ಬಾಬಾ ಮದುವೆಯಾಗಲ್ಲ ಅಂದ್ರೆ ಒಂಟಿಯಾಗೇ ಇರುತ್ತೇನೆ
ಒಟ್ಟಿನಲ್ಲಿ ಯೋಗ ಗುರು ಬಾಬಾ ರಾಮ್ ದೇವ್‌ಗೆ ನಿದ್ದೆ ಇಲ್ಲದಂತೆ ಮಾಡುತ್ತಿದ್ದಾರೆ ಡ್ರಾಮಾ ರಾಣಿ ರಾಖಿ ಸಾವಂತ್. ಮದುವೆಯಾಗುವುದಾದರೆ ಬಾಬಾ ಅವರನ್ನೇ ಆಗುತ್ತೇನೆ ಎಂದು ಪಟ್ಟುಹಿಡಿದಿದ್ದಾರೆ. ಬಾಬಾ ಹೀಗೆ ಮೌನವಾಗಿದ್ದರೆ ರಾಖಿ ಸೀದಾ ಹರಿದ್ವಾರಕ್ಕೆ ಹೋಗಿ ಪತಂಜಲಿ ಯೋಗ ಪೀಠದಲ್ಲಿ ಬಾಬಾ ಪಕ್ಕದಲ್ಲೆ ಇನ್ನೊಂದು ಪೀಠ ಹಾಕಿಕೊಂಡರೂ ಅಚ್ಚರಿಯಿಲ್ಲ.
ಒಂದು ವೇಳೆ ಬಾಬಾ ರಾಮ್ ದೇವ್ ತಮ್ಮನ್ನು ಮದುವೆಯಾಗಲ್ಲ ಅಂದ್ರೆ ಒಂಟಿಯಾಗಿ ಉಳಿದುಬಿಡುತ್ತೇನೆ ಎಂದಿದ್ದಾರೆ ಡ್ರಾಮಾ ಕ್ವೀನ್ ರಾಖಿ ಸಾವಂತ್. ಬಾಬಾರ ವಿರಹ ವೇದನೆಯಲ್ಲೇ ಜೀವನ ಕಳೆಯುತ್ತೇನೆ ಎಂದು ಭಗ್ನ ಪ್ರೇಮಿಯಂತೆ ಮಾತನಾಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಯುವ ಮುಂದಾಳು ರಾಹುಲ್ ಗಾಂಧಿ ಅವರನ್ನು ಇಷ್ಟಪಟ್ಟಿದೆ. ಆದರೆ ಈಗ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಬಾಬಾ ಮೇಲೆ ಮನಸ್ಸಾಗಿದೆ. ಮದುವೆಯಾಗುವುದಾದರೆ ಅವರನ್ನೇ ಆಗುತ್ತೇನೆ. ಒಂದು ವೇಳೆ ಅವರು ನನ್ನನ್ನು ತಿರಸ್ಕರಿಸಿದರೆ ಒಂಟಿಯಾಗಿಯೇ ಉಳಿದುಬಿಡುತ್ತೇನೆ. ಇದು ನನ್ನ ಶಪಥ ಎಂದಿದ್ದಾರೆ! (ಏಜೆನ್ಸೀಸ್)
More from Filmibeat
English summary
Item girl Rakhi Sawant has gone ahead to vow that if Baba Ramdev will not revert back her love then she will stay single for her entire life.
ರಾಖಿ ಸಾವಂತ್ ಮದುವೆ ಬಾಬಾ ರಾಮದೇವ್ ವಿವಾಹ ರಿಯಾಲಿಟಿ ಶೋ ವಿವಾದ rakhi sawant marriage baba ramdev reality show controversy


Click it and Unblock the Notifications











