»   » ಸಿನಿಮಾ ಬಿಕ್ಕಟ್ಟಿನಲ್ಲಿ ‘ಕುಮಾರ ಸಂಭವ’

ಸಿನಿಮಾ ಬಿಕ್ಕಟ್ಟಿನಲ್ಲಿ ‘ಕುಮಾರ ಸಂಭವ’

Subscribe to Filmibeat Kannada

ಬೆಂಗಳೂರು: ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳ ಪ್ರದರ್ಶನದ ಬಗೆಗೆ ಚಿತ್ರಮಂದಿರಗಳ ಮಾಲೀಕರು ಹಾಗೂ ನಿರ್ಮಾಪರ ಸಂಘದ ನಡುವಿನ ಶೀತಲ ಸಮರ ತೀವ್ರ ಸೆಣಸಾಟದ ಹಂತವನ್ನು ತಲುಪಿದೆ. ಕರ್ನಾಟಕ ಸಿನಿಮಾ ಚಿತ್ರಮಂದಿರಗಳ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ಶಾಸಕ ಎಚ್‌.ಡಿ.ಕುಮಾರಸ್ವಾಮಿ ಆಯ್ಕೆಗೊಂಡಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಚಿತ್ರಮಂದಿರಗಳ ಮುಷ್ಕರ ಕುತೂಹಲ ಕೆರಳಿಸಿದೆ.

ರಾಜ್ಯದಲ್ಲಿ ಏಳುವಾರಗಳ ನಂತರ ಪರಭಾಷಾ ಚಿತ್ರಗಳನ್ನು ಬಿಡುಗಡೆಗೊಳಿಸುವ ಸರಕಾರದ ಧೋರಣೆ ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆ ಮುಂದುವರೆಯಲಿದೆ. ಕನ್ನಡ ಭಾಷೆಯ ಮೇಲೆ ಯಾರೊಬ್ಬರ ಏಕಸ್ವಾಮ್ಯ ಸಲ್ಲದು. ಬೇಡಿಕೆಗೆ ಸರಕಾರ ಸ್ಪಂದಿಸುವವರೆಗೆ ಅನಿರ್ದಿಷ್ಟ ಕಾಲ ಮುಷ್ಕರವನ್ನು ಮುಂದುವರೆಸುವುದಾಗಿ ಸಂಘದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಮುಷ್ಕರದಿಂದ ಕನ್ನಡ ಚಿತ್ರಗಳಿಗೆ ಲಾಟರಿ

ಚಿತ್ರಮಾಲೀಕರ ಮುಷ್ಕರದಿಂದ ಕನ್ನಡ ಚಿತ್ರಗಳು ಯಶಸ್ವಿಯಾಗಿ ಪ್ರದರ್ಶಿತವಾಗುತ್ತಿವೆ. ಬೆಂಗಳೂರಿನಲ್ಲಿ 115 ಚಿತ್ರಮಂದಿರಗಳಿದ್ದು, 35 ಚಿತ್ರಮಂದಿರಗಳಲ್ಲಿ ಖಾಯಂ ಆಗಿ ಪರಭಾಷಾ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

ಮುಷ್ಕರದ ಪರಿಣಾಮ ಕಳೆದ ಎರಡು ದಿನಗಳಿಂದ 50ಕ್ಕೂ ಹೆಚ್ಚು ಚಿತ್ರಮಂದಿರಗಳು ಪ್ರದರ್ಶನವನ್ನು ರದ್ದು ಮಾಡಿವೆ.

(ಇನ್ಫೋವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada