For Quick Alerts
  ALLOW NOTIFICATIONS  
  For Daily Alerts

  ನಟ ಅರವಿಂದ ಸ್ವಾಮಿ ಪತ್ನಿಗೆ ರು.75 ಲಕ್ಷ ಪರಿಹಾರ

  By Rajendra
  |

  ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಸ್ಪುರದ್ರೂಪಿ ನಟ ಅರವಿಂದ ಸ್ವಾಮಿ ಹಾಗೂ ಆತನ ಪತ್ನಿ ಗಾಯತ್ರಿ ರಾಮಮೂರ್ತಿ ಬುಧವಾರ (ಡಿ.1) ಚೆನ್ನೈನ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಗಾಯತ್ರಿ ಅವರಿಗೆ ರು.75 ಲಕ್ಷ ಪರಿಹಾರ ಹಾಗೂ ತಿಂಗಳಿಗೆ ರು.1 ಲಕ್ಷ ಜೀವನಾಂಶ ಕೊಡಲು ಅರವಿಂದ ಸ್ವಾಮಿ ಒಪ್ಪಿದ್ದಾರೆ ಎನ್ನುತ್ತವೆ ಮೂಲಗಳು.

  ಅರವಿಂದ ಸ್ವಾಮಿ ಮತ್ತು ಗಾಯತ್ರಿ ಅವರು 16 ವರ್ಷ ದಾಂಪತ್ಯ ಜೀವನ ನಡೆಸಿ ಕಡೆಗೆ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದರು. ಇಬ್ಬರ ವಾದ, ವಿವಾದಗಳನ್ನು ದಾಖಲಿಸಿದ ಬಳಿಕ ನ್ಯಾಯಮೂರ್ತಿ ಎಸ್ ಮೀನಾಕ್ಷಿ ಸುಂದರಂ ಅವರು ತೀರ್ಪನ್ನು ಡಿಸೆಂಬರ್ 10ಕ್ಕೆ ಮುಂದೂಡಿದ್ದಾರೆ.

  1994ರಲ್ಲಿ ಮದುವೆಯಾದ ಅರವಿಂದ ಸ್ವಾಮಿ ಮತ್ತು ಗಾಯತ್ರಿ ರಾಮಮೂರ್ತಿ ಅವರಿಗೆ ಇಬ್ಬರು ಗಂಡು ಮಕ್ಕಳು. ಮಕ್ಕಳನ್ನು ಅರವಿಂದ ಸ್ವಾಮಿ ಅವರ ಸುಪರ್ದಿಗೆ ಒಪ್ಪಿಸಲಾಗಿದೆ ಎನ್ನಲಾಗಿದೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ರೋಜಾ, ಬಾಂಬೆ ಚಿತ್ರಗಳಲ್ಲಿ ನಟಿಸುವ ಮೂಲಕ ಅರವಿಂದ ಸ್ವಾಮಿ ಭಾರತೀಯ ಚಿತ್ರರಂಗದ ಗಮನಸೆಳೆದಿದ್ದರು.

  English summary
  Actor Arvind Swamy and his wife Gayathri Ramamurthy, who had filed for divorce, appeared before a family court in Chennai on Wednesday (December 1). Reports have claimed that the actor will pay Rs. 75 lakhs as divorce settlement and 1 lakh per month for her monthly maintenance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X