For Quick Alerts
  ALLOW NOTIFICATIONS  
  For Daily Alerts

  ಯುವಗೀತೆ ರಚನೆಕಾರರಿಗೆ ಸಿಗದ ಮನ್ನಣೆ: 'ಹೆಸರಿನ' ಹಿಂದೆ ಓಡುತಿದ್ಯಾ ಚಿತ್ರರಂಗ?

  |

  ಪ್ರತಿಭೆ ಇದ್ದವನು ಮಾತ್ರ ಇಂಡಸ್ಟ್ರಿಯಲ್ಲಿ ಉಳಿಯುತ್ತಾನೆ, ಪ್ರತಿಭೆಗೆ ಮಾತ್ರ ಬೆಲೆ ಎನ್ನುವ ಕಾಲವೊಂದಿತ್ತು. ಬಹುಶಃ ಚಿತ್ರರಂಗದಲ್ಲಿ ಈ ಮಾತು ಅಪರೂಪ ಎನ್ನುವಂತಾಗಿದೆ. ಒಳ್ಳೆಯ ಕೆಲಸಗಾರ, ಉತ್ತಮ ಪ್ರತಿಭೆ ಎಂದು ಎನಿಸಿಕೊಂಡರು ಅವಕಾಶ ಸಿಗದೆ ಕಾಯುತ್ತಿರುವ ತಂತ್ರಜ್ಞರು ಇಂಡಸ್ಟ್ರಿಯಲ್ಲಿ ಅನೇಕರಿದ್ದಾರೆ.

  ಅವರು ಬರೆಯುವ ಸಾಲುಗಳು ಚೆನ್ನಾಗಿದೆ, ಬರೆಯುವ ಸಂಭಾಷಣೆ ಚೆನ್ನಾಗಿದೆ, ಅವರ ಛಾಯಾಗ್ರಹಣ ಇಷ್ಟ ಆಗುತ್ತೆ, ಅವರ ಸಂಗೀತ ನಿರ್ದೇಶಕ ಸಖತ್ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೂ ಅವಕಾಶದ ಕೊರತೆ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಿದೆ. ಸ್ಟಾರ್‌ಗಿರಿ ಹಾಗೂ ಖ್ಯಾತಿಗೆ (ಹೆಸರಿಗೆ) ಬೆಲೆ ನೀಡಲಾಗುತ್ತಿದೆಯೇ ಹೊರತು ಹೊಸಬರು ಬೆಳೆಯಬೇಕು, ಅವರಿಗೆ ಅವಕಾಶ ಕೊಡಬೇಕು ಎನ್ನುವ ಟ್ರೆಂಡ್ ಕೆಲವರಲ್ಲಿ ಮಾತ್ರ ಇದೆ.

  20 ವರ್ಷ ಹೋದ್ರು ಯಶ್ ನಟನೆಯ ಈ ಆರು ಪಾತ್ರಗಳು ಆಲ್‌ಟೈಂ ಫೇವರಿಟ್20 ವರ್ಷ ಹೋದ್ರು ಯಶ್ ನಟನೆಯ ಈ ಆರು ಪಾತ್ರಗಳು ಆಲ್‌ಟೈಂ ಫೇವರಿಟ್

  ಈ ಕುರಿತು ಫಿಲ್ಮಿಬೀಟ್ ಕನ್ನಡದ ಜೊತೆ ಯುವ ಗೀತೆರಚನೆಕಾರರೊಬ್ಬರು ಮಾತನಾಡಿದ್ದಾರೆ. ''ಹಿಟ್ ಹಾಡುಗಳು ಕೊಟ್ಟಿದರೂ, ಬಹಳ ವರ್ಷದಿಂದ ಇಂಡಸ್ಟ್ರಿಯಲ್ಲಿದ್ದರೂ ಅವಕಾಶಕ್ಕಾಗಿ ಹುಡುಕಬೇಕಿದೆ, ಸಿನಿಮಾವನ್ನೇ ಜೀವನ ಎಂದು ನಂಬಿಕೊಂಡಿರುವ ಗೀತೆರಚನೆಕಾರರಿಗೆ ಇದು ಅತ್ಯಂತ ಸವಾಲಿನ ಬದುಕಾಗಿದೆ'' ಎಂದು ಬೇಸರ ಹಂಚಿಕೊಂಡಿದ್ದಾರೆ. ಮುಂದೆ ಓದಿ...

