For Quick Alerts
  ALLOW NOTIFICATIONS  
  For Daily Alerts

  2020ರಲ್ಲಿ ಹೊಸ ಜೀವನ ಆರಂಭಿಸಿದ ಸೌತ್ ತಾರೆಯರು

  |

  ಕೊರೊನಾ ವರ್ಷದಲ್ಲಿ ಮದುವೆಯಾದ ಕನ್ನಡ ಸೆಲೆಬ್ರಿಟಿಗಳ ವಿವರ ಹಾಗೂ ಬಾಲಿವುಡ್ ತಾರೆಯರ ವಿವರ ನೋಡಿದ್ದಾಯ್ತು. ಈಗ ದಕ್ಷಿಣ ಭಾರತದ ತೆಲುಗು, ತಮಿಳು ಹಾಗೂ ಮಲಯಾಳಂ ಇಂಡಸ್ಟ್ರಿಗೆ ಸಂಬಂಧಪಟ್ಟ ಯಾರೆಲ್ಲ ಈ ವರ್ಷ ಸಪ್ತಪದಿ ತುಳಿದರು ಎಂದು ನೋಡುವ ಸಮಯ.

  ಕೊರೊನಾ ಭೀತಿ, ಲಾಕ್‌ಡೌನ್ ಇದ್ದರೂ ಹಲವು ಸ್ಟಾರ್ಸ್ ಮದುವೆಯಾದರು. ಕೆಲವು ಸೆಲೆಬ್ರಿಟಿಗಳು ಎರಡನೇ ಹಾಗು ಮೂರನೇ ಮದುವೆ ಆಗಿ ಈ ವರ್ಷ ಚರ್ಚೆಯ ಕೇಂದ್ರಬಿಂದು ಆದರು. ಹಾಗಾದ್ರೆ, 2020ರಲ್ಲಿ ಹೊಸ ಜೀವನ ಆರಂಭಿಸಿದ ಸೌತ್ ಸ್ಟಾರ್ಸ್ ಯಾರು? ಮುಂದೆ ಓದಿ....

  2020 ಫ್ಲ್ಯಾಶ್ ಬ್ಯಾಕ್: ಈ ವರ್ಷ ಚಂದನವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು2020 ಫ್ಲ್ಯಾಶ್ ಬ್ಯಾಕ್: ಈ ವರ್ಷ ಚಂದನವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು

  ಮೆಗಾ ಕುಟುಂಬದಲ್ಲಿ ಮದುವೆ

  ಮೆಗಾ ಕುಟುಂಬದಲ್ಲಿ ಮದುವೆ

  ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಅವರ ಪುತ್ತಿ ನಿಹಾರಿಕಾ ಮದುವೆ ಡಿಸಂಬರ್ 9 ರಂದು ರಾಜಸ್ಥಾನದಲ್ಲಿ ನೆರವೇರಿದೆ. ನಟಿ ನಿಹಾರಿಕಾ ಗೆಳೆಯ ಚೈತನ್ಯ ಜೊನ್ನಲಗಡ್ಡ ಜೊತೆ ರಾಜಸ್ಥಾನದ ಉದಯ್ ಪುರದ ಉದಯ್ ವಿಲಾಸ ಅರಮನೆಯಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. ಈ ಮದುವೆಯಲ್ಲಿ ಮೆಗಾಸ್ಟಾರ್ ಮತ್ತು ಚೈತನ್ಯ ಕುಟುಂಬ ಹಾಗೂ ಆಪ್ತರು ಸೇರಿದಂತೆ ಕೇವಲ 100 ಮಂದಿಗೆ ಮಾತ್ರ ಭಾಗಿಯಾಗಿದ್ದರು.

  <br />ಫೋಟೋಗಳು; ಚೈತನ್ಯ ಜೊತೆ ಹಸೆಮಣೆ ಏರಿದ ಮೆಗಾಸ್ಟಾರ್ ಕುಟುಂಬದ ಏಕೈಕ ನಟಿ ನಿಹಾರಿಕಾ
  ಫೋಟೋಗಳು; ಚೈತನ್ಯ ಜೊತೆ ಹಸೆಮಣೆ ಏರಿದ ಮೆಗಾಸ್ಟಾರ್ ಕುಟುಂಬದ ಏಕೈಕ ನಟಿ ನಿಹಾರಿಕಾ

  ಉದ್ಯಮಿ ಕೈ ಹಿಡಿದ ಕಾಜಲ್

  ಉದ್ಯಮಿ ಕೈ ಹಿಡಿದ ಕಾಜಲ್

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಬಹುಕಾಲದ ಗೆಳೆಯ ಗೌತಮ್ ಕಿಚಲು ಜೊತೆ ಈ ವರ್ಷ ಹಸೆಮಣೆ ಏರಿದರು. ಅಕ್ಟೋಬರ್ 31ರ ಸಂಜೆ ಮುಂಬೈನ ತಾಜ್ ಮಹಲ್ ಪ್ಯಾಲೆಸ್ ಹೋಟೆಲ್ ನಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಗೌತಮ್ ಖ್ಯಾತ ನಟಿ ಕಾಜಲ್ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದರು.

