'ಅಣ್ಣಾ ಬಾಂಡ್‌'ಗೆ ಸೇರಬೇಕಿದ್ದ ಈ ಹಾಡು 'ರಾಮಾಚಾರಿ' ಪಾಲಾಗಿದ್ದು ಹೇಗೆ?

ಯಾವುದೋ ಚಿತ್ರಕ್ಕೆ ಮಾಡಿದ ಟ್ಯೂನ್ ಮತ್ಯಾವುದೋ ಚಿತ್ರಕ್ಕೆ ಬಳಕೆ ಆಗುವುದು, ಇನ್ನೊಂದು ಚಿತ್ರಕ್ಕೆ ಬರೆದ ಹಾಡಿನ ಸಾಹಿತ್ಯ ಬೇರೆ ಚಿತ್ರದಲ್ಲಿ ಹಿಟ್ ಆಗೋದೆಲ್ಲ ಚಿತ್ರರಂಗದಲ್ಲಿ ಆಗಾಗ್ಗೆ ನಡೆಯುತ್ತಿರುತ್ತದೆ. ಅಂದಹಾಗೆ ಪುನೀತ್ ರಾಜ್‌ಕುಮಾರ್ ಚಿತ್ರಕ್ಕಾಗಿ ಮಾಡಿದ ಹಾಡೊಂದು ಯಶ್ ಚಿತ್ರಕ್ಕೆ ಬಳಕೆಯಾಗಿ ಸೂಪರ್ ಹಿಟ್ ಆಗಿದೆ. ಆ ವಿಚಾರ ಬಹಳ ವರ್ಷಗಳ ಬಳಿಕ ರಿವೀಲ್ ಆಗಿದೆ.

ಯಶ್ ನಟಿಸಿರುವ 18 ಸಿನಿಮಾಗಳಲ್ಲಿ ಯಶ್ ಹಲವು ಹಿಟ್ ಲಿಸ್ಟ್ ಸೇರಿವೆ. ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾ ಕಥೆಗಳನ್ನು ರಾಕಿಂಗ್ ಸ್ಟಾರ್ ಆಯ್ಕೆ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಯಶ್ ತಮ್ಮದೇ ಸಿನಿಮಾಗಳ ಕಥೆ, ಚಿತ್ರಕಥೆ ಹೀಗೆ ಪ್ರತಿಯೊಂದು ವಿಚಾರದ ಬಗ್ಗೆ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಾರೆ. ಕಥೆ, ಚಿತ್ರಕಥೆ ತಂಡದ ಜೊತೆ ಕೂತು ತಮ್ಮ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಇದೇ ಅವರ ಸಿನಿಮಾಗಳ ಸಕ್ಸಸ್ ಸೀಕ್ರೆಟ್ ಎನ್ನುವವರು ಇದ್ದಾರೆ.

Yash s Yaralli soundu madodu song basically recorded for Puneeth rajkumar s film

'ಮಿ. & ಮಿ. ರಾಮಾಚಾರಿ' ಚಿತ್ರದ ಆಲ್ಬಮ್ ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಅದರಲ್ಲೂ ಟೈಟಲ್ ಸಾಂಗ್ ಅಭಿಮಾನಿಗಳ ಮನಗೆದ್ದಿತ್ತು. 'ಯಾರಲ್ಲಿ ಸೌಂಡು ಮಾಡೋದು ಸುಮ್ನಿರಿ ಚಾರಿ ಬೈಬೋದು' ಎಂದು ಹಾಡು ಶುರುವಾಗುತ್ತದೆ. ಅಸಲಿ ವಿಚಾರ ಏನು ಅಂದ್ರೆ ಇದು ಪುನೀತ್ ರಾಜ್‌ಕುಮಾರ್ ನಟನೆಯ 'ಅಣ್ಣಾಬಾಂಡ್' ಚಿತ್ರಕ್ಕಾಗಿ ಮಾಡಿದ್ದ ಹಾಡು. ಈ ವಿಚಾರ 9 ವರ್ಷಗಳ ಬಳಿಕ ರಿವೀಲ್ ಆಗಿದೆ.

ದುನಿಯಾ ಸೂರಿ ನಿರ್ದೇಶನದ 'ಅಣ್ಣಾ ಬಾಂಡ್' ಸಿನಿಮಾ ಆಲ್ಬಮ್‌ ಕೂಡ ಸಖತ್ ಸೌಂಡ್ ಮಾಡಿತ್ತು. ಆ ಚಿತ್ರಕ್ಕೂ ವಿ. ಹರಿಕೃಷ್ಣ ಮ್ಯೂಸಿಕ್ ಮಾಡಿದ್ದರು. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದರು. 'ಕಾಣದಂತೆ ಮಾಯವಾದನು' ರೀಮಿಕ್ಸ್ ಸೇರಿ ಆಲ್ಬಮ್‌ನಲ್ಲಿ 5 ಹಾಡುಗಳಿದ್ದವು. ಆದರೆ ಮೊದಲಿಗೆ 6 ಹಾಡುಗಳನ್ನು ಕಂಪೋಸ್ ಮಾಡಲಾಗಿತ್ತು. ಅದರಲ್ಲಿ 'ಯಾರಲ್ಲಿ ಸೌಂಡು ಮಾಡೋದು' ಹಾಡು ಕೂಡ ಇತ್ತು.

