, ಆಮಿರ್,ಎನ್‌ಟಿಆರ್ ಪ್ರಾಬ್ಲಮ್ ಏನು? ಹಿಂಗೆ ಆದ್ರೆ ಮುಂದೇನು?

ಸೂಪರ್ ಸ್ಟಾರ್ಸ್ ವರ್ಷಕ್ಕೆ ಒಂದಾದರೂ ಸಿನಿಮಾ ಮಾಡ್ಬೇಕು. ಆದರೆ ಅದ್ಯಾಕೋ ಬರ್ತಾ ಬರ್ತಾ ಸ್ಟಾರ್‌ ನಟರು ಸಿನಿಮಾಗಳನ್ನು ಶುರು ಮಾಡೋಕೆ ಮೀನಾಮೇಷ ಎಣಿಸುತ್ತಿದ್ದಾರೆ. ಒಂದು ಹಿಟ್ ಕೊಟ್ಟರೂ ಮುಂದಿನ ಸಿನಿಮಾ ಏನ್ ಮಾಡೋದು ಅನ್ನುವ ಯೋಚನೆ, ಒಂದು ಫ್ಲಾಪ್ ಕೊಟ್ಟರೂ ವಾಟ್ ನೆಕ್ಸ್ಟ್ ಎನ್ನುವ ಗೊಂದಲ.

ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಹಾಗೂ ಜ್ಯೂ. ಎನ್‌ಟಿಆರ್‌ ಮತ್ತೆ ಥಿಯೇಟರ್‌ಗೆ ಬರೋಕೆ ಒಂದು ವರ್ಷ ಬೇಕಾಗಬಹುದು. ಯಾಕಂದರೆ ಸದ್ಯಕ್ಕೆ ಯಾರೊಬ್ಬರು ಹೊಸ ಸಿನಿಮಾದಲ್ಲಿ ನಟಿಸ್ತಿಲ್ಲ. ಇನ್ನು ಸಿನಿಮಾ ಶುರುವಾಗೋದು ಯಾವಾಗ? ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಮುಗಿಯೋದು ಯಾವಾಗ? ಸಿನಿಮಾ ತೆರೆಗಪ್ಪಳಿಸೋದು ಯಾವ ಕಾಲಕ್ಕೆ? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್‌ಗಳ ಹೊಸ ಸಿನಿಮಾ ಅಪ್‌ಡೇಟ್ ಸಿಗದೇ ಕಾದು ಕಾದು ಸುಸ್ತಾಗಿದ್ದಾರೆ. ಇನ್ನು ಎಷ್ಟು ದಿನ ಕಾಯೋದು ಎಂದು ಬೇಸರಗೊಂಡಿದ್ದಾರೆ.

ನೆಚ್ಚಿನ ನಟನ ಸಿನಿಮಾ ನೋಡೊಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಸಾಮಾನ್ಯವಾಗಿ ಸ್ಟಾರ್‌ ನಟರು ಒಂದು ಸಿನಿಮಾ ರಿಲೀಸ್‌ಗೂ ಮೊದಲು ಮತ್ತೊಂದು ಸಿನಿಮಾ ಶುರು ಮಾಡಿರುತ್ತಾರೆ. ಆದರೆ ಈ ಬಾರಿ ಯಾಕೋ ಯಶ್, ಸುದೀಪ್, ತಾರಕ್, ಆಮೀರ್ ತಡ ಮಾಡುತ್ತಿದ್ದಾರೆ.

ಯಶ್‌19 ಅಪ್‌ಡೇಟ್‌ ಯಾವಾಗ?

ಯಶ್‌19 ಅಪ್‌ಡೇಟ್‌ ಯಾವಾಗ?

KGF- 2 ಸಿನಿಮಾ ಬಂದೋಗಿ 9 ತಿಂಗಳಾಗಿದೆ. ಆದರೆ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿಲ್ಲ. ಜನವರಿ 8ಕ್ಕೆ ಹುಟ್ಟುಹಬ್ಬದ ದಿನ ಯಶ್‌19 ಅಪ್‌ಡೇಟ್ ಸಿಗುತ್ತೆ ಎಂದು ಕಾದವರಿಗೂ ನಿರಾಸೆ ಎದುರಾಗಿತ್ತು. ಕೆವಿಎನ್‌ ಪ್ರೊಡಕ್ಷನ್‌ನಲ್ಲಿ ನರ್ತನ್ ನಿರ್ದೇಶನದಲ್ಲಿ ಯಶ್ ಸಿನಿಮಾ ಮಾಡ್ತಾರೆ ಎನ್ನಲಾಗಿತ್ತಾದರೂ ಯಾವುದು ಸತ್ಯವಾಗಿಲ್ಲ. ಬಹಳ ದೊಡ್ಡದಾಗಿ ಪ್ಲ್ಯಾನ್ ಮಾಡುತ್ತಿರುವುದಾಗಿ ಯಶ್ ಹೇಳುತ್ತಾ ಬರ್ತಿದ್ದಾರೆ. ಆದರೆ ಅದು ಏನು? ಯಾವಾಗ ಶುರುವಾಗುತ್ತದೆ ಎನ್ನುವುದರ ಬಗ್ಗೆ ಸುಳಿವು ಇಲ್ಲ.

ಕಿಚ್ಚನ ಮುಂದಿನ ಸಿನ್ಮಾ ಯಾವ್ದು?

ಕಿಚ್ಚನ ಮುಂದಿನ ಸಿನ್ಮಾ ಯಾವ್ದು?