  ಫೋಟೋಗಳು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್ಫೋಟೋಗಳು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್

  ಮೂರನೇ ಮದುವೆಯಾದ ನಿರ್ಮಾಪಕ

  ಮೂರನೇ ಮದುವೆಯಾದ ನಿರ್ಮಾಪಕ

  ತಮಿಳು ನಟ ಮತ್ತು ನಿರ್ಮಾಪಕ ಆರ್ ಕೆ ಸುರೇಶ್ ಈ ವರ್ಷ ಮೂರನೇ ಮದುವೆದರು. ಪ್ರೇಯಸಿ ಮಧು ಜೊತೆ ಸುರೇಶ್ ಹೊಸ ಜೀವನ ಆರಂಭಿಸಿದರು. ಈ ಹಿಂದೆ ಎರಡು ಬಾರಿ ಮದುವೆಯಾಗಿದ್ದ ಸುರೇಶ್, ಪತ್ನಿಯಿಂದ ದೂರವಿದ್ದರು.

  ರಾಣಾ ದಗ್ಗುಬಾಟಿ ವಿವಾಹ

  ರಾಣಾ ದಗ್ಗುಬಾಟಿ ವಿವಾಹ

  ಖ್ಯಾತ ನಟ ರಾಣಾ ದಗ್ಗುಬಾಟಿ, ತಮ್ಮ ಬಹುಕಾಲದ ಗೆಳತಿ ಮಿಹೀಕಾ ಬಜಾಜ್ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ರಾಣಾ ಮತ್ತು ಮಿಹಿಕಾ ವಧು ಸಪ್ತಪದಿ ತುಳಿದರು.

  ಫೋಟೊಗಳು: ರಾಣಾ ದಗ್ಗುಬಾಟಿ-ಮಿಹೀಕಾ ಬಜಾಜ್ ಮದುವೆ ಸಂಭ್ರಮಫೋಟೊಗಳು: ರಾಣಾ ದಗ್ಗುಬಾಟಿ-ಮಿಹೀಕಾ ಬಜಾಜ್ ಮದುವೆ ಸಂಭ್ರಮ

  ಸಾಹೋ ನಿರ್ದೇಶಕನ ಮದುವೆ

  ಸಾಹೋ ನಿರ್ದೇಶಕನ ಮದುವೆ

  ಪ್ರಭಾಸ್ ಅಭಿನಯದ 'ಸಾಹೋ' ಖ್ಯಾತಿಯ ನಿರ್ದೇಶಕ ಸುಜೀತ್ ರೆಡ್ಡಿ ಬಹುಕಾಲದ ಗೆಳತಿ ಪ್ರವಲ್ಲಿಕಾ ಜೊತೆ ಹಸೆಮಣೆ ಏರಿದರು. ಸೂಜಿತ್ ಮತ್ತು ಪ್ರವಲ್ಲಿಕಾ ಮದುವೆ ಆಗಸ್ಟ್ 2 ಎಂದು ನೆರವೇರಿದೆ. ಹೈದರಾಬಾದ್ ನ ಗೋಲ್ಕೊಂಡ ರೆಸ್ಟಾರ್ಟ್ ನಲ್ಲಿ ಇಬ್ಬರು ಪತಿ-ಪತ್ನಿಯರಾದರು.

  ನಿತೀನ್ ಕಲ್ಯಾಣ

  ನಿತೀನ್ ಕಲ್ಯಾಣ

  ತೆಲುಗು ನಟ ನಿತಿನ್ ಮತ್ತು ಶಾಲಿನಿ ಮದುವೆ ಹೈದರಾಬಾದ್ ನ ಫಲಕನುಮಾ ಅರಮನೆಯಲ್ಲಿ ನಡೆದಿದೆ. ಹಿಂದೂ ಸಂಪ್ರದಾಯದ ಪ್ರಕಾರ, ಶಾಸ್ತ್ರೋಕ್ತವಾಗಿ ನಟ ನಿತಿನ್ ಗೆಳತಿ ಶಾಲಿನಿಗೆ ಮೂರು ಗಂಟು ಹಾಕಿದ್ದಾರೆ. ಮದುವೆ ಸಮಾರಂಭಕ್ಕೆ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿ ನವ ಜೋಡಿಗೆ ಆಶೀರ್ವಾದ ಮಾಡಿದ್ದರು.

  ಮೂರನೇ ಮದುವೆಯಾದ ವನಿತಾ ವಿಜಯ್ ಕುಮಾರ್

  ಮೂರನೇ ಮದುವೆಯಾದ ವನಿತಾ ವಿಜಯ್ ಕುಮಾರ್

  ವಿಎಫ್‌ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜತೆಗೆ ವನಿತಾ ವಿಜಯ್ ಕುಮಾರ್ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾದರು. ಇದು ವನಿತಾ ಅವರ ಮೂರನೇ ಮದುವೆ.

  ಸ್ಟಾರ್ ಗಳನ್ನು ನಂಬಿ ಹೋಗ್ಬೇಡಿ ಎಂದ ರವಿಚಂದ್ರನ್ | Filmibeat Kannada
  ಎರಡನೇ ಮದುವೆಯಾದ ನಿರ್ಮಾಪಕ

  ಎರಡನೇ ಮದುವೆಯಾದ ನಿರ್ಮಾಪಕ

  ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ದಿಲ್ ರಾಜು ಎರಡನೇ ಬಾರಿ ಹಸೆಮಣೆ ಏರಿದ್ದಾರೆ. ಲಾಕ್ ಡೌನ್ ನಡುವೆಯೂ ದಿಲ್ ರಾಜು ಸರಳವಾಗಿ ನಿಜಾಮಾಬಾದ್ ನ ವೆಂಕಟೇಶ್ವರ ದೇವಸ್ಥಾನದಲ್ಲಿ ತೇಜಸ್ವಿನಿ ಅಕಾ ವೈಘಾ ರೆಡ್ಡಿ ಜೊತೆ ಮದುವೆಯಾಗಿದ್ದಾರೆ.

  English summary
  Yearender 2020: List of south Celebs Married in 2020 amid Coronavirus Lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X