2023 Roundup: ಈ ವರ್ಷ ವಿವಾಹ ಬಂಧನಕ್ಕೆ ಒಳಗಾದ ಬಾಲಿವುಡ್ ಜೋಡಿಗಳಿವು

ಈ ವರ್ಷದ ಹಲವು ಬಾಲಿವುಡ್ ಸೆಲಬ್ರಿಟಿಗಳು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಕಿಯಾರಾ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ, ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ, ಸ್ವರಾ ಭಾಸ್ಕರ್ - ಫಹಾದ್ ಅಹ್ಮದ್ ಸೇರಿದಂತೆ ಖ್ಯಾತ ತಾರೆಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 2023 ರಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ.

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ

ನಟಿ ಕಿಯಾರಾ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಫೆಬ್ರವರಿಯಲ್ಲಿ ಜೈಸಲ್ಮೇರ್‌ನ ಸೂರ್ಯಗಢ್ ಹೋಟೆಲ್‌ನಲ್ಲಿ ನಡೆದ ಅದ್ದೂರಿ ವಿವಾಹದಲ್ಲಿ ಸತಿ ಪತಿಗಳಾದರು. ಕೆಲವು ಆಪ್ತ ಸ್ನೇಹಿತರು ಮತ್ತು ಕುಟುಂಬದ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ನಡುವೆ 'ಶೇರ್ಷಾ' ಸಿನಿಮಾದಲ್ಲಿ ನಟಿಸುವಾಗ ಪ್ರೇಮಾಂಕುರವಾಗಿತ್ತು. ಆದರೆ, ಈ ವಿಷಯವನ್ನು ಅವರು ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ವದಂತಿಗಳ ಬೆನ್ನಲ್ಲೇ ಈ ಜೋಡಿ ವಿವಾಹವನ್ನು ಘೋಷಿಸಿತ್ತು. ಮದುವೆಲ್ಲಿ ನಟಿ ಕಿಯಾರಾ ಅಡ್ವಾಣಿ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿದ್ದರು, ಸಿದ್ಧಾರ್ಥ್ ಝರಿ ಕಸೂತಿಯಿಂದ ಅಲಂಕರಿಸಲ್ಪಟ್ಟ ಚಿನ್ನದ ಬಣ್ನದ ಶೆರ್ವಾನಿಯಲ್ಲಿ ಸಕತ್ ಲುಕ್ ನೀಡಿದ್ದರು.

Year Ender 2023: 5 celebrity weddings of Bollywood

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರೊಂದಿಗೆ ಸೆಪ್ಟೆಂಬರ್‌ನಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಜಸ್ಥಾನದ ಉದಯಪುರದ ತಾಜ್ ಲೇಕ್ ಪ್ಯಾಲೇಸ್‌ನಲ್ಲಿ ಅದ್ದೂರಿ ವಿವಾಹ ನಡೆದಿತ್ತು. ತಮ್ಮ ಮದುವೆಗೆ ಪರಿಣಿತಿ ಚೋಪ್ರಾ ಲೈಟ್ ವೈಟ್ ಲೆಹಂಗಾ ಧರಿಸಿದ್ದರು. ಅವರ ಆಭರಣಗಳು ಜನರ ಗಮನ ಸೆಳೆದಿದ್ದರು. ವರ ರಾಘವ್ ಚಡ್ಡಾ ಶೇರ್ವಾನಿಯಲ್ಲಿ ಮಿಂಚಿದ್ದರು.

