For Quick Alerts
  ALLOW NOTIFICATIONS  
  For Daily Alerts

  ಲೂಸ್ ಮಾದನ ಜೊತೆ ರಮ್ಯಾ ದಿಢೀರ್ ಮದುವೆ

  By Rajendra
  |
  <ul id="pagination-digg"><li class="next"><a href="/gossips/01-loose-maada-honeymoon-in-switzerland-aid0052.html">Next »</a></li></ul>

  ಲೂಸ್ ಮಾದ ಯೋಗೇಶ್ ಕಡೆಗೂ ಅಂದುಕೊಂಡದ್ದನ್ನು ಸಾಧಿಸಿದ್ದಾನೆ. ಗೋಲ್ಡನ್ ಗರ್ಲ್ ರಮ್ಯಾರ ಕೈಹಿಡಿಯಬೇಕು ಎಂದು ಕನಸುಗಳ ಗೋಪುರವನ್ನೇ ಕಟ್ಟಿದ್ದ. ಕಡೆಗೂ ಅದು ಗಾಳಿಗೋಪುರವಾಗಿಲ್ಲ. ಇವರಿಬ್ಬರ ಮದುವೆ ಗೋಪುರವಿಲ್ಲದ ಗುಡಿಯಲ್ಲಿ, ರಾತ್ರೋ ರಾತ್ರಿ ಗೊತ್ತಿಲ್ಲದ ಸ್ಥಳದಲ್ಲಿ, ಮುಹೂರ್ತವಲ್ಲದ ಮುಹೂರ್ತದಲ್ಲಿ ನಡೆದು ಹೋಗಿದೆ.

  ಈ ಸುದ್ದಿ ತಿಳಿದ ರಮ್ಯಾರ ಹಾಲಿ ಬಾಯ್‌ಫ್ರೆಂಡ್ ಗರಬಡಿದಂತಾಗಿದ್ದಾನೆ. ಈಗ ಆತನೊಬ್ಬ ಭಗ್ನಪ್ರೇಮಿ. ಇತ್ತೀಚೆಗೆ ತನ್ನ ಬಾಯ್‌ಫ್ರೆಂಡ್ ರಾಫೆಲ್ ಜೊತೆ ರಮ್ಯಾ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಇದಕ್ಕೆ ಕಾರಣವಾಗಿದ್ದದ್ದು ರಮ್ಯಾ ಜೊತೆ ಲೂಸ್ ಹೆಚ್ಚಾಗಿ ಓಡಾಡುತ್ತಿದ್ದದ್ದು ಎನ್ನುತ್ತದೆ ಗಾಂಧಿನಗರದ ಗುಪ್ತಚರ ಇಲಾಖೆ.

  ಇವರಿಬ್ಬರೂ 'ಸಿದ್ಲಿಂಗು' ಚಿತ್ರದ ಸಮಯದಲ್ಲೇ ಸಾಕಷ್ಟು ಹತ್ತಿರವಾಗಿದ್ದರಂತೆ. ಅಲ್ಲಿಂದಲೂ ಇವರಿಬ್ಬರ ನಡುವೆ ನವಿರಾದ ಪ್ರೇಮ ಚಿಗುರೊಡೆದಿತ್ತು. ಕಡೆಗೆ ಅದು ಬಳ್ಳಿಯಂತೆ ಹಬ್ಬಿ ಇಬ್ಬರನ್ನೂ ಒಂದೇ ದೋಣಿಗೆ ತಳ್ಳಿದೆ. ಇವರಿಬ್ಬರೂ ಇಷ್ಟು ಬೇಗ ಒಬ್ಬರನ್ನೊಬ್ಬರು ಕೈಹಿಡಿಯುತ್ತಾರೆಂದು ಯಾರೂ ಊಹಿಸಿರಲಿಲ್ಲ. ಇನ್ನಷ್ಟು ವಿವರಗಳು ಬ್ರೇಕ್‌ಗೆ ಬಾದ್...ಮುಂದಿನ ಪುಟದಲ್ಲಿ...ರಾಫೆಲ್ ಹುಟ್ಟೂರಲ್ಲಿ ಮಧುಚಂದ್ರ!

  ಸುಳಿವೇ ಸಿಗದಂತೆ ನಡೆದ ಈ ದಿಢೀರ್ ಬೆಳವಣಿಗೆಯಿಂದ ಕನ್ನಡ ಚಿತ್ರೋದ್ಯಮಕ್ಕೆ ಬರಗಾಲದಲ್ಲಿ ಸಿಡಿಲು ಬಡಿದಂತಾಗಿದ್ದು, ಅಭಿಮಾನಿಗಳಿಗೆ ದಿಕ್ಕುತೋಚದಂತಾಗಿದೆ. ಈ ಮದುವೆಯ ಮತ್ತೊಂದು ಟ್ವಿಸ್ಟ್ ಎಂದರೆ, ಮಧುಚಂದ್ರಕ್ಕೆ ಲೂಸ್ ಮಾದ ಆತುರಗೆಟ್ಟ ಆಂಜನೇಯನಂತೆ ಬುಕ್ ಮಾಡಿರುವ ತಾಣ ಸ್ವಿಟ್ಜರ್‌ಲ್ಯಾಂಡ್!?

  <ul id="pagination-digg"><li class="next"><a href="/gossips/01-loose-maada-honeymoon-in-switzerland-aid0052.html">Next »</a></li></ul>

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X