ಹೆಲ್ಮೆಟ್ ಹಾಕ್ಕೊಂಡು ಹೋಗಿ ಪಾರ್ಕ್‌ನಲ್ಲಿ ರೊಮ್ಯಾನ್ಸ್ ಮಾಡುವವರನ್ನು ನೋಡ್ತಿದ್ದ ಯಶ್!

'ಟಾಕ್ಸಿಕ್' ಚಿತ್ರದ 'ತಬಾಹಿ' ಸಾಂಗ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಯಶ್ ಹಾಗೂ ಕಿಯಾರಾ ಬಿಂದಾಸ್ ರೊಮ್ಯಾನ್ಸ್ ಗಮನ ಸೆಳೆದಿದೆ. ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸೋದು ನನಗೆ ಕಷ್ಟ ಎಂದು ಹೇಳುತ್ತಿದ್ದ ಯಶ್ ಇಷ್ಟು ಸಖತ್ತಾಗಿ ಕಾಣಿಸಿಕೊಂಡಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಧಾರಾವಾಹಿಯಲ್ಲಿ ನಟಿಸುವ ಸಮಯದಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸೋಕೆ ಯಶ್ ಸರ್ಕಸ್ ಮಾಡ್ತಿದ್ರಂತೆ.

ಮೊದಲಿನಿಂದಲೂ ನಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದವರು ಯಶ್. ಯಾವುದೇ ದೃಶ್ಯ ಮಾಡುವ ಹಿಂದಿನ ದಿನ ರಿಹರ್ಸಲ್ ಮಾಡಿ ಮರುದಿನ ನಟಿಸುತ್ತಿದ್ದರಂತೆ. ಆದರೆ ರೊಮ್ಯಾಂಟಿಕ್ ದೃಶ್ಯ ಮಾಡೋದು ಅಂದ್ರೆ ಬಹಳ ಕಷ್ಟವಾಗ್ತಿತ್ತು ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ್ದರು. ರಾಕಿಂಗ್ ಸ್ಟಾರ್ ಆರಂಭದ ದಿನಗಳ ಬಗ್ಗೆ ನಟಿ ಶ್ರುತಿ ನಾಯ್ಡು ಮೆಲುಕು ಹಾಕಿದ್ದರು.

Yash s Toxic film Tabaahi Romance Impresses Fans After His Old Confession Resurfaces

'ನಂದಗೋಕುಲ' ಧಾರಾವಾಹಿಯಲ್ಲಿ ಯಶ್ ಜೋಡಿಯಾಗಿ ಶ್ರುತಿ ನಾಯ್ಡು ನಟಿಸಿದ್ದರು. "ಮೊದಲ ಶಾಟ್‌ನಲ್ಲಿ ನನ್ನ- ನಿನ್ನ ನಡುವೆ ರೊಮ್ಯಾಂಟಿಕ್ ಸೀನ್ ಇತ್ತು.. ನೀನು ಅವತ್ತು ಎಷ್ಟು ನರ್ವಸ್ ಆಗಿದ್ದೆ ಅನ್ನೋದು ಇವತ್ತಿಗೂ ನನಗೆ ನೆನಪಿದೆ. ನಾನು ಸೀರೆ ಉಟ್ಟಿರ್ತೀನಿ.. ನೀನು ಬಂದು ಡ್ಯಾನ್ಸ್ ಮಾಡಿ ಸೀರೆ ಎಳೆದಾಗ ನಾನು ಶಾರ್ಟ್‌ ಸ್ಕರ್ಟ್‌ನಲ್ಲಿ ಇರ್ತೀನಿ, ಅದನ್ನು ನೋಡಿ ನೀನು ಸರ್‌ಪ್ರೈಸ್ ಆಗುವಂತೆ ಶಾಟ್ ಇತ್ತು. ಇನ್ನು ಬಹಳ ಭಯಗೊಂಡಿದ್ದೆ. ಬೆವತ್ತಿದ್ದೆ. ಇವತ್ತು ನೀವು ರಮ್ಯಾ, ರಾಧಿಕಾ ಪಂಡಿತ್ ಜೊತೆ ರೊಮ್ಯಾಂಟಿಕ್ ಸಾಂಗ್ಸ್ ನೋಡಿದಾಗ ನೀನು ರೊಮ್ಯಾನ್ಸ್ ಮಾಡೋದ್ರಲ್ಲಿ ಪಂಟರ್ ಆಗಿಬಿಟ್ಟಿದ್ದೀಯಾ. ಅದರ ಕ್ರೆಡಿಟ್ ನೀನು ನನಗೆ ಕೊಡಬೇಕು, ನಾನೇ ನಿನಗೆ ಟ್ರೇನ್ ಮಾಡಿದ್ದು" ಎಂದು ಶ್ರುತಿ ನಾಯ್ಡು ನಕ್ಕಿದ್ದರು.