ಸ್ವರಾ ಭಾಸ್ಕರ್ ಮತ್ತು ಫಹಾದ್ ಅಹ್ಮದ್

ನಟಿ ಸ್ವರಾ ಭಾಸ್ಕರ್ ಫೆಬ್ರವರಿ 16 ರಂದು ರಾಜಕಾರಣಿ ಫಹಾದ್ ಅಹ್ಮದ್ ಅವರನ್ನು ಮದುವೆಯಾದರು. ಈ ಜೋಡಿ ದೆಹಲಿಯಲ್ಲಿ ನ್ಯಾಯಾಲಯದಲ್ಲಿ ಕೋರ್ಟ್ ಮ್ಯಾರೇಜ್ ಮಾಡಿಕೊಳ್ಳುವ ಮೂಲಕ ಯುವಕರಿಗೆ ಮಾದರಿಯಾದರು. ಇದಾದ ನಂತರ ಸಮಾಜವಾದಿ ಯುವಜನ ಸಭಾದ ರಾಜ್ಯಾಧ್ಯಕ್ಷ ಫಹಾದ್ ಅಹ್ಮದ್ ರಾಜಧಾನಿಯಲ್ಲಿ ಅದ್ಧೂರಿ ವಿವಾಹ ಆರತಕ್ಷತೆಯನ್ನು ಆಯೋಜಿಸಿದ್ದರು. ಇದೆ ವರ್ಷ ಸೆಪ್ಟೆಂಬರ್ 23 ರಂದು ರಾಬಿಯಾ ಎಂಬ ಹೆಣ್ಣು ಮಗುವನ್ನು ಮನೆಗೆ ಸ್ವಾಗತಿಸಿದರು.

ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್

ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ, ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಜನವರಿಯಲ್ಲಿ ಖಂಡಾಲಾದ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ವಿವಾಹವಾದರು. ಈ ಜೋಡಿ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಮದುವೆಯಲ್ಲಿ ನಟಿ ಅಥಿಯಾ ಶೆಟ್ಟಿ ಅವರು ಕೆಎಲ್ ರಾಹುಲ್ ಅವರ ಕ್ಲಾಸಿಕ್ ಐವರಿ ಶೆರ್ವಾನಿಯೊಂದಿಗೆ ಮ್ಯಾಚ್ ಆಗುವಂತೆ ಸುಂದರವಾದ ಶಾಂಪೇನ್ ಗುಲಾಬಿ ಬಣ್ಣದ ಲೆಹೆಂಗಾವನ್ನು ಧರಿಸಿದ್ದರು.

Year Ender 2023: 5 celebrity weddings of Bollywood

ರಣದೀಪ್ ಹೂಡಾ ಮತ್ತು ಲಿನ್ ಲೈಶ್ರಾಮ್

ಕಳದ ತಿಂಗಳು ನಟ ರಣದೀಪ್ ಹೂಡಾ ಅವರು ತಮ್ಮ ಬಹುಕಾಲದ ಗೆಳತಿ ಲಿಲ್ ಲೈಶ್ರಾಮ್ ಅವರೊಂದಿಗೆ ನವೆಂಬರ್ 29 ರಂದು ವಿವಾಹ ಬಂಧನಕ್ಕೆ ಒಳಗಾದರು. ದಂಪತಿ ಮಣಿಪುರದ ಇಂಫಾಲ್‌ನಲ್ಲಿ ಸಾಂಪ್ರದಾಯಿಕ ಮೈತೇಯಿ ಪದ್ಧತಿಯಂತೆ ವಿವಾಹವಾದರು. ಸಮಾರಂಭವು ಸಾಕಷ್ಟು ಖಾಸಗಿಯಾಗಿತ್ತು. ಇಬ್ಬರೂ ಮಣಿಪುರಿ ಬಟ್ಟೆಗಳನ್ನು ಧರಿಸಿದ್ದರು. ರಣದೀಪ್ ಹೂಡಾ ಸಾಂಪ್ರದಾಯಿಕ ಬಿಳಿ ಉಡುಪನ್ನು ಧರಿಸಿದ್ದರೆ, ಲಿನ್ ಲೈಶ್ರಾಮ್ ಪೊಟ್ಲೋಯ್ ಎಂಬ ಮಣಿಪುರಿ ವೇಷಭೂಷಣದಲ್ಲಿದ್ದರು. ಇವರ ವಿವಾಹ ಸಕತ್ ವೈರಲ್ ಆಗಿತ್ತು.

More from Filmibeat

English summary
2023 Roundup: 5 celebrity weddings of Bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X