  ಕೆಲಸಕ್ಕೆ ತಕ್ಕ ಮನ್ನಣೆ ಸಿಗುತ್ತಿಲ್ಲ

  ಕೆಲಸಕ್ಕೆ ತಕ್ಕ ಮನ್ನಣೆ ಸಿಗುತ್ತಿಲ್ಲ

  ''ಹಾಡು ಹೇಗಿದ್ಯೋ ಬೇಕಾಗಿಲ್ಲ, ಒಬ್ಬ ಖ್ಯಾತನಾಮ ಗೀತೆ ರಚನೆಕಾರರ ಕೈಯಿಂದ ಹಾಡು ಬರೆಸಿದ್ರೆ ಸಾಕು ಅದು ಆ ಚಿತ್ರಕ್ಕೆ ಪ್ರಚಾರ ತಂದುಕೊಡುತ್ತೆ ಎಂಬ ಮನೋಭಾವ ಹೆಚ್ಚಿದೆ. ಖ್ಯಾತನಾಮರು ಸಾಹಿತ್ಯ ಬರೆದಿರಲ್ಲ. ಆದರೂ ಅವರ ಹೆಸರನ್ನು ಕ್ರೆಡಿಟ್‌ಗೆ ಬಳಸಿಕೊಳ್ಳಲಾಗುತ್ತದೆ. ಸ್ವತಂತ್ರವಾಗಿ ಗೀತೆ ರಚಿಸಿದವನ ಹೆಸರಿಗೂ ಮೊದಲು 'ಸ್ಟಾರ್' ಸಾಹಿತಿಯ ಹೆಸರು ಹಾಕಲಾಗುತ್ತದೆ. ದುರ್ದೈವ ಅಂದ್ರೆ ಈ ವಿಚಾರ ಆ ಖ್ಯಾತನಾಮ ಗೀತೆರಚನೆಕಾರರಿಗೂ ತಿಳಿದಿರಲ್ಲ'' ಎಂದು ಘಟನೆಯೊಂದನ್ನು ವಿವರಿಸಿದರು.

  ಬರಹಗಾರರಿಗೆ ಪ್ರಾಮುಖ್ಯತೆ ಸಿಕ್ತಿಲ್ಲ

  ಬರಹಗಾರರಿಗೆ ಪ್ರಾಮುಖ್ಯತೆ ಸಿಕ್ತಿಲ್ಲ

  ''ಒಂದು ಹಾಡು ಹಿಟ್ ಕೊಟ್ಟರೂ, ಚಿತ್ರಕ್ಕೆ ಅತ್ಯುತ್ತಮ ಸಂಭಾಷಣೆ ಮಾಡಿದರೂ ಮುಂದಿನ ಚಿತ್ರಗಳಲ್ಲಿ ಅವಕಾಶ ಸಿಗಲ್ಲ. ಗೀತೆರಚನೆಕಾರರು ಮತ್ತು ಸಂಭಾಷಣೆಕಾರರು ಹೆಸರೇಳಿ ಅಂದ್ರೆ ಅದಾಗಲೇ ಗುರುತಿಸಿಕೊಂಡಿರುವವರ ನಾಲ್ಕೈದು ಮಂದಿ ಹೆಸರು ಬಿಟ್ಟರೆ ಬೇರೆ ಯಾರ ಹೆಸರು ನೆನಪಾಗಲ್ಲ. ಪ್ರತಿಭೆಗಳನ್ನು ಮುಂಚೂಣಿಗೆ ತರುವುದು ಹಾಗೂ ಹೆಸರು ಗುರುತಿಸುವ ಕೆಲಸ ನಮ್ಮ ಇಂಡಸ್ಟ್ರಿಯಲ್ಲಿ ಆಗ್ತಿಲ್ಲ. ವಿಶೇಷವಾಗಿ ಬರಹಗಾರರಿಗೆ ಪ್ರಾಮುಖ್ಯತೆ ಸಿಕ್ತಿಲ್ಲ'' ಎಂದು ದುಃಖ ತೋಡಿಕೊಂಡಿದ್ದಾರೆ.

  ಬಿಗ್‌ಬಾಸ್ ನಲ್ಲಿ ಸ್ವಜನ ಪಕ್ಷಪಾತ: ಎಷ್ಟು ನಿಜ, ಎಷ್ಟು ಸುಳ್ಳು?ಬಿಗ್‌ಬಾಸ್ ನಲ್ಲಿ ಸ್ವಜನ ಪಕ್ಷಪಾತ: ಎಷ್ಟು ನಿಜ, ಎಷ್ಟು ಸುಳ್ಳು?

  ಸಂಭಾವನೆಯಲ್ಲೂ ತಾತ್ಸಾರ

  ಸಂಭಾವನೆಯಲ್ಲೂ ತಾತ್ಸಾರ

  ''ವೇತನ ವಿಚಾರದಲ್ಲೂ ತಾತ್ಸಾರ ಮಾಡಲಾಗುತ್ತದೆ. ಒಬ್ಬ ಗೀತೆ ರಚನೆಕಾರನಿಗೆ ಸೂಕ್ತ ಸಂಭಾವನೆ ಸಿಗುತ್ತಿಲ್ಲ. ದೊಡ್ಡ ನಟ, ಗಾಯಕ ಎಲ್ಲರಿಗೂ ಪೂರ್ತಿ ಸಂಭಾವನೆ ಕೊಡ್ತಾರೆ. ನಮ್ಮಂತ ಗೀತೆ ರಚನೆಕಾರರಿಗೆ ಸಂಭಾವನೆಯಲ್ಲೂ ಅರ್ಧ ಹಣ ಬಾಕಿ ಉಳಿಸುತ್ತಾರೆ. ದೊಡ್ಡವರು ತೆಗೆದುಕೊಳ್ಳುವುದರಲ್ಲಿ 10 ಅಥವಾ 20 ರಷ್ಟು ವೇತನ ನಮಗೆ ಇರುತ್ತೆ ಅಷ್ಟೆ. ಅವಕಾಶ ಕೊಟ್ವಿ ಎಂಬುದೇ ದೊಡ್ಡದಾಗುತ್ತೆ ಹೊರತು ಅದಕ್ಕೆ ತಕ್ಕ ಸಂಭಾವನೆಯೂ ಸಿಕ್ಕಲ್ಲ'' ಎಂದು ಅಸಹಾಯಕತೆ ಹೊರಹಾಕಿದ್ದಾರೆ.

