»   » ವಿವಾದಕ್ಕೆ ಮೂಲವಾದ ವರ್ಮಾರ ತಾಜ್ ಭೇಟಿ

ವಿವಾದಕ್ಕೆ ಮೂಲವಾದ ವರ್ಮಾರ ತಾಜ್ ಭೇಟಿ

Posted By:
Subscribe to Filmibeat Kannada
RGV's visit to Taj sparks controversy
ದಿಗಿಲುಗೊಳಿಸುವ ಚಿತ್ರಗಳ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮುಂಬೈ ಸ್ಫೋಟದ ಬಗ್ಗೆ ಮತ್ತೊಂದು ಬೆಚ್ಚಿ ಬೀಳಿಸುವ ಸಿನಿಮಾ ನಿರ್ಮಿಸಲಿದ್ದಾರೆಯೇ? ಹೀಗೆಂದು ಬಾಲಿವುಡ್ ಚಿತ್ರರಸಿಕರಲ್ಲಿ ಹೊಸ ಪ್ರಶ್ನೆ ಎದ್ದಿದೆ.ಇದಕ್ಕೆ ಸಾಕ್ಷಿ ಎಂಬಂತೆ ಉಗ್ರರ ದಾಳಿಗೆ ತುತ್ತಾದ ತಾಜ್, ಟ್ರೈಡೆಂಟ್ ಹಾಗೂ ಒಬೆರಾಯ್ ಹೋಟೆಲ್ ಗಳಿಗೆ ವರ್ಮಾ ಭಾನುವಾರಭೇಟಿ ನೀಡಿದ್ದಾರೆ.

ವರ್ಮಾ ಅವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇಶ್ ಮುಖ್ ಮತ್ತವರ ಪುತ್ರ, ನಟ ರಿತೇಶ್ ದಾಳಿಗೆ ಒಳಗಾದ ಹೋಟೆಲ್ ಗಳಿಗೆ ಭೇಟಿ ನೀಡಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ರಿತೇಶ್ ಅವರು ತಾಜ್ ಗೆ ಭೇಟಿ ನೀಡುವ ಅವಶ್ಯಕತೆಯಾದರೂ ಏನಿತ್ತು? ಎಂದು ಹಲವರು ಪ್ರಶ್ನಿಸಿದ್ದಾರೆ. 'ಇದರಲ್ಲಿ ತಪ್ಪ್ಪೇನಿದೆ? ತಾಜ್ ನಲ್ಲಿ ರಿತೇಶ್ ರೊಂದಿಗೆ ನಾನು ಹೆಜ್ಜೆ ಹಾಕಿದೆ ಅಷ್ಟೆ. ಈ ಕುರಿತು ಚಿತ್ರ ಮಾಡುವ ಯಾವುದೇ ಉದ್ದೇಶ ನನಗಿಲ್ಲ'ಎಂದು ವರ್ಮಾ ಸ್ಪಷ್ಟಪಡಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ದೇಶ್ ಮುಖ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮತ್ತು ಶಿವಸೇನಾ ಪಕ್ಷಗಳು ಆಗ್ರಹಿಸಿವೆ. ದುರಂತ ಸ್ಥಳಕ್ಕೆ ಭೇಟಿ ನೀಡಿದ ದೇಶ್ ಮುಖ್ ಅವರು ರಿತೇಶ್ ಹಾಗೂ ವರ್ಮಾ ಅವರನ್ನ್ನು ಜೊತೆಗೆ ಕರೆದುಕೊಂಡು ಹೋಗಿರುವುದು ಪಿಕ್ ನಿಕ್ ಗೆ ಹೋದಂತೆ ಇತ್ತು ಎಂದು ಮಾಧ್ಯಮಗಳು ವ್ಯಂಗ್ಯವಾಡಿವೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada