»   » ಐಶ್ವರ್ಯಾ ರೈ ಕಣ್ಣಲ್ಲಿ ಐಬಿದೆ ಎಂದ ಇಟಾಲಿಯನ್

ಐಶ್ವರ್ಯಾ ರೈ ಕಣ್ಣಲ್ಲಿ ಐಬಿದೆ ಎಂದ ಇಟಾಲಿಯನ್

Posted By:
Subscribe to Filmibeat Kannada

ಜಗತ್ತಿನ ಅತ್ಯಂತ ಸುಂದರ ಕಣ್ಣುಗಳನ್ನು ಹೊಂದಿರುವ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಕಣ್ಣಲಿ ಏನೋ ಐಬಿದೆ ಎಂದು ಇಟಲಿ ಮೂಲದ ಇತಿಹಾಸ ತಜ್ಞ ಅಭಿಪ್ರಾಯಪಟ್ಟಿದ್ದಾರೆ.

ಹಾಲಿವುಡ್ ಚಿತ್ರ ದ ಲಾಸ್ಟ್ ಲೆಜಿಯನ್ ನಲ್ಲಿ ಐಶ್ವರ್ಯ ರೈ ಕಣ್ಣುಗಳು ಸರಿಯಾದ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಸೋತಿದೆ. ಐಶ್ವರ್ಯು ಅವರ ಕಣ್ಣುಗಳು ತಮ್ಮ ನೈಜತೆಯನ್ನು ಕಳೆದುಕೊಂಡಿದೆ ಎಂದು ಇಟಲಿಯ ವಲೆರಿಯೋ ಮಾಸ್ಸಿಮೊ ಮಾನ್ಫ್ರೆಡಿ ಹೇಳಿದ್ದಾರೆ.

ಐಶ್ವರ್ಯಾಳ ನೀಲಿ ಕಂಗಳ ಮೇಲೆ ಕವನಗಳು ಹಾಡುಗಳು ಹುಟ್ಟಿಕೊಂಡಿತ್ತು. ಆದರೆ, ಈಗ ವೆಲೆರಿಯೋ ಹೇಳಿಕೆ ಹೊಸ ವಿವಾದ ಹುಟ್ಟು ಹಾಕುವಂತಿದೆ.

ವೆಲೆರಿಯೋ ಬರೆದಿರುವ ಕಥೆ ಆಧಾರಿಸಿದ ದ ಲಾಸ್ಟ್ ಲೆಜಿಯನ್ ಚಿತ್ರದಲ್ಲಿ ಐಶ್ವರ್ಯಾ ರೈ ಜೊತೆಗೆ ಬೆನ್ ಕಿಂಗ್ ಸ್ಲೆ ಹಾಗೂ ಕಾಿನ್ ಫಿರ್ಥ್ ಕೂಡಾ ನಟಿಸಿದ್ದಾರೆ.

ಐಶ್ವರ್ಯ ರೈ ಸುಂದರ ಕಂಗಳ ಒಡತಿ ನಿಜ. ಆದರೆ, ಪಾತ್ರಕ್ಕೆ ಜೀವ ತುಂಬುವಲ್ಲಿ ಆಕೆ ಕಂಗಳು ಸೋತಿದೆ ಎಂದು ವೆಲೆರಿಯೋ ಹೇಳಿದ್ದಾರೆ. ಇದಕ್ಕೆ ಐಶ್ ಯಾವುದೇ ಪ್ರತಿಕ್ರಿಯೆ ಇನ್ನೂ ನೀಡಿಲ್ಲ.

English summary
Aishwarya Rai Bachchan is said to be blessed with the most beautiful pair of eyes. However, Italian historian Valerio Massimo Manfredi is of the opinion that Aishwarya's eyes in the Hollywood film The Last Legion did not express much.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X