ವರ್ಷದ ಕೊನೆಗೆ ನಿರ್ದೇಶಕ ಯೋಗರಾಜ್ ಭಟ್ಟರ ಜೊತೆ ಚುಟುಕು ಪ್ರಶ್ನೋತ್ತರ ಮಾಲೆ
ನೋಡ್ತಾ ನೋಡ್ತಾ ಒಂದು ವರ್ಷ ಕಳೆದೇಹೋಯ್ತು. ಹಳೇ ವರ್ಷಕ್ಕೆ ಗುಡ್‌ಬೈ ಹೇಳಿ ಹೊಸ ವರ್ಷವನ್ನು ಸ್ವಾಗತಿಸೋಣ. ಕಳೆದ ವರ್ಷದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಹೊಸ ವರ್ಷವನ್ನು ಸಂಭ್ರಮಿಸೋಣ.
ಈ ವರ್ಷ ಕನ್ನಡ ಚಿತ್ರರಂಗಕ್ಕೆ ಸಿಹಿ ಕಹಿ ಎರಡೂ ಸಿಕ್ಕಿದೆ. ಒಂದಷ್ಟು ಸಿನಿಮಾಗಳು ಗೆದ್ದು ಬೀಗಿದ್ದರೆ ಮತ್ತೆ ಕೆಲವು ಸೋತು ಸುಣ್ಣವಾಗಿವೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾಗಳು ನಿರಾಸೆ ಮೂಡಿಸಿದ್ದು ಇದೆ.

ಹೊಸ ವರ್ಷದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಗೆ ಅಣಿಯಾಗುತ್ತಿವೆ. ಮುಂದೆ ಕನ್ನಡ ಸಿನಿಮಾಗಳು ಮತ್ತಷ್ಟು ಸದ್ದು ಮಾಡುವ ನಿರೀಕ್ಷೆ ಮೂಡಿದೆ. ಈ ವರ್ಷ ನಿರ್ದೇಶನ, 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ, ಗೀತೆಗಳಿಗೆ ಸಾಹಿತ್ಯ ಬರೆಯುತ್ತಾ ನಿರ್ದೇಶಕ ಯೋಗರಾಜ್ ಭಟ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. 2025ರ ಕೊನೆ ಹಾಗೂ 2026ರ ಆರಂಭದಲ್ಲಿ ಭಟ್ರು ಒಂದಷ್ಟು ಚುಟುಕು ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.
1. ಈ ವರ್ಷ ಎಷ್ಟು ಖುಷಿ ಕೊಟ್ಟಿದೆ?
ಅದ್ಭುತ ವರ್ಷ ಇದು. ವಿಪರೀತ ಕೆಲ್ಸ. ವಿಪರೀತ ಖುಷಿ. ವಿಪರೀತ ಸುತ್ತಾಟ ಎಲ್ಲಾ ಇತ್ತು.
2. 'ಮನದ ಕಡಲು' ನಿರೀಕ್ಷಿಸಿದ್ದ ಯಶಸ್ಸು ತಂದುಕೊಡ್ತಾ?
ಹೊಸಬರ ಸಿನಿಮಾ 'ಮನದ ಕಡಲು'. ಅದಕ್ಕೆ ಈಗ ಸಿಕ್ಕಿರುವ ಯಶಸ್ಸು ದೊಡ್ಡದು ಎಂದೇ ಹೇಳಬಹುದು.
3. ಹೊಸ ವರ್ಷದ ಆರಂಭದಲ್ಲೇ 'ಅಮಲು' ಏರಿಸುವ ಪ್ರಯತ್ನ ಯಾಕೆ?
ಕುಡಿಯದೇ 'ಅಮಲು' ಪ್ರತಿಕ್ಷಣ ಏರುತ್ತಲೇ ಇರಬೇಕು ಅಂತ.
4. ಹೊಸ 'ಕಿಲಾಡಿಗಳ' ಜೊತೆ ಕಾಮಿಡಿ ಕಿಕ್ ಕೊಡೋ ಕಾಯಕ ಶುರುವಾಗಿದೆ ಅಲ್ವೇ?
ಹೌದು. ಅದು ಜೀ ಕನ್ನಡದ ಮುದ್ದಾದ ಕಾರ್ಯಕ್ರಮ. 'ನಗು'ತೀರ ದೊಡ್ಡದು. ನಗುವಿಗೆ ನಮನ.
5. ಹೊಸ ವರ್ಷದ ರೆಸಲ್ಯೂಷನ್ ಅಂತ ಏನಾದ್ರೂ?
ಇಲ್ಲ.. ರೆಸಲ್ಯೂಷನ್ ಹೇಳ್ಕೊಂಡು ಅದನ್ನು ಅಚೀವ್ ಮಾಡದೇ ನಗೆಪಾಟಲು ಆಗುವುದು ನನಗೆ ಆಗಲ್ಲ.
6. ಭಟ್ರು ಸಿನಿಮಾ ತಡ ಮಾಡುತ್ತಿದ್ದಾರೆ ಎನ್ನುವ ಆರೋಪ ಇದ್ಯಲ್ಲ
ಏನೋಪ್ಪಾ. ವರ್ಷಕ್ಕೊಂದು ಸಿನ್ಮಾ ಮಾಡ್ತಾ ಇರೋದು ನಾನು ಮಾತ್ರ ಅಂತ ಯಾರೋ ಅಂದಂಗೆ ನೆನಪು.
7. ನಿಂಗವ್ವ- ಮಾವನ ಮಧ್ಯೆ ರಾಯಭಾರ ಮಾಡಿ ಗೆದ್ದು ಬಿಟ್ರಲ್ಲ!
ಜೈ ಜನತೆ.. ಹಾಡಲ್ಲಿ ಜನರಿಗೆ ಮಜಾ ಕೊಡುವುದು ನನ್ನ ಇಷ್ಟದ ಕಾರ್ಯಗಳಲ್ಲಿ ಒಂದು. ಜೈ 'ಲ್ಯಾಂಡ್‌ಲಾರ್ಡ್' ಅಂಡ್ ಟೀಂ
8. ಹೊಸ ವರ್ಷದಲ್ಲಿ ಯಾವೆಲ್ಲಾ ಸಿನಿಮಾ ಯೋಜನೆಗಳಿವೆ?
ಎರಡು ಸಿನಿಮಾಗಳಿವೆ. ಒಂದು ಕನ್ನಡದ ಚಿತ್ರ. ಇನ್ನೊಂದು ಉತ್ತರ ಭಾರತದ್ದು.. ಎಲ್ಲಾ ಒಟ್ಟಿಗೆ ಹೇಳ್ತೀನಿ..


Click it and Unblock the Notifications