ರೊಮ್ಯಾಂಟಿಕ್ ಸೀನ್ಸ್ ಮಾಡೋದೇ ನನಗೆ ಕಷ್ಟವಾಗಿತ್ತು. ಇವತ್ತು ನಾನು ರೊಮ್ಯಾಂಟಿಕ್ ಸಾಂಗ್ ಚೆನ್ನಾಗಿ ಮಾಡ್ತೀನಿ ಎಂದು ಎಲ್ಲರೂ ಹೇಳುವುದು ಕೇಳಿ ನನಗೆ ಆಶ್ಚರ್ಯ ಆಗುತ್ತೆ. ರಾಧಿಕಾ, ಗಿರಿ ಎಲ್ಲರೂ ನನ್ನ ನೋಡಿ ನಗ್ತಿದ್ರು. ಇವತ್ತಿಗೂ ಅಪ್ಪ, ಅಮ್ಮನ ಜೊತೆ ಕೂತು ನೋಡುವಂತಹ ದೃಶ್ಯಗಳಲ್ಲಿ ಮಾತ್ರ ನಟಿಸಬೇಕು ಎನ್ನುವುದು ನನ್ನ ನಿರ್ಧಾರ. ಮೊದಲ ದೃಶ್ಯದಲ್ಲಿ ಸೀರೆ ಎಳೆಯಬೇಕು ಎಂದಾಗ ಹೇಗಾಗಬೇಡ.. ನಿನಗೆ ರೊಮ್ಯಾಂಟಿಕ್ ಸೀನ್ಸ್ ಮಾಡೋಕೆ ಬರಲ್ಲ ಅಂತ ನಮ್ಮ ತಾಯಿ ಕೂಡ ರೇಗಿಸುತ್ತಿದ್ರು.. ರಮೇಶ್ ಅರವಿಂದ್, ಅನಂತ್‌ ನಾಗ್, ಅಣ್ಣಾವ್ರನ್ನ ನೋಡು ಎಷ್ಟು ರೊಮ್ಯಾಂಟಿಕ್ ಆಗಿ ನಟಿಸ್ತಾರೆ ಎನ್ನುತ್ತಿದ್ರು.. ನೀನು ಹುಡುಗಿಯನ್ನು ಗುರಾಯಿಸ್ತೀಯಾ, ಹೊಡೆಯೋ ತರ ನೋಡ್ತೀಯಾ ಅಂತಿದ್ರು.. ನೀವು ನಂಬಲ್ಲ ಹೆಲ್ಮೆಟ್ ಹಾಕ್ಕೊಂಡು ಪಾರ್ಕ್‌ಗಳಿಗೆ ಹೋಗ್ತಿದ್ದೆ. ಅಲ್ಲಿ ಹುಡುಗ, ಹುಡುಗಿ ಹೇಗೆ ಕುತ್ಕೊಂಡು ರೊಮ್ಯಾನ್ಸ್ ಮಾಡ್ತಾರೆ ಎಂದು ನೋಡ್ತಿದ್ದೆ. ಕೆಲವೊಂದು ನೋಡಬಾರದು ನೋಡ್ತಿದ್ದೆ" ಎಂದು ತಮಾಷೆಯಾಗಿ ಯಶ್ ಹೇಳಿದ್ದರು.

Yash s Toxic film Tabaahi Romance Impresses Fans After His Old Confession Resurfaces

ನಮ್ಮ ಅಮ್ಮ ಫಸ್ಟ್ ಹೀರೊಯಿನ್ ನನಗೆ.. ಅವರೊಟ್ಟಿಗೆ ಪ್ರಾಕ್ಟೀಸ್ ಮಾಡ್ತಿದ್ದೆ.. ಅವ್ರು ಬೈಯ್ತಿದ್ರು.. ಹಂಗೆ ಅಭ್ಯಾಸ ಮಾಡಿ ಒಂದು ಹಂತಕ್ಕೆ ಕಲಿತುಬಿಟ್ಟೆ ಎಂದು ತಮ್ಮ ರೊಮ್ಯಾಂಟಿಕ್ ದೃಶ್ಯಗಳ ಚಿತ್ರೀಕರಣದ ಅನುಭವವನ್ನು ಯಶ್ ವಿವರಿಸಿದ್ದರು. ಸದ್ಯ 'ಟಾಕ್ಸಿಕ್' ಚಿತ್ರದ 'ತಬಾಹಿ' ಸಾಂಗ್ ಬಿಡುಗಡೆ ಹಿನ್ನೆಲೆಯಲ್ಲಿ ಈ ವೀಡಿಯೋ ವೈರಲ್ ಆಗ್ತಿದೆ. ಸಿಕ್ಕಾಪಟ್ಟೆ ಅದ್ಧೂರಿಯಾಗಿ ಸಾಂಗ್ ಶೂಟ್ ಮಾಡಿದ್ದಾರೆ.

ಪಾರ್ಕು, ಪಬ್ಬು, ಸರ್ಕಸ್ ಹಾಲ್, ಬೀಚ್ ಎಲ್ಲಾ ಕಡೆ ರಾಯ ಹಾಗೂ ನಾಡಿಯಾ ರೊಮ್ಯಾನ್ಸ್ ರಂಗೇರಿದೆ. ಹೆಚ್ಚು ಹಸಿಬಿಸಿ ಇಲ್ಲದೇ ಲಿಪ್ ಲಾಕ್ ಇಲ್ಲದೇ ಬರೀ ರೊಮ್ಯಾನ್ಸ್ 'ತಬಾಹಿ' ಸಾಂಗ್‌ನಲ್ಲಿ ಹೈಲೆಟ್ ಆಗಿದೆ. ಯಶ್ ಸಿಕ್ಸ್ ಪ್ಯಾಕ್ ಹ್ಯಾಬ್ಸ್ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸಾಂಗ್ ಸೂಪರ್ ಹಿಟ್ ಆಗಿದೆ. ಮುಂದಿನ ಸಾಂಗ್ಸ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

Read more about: yash toxic kiara advani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X