'ಹರಿಶ್ಚಂದ್ರ ಘಾಟ್' ನಿಂದ ಹೊರಬಿದ್ದ ಅಕ್ಷಯ್

By Staff

ಬಿ.ಪಿ.ಶ್ರೀನಿವಾಸ್ ನಿರ್ಮಿಸಿ ನಿರ್ದೇಶಿಸುತ್ತಿರುವ ಹರಿಶ್ಚಂದ್ರ ಘಾಟ್ ಚಿತ್ರ ಹೊಸ ವಿವಾದದಲ್ಲಿ ಸಿಲುಕಿಕೊಂಡಿದೆ. ಈ ಚಿತ್ರದಲ್ಲಿ ತಮ್ಮ ಮಗ ಅಕ್ಷಯ್ ನಟಿಸುವುದಿಲ್ಲ ಎಂದು ಅವರ ತಂದೆ ವೆಂಕಟಪ್ಪ ಬುಧವಾರ ಸ್ಪಷ್ಟಪಡಿಸಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಯಾಕೆ ನಟಿಸುವುದಿಲ್ಲ ಎಂಬ ಬಗ್ಗೆ ವೆಂಕಟಪ್ಪ ಕೊಟ್ಟಿರುವ ವಿವರಣೆ ಹೀಗಿದೆ.

''ಶ್ರೀನಿವಾಸ್ ವಿರುದ್ಧ ವಂಚನೆ ಆರೋಪಗಳು ಕೇಳಿಬರುತ್ತಿವೆ. ಇಂತಹವರ ಚಿತ್ರದಲ್ಲಿ ನಟಿಸುವುದು ಸರಿ ಅಲ್ಲ ಅನ್ನಿಸಿತು. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ''ಎಂದು ವೆಂಕಟಪ್ಪ ತಿಳಿಸಿದರು.
ಸಿನಿಮಾಗೆ ಸಹಿ ಹಾಕಬೇಕಾದ ಸಂದರ್ಭದಲ್ಲಿ ಈ ವಿಷಯ ಗೊತ್ತಿರಲಿಲ್ಲವೇ ಎಂದು ಕೇಳಿದರೆ, ಗೊತ್ತಿರಲಿಲ್ಲ. ನಂತರ ಮಾಧ್ಯಮಗಳಲ್ಲಿ ಶ್ರೀನಿವಾಸ್ ಬಗ್ಗೆ ಬರುತ್ತಿರುವ ವರದಿಗಳನ್ನು ನೋಡಿದ ಮೇಲೆ ಈ ನಿರ್ಧಾರಕ್ಕೆ ಬರಬೇಕಾಯಿತು ಎನ್ನುತ್ತಾರೆ ಅಕ್ಷಯ್ ಅವರ ತಂದೆ ವೆಂಕಟಪ್ಪ.

ಆಗಸ್ಟ್ 15ರಂದು ಸೆಟ್ಟೇರಿದ ಹರಿಶ್ಚಂದ್ರ ಘಾಟ್ ಚಿತ್ರಕ್ಕೆ ಶ್ರೀನಿವಾಸ್ ಅವರ ಮಗಳು ಶಾಲಿನಿ ನಾಯಕಿ.'ಗಂಗಾ ಕಾವೇರಿ' ಚಿತ್ರದ ನಟ ಅಕ್ಷಯ್, ಹರಿಶ್ಚಂದ್ರ ಘಾಟ್ ಚಿತ್ರಕ್ಕೆ ನಾಯಕ ನಟರಾಗಿ ಆಯ್ಕೆಯಾಗಿದ್ದರು. ಈಗಾಗಲೇ ಮೂರು ನಾಲ್ಕು ದಿನಗಳ ಚಿತ್ರೀಕರಣವನ್ನೂ ಹರಿಶ್ಚಂದ್ರ ಘಾಟ್ ಚಿತ್ರ ಪೂರೈಸಿದೆ.

ಈ ಚಿತ್ರಕ್ಕೆ ಅಕ್ಷಯ್ ಇದುವರೆಗೆ ಯಾವುದೇ ಸಂಭಾವನೆಯನ್ನೂ ಪಡೆದಿಲ್ಲವಂತೆ. ಅಡ್ವಾನ್ಸ್ ಅಂತಲೂ ಏನೂ ತೆಗೆದುಕೊಂಡಿಲ್ಲ. ಯಾಕೆ ಹೀಗೆ ಮಾಡಿದಿರಿ? ಎಂದರೆ, ನಮ್ಮ ನಡುವೆ ಹಳೆಯ ಕಮಿಟ್ ಮೆಂಟ್ ಇತ್ತು ಎನ್ನುತ್ತಾರೆ ವೆಂಕಟಪ್ಪ. ಒಂದು ವೇಳೆ ಶ್ರೀನಿವಾಸ್ ಅವರ ವಿರುದ್ಧ ಎಲ್ಲಾ ಆರೋಪಗಳು ಸುಳ್ಳು ಎಂದು ಸಾಬೀತಾದರೂ ಹರಿಶ್ಚಂದ್ರ ಘಾಟ್ ನಲ್ಲಿ ಅಕ್ಷಯ್ ಅಭಿನಯಿಸುವ ಮಾತೇ ಇಲ್ಲವಂತೆ.

ಸದ್ಯಕ್ಕೆ ಅಕ್ಷಯ್ ಮೈಸೂರಿನಲ್ಲಿದ್ದಾರೆ ಹಾಗಾಗಿ ಅವರು ಪತ್ರಿಕಾಘೋಷ್ಠಿಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಹಾಗಾಗಿ ಅಕ್ಷಯ್ ಪರವಾಗಿ ಈ ನಿರ್ಧಾರವನ್ನು ಪ್ರಕಟಿಸುತ್ತಿರುವುದಾಗಿ ವೆಂಕಟಪ್ಪ ತಿಳಿಸಿದರು. ಈ ಚಿತ್ರದಲ್ಲಿ ಪತ್ರಕರ್ತ ರವಿಬೆಳಗೆರೆ ಸಹ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ಮಶಾನದಲ್ಲಿ ಕೆಲಸ ಮಾಡುವ ಅನಾಥ ಹುಡುಗನೊಬ್ಬನ ಕತೆಯನ್ನ್ನು ಹರಿಶ್ಚಂದ್ರ ಘಾಟ್ ಚಿತ್ರ ಒಳಗೊಂಡಿದೆಯಂತೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X