»   » ರೀಮೇಕ್‌ ಕಿಂಗ್‌ ನಾರಾಯಣ್‌ಗೆ ರಾಜ್ಯೋತ್ಸವ ಪ್ರಶಸ್ತಿ!

ರೀಮೇಕ್‌ ಕಿಂಗ್‌ ನಾರಾಯಣ್‌ಗೆ ರಾಜ್ಯೋತ್ಸವ ಪ್ರಶಸ್ತಿ!

Subscribe to Filmibeat Kannada


ಎಸ್‌.ನಾರಾಯಣ್‌ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಅದೂ ಕರ್ನಾಟಕ ಸುವರ್ಣ ಮಹೋತ್ಸವ ವರ್ಷದಲ್ಲಿ. ಅಲ್ಲಿಗೆ ‘ಉದಯ’ವಾಯಿತು ನಮ್ಮ ಚೆಲುವ ಕನ್ನಡನಾಡು!

ಎಸ್‌.ನಾರಾಯಣ್‌ಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಅದೂ ಕರ್ನಾಟಕ ಸುವರ್ಣ ಮಹೋತ್ಸವ ವರ್ಷದಲ್ಲಿ. ಅಲ್ಲಿಗೆ ‘ಉದಯ’ವಾಯಿತು ನಮ್ಮ ಚೆಲುವ ಕನ್ನಡನಾಡು!

ಈ ಪ್ರಶಸ್ತಿ ಹಿಂದಿನ ಹುನ್ನಾರ ತುಂಬ ಸುಲಭವಾಗಿ ಪತ್ತೆಯಾಗುವಂಥದ್ದು. ನಾರಾಯಣ್‌ ಹೇಳಿ ಕೇಳಿ ಕುಮಾರಸ್ವಾಮಿ ಕ್ಯಾಂಡಿಡೇಟ್‌. ನಾರಾಯಣ್‌ ಮಗ ನಟಿಸಿದ ‘ವೀರು’ ಚಿತ್ರಕ್ಕೆ ಪ್ರಶಸ್ತಿ ಕೊಟ್ಟಿಲ್ಲ ಅಂತ ಸ್ವತಃ ಕುಮ್ಮಿ ಸಿಟ್ಟು ಮಾಡಿಕೊಂಡಿದ್ದರಂತೆ. ಹೀಗಾಗಿ ನಾರಾಯಣ್‌ ಕಣ್ಣೊರೆಸುವುದಕ್ಕೆ ಈ ಪ್ರಶಸ್ತಿ ನೀಡಲಾಗಿದೆ ಅಂತ ಪುಕಾರಿದೆ.

ಅಷ್ಟಕ್ಕೂ ನಾರಾಯಣ್‌ ನಿರ್ದೇಶಿಸಿದ್ದರಲ್ಲಿ ಬಹುತೇಕ ರೀಮೇಕ್‌ ಸಿನಿಮಾಗಳೇ ಇವೆ. ಅವರ ಚಿತ್ರಗಳಲ್ಲಿ ಕನ್ನಡತನ ಹುಡುಕಿದರೂ ಸಿಗುವುದಿಲ್ಲ. ಮೊನ್ನೆ ಮೊನ್ನೆ ಬಂದ ‘ಸಿರಿವಂತ’ ಕೂಡ ರೀಮೇಕೆ. ಜೊತೆಗೆ ಪ್ರಶಸ್ತಿ ಸಿಕ್ಕಿರುವ ದೊಡ್ಡಣ್ಣ ಕೂಡ ನಾರಾಯಣ್‌ ಕ್ಯಾಂಪಿನವರೇ. ಆದರೆ ದೊಡ್ಡಣ್ಣ ಪ್ರತಿಭೆಯ ಬಗ್ಗೆ ಯಾವುದೇ ತಕರಾರಿಲ್ಲ. ಹೀಗಾಗಿ ಅವರಿಗೆ ಪ್ರಶಸ್ತಿ ಬಂದಿರೋದರ ಬಗ್ಗೆ ಯಾರದೂ ಆಕ್ಷೇಪ ಇರಲಾರದು. ಆದರೆ ರೀ.ನಾ.ಗೆ ಕೊಟ್ಟದ್ದು ಮಾತ್ರ ಸುವರ್ಣ ಕರ್ನಾಟಕದ ಸಂಭ್ರಮಕ್ಕೊಂದು ಕಪ್ಪು ಚುಕ್ಕೆ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada