For Quick Alerts
  ALLOW NOTIFICATIONS  
  For Daily Alerts

  ನಯನತಾರಾ, ಪ್ರಭು ನಡುವೆ ತಂದಿಟ್ಟಿದ್ದು ನಾನಲ್ಲ

  By Rajendra
  |

  ಸಿನಿಮಾ ತಾರೆ ನಯನತಾರಾ ಹಾಗೂ ಪ್ರಭುದೇವ ನಡುವೆ ಕಡ್ಡಿಗೀಚಿದ್ದು ನಾನಲ್ಲ ಎಂದಿದ್ದಾರೆ ಮತ್ತೊಬ್ಬ ಸಿನಿಮಾ ತಾರೆ ಹಂಸಿಕಾ ಮೋತ್ವಾನಿ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರು ಎಂಬಂತೆ ಹಂಸಿಕಾ ಮಾತನಾಡಿದ್ದಾರೆ.

  ನಯನಿ ಮತ್ತು ಪ್ರಭು ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹಬ್ಬಿದ್ದೇ ತಡ ಹಂಸಿಕಾ ತಡಬಡಾಯಿಸಿದ್ದಾರೆ. ಹಂಸಿಕಾ ಮತ್ತು ಪ್ರಭುದೇವಾ ನಡುವೆ ಕಣ್ಣಾಮುಚ್ಚಾಲೆ ಸಂಬಂಧವಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇವರಿಬ್ಬರ ನಡುವಿನ ಐಸ್‌ಪೈಸ್ ನಯನತಾರಾಗೆ ಗೊತ್ತಾದ ಕಾರಣಕ್ಕೆ ಪ್ರಭು ಜೊತೆ ಟೂ ಬಿಟ್ಟಿದ್ದರು ಎನ್ನಲಾಗಿತ್ತು.

  ಈ ಬಗ್ಗೆ ಪ್ರತಿಕ್ರಿಯಿಸಿರುವ ಹಂಸಿಕಾ, ಗಾಸಿಪ್ ಗಮಾರರು ಈ ರೀತಿಯ ಇಲ್ಲಸಲ್ಲದ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಸತ್ಯಸತ್ಯತೆಗಳನ್ನು ತಿಳಿದುಕೊಂಡು ವರದಿ ಮಾಡಬೇಕು. ಪ್ರಭುದೇವ ನನಗೆ ಅಣ್ಣನಿದ್ದಂತೆ. ನಮ್ಮಿಬ್ಬರ ನಡುವೆ ಇದಕ್ಕಿಂತ ಭಿನ್ನವಾದ ಸಂಬಂಧವಿಲ್ಲ ಎಂದಿದ್ದಾರೆ. (ಏಜೆನ್ಸೀಸ್)

  English summary
  No sooner have the rumor mills started circulating reports that Prabhu Deva and Nayanthara have broken up than fresh gossip that Hansika Motwani and Prabhu Deva are an item are doing the rounds.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X