ಪ್ಯಾರಿಸ್ ಆಸ್ಪತ್ರೆಗೆ ಶಿವರಾಜ್ ಕುಮಾರ್ ದಾಖಲು
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಲೆಗೆ ಏನೋ ಆಗಿದೆ ಎಂಬ ಅನುಮಾನ ನಿಜವಾಗಿದೆ. ಅವರು ಸದ್ದಿಲ್ಲದಂತೆ ಚಿಕಿತ್ಸೆಗೆ ಪ್ಯಾರಿಸ್ ವಿಮಾನ ಹತ್ತಿದ್ದಾರೆ. ಹಳೆಯ ಗಾಯದ ಕಾರಣ ಅವರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವ ಸಾಧ್ಯತೆಗಳಿದ್ದು ಅವರು ಪತ್ನಿ ಸಮೇತ ಪ್ಯಾರಿಸ್‌ಗೆ ಹಾರಿದ್ದಾರೆ.
ಈಗಾಗಲೆ ಪ್ಯಾರಿಸ್‌ನಲ್ಲಿ ಚಿಕಿತ್ಸೆ ಪಡೆದಿರುವ ಅವರ ಜೊತೆ ಇಬ್ಬರು ವೈದ್ಯರು ಹೋಗಿದ್ದಾರೆ. ಪ್ಯಾರಿಸ್‌ನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಶಿವಣ್ಣನಿಗೆ ಚಿಕಿತ್ಸೆ ನೀಡಲಾಗಿದೆ. ಜೂನ್.25ರಂದು ಎಮಿರೇಟ್ಸ್ ಏರ್‌ಲೈನ್ಸ್ ಮೂಲಕ ಅವರು ದುಬೈ ತಲುಪಿ ಅಲ್ಲಿಂದಪ್ಯಾರಿಸ್‌ಗೆ ಪ್ರಯಾಣ ಬೆಳೆಸಿದ್ದಾರೆ ಎನ್ನುತ್ತವೆ ಮೂಲಗಳು.
ಮೇ.1ರಂದು ಶಿವಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋದಾಗ ಅವರ ತಲೆ ಮೇಲೆ ಸ್ವಾಗತ ಕಮಾನು ಬಿದ್ದು ಪೆಟ್ಟಾಗಿತ್ತು. ಘಟನೆಯ ಬಳಿಕ ಶಿವಣ್ಣ ಚೇತರಿಸಿಕೊಂಡಂತೆ ಕಂಡರೂ, ಆಗಾಗ ತಲೆನೋವು ಕಾಣಿಸಿಕೊಳ್ಳುತ್ತಿತ್ತು. ಇದನ್ನು ಅಲಕ್ಷಿಸಿದರೆ ಭಾರಿ ಪ್ರಮಾದಕ್ಕೆ ಕಾರಣವಾಗುತ್ತದೆ ಎಂದು ವೈದ್ಯರ ಸೂಚನೆ ಮೇರೆಗೆ ಶಿವಣ್ಣ ಪ್ಯಾರಿಸ್‌ಗೆ ಹೋಗಿದ್ದಾರೆ.
ವೈದ್ಯಕೀಯ ಕಾರಣ ಕೊಟ್ಟು ಪ್ರವಾಸಿ ವೀಸಾ ಮೂಲಕ ಶಿವಣ್ಣ ಅರ್ಜೆಂಟಾಗಿ ಪ್ಯಾರಿಗೆ ಹೋಗಿರುವುದು ಅವರ ಅಭಿಮಾನಿಗಳನ್ನು ಕೊಂಚ ಆತಂಕಕ್ಕೆ ದೂಡಿದೆ. ತಲೆಗೆ ಪೆಟ್ಟು ಬಿದ್ದು ರಕ್ತ ಹೆಪ್ಪುಗಟ್ಟಿದ್ದು, ಇದನ್ನು ಉದಾಸೀನ ಮಾಡಿದರೆ ಮುಂದೆ ಪ್ಯಾರಲಿಸೀಸ್ ಆಗುವ ಸಾಧ್ಯತೆಗಳು ಇದ್ದು ಜ್ಞಾಪಕ ಶಕ್ತಿ ಕಳೆದುಕೊಳ್ಳುವ ಹಂತಕ್ಕೂ ತಲುಪಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. (ದಟ್ಸ್‌ಕನ್ನಡ ಸಿನಿಮಾರ್ತೆ)


Click it and Unblock the Notifications











