For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಗಾಯಕರ ವಿರುದ್ಧ ಬಂಡಾಯ!

  By Staff
  |

  ಕೊನೆಗೂ ಗಾಯಕ ಗಾಯಕಿಯರು ಬೀದಿಗೆ ಬಂದಿದ್ದಾರೆ. ಅದರರ್ಥಬೇರೇನೊ ಅಲ್ಲ. ಕನ್ನಡದ ಗಾಯಕರು ಬಾಲಿವುಡ್ ಗಾಯಕರ ವಿರುದ್ಧ ಹೋರಾಡಲು ರಣ ಕಹಳೆ ಊದಿದ್ದಾರೆ. ಬಾಲಿವುಡ್‌ನ ಅನೇಕ ಗಾಯಕರು ಕನ್ನಡದಹಾಡುಗಳಿಗೆ ಧ್ವನಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಅವರದೇ ಕಾರುಬಾರು. ಸೋನು ನಿಗಮ್, ಉದಿತ್ ನಾರಾಯಣ್, ಕುನಾಲ್ ಗಾಂಜಾವಾಲಾ... ಪಟ್ಟಿ ಬೆಳೆಯುತ್ತದೆ.

  ಇವರು ಕನ್ನಡದಲ್ಲಿ ಹಾಡಿದ ಎಲ್ಲವೂ ಹಿಟ್ ಆಗಿಲ್ಲ ಎನ್ನುವುದು ಎಷ್ಟು ನಿಜವೋ, ಕೆಲವು ಹಾಡುಗಳು ಜನರ ಮನಗೆದ್ದದ್ದೂ ನಿಜ. ಆದರೆ ಇದನ್ನೇ ಕೆಲವು ಆಡಿಯೋ ಕ್ಯಾಸೆಟ್ ಕಂಪನಿಗಳು ಸಂಪ್ರದಾಯ ಮಾಡಿಕೊಂಡವು. ಅವರು ಹಾಡಿದರೆ ಮಾತ್ರ ನಾವು ಆಡಿಯೋ ಹಕ್ಕುಗಳನ್ನು ಕೊಳ್ಳುತ್ತೇವೆ ಎಂದರು. ಕೆಲವು ದಿನಗಳ ಹಿಂದೆ ಆನಂದ್ ಆಡಿಯೋದ ಆನಂದ್ ಒಂದು ಹೆಜ್ಜೆ ಮುಂದೆ ಹೋಗಿ, ಅನಿಸುತಿದೆ ಯಾಕೊ ಇಂದು' ಹಾಡನ್ನು ರಾಜೇಶ್ ಕೃಷ್ಣ ಹಾಡಿದ್ದರೆ ಇಷ್ಟು ಹಿಟ್ ಆಗುತ್ತಿರಲಿಲ್ಲ ಎಂದು ಷರಾ ಬರೆದರು. ಇದಕ್ಕೆಲ್ಲ ಕಳಸ ಇಟ್ಟಂತೆ ಇಲ್ಲಿನವರಿಗೆ ಕೆಲವು ಸಾವಿರದಷ್ಟು ದುಡ್ಡು ಕೊಡುವ ನಿರ್ಮಾಪಕರು ಸೋನುಗೆ ಎರಡರಿಂದ ಮೂರು ಲಕ್ಷ ಕೊಡುತ್ತಿರುವುದು ಕನ್ನಡ ಗಾಯಕರ ಹೊಟ್ಟೆ ಉರಿಸಿದೆ.

  ಅದೀಗ ಹೋರಾಟಕ್ಕೆ ವೇದಿಕೆ ಒದಗಿಸಿದೆ. ಬಾಲಿವುಡ್ ಗಾಯಕರನ್ನು ಕರೆಸುವುದು ಬೇಡಎಂದು ಹೇಳುತ್ತಿಲ್ಲ. ನಮಗೆ ಅವಕಾಶ ಕೊಡಿ. ಅವರಿಗಿಂತ ಚೆನ್ನಾಗಿ ಹಾಡುತ್ತೇವೆ...' ಎಂದು ರಾಜೇಶ್ ಕೃಷ್ಣ ಮತ್ತು ಹೇಮಂತ್ ನೇತೃತ್ವದ ತಂಡ ಗುಡುಗಿದೆ. ಹಾಗೆಯೇ ಬಾಲಿವುಡ್ ಗಾಯಕರಿಂದ ಕನ್ನಡದ ಕೊಲೆ ನಡೆಯುತ್ತಿರುವುದು ಇವರು ನೀಡುವ ಇನ್ನೊಂದು ಕಾರಣ. ಅದಕ್ಕೆ ಬುಧವಾರ (ಜು.2)ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದ ಎದುರು ಧರಣಿ ನಡೆಸಲಿದೆ. ಇವರಿಗೆ ಲಹರಿ ಸಂಸ್ಥೆಯ ವೇಲುಸಾಥ್ ನೀಡಲಿದ್ದಾರೆ.

  ನಾನು ನೂರು ಜನ ಉತ್ತಮ ಗಾಯಕರನ್ನು ತಂದು ನಿಲ್ಲಿಸುತ್ತೇನೆ. ಅವರಿಂದ ಹಾಡಿಸಲಿ ಎಂದು ಆನಂದ್‌ಗೆ ಪರೋಕ್ಷವಾಗಿ ಸವಾಲು ಹಾಕಿದ್ದಾರೆ. ಇದು ಎಲ್ಲಿಗೆ ಹೋಗಿ ತಲುಪುತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಒಂದು ಹೋರಾಟವಂತೂ ಆರಂಭವಾಗಿದೆ. ತಮಾಷೆ ಗೊತ್ತಾ ? ಸೋನುಗೆ ಲಕ್ಷ ಲಕ್ಷ ಸುರಿಯುವ ಹಿಂದೆಯೂ ಒಂದು ಕುಚೋದ್ಯ ಇದೆ. ಆತ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದ್ದಾನೆ. ಪರ ಭಾಷೆಯಲ್ಲಿ ಹಾಡಲು ಸಮಯ ಸಿಗುತ್ತಿಲ್ಲ. ಅದಕ್ಕೆ ಸಂಭಾವನೆ ಏರಿಸುತ್ತಾನೆ. ಹೀಗಾದರೂ ಇವರ ಪೀಡೆ' ತಪ್ಪಲಿ ಎನ್ನುವ ಸದುದ್ದೇಶ ಆತನಿಗಿದೆ. ಆದರೆ ನಮ್ಮವರು ಮುಖಕ್ಕೆ ಗೋಣಿ ತಾಟು ಕಟ್ಟಿಕೊಂಡಿದ್ದಾರೆ. ಆತನಿಂದಲೇ ಹಾಡಿಸುತ್ತಿದ್ದಾರೆ. ಕೋಣನ ಮುಂದೆ ಕಿನ್ನರಿ ಬಾರಿಸಿದರೆ ಇನ್ನೇನಾಗುತ್ತದೆ ?

  (ಸುದ್ದಿ : ವಿಜಯ ಕರ್ನಾಟಕ)

  ಪರಭಾಷೆ ಗಾಯಕರ ವಿರುದ್ಧ ಲಹರಿ ಆಂದೋಲನ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X