ಅದಾಗಲೇ 'ಹೀ ಈಸ್ ಅಣ್ಣಾಬಾಂಡ್' ಎನ್ನುವ ಒಂದು ಟೈಟಲ್ ಸಾಂಗ್ ಇತ್ತು ಎನ್ನುವ ಕಾರಣಕ್ಕೋ ಏನೋ 'ಯಾರಲ್ಲಿ ಸೌಂಡು ಮಾಡೋದು' ಹಾಡನ್ನು ಚಿತ್ರಕ್ಕೆ ಬಳಸಿಕೊಂಡಿರಲಿಲ್ಲ. ಈ ಬಗ್ಗೆ 'ಕರಟಕ ದಮನಕ' ಸಿನಿಮಾ ಪ್ರಚಾರದ ವೇಳೆ ನಿರ್ದೇಶ ಯೋಗರಾಜ್ ಭಟ್ ವಿವರಿಸಿದ್ದಾರೆ.

Yash s Yaralli soundu madodu song basically recorded for Puneeth rajkumar s film

"ಯಾರಲ್ಲಿ ಸೌಂಡು ಮಾಡೋದು' ಹಾಡನ್ನು ಯಾವ ಚಿತ್ರಕ್ಕಾಗಿ ಮಾಡಿದ್ದು ಎನ್ನುವುದನ್ನು ನಾನು ಈ ಹಿಂದೆ ಹೇಳಿರಲಿಲ್ಲ. ಅಂದಹಾಗೆ ಅದು ಅಪ್ಪು ಸರ್‌ಗೆ ಮಾಡಿದ ಹಾಡು. "ಯಾರಲ್ಲಿ ಸೌಂಡು ಮಾಡೋದು ಸುಮ್ನಿರಿ ಅಣ್ಣ ಬೈಬೋದು. ಅಣ್ಣಾ ಬಾಂಡ್' ಹೀಗೆ ಹಾಡು ಮುಂದುವರೆಯುತ್ತದೆ"

"ಆ ಹಾಡನ್ನು 'ಡ್ರಾಮಾ' ಸಿನಿಮಾದಲ್ಲಿ ವಿ. ಹರಿಕೃಷ್ಣ ಫೋನಲ್ಲಿ ಯಶ್ ಕೇಳಿದ್ದ. ಆಮೇಲೆ ಅದು ಮಿ.& ಮಿ. ರಾಮಾಚಾರಿ' ಚಿತ್ರಕ್ಕೆ ಬಳಕೆ ಆಯಿತು" ಎಂದು ಹೇಳಿದ್ದಾರೆ. 'ಅಣ್ಣಾಬಾಂಡ್' ಎಂದು ಇದ್ದ ಜಾಗದಲ್ಲಿ 'ರಾಮಾಚಾರಿ' ಎಂದು ಸೇರಿಸಿ ನಿರ್ದೇಶಕ ಸಂತೋಷ್ ಆನಂದ್‌ ರಾಮ್ ಸಾಹಿತ್ಯ ಬದಲಿಸಿ ಹಾಡನ್ನು ಪೂರ್ಣಗೊಳಿಸಿದ್ದರು ಎನ್ನುವುದು ಗೊತ್ತಾಗುತ್ತದೆ. ಒಟ್ನಲ್ಲಿ ಯಶ್ ಹಾಡು ಕೇಳಿ ಇಷ್ಟಪಟ್ಟು ತಮ್ಮ ಚಿತ್ರಕ್ಕೆ ಬಳಸಿಕೊಂಡು ಗೆದ್ದರು.

2014ರಲ್ಲಿ ಬಂದ ಮಿ.& ಮಿ. ರಾಮಾಚಾರಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಯಶ್ ಹಿಂದಿನ ಸಿನಿಮಾಗಳ ದಾಖಲೆಗಳನ್ನು ಮುರಿದು ಮೊದಲ ಸ್ಥಾನಕ್ಕೇರಿತು. ಆ ಚಿತ್ರಕ್ಕೆ ವಿ. ಹರಿಕೃಷ್ಣ ಮ್ಯೂಸಿಕ್ ಬಲವೂ ಸಿಕ್ಕಿತ್ತು. ಮುಖ್ಯವಾಗಿ ಟೈಟಲ್ ಸಾಂಗ್ ಕೂಡ ಪ್ಲಸ್ ಆಗಿತ್ತು ಎನ್ನುವುದನ್ನು ಮರೆಯುವಂತಿಲ್ಲ.

More from Filmibeat

English summary
Yogaraj Bhat revealed Yaralli soundu madodu song composed for Anna bond film, later yash Used to Mr. and Mrs. Ramachari film;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X