ಚಿತ್ರನಟಿ ರಾಧಿಕಾಗೆ ಪ್ರಿಯಕರನ ಬ್ಲ್ಯಾಕ್ ಮೇಲ್

ಇದರಿಂದ ಬೇಸತ್ತ ನಟಿ ರಾಧಿಕಾರ ತಾಯಿ ಚಂದ್ರಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯಕ್ಕೆ ರಾಧಿಕಾ ಅವರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಈ ಹಿಂದೆ ಇವರು ದಾವಣಗೆರೆಯಲ್ಲಿದ್ದಾಗ ಕೊಟ್ರೇಶನ ಪರಿಚಯವಾಗಿತ್ತು. ಈತ ರಾಧಿಕಾಳನ್ನು ಮನಸಾರೆ ಪ್ರೀತಿಸುತ್ತಿದ್ದ.
ಆಗ ಇವರಿಬ್ಬರ ನಡುವಿನ ಪ್ರೇಮಕ್ಕೆ ಸಾಕ್ಷಿಯಾಗಿ ಕೆಲವು ಫೋಟೋಗಳನ್ನು ತೆಗೆಸಿಕೊಂಡಿದ್ದರು. ಆ ಫೋಟೋಗಳನ್ನು ಇಟ್ಟುಕೊಂಡು ಕೊಟ್ರೇಶ್ ಈಗ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಂದಹಾಗೆ ಈಕೆ ರಾಧಿಕಾ ಕುಮಾರಸ್ವಾಮಿನೂ ಅಲ್ಲ, ರಾಧಿಕಾ ಪಂಡಿತ್ ಅಲ್ಲವೇ ಅಲ್ಲ. ಈಕೆ ಕನ್ನಡದ 'ಫೈವ್ ಈಡಿಯಟ್ಸ್' ಚಿತ್ರದಲ್ಲಿ ಅಭಿನಯಿಸಿದ್ದ ರಾಧಿಕಾ! (ಒನ್‍ಇಂಡಿಯಾ ಕನ್ನಡ)
More from Filmibeat
English summary
Ex lover from Davanagre blackmails Kannada actress Radhika, she has been acted in Kannada movie 5 Idiots. Radhika mother Chandramma lodged a complaint in Davanagere police station against Kotresh of Poornima studio owner.


Click it and Unblock the Notifications