ಬರೀ ಯಶ್ ಮಾತ್ರವಲ್ಲ 'ವಿಕ್ರಾಂತ್‌ ರೋಣ' ನಂತರ ಸುದೀಪ್ ಕೂಡ ಸೈಲೆಂಟ್ ಆಗಿಬಿಟ್ಟಿದ್ದಾರೆ. ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಆದರೆ ಯಾವುದು ಕೂಡ ಫೈನಲ್ ಆಗಿಲ್ಲ. ತಮಿಳು ನಿರ್ದೇಶಕ ವೆಂಕಟ್‌ ಪ್ರಭು, ನಂದ ಕಿಶೋರ್, ಅನೂಪ್ ಭಂಡಾರಿ ಕಿಚ್ಚನಿಗಾಗಿ ಕಥೆಗಳನ್ನು ಹೆಣೆಯುತ್ತಿದ್ದಾರೆ. ಆದರೆ ಯಾವುದು ಫಸ್ಟ್? ಯಾವುದು ನೆಕ್ಸ್ಟ್? ಎನ್ನುವುದು ಗೊತ್ತಿಲ್ಲ. ಇನ್ನು ಸಿನಿಮಾ ಶುರುವಾಗುವುದು ಯಾವಾಗ? ಎನ್ನುವುದು ಅಭಿಮಾನಿಗಳ ಗೋಳಾಗಿದೆ.

NTR30 ಚಿತ್ರಕ್ಕೂ ವಿಘ್ನ!

NTR30 ಚಿತ್ರಕ್ಕೂ ವಿಘ್ನ!

ಕಳೆದ ವರ್ಷ ಮಾರ್ಚ್‌ನಲ್ಲಿ 'RRR' ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಕೋಮುರಂ ಭೀಮ್ ಆಗಿ ತಾರಕ್ ಅಬ್ಬರಿಸಿದ್ದರು. ಸಿನಿಮಾ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೀತು. ಚಿತ್ರದ ಹಾಡೊಂದು ಆಸ್ಕರ್‌ಗು ನಾಮಿನೇಟ್ ಆಗಿದೆ. ಆದರೆ 'RRR' ಸಿನಿಮಾ ತೆರೆಕಂಡು ವರ್ಷವಾದರೂ ಎನ್‌ಟಿಆರ್ ಹೊಸ ಸಿನಿಮಾ ಶುರುವಾಗಿಲ್ಲ. ಕೊರಟಾಲ ಶಿವ ನಿರ್ದೇಶನದಲ್ಲಿ ತಾರಕ್ ಮುಂದಿನ ಸಿನಿಮಾ ಫಿಕ್ಸ್ ಆಗಿದೆ. ಆದರೆ ಸಿನಿಮಾ ಇನ್ನು ಸೆಟ್ಟೇರಿಲ್ಲ. 'ಆಚಾರ್ಯ' ಸೋಲಿನ ನಂತರ ಕೊರಟಾಲ ಮುಂದಿನ ಚಿತ್ರ ಆರಂಭಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಇನ್ನು NTR30 ತಡವಾಗುತ್ತಿರುವುದರಿಂದ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಮತ್ತಷ್ಟು ತಡವಾಗುವ ಆತಂಕ ಅಭಿಮಾನಿಗಳನ್ನು ಕಾಡುತ್ತಿದೆ.

ಆಮೀರ್ ಎದ್ದು ಬರೋದು ಯಾವಾಗ?

ಆಮೀರ್ ಎದ್ದು ಬರೋದು ಯಾವಾಗ?

ಯಶ್, ಸುದೀಪ್, ಜ್ಯೂ. ಎನ್‌ಟಿಆರ್ ಹಿಟ್ ಸಿನಿಮಾ ಕೊಟ್ಟು ಹೊಸ ಸಿನಿಮಾ ಶುರು ಮಾಡಲು ತಡ ಮಾಡುತ್ತಿದ್ದರೆ ಆಮೀರ್‌ ಖಾನ್ ಮಾತ್ರ ಫ್ಲಾಪ್ ಕೊಟ್ಟು ಕಂಗಾಲಾಗಿದ್ದಾರೆ. ಒಂದ್ಕಾಲದಲ್ಲಿ ಮಿ. ಪರ್ಫೆಕ್ಷನಿಸ್ಟ್ ಸಿನಿಮಾ ಅಂದರೆ ಬಾಲಿವುಡ್ ಮಂದಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಆದರೆ ಇತ್ತೀಚಿಗೆ ಆ ಕ್ರೇಜ್ ಕಮ್ಮಿ ಆಗಿದೆ. ಸತತ ಸೋಲುಗಳಿಂದ ಆಮೀರ್ ಸೈಲೆಂಟ್ ಆಗಿದ್ದಾರೆ. ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ 'ಲಾಲ್ ಸಿಂಗ್ ಚಡ್ಡಾ' ಕೈ ಹಿಡಿಯಲಿಲ್ಲ. ಮಿ. ಪರ್ಫೆಕ್ಷನಿಸ್ಟ್ ಈಗ ಸಲ್ಮಾನ್ ಖಾನ್ ಜೊತೆ ಸೇರಿ ಒಂದು ಹಾಲಿವುಡ್ ಚಿತ್ರವನ್ನು ರೀಮೆಕ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ರೀಮೆಕ್ ಮಾಡಿ ಸೋತು ಮತ್ತೆ ರೀಮೆಕ್ ಮಾಡೋದಾ? ಇನ್ನುವ ಗೊಂದಲದಲ್ಲಿದ್ದಾರೆ.

More from Filmibeat

English summary
Yash, Sudeep, Aamir Khan and Jr NTR Next Projects Not Yet Started; Know Reasons. Fans eagerly waiting For Super Stars Next Movie Updates. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X