ಮತ್ತೊಂದು ಕನ್ನಡಚಿತ್ರದಲ್ಲಿ 'ನಿಖಿತಾ' ದರ್ಶನ

ನಿಖಿತಾ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದು ದರ್ಶನ್ ನಾಯಕನಟರಾಗಿದ್ದ ಪ್ರಿನ್ಸ್ ಹಾಗೂ ಯೋಧ ಚಿತ್ರದ ಮೂಲಕ. ಅವೆರಡೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡದಿದ್ದುದು ನಿಖಿತಾ ಕನ್ನಡದಲ್ಲಿ ಆರಕ್ಕೇರದ ಮೂರಕ್ಕಿಳಿಯದ ನಟಿಯಾಗಿ ಇರುವಂತೆ ಮಾಡಿತ್ತು. ಆದರೆ ಈಗ ನಿಖಿತಾ ಅದೃಷ್ಟ ಖುಲಾಯಿಸಿದೆ, ಒಂದರಹಿಂದೆ ಇನ್ನೊಂದು ಚಿತ್ರ ಆಕೆಯ ಮಡಿಲು ಸೇರುತ್ತಿದೆ.

ದರ್ಶನ್ ವೈಯಕ್ತಿಕ ಕಾರಣದಿಂದ ಜೈಲು ಸೇರಿದಾಗ, ಈ ನಿಖತಾ ಅವರ ಸಂಸಾರ ಒಡೆಯಲು ಕಾರಣ ಎಂದು ಆಪಾದಿಸಿ ಅವರಿಗೆ ನಿಷೇಧ ಹೇರಿ ನಂತರ ಸತ್ಯ ದರ್ಶನವಾಗಿ ನಿಷೇಧ ವಾಪಸ್ ತೆಗೆದುಕೊಂಡಿದ್ದರು. ಆಶ್ಚರ್ಯವೆಂದರೆ ಆ ನಂತರ ಮೊದಲಿಗಿಂತ ಆಕೆ ಸೌತ್ ಇಂಡಯಾದ ಎಲ್ಲಾ ಭಾಷೆಗಳಲ್ಲಿ, ಅದರಲ್ಲೂ ತಮಿಳಿನಲ್ಲಿ ಸಖತ್ ಮಿಂಚುತ್ತಿದ್ದರು. ಈಗ ಕನ್ನಡದಲ್ಲಿ ಆಕೆಯ ಅಭಿಯಾನ ಯಶಸ್ವಿಯಾಗಿ ಪ್ರಾರಂಭವಾಗಿದೆ.

ಈಗಾಗಲೇ ನಟ ರವಿಚಂದ್ರನ್ ಹಾಗೂ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಸಿನಿಮಾಗೆ ಬುಕ್ ಆಗಿದ್ದ ನಿಖಿತಾ, ಸೆಟ್ಟೇರಲಿರುವ ಜಗ್ಗೇಶ್ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಲಿರುವುದು ಬಹತೇಕ ಖಚಿತವಾಗಿದೆ. ಮಲೆಯಾಳಂ ಚಿತ್ರ 'ಹಲೋ' ರಿಮೇಕ್ ಇದಾಗಿದ್ದು, ಮೋಹನ್ ಇದನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡದಲ್ಲಿ ಈ ಚಿತ್ರಕ್ಕೆ 'ಮಂಜುನಾಥ ಬಿಎಎಲ್ ಎಲ್ ಬಿ' ಎಂದು ಹೆಸರಿಡಲಾಗಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Actress Nikitha acts in another kannada movie. As the news source, she acts in Jaggesh upcoming movie maleyalam movie 'hello' remake. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X