twitter
    For Quick Alerts
    ALLOW NOTIFICATIONS  
    For Daily Alerts

    ಕತ್ರಿಗುಪ್ಪೆ ಕತ್ರಿದಾಸ -ಛೆ ಎಂಥಾ ಅಭಾಸ

    |

    Fever 104 fm channel
    ಕತ್ರಿಗುಪ್ಪೆ ಕತ್ರಿದಾಸ -ಈ ಹೆಸರು ಯಾವ ಪುಢಾರಿಯದ್ದು ಅಲ್ಲ, ರೌಡಿಯದ್ದು ಅಲ್ಲ..ಎಫ್ ಎಂ ರೇಡಿಯೋ ದವರ ಸೃಷ್ಟಿಸಿದ ವ್ಯಂಗ್ಯನಾಮ. ಆದರೆ ಪವಿತ್ರವಾದ 'ದಾಸ' ಎಂಬ ಪದಕ್ಕೆ ಮಸಿ ಬಳಿಯುವ ಹುನ್ನಾರವಿದು, ಹಲವು ದಾಸರ ಪರಂಪರೆಯನ್ನು ಹೊಂದಿರುವ ನಮ್ಮ ನಾಡಿನ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಅರಿಯದ ಮೂಢರು, ಸುಮ್ನೆ ಜನ ಮೆಚ್ಚುವ ಕಾರ್ಯಕ್ರಮ ನೀಡುವ ಹೆಸರಲ್ಲಿ ಮಾಡುತ್ತಿರುವ ಅನ್ಯಾಯ ಎಂಬುದು ಕನಕ, ಪುರಂದರ, ವಿಜಯ ಮುಂತಾದ ದಾಸಶ್ರೇಷ್ಠ ಅನುಯಾಯಿಗಳ ಅಂಬೋಣ. ಬಹುಶಃ ಲಾಂಗೂ ಮಚ್ಚು ಹಿಡಿದು ರೌಡಿಗಳನ್ನು ಕೊಚ್ಚಿಹಾಕುವ ದರ್ಶನ್ ರ ದಾಸ ಚಿತ್ರ ಬಂದಾಗಲೂ ಇಷ್ಟು ಹೊಗೆ ಎದ್ದಿರಲಿಲ್ಲ..

    ಆದರೆ, ಈಗ ಎಫ್ಎಂ ವಾಹಿನಿಗಳ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿರುವುದು ಹಾಗೂ ಪ್ರತಿ ಬಾರಿ ಹೊಸ ಹೊಸ ಕಾರ್ಯಕ್ರಮ ನೀಡಲು ವಾಹಿನಿಗಳು ಪ್ರಯತ್ನಿಸುವುದು ನಡದೇ ಇದೆ. ಸದ್ಯ. 104 ಎಫ್ ಎಂ ವಾಹಿನಿಯಿಂದ ಪ್ರಸಾರವಾಗುವ ಕತ್ರಿಗುಪ್ಪೆ ಕತ್ರಿದಾಸ ಎಂಬ ಅಣುಕು ಹರಿಕಥೆ ಕಾರ್ಯಕ್ರಮ ಆಸ್ತಿಕ, ದಾಸಾನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ಮೇಲೆ ಮೇಲ್ ಹಾಕಿ ಇಮೇಲ್ ಸಮರ ಮಾಡುತ್ತಿರುವ ಕೆಲ ಮಾಧ್ವ ಮಿತ್ರರು. ಈ ಕಾರ್ಯಕ್ರಮದ ಔಚಿತ್ಯ ಹಾಗೂ ದಾಸ ಪದ ಪ್ರಯೋಗದ ಬಗ್ಗೆ ಎಫ್ ಎಂ ವಾಹಿನಿಯ ವ್ಯವಸ್ಥಾಪಕರಲ್ಲಿ ಸಮಜಾಯಿಷಿ ಕೇಳಿದ್ದಾರೆ. ಎಂದಿನಂತೆ, ಅವರಿಂದ ಸೂಕ್ತ ಪ್ರತಿಕ್ರಿಯೆ ದೊರೆತಿಲ್ಲ.

    ಇದೀಗ ಎಲ್ಲಾ ದಾಸ ಶ್ರೇಷ್ಠರ ಅನುಯಾಯಿಗಳು ಒಟ್ಟಾಗಿ ಎಫ್ ಎಂ ವಾಹಿನಿಯ ಮೇಲೆ ಪ್ರಹಾರ ಮಾಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಇದು ಯಾವುದೇ ಒಂದು ಜಾತಿ ಮತ ಪಂಥಕ್ಕೆ ಸಂಬಂಧಿಸಿದ ವಿಷಯವಲ್ಲ. ನಮ್ಮ ಸಂಸ್ಕೃತಿ ಪರಂಪರೆ, ಎಲ್ಲಾ ದಾಸವರೇಣ್ಯರ ಘನತೆ ಗೌರವದ ಪ್ರಶ್ನೆಯಾಗಿದೆ. ಇದಕ್ಕೆ ಸರಿಯುತ್ತರ ಸಿಗುವವರೆಗೂ ಹಿಂದೆ ಸರಿಯುವುದಿಲ್ಲ ಎನ್ನುತ್ತಾರೆ ಕೇಶವಾಚಾರ್ಯ

    ಪ್ರತಿದಿನ ಕ್ರಿಯಾಶೀಲ ಪ್ರಯೋಗಗಳನ್ನು ಮಾಡುವ ಉತ್ಸಾಹದಲ್ಲಿ ಎಫ್ ಎಂವಾಹಿನಿಗಳು ನಮ್ಮ ಸಂಸ್ಖೃತಿಯನ್ನು ಮರೆಯುತ್ತಿವೆಯೇ? ಅಪ್ಪಟ ಕನ್ನಡ ಶ್ರೋತೃಗಳನ್ನು ಬೆಳೆಸುವಲ್ಲಿ ವಿಫಲವಾಗುತ್ತಿವೆಯೇ ಕಾಲವೇ ಉತ್ತರಿಸಬೇಕು. ಅಂದಹಾಗೆ, ಅತಿ ಕಡಿಮೆ ಜಾಹೀರಾತುಗಳ ಜತೆ ಹೆಚ್ಚೆಚ್ಚು ಕನ್ನಡ ಹಾಡುಗಳನ್ನು ಮೊಟ್ಟ ಮೊದಲಿಗೆ ಪ್ರಸಾರ ಮಾಡಿದ ಕೀರ್ತಿ ಕೂಡ 104 ಫೀವರ್ ಎಫ್ ಎಂ ವಾಹಿನಿಗೆ ಸಲ್ಲುತ್ತದೆ.40 ನಿಮಿಷಗಳ ನಾನ್ ಸ್ಟಾಪ್ ಗೀತೆಗಳನ್ನು ಕೂಡ ಪ್ರಸಾರ ಮಾಡುವ ಫೀವರ್ ಎಫ್ ಎಂ ಇತರೆ ವಾಹಿನಿಗಳಿಗೆ ಒಳ್ಳೆ ಪೈಪೋಟಿ ನೀಡುತ್ತಿದೆ.

    Friday, October 2, 2009, 12:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X