  ಸರಿಯಾದ ಪ್ರೋತ್ಸಾಹದ ಕೊರತೆ

  ಸರಿಯಾದ ಪ್ರೋತ್ಸಾಹದ ಕೊರತೆ

  ''ಖ್ಯಾತ ರಚನೆಕಾರರಿಗೆ ಸಿನಿಮಾದ ಕಥೆ, ಹಾಡಿನ ಸಂದರ್ಭ ಪೂರ್ತಿ ವಿವರಿಸುವ ನಿರ್ದೇಶಕರು, ಹೊಸಬರು ಹಾಡು ಬರೆಯುತ್ತಿದ್ದಾರೆ ಅಂದ್ರೆ ಚಿತ್ರದ ಕಥೆನೇ ಹೇಳಲ್ಲ, ಸಂದರ್ಭನ್ನೂ ಬಿಟ್ಟುಕೊಡಲ್ಲ. ಈ ಥರ ಹಾಡು, ಆ ಥರ ಹಾಡು ಮಾಡಿ ಅಂತ ಅಷ್ಟೇ ಹೇಳ್ತಾರೆ. ಹಾಡು ಬರೆಸಿಕೊಂಡು ಸಿನಿಮಾದಲ್ಲಿ ಬಳಸದೇ ಇರುವ ಹಲವು ಘಟನೆಗಳು ನಡೆದಿವೆ. ನಾವು ಬರೆದು ಸಾಹಿತ್ಯದಲ್ಲಿ ಹಿಂದೆ ಮುಂದೆ ಟ್ರಿಮ್ ಮಾಡ್ತಾರೆ. ಕೊನೆಗೆ ಆ ಹಾಡಿನಲ್ಲಿ ಇರಬೇಕಾದ ಮೂಲಸತ್ವವೇ ಇರಲ್ಲ'' ಎಂದು ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ.

  ಯೂಟ್ಯೂಬ್ ಬಗ್ಗೆ ನಿಮಗೆ ಗೊತ್ತಿರದ ಹಲವು ಆಸಕ್ತಿಕರ ಸಂಗತಿಗಳುಯೂಟ್ಯೂಬ್ ಬಗ್ಗೆ ನಿಮಗೆ ಗೊತ್ತಿರದ ಹಲವು ಆಸಕ್ತಿಕರ ಸಂಗತಿಗಳು

  ಹೆಸರಿನ ಹಿಂದೆ ಓಡುತಿದ್ಯಾ ಚಿತ್ರರಂಗ?

  ಹೆಸರಿನ ಹಿಂದೆ ಓಡುತಿದ್ಯಾ ಚಿತ್ರರಂಗ?

  ಇದು ಕೇವಲ ಒಬ್ಬ ಗೀತೆ ರಚನೆಕಾರರನ ಅಭಿಪ್ರಾಯವಲ್ಲ. ಅನೇಕರ ವಾದವೂ ಆಗಿದೆ. ಇದೆಲ್ಲ ಕೇಳಿದ್ಮೇಲೆ ಸ್ಟಾರ್ ನಟರು, ಸ್ಟಾರ್ ನಿರ್ದೇಶಕರು, ಸ್ಟಾರ್ ಸಂಗೀತ ನಿರ್ದೇಶಕರು, ಸ್ಟಾರ್ ಗೀತೆ ರಚನೆಕಾರರು ಹೀಗೆ 'ಸ್ಟಾರ್' ಎಂದು ಗುರುತಿಸಿಕೊಂಡಿರುವವರ ಹಿಂದೆ ಓಡುತಿದ್ಯಾ ಚಿತ್ರರಂಗ ಎಂಬ ಪ್ರಶ್ನೆ ಮೂಡುತ್ತಿದೆ. ಈ ಸಂಸ್ಕೃತಿಯನ್ನು ಮೀರಿ ಗೀತೆ ರಚನೆ ವಿಭಾಗದಲ್ಲಿ ಹೊಸಬರ ಗುರುತಿಸುವಿಕೆ ಹಾಗೂ ಹೊಸಬರಿಗೆ ಪ್ರೋತ್ಸಾಹ ಸಿಗಬೇಕಿದೆ.

  English summary
  Young lyricist not getting credit in cinema industry? Read on to